ಬಡವರ ಕಷ್ಟಕ್ಕೆ ಮಿಡಿಯುವ ತಲಾ ಅಜಿತ್‌ರವರ ಮತ್ತೊಂದು ಮುಖ..!

ತಮಿಳು ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರಾದ ತಲಾ ಅಜಿತ್ ರೇಸರ್ ಸಹ ಹೌದು. ಈ ಕಾರಣಕ್ಕೆ ಅವರ ಚಿತ್ರಗಳಲ್ಲಿ ಬೈಕ್ ಚೇಸಿಂಗ್ ದೃಶ್ಯಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇದರಿಂದಾಗಿಯೇ ಅಜಿತ್‌ರವರಿಗೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿದ್ದಾರೆ.

ಬಡವರ ಕಷ್ಟಕ್ಕೆ ಮಿಡಿಯುವ ತಲಾ ಅಜಿತ್‌ರವರ ಮತ್ತೊಂದು ಮುಖ..!

ಸಿನಿಮಾಗಳ ಹೊರತಾಗಿ ನಿಜ ಜೀವನದಲ್ಲಿಯೂ ಅಜಿತ್‌ರವರು ಬೈಕ್‌ಗಳ ಕ್ರೇಜ್ ಹೊಂದಿದ್ದಾರೆ. ಬೈಕ್‌ಗಳಲ್ಲಿ ಲಾಂಗ್ ರೈಡ್ ಹೋಗುವುದು ಅಜಿತ್ ಅವರ ನೆಚ್ಚಿನ ಹವ್ಯಾಸಗಳಲ್ಲಿ ಒಂದು. ಇದನ್ನು ಸಾಬೀತುಪಡಿಸುವ ಘಟನೆಯೊಂದು ಇತ್ತೀಚೆಗೆ ನಡೆದಿದೆ. ತಲಾ ಅಜಿತ್‌ರವರ ಹೊಸ ಚಿತ್ರದ ಶೂಟಿಂಗ್ ಅನ್ನು ಹೈದರಾಬಾದ್‌ನಲ್ಲಿ ನಡೆಸಲಾಗಿತ್ತು.

ಬಡವರ ಕಷ್ಟಕ್ಕೆ ಮಿಡಿಯುವ ತಲಾ ಅಜಿತ್‌ರವರ ಮತ್ತೊಂದು ಮುಖ..!

ಶೂಟಿಂಗ್ ಮುಗಿದ ನಂತರ ತಲಾ ಅಜಿತ್ ಚೆನ್ನೈಗೆ ಮರಳಲು ಸಿದ್ಧರಾಗಿದ್ದರು. ಆದರೆ ಲಾಕ್‌ಡೌನ್ ಕಾರಣಕ್ಕೆ ವಿಮಾನಯಾನ ಸೇವೆಗಳನ್ನು ರದ್ದುಪಡಿಸಲಾಯಿತು. ಇದರಿಂದಾಗಿ ಅಜಿತ್‌ರವರು ಹೈದರಾಬಾದ್‌ನಿಂದ ಚೆನ್ನೈಗೆ ಸ್ಪೋರ್ಟ್ಸ್ ಬೈಕ್‌ನಲ್ಲಿಯೇ ಪ್ರಯಾಣಿಸಿದರು ಎಂದು ವರದಿಯಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಬಡವರ ಕಷ್ಟಕ್ಕೆ ಮಿಡಿಯುವ ತಲಾ ಅಜಿತ್‌ರವರ ಮತ್ತೊಂದು ಮುಖ..!

ಅಜಿತ್‌ರವರು ಈ ಹಿಂದೆ ತಮ್ಮ ಬೈಕಿನಲ್ಲಿ ಲಾಂಗ್ ರೈಡ್ ಹೋಗಿದ್ದರು. ಈ ಮಾಹಿತಿಯನ್ನು ಅಜಿತ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಆಪ್ತ ಸ್ನೇಹಿತರೊಬ್ಬರು ಬಿಡುಗಡೆಗೊಳಿಸಿದ್ದಾರೆ.ಅಜಿತ್ ಅವರ ಜನ್ಮದಿನವನ್ನು ಕಳೆದ ಮೇ 1ರಂದು ಆಚರಿಸಲಾಯಿತು.

ಬಡವರ ಕಷ್ಟಕ್ಕೆ ಮಿಡಿಯುವ ತಲಾ ಅಜಿತ್‌ರವರ ಮತ್ತೊಂದು ಮುಖ..!

ಕರೋನಾ ವೈರಸ್ ಹಿನ್ನೆಲೆಯಲ್ಲಿ ಅಜಿತ್‌ರವರು ತಮ್ಮ ಹುಟ್ಟುಹಬ್ಬವನ್ನು ಆಚರಿಸದೇ ಇರಲು ನಿರ್ಧರಿಸಿದ್ದರು. ಆದರೆ ಅವರ ಅಭಿಮಾನಿಗಳು ಅಜಿತ್ ಅವರ ಜನ್ಮದಿನವನ್ನು ಸೋಷಿಯಲ್ ಮೀಡಿಯಾದಲ್ಲಿ ಆಚರಿಸಲು ನಿರ್ಧರಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅಜಿತ್ ಅವರ ಫೋಟೋಗಳು ಶುಭಾಶಯಗಳಿಂದ ತುಂಬಿದ್ದವು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಬಡವರ ಕಷ್ಟಕ್ಕೆ ಮಿಡಿಯುವ ತಲಾ ಅಜಿತ್‌ರವರ ಮತ್ತೊಂದು ಮುಖ..!

ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗದ ಗಣ್ಯರು ಸಹ ಅಜಿತ್‌ರವರಿಗೆ ಶುಭ ಕೋರಿದರು. ಅಜಿತ್ ಅವರ ಹಳೆಯ ಘಟನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿತ್ತು. ನಟ ಮತ್ತು ನಿರೂಪಕ ಸುಹೇಲ್ ಚಂದೋಕ್ ಸಹ ಕೆಲವು ಘಟನೆಗಳನ್ನು ಪೋಸ್ಟ್ ಮಾಡಿದ್ದರು.

ಬಡವರ ಕಷ್ಟಕ್ಕೆ ಮಿಡಿಯುವ ತಲಾ ಅಜಿತ್‌ರವರ ಮತ್ತೊಂದು ಮುಖ..!

ಇವರು ವೀರಂ ಚಿತ್ರದಲ್ಲಿ ಅಜಿತ್ ಸಹೋದರನಾಗಿ ನಟಿಸಿದ್ದರು. ಅಜಿತ್ ಅವರ ಜನ್ಮದಿನದಂದು ಆಸಕ್ತಿದಾಯಕ ಘಟನೆಯನ್ನು ಪೋಸ್ಟ್ ಮಾಡಿದ್ದಾರೆ. ಅಜಿತ್ ಹಾಗೂ ಸುಹೇಲ್ ಚಂದೋಕ್ ಒಮ್ಮೆ ಬೈಕ್‌ನಲ್ಲಿ ಸುದೀರ್ಘ ಪ್ರವಾಸಕ್ಕೆ ಹೋಗಿದ್ದರು. ಇಬ್ಬರು ಸ್ನೇಹಿತರು ಎಂಬುದು ಗಮನಿಸಬೇಕಾದ ಸಂಗತಿ. ಪ್ರವಾಸದ ವೇಳೆ ಚಹಾ ಕುಡಿಯಲು ತಮ್ಮ ಬೈಕ್‌ಗಳನ್ನು ನಿಲ್ಲಿಸಿದರು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಬಡವರ ಕಷ್ಟಕ್ಕೆ ಮಿಡಿಯುವ ತಲಾ ಅಜಿತ್‌ರವರ ಮತ್ತೊಂದು ಮುಖ..!

ಆ ಪ್ರದೇಶದಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಕುಟುಂಬವೊಂದು ತಮ್ಮ ಗುಡಿಸಲಿಗೆ ಬಂದು ಚಹಾ ಕುಡಿಯುವಂತೆ ಕೇಳಿಕೊಂಡಿದೆ. ಅಜಿತ್‌ರವರು ಹೋಗಿ ಚಹಾ ಕುಡಿದಿದ್ದಾರೆ. ಆ ಕುಟುಂಬದವರು ಅಜಿತ್ ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಬಯಸಿದ್ದಾರೆ. ಆದರೆ ಕೇಳಲು ಹಿಂಜರಿದಿದ್ದಾರೆ.

ಬಡವರ ಕಷ್ಟಕ್ಕೆ ಮಿಡಿಯುವ ತಲಾ ಅಜಿತ್‌ರವರ ಮತ್ತೊಂದು ಮುಖ..!

ಇದನ್ನು ಅರಿತ ತಲಾ ಅಜಿತ್ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಜೊತೆಗೆ ಆ ಫೋಟೋಗಳನ್ನು ಪ್ರಿಂಟ್ ಮಾಡಿಸಿ ಅವರಿಗೆ ಕಳುಹಿಸಿದ್ದಾರೆ. ಈ ಮಾಹಿತಿಯನ್ನು ಸುಹೇಲ್ ಚಂದೋಕ್ ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 2013ರಲ್ಲಿ ವೀರಂ ಚಿತ್ರೀಕರಣದ ವೇಳೆ ಈ ಘಟನೆ ನಡೆದಿತ್ತು ಎನ್ನಲಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಬಡವರ ಕಷ್ಟಕ್ಕೆ ಮಿಡಿಯುವ ತಲಾ ಅಜಿತ್‌ರವರ ಮತ್ತೊಂದು ಮುಖ..!

ಅಜಿತ್ ತಮ್ಮ ಜನಪರ ಕಾರ್ಯಗಳಿಂದ ಹೆಸರಾದವರು. ಅಜಿತ್ ಕೂಡ ತಮ್ಮ ಚಿತ್ರಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುತ್ತಿರುತ್ತಾರೆ. ಭಾರತದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಸಂಖ್ಯೆಯ ರಸ್ತೆ ಅಪಘಾತಗಳಾಗುತ್ತವೆ.

ಬಡವರ ಕಷ್ಟಕ್ಕೆ ಮಿಡಿಯುವ ತಲಾ ಅಜಿತ್‌ರವರ ಮತ್ತೊಂದು ಮುಖ..!

ವಾಹನ ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸುವುದೇ ಇದಕ್ಕೆ ಮುಖ್ಯ ಕಾರಣ. ಈ ಕಾರಣಕ್ಕೆ ಅಜಿತ್‌ರವರು ತಮ್ಮ ಚಿತ್ರಗಳಲ್ಲಿ ಹೆಲ್ಮೆಟ್ ಧರಿಸಿ ಬೈಕ್ ಚಾಲನೆ ಮಾಡುವ ಮೂಲಕ ಸಂಚಾರ ಜಾಗೃತಿ ಮೂಡಿಸುತ್ತಿದ್ದಾರೆ. ಅಜಿತ್‌ರವರಂತಹ ಸೂಪರ್‌ಸ್ಟಾರ್‌ರವರನ್ನು ನೋಡಿ ಅವರ ಅಭಿಮಾನಿಗಳು ಸಹ ಸಂಚಾರ ನಿಯಮಗಳನ್ನು ಪಾಲಿಸುತ್ತಾರೆ.

Article Published On: Monday, May 4, 2020, 15:52 [IST]
English summary
Untold story of Thala Ajith's motorcycle ride with Actor Suhail Chandhok. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+