ಟ್ರಾಫಿಕ್ ಜಾಮ್ ಬಗ್ಗೆ ದೂರಿದವನಿಗೆ ಏನಾಯ್ತು ಗೊತ್ತಾ?

ಸಾಮಾನ್ಯವಾಗಿ ಯಾವುದಾದರೂ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾದರೆ ವಾಹನ ಸವಾರರು ಆ ರಸ್ತೆಯಲ್ಲಿ ತೆವಳುತ್ತಾ ಸಾಗುತ್ತಾರೆ. ಯಾರೊಬ್ಬರೂ ಮುಂದೆ ಬಂದು ಟ್ರಾಫಿಕ್ ಜಾಮ್ ಅನ್ನು ನಿಯಂತ್ರಿಸಿ ಎಂದು ಟ್ರಾಫಿಕ್ ಪೊಲೀಸರನ್ನು ಕೇಳುವುದಿಲ್ಲ.

ಟ್ರಾಫಿಕ್ ಜಾಮ್ ಬಗ್ಗೆ ದೂರಿದವನಿಗೆ ಏನಾಯ್ತು ಗೊತ್ತಾ?

ಟ್ರಾಫಿಕ್ ಜಾಮ್ ನಿಯಂತ್ರಿಸಿ ಎಂದು ಕೇಳಿಕೊಂಡ ಯುವಕನನ್ನು ಟ್ರಾಫಿಕ್ ಪೊಲೀಸರು ನೀನೇ ಟ್ರಾಫಿಕ್ ನಿಯಂತ್ರಿಸು ಎಂದು ಹೇಳಿರುವ ಘಟನೆ ನಡೆದಿದೆ. ಈ ರೀತಿಯ ಘಟನೆಗಳು ಭಾರತದಲ್ಲಿ ಮಾತ್ರವೇ ನಡೆಯಲು ಸಾಧ್ಯ. ಭಾರತದಲ್ಲಿ ಬಿಟ್ಟು ಬೇರೆ ಯಾವುದೇ ದೇಶಗಳಲ್ಲಿ ನಡೆಯಲು ಸಾಧ್ಯವೇ ಇಲ್ಲ. ಅಂದ ಹಾಗೆ ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಫಿರೋಜಾಬಾದ್‍‍ನಲ್ಲಿ.

ಟ್ರಾಫಿಕ್ ಜಾಮ್ ಬಗ್ಗೆ ದೂರಿದವನಿಗೆ ಏನಾಯ್ತು ಗೊತ್ತಾ?

ಕೆಲವು ಯುವಕರು ಟ್ರಾಫಿಕ್ ಜಾಮ್ ಹೆಚ್ಚಿರುವ ಬೆಳಿಗ್ಗೆ ಹಾಗೂ ಸಂಜೆಯ ವೇಳೆ ಸ್ವಯಂ ಪ್ರೇರಿತರಾಗಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಮುಂದಾಗುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಟ್ರಾಫಿಕ್ ಬಗ್ಗೆ ದೂರಿದ ಯುವಕನನ್ನೇ ಟ್ರಾಫಿಕ್ ಜಾಮ್ ನಿಯಂತ್ರಿಸುವ ಕೆಲಸಕ್ಕೆ ದೂಡಲಾಗಿತ್ತು.

ಟ್ರಾಫಿಕ್ ಜಾಮ್ ಬಗ್ಗೆ ದೂರಿದವನಿಗೆ ಏನಾಯ್ತು ಗೊತ್ತಾ?

ದೂರು ನೀಡಿ ಟ್ರಾಫಿಕ್ ಕೆಲಸಕ್ಕೆ ನಿಯೋಜನೆಗೊಂಡ ಯುವಕನ ಹೆಸರು ಸೋನು ಸೌಗಾನ್. ಆತ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಹಿರಿಯ ಪೊಲೀಸ್ ಅಧಿಕಾರಿಯಾದ ಸಚೀಂದ್ರ ಪಟೇಲ್‍‍ರವರಿಗೆ ಸಂಚಾರ ನಿಯಂತ್ರಿಸಲು ನೆರವಾಗಿದ್ದಾನೆ.

ಟ್ರಾಫಿಕ್ ಜಾಮ್ ಬಗ್ಗೆ ದೂರಿದವನಿಗೆ ಏನಾಯ್ತು ಗೊತ್ತಾ?

ಈ ಕಾರ್ಯ ನಿರ್ವಹಿಸಲು ಪೊಲೀಸರು ಆತನಿಗೆ ವಿಶೇಷ ಜಾಕೆಟ್ ಅನ್ನು ನೀಡಿದ್ದಾರೆ. ಇದರಿಂದ ವಾಹನ ಸವಾರರಿಗೆ ಆತನು ಕಾಣುವಂತಾಗಲಿ ಎಂಬುದು ಇದರ ಹಿಂದಿರುವ ಉದ್ದೇಶವಾಗಿದೆ. ಸೋನು ಸೌಗಾನ್ ಒಂದೇ ಸ್ಥಳದಲ್ಲಿರದೇ ನಗರದ ವಿವಿಧ ಸ್ಥಳಗಳಿಗೆ ತೆರಳಿ ಕಾರ್ಯನಿರ್ವಹಿಸಿದ್ದಾನೆ.

ಟ್ರಾಫಿಕ್ ಜಾಮ್ ಬಗ್ಗೆ ದೂರಿದವನಿಗೆ ಏನಾಯ್ತು ಗೊತ್ತಾ?

ವಾಹನ ನಿಯಂತ್ರಿಸುವುದನ್ನು ಮಾತ್ರ ಮಾಡದೇ ನಿಯಮಗಳನ್ನು ಉಲ್ಲಂಘಿಸಿದ ವಾಹನ ಸವಾರರಿಗೆ ದಂಡವನ್ನೂ ವಿಧಿಸಿದ್ದಾನೆ. ರಾಂಗ್ ಸೈಡಿನಲ್ಲಿ ವಾಹನ ಚಾಲನೆ ಮಾಡಿದವರಿಗೆ, ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದವರಿಗೆ ದಂಡವನ್ನು ವಿಧಿಸಿದ್ದಾನೆ.

ಟ್ರಾಫಿಕ್ ಜಾಮ್ ಬಗ್ಗೆ ದೂರಿದವನಿಗೆ ಏನಾಯ್ತು ಗೊತ್ತಾ?

ಎರಡು ಗಂಟೆಗಳ ತನ್ನ ಕೆಲಸದ ಅವಧಿಯಲ್ಲಿ ರೂ.1,600 ದಂಡ ವಿಧಿಸಿದ್ದಾನೆ. ಸೋನು ತನ್ನ ಕಾರ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾನೆ ಎಂದು ತಿಳಿಸಿರುವ ಪೊಲೀಸರು ಇದೇ ರೀತಿ ಬೇರೆ ಯುವಕರನ್ನೂ ಸಹ ಪ್ರತಿದಿನ ಎರಡು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ನಿಯಂತ್ರಿಸುವ ಕೆಲಸಕ್ಕೆ ಬಳಸಿಕೊಳ್ಳುವುದಾಗಿ ತಿಳಿಸಿದ್ದಾರೆ.

ಎರಡು ಗಂಟೆಗಳ ಕಾಲ ಕಾರ್ಯ ನಿರ್ವಹಿಸಿದ ನಂತರ ಸೋನು ತನ್ನ ಅನುಭವವನ್ನು ಬಿಚ್ಚಿಟ್ಟಿದ್ದಾನೆ. ಪೊಲೀಸರೊಂದಿಗೆ ಕಾರ್ಯನಿರ್ವಹಿಸಿದ ಈ ಎರಡು ತಾಸು ಹೊಸ ಅನುಭವವನ್ನು ನೀಡಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿರುವುದೇ ಟ್ರಾಫಿಕ್ ಜಾಮ್‍‍ಗೆ ಮೂಲ ಕಾರಣವಾಗಿದೆ.

ಟ್ರಾಫಿಕ್ ಜಾಮ್ ಬಗ್ಗೆ ದೂರಿದವನಿಗೆ ಏನಾಯ್ತು ಗೊತ್ತಾ?

ಒಂದು ವಾಹನವು ಮಾಡುವ ತಪ್ಪಿನಿಂದಾಗಿ ಅನೇಕ ವಾಹನಗಳು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ವಾಹನ ಸವಾರರು ಜವಾಬ್ದಾರಿಯನ್ನು ಅರಿತು ವಾಹನ ಚಾಲನೆ ಮಾಡಬೇಕಾಗುತ್ತದೆ. ಈ ಕೆಲಸ ನಿರ್ವಹಿಸಿದ ನಂತರ ನಾನು ಹೆಚ್ಚು ಜವಾಬ್ದಾರಿಯಿರುವ ನಾಗರೀಕನಾಗಿದ್ದೇನೆ ಎಂದು ತಿಳಿಸಿದ್ದಾನೆ.

Article Published On: Saturday, February 22, 2020, 15:22 [IST]
English summary
UP police asks to manage traffic who complains about traffic jam. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+