Expressway: ದೇಶಾದ್ಯಂತ ಇನ್ನೂ ಪ್ರಯಾಣಿಸುವುದು ಸುಲಭ.. 10 ಎಕ್ಸ್‌ಪ್ರೆಸ್‌ವೇಗಳು ಸಿದ್ದಗೊಳ್ಳುತ್ತಿವೆ!

ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಹೆದ್ದಾರಿಗಳು ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ರಸ್ತೆಯನ್ನು ಅಭಿವೃದ್ಧಿಪಡಿಸುವುದರಿಂದ ಕೈಗಾರಿಕೆ, ಪ್ರವಾಸೋದ್ಯಮ, ಕೃಷಿ, ವ್ಯಾಪಾರ ಹಾಗೂ ವಾಣಿಜ್ಯ ಚಟುವಟಿಕೆಗಳು ವೃದ್ಧಿಸಲಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸಾಮಾನ್ಯ ಹೆದ್ದಾರಿಗಳು ಸೇರಿದಂತೆ ಹಲವು ಎಕ್ಸ್‌ಪ್ರೆಸ್‌ವೇಗಳ ಕಾಮಗಾರಿಯನ್ನು ನಡೆಸುತ್ತಿದೆ. ಮುಂಬರುವ ಒಂದೆರಡು ವರ್ಷದಲ್ಲಿ ದೆಹಲಿ-ಮುಂಬೈ, ದೆಹಲಿ-ಅಮೃತಸರ-ಕತ್ರಾ, ಬೆಂಗಳೂರು-ಚೆನ್ನೈ, ಕಾನ್ಪುರ-ಲಖನೌ, ಅಮೃತಸರ-ಜಾಮ್‌ನಗರ, ವಾರಣಾಸಿ-ರಾಂಚಿ-ಕೋಲ್ಕತ್ತಾ, ಹೈದರಾಬಾದ್-ವಿಶಾಖಪಟ್ಟಣಂ, ಸೂರತ್-ನಾಸಿಕ್-ಸೋಲಾಪುರ, ಪುಣೆ-ಬೆಂಗಳೂರು, ಇಂದೋರ್-ಹೈದರಾಬಾದ್ ಒಳಗೊಂಡನಂತೆ 10 ಎಕ್ಸ್‌ಪ್ರೆಸ್‌ವೇಗಳು ಲೋಕಾರ್ಪಣೆಯಾಗಲಿವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಮೊದಲಿಗೆ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ (Delhi-Mumbai Expressway) ಬಗ್ಗೆ ತಿಳಿಯೋಣ. ಸದ್ಯ ಈ ಹೆದ್ದಾರಿ ನಿರ್ಮಾಣ ಹಂತದಲ್ಲಿದೆ. ಆದಾಗ್ಯೂ ವಿವಿಧೆಡೆ ವಾಹನ ಸಂಚಾರಕ್ಕೆ ಮುಕ್ತವಾಗಿದೆ. 1350 ಕಿ.ಮೀ ಉದ್ದವಿದ್ದು, ಕಾಮಗಾರಿ ಸಂಪೂರ್ಣಗೊಂಡ ಬಳಿಕ ದೆಹಲಿ-ಮುಂಬೈ ನಡುವಿನ ಪ್ರಯಾಣದ ಅವಧಿಯು 12 ಗಂಟೆಗಳಿಗೆ ಕಡಿಮೆಯಾಗಲಿದೆ. ನೂತನ ರಸ್ತೆಯು ದೆಹಲಿ, ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ದಾದ್ರಾ - ನಗರ ಹವೇಲಿ ಹಾಗೂ ಮಹಾರಾಷ್ಟ್ರ ರಾಜ್ಯಗಳನ್ನು ಸಂಪರ್ಕಿಸುತ್ತದೆ.

Upcoming 10 Expressway In India Journey Very Easy

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru-Chennai Expressway) ಈ ವರ್ಷಾಂತ್ಯದೊಳಗೆ ಲೋಕಾರ್ಪಣೆ ಸಾಧ್ಯತೆಯಿದೆ. 262 ಕಿಮೀ ಉದ್ದದ ಈ ಹೆದ್ದಾರಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್ಎಐ) ಬರೋಬ್ಬರಿ ರೂ.17,000 ಕೋಟಿ ಖರ್ಚು ಮಾಡಿ ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ಪ್ರಸ್ತುತ 4 ಪಥದ ರಸ್ತೆ ಇದಾಗಿದ್ದು, 8 ಪಥಗಳಿಗೆ ಮೇಲ್ದರ್ಜೆಗೇರಿಸಬಹುದು. ಪ್ರಯಾಣದ ಅವಧಿಯು 3 ಗಂಟೆಗೆ ಇಳಿಕೆಯಾಗುವ ನಿರೀಕ್ಷೆಯಿದೆ.

ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇಯನ್ನು (Bengaluru-Pune Expressway) ಕೂಡ ಅಭಿವೃದ್ಧಿಪಡಿಸಲು ಎನ್‌ಎಚ್ಎಐ ತಯಾರಿಯನ್ನು ನಡೆಸುತ್ತಿದೆ. ಈ ರಸ್ತೆಯನ್ನು 6 ಪಥದಲ್ಲಿ ಸಿದ್ಧಪಡಿಸಲಾಗುತ್ತಿದ್ದು, ವಾಹನಗಳ ದಟ್ಟಣೆಗೆ ಅನುಗುಣವಾಗಿ 8 ಪಥಗಳಿಗೆ ವಿಸ್ತರಿಸಬಹುದು. 2028ರಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಬಹುದು. ಹೊಸ ಎಕ್ಸ್‌ಪ್ರೆಸ್‌ವೇಯಿಂದ ಬೆಂಗಳೂರು ಮತ್ತು ಪುಣೆ ನಡುವಿನ ಪ್ರಯಾಣದ ಅವಧಿಯು 7 ಗಂಟೆಗಳಿಗೆ ಕಡಿಮೆಯಾಗಲಿದೆ.

Upcoming 10 Expressway In India Journey Very Easy

ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇಯು (Delhi-Dehradun Expressway) ಪ್ರವೇಶ ನಿಯಂತ್ರಿತ ಹೆದ್ದಾರಿಯಾಗಿದ್ದು, ದೆಹಲಿ, ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಮೂಲಕ ಹಾದುಹೋಗಲಿದೆ. 239 ಕಿಮೀ ಉದ್ದವಿರುವ ಈ ರಸ್ತೆಯಿಂದ ದೆಹಲಿ ಹಾಗೂ ಡೆಹ್ರಾಡೂನ್ ಮಧ್ಯದ ಪ್ರಯಾಣದ ಸಮಯವು 2.5 ಗಂಟೆಗಳವರೆಗೆ ಇಳಿಕೆಯಾಗುವ ಸಾಧ್ಯತೆಯಿದೆ. ಕಾನ್ಪುರ-ಲಖನೌ ಎಕ್ಸ್‌ಪ್ರೆಸ್‌ವೇಯ ಕಾಮಗಾರಿ ಸಹ ನಡೆಯುತ್ತಿದೆ. ಇದು 63 ಕಿಲೋಮೀಟರ್‌ನಷ್ಟು ಉದ್ದವಿದ್ದು, ಎರಡು ನಗರಗಳ ನಡುವಿನ ಪ್ರಯಾಣದ ಅವಧಿಯನ್ನು 30 ನಿಮಿಷಗಳಿಗೆ ಕಡಿಮೆ ಮಾಡಬಹುದು.

ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇಯನ್ನು (Delhi-Amritsar-Katra Expressway) ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್ಎಐ) ಅಭಿವೃದ್ಧಿಪಡಿಸುತ್ತಿದೆ. ಈ ಹೆದ್ದಾರಿಯು ಬರೋಬ್ಬರಿ 669 ಕಿಲೋಮೀಟರ್ ಉದ್ದವಿದ್ದು, ದೆಹಲಿ ಹಾಗೂ ಕತ್ರಾ ನಡುವಿನ ಪ್ರಯಾಣದ ಸಮಯವನ್ನು 6 ಗಂಟೆಗಳಿಗೆ ಕಡಿಮೆಗೊಳಿಸಲಿದೆ. ನೂತನ ಹೆದ್ದಾರಿಯು ದೆಹಲಿ, ಹರಿಯಾಣ, ಪಂಜಾಬ್, ಜಮ್ಮು ಮತ್ತು ಕಾಶ್ಮೀರದಲ್ಲಿ ಹಾದುಹೋಗುತ್ತದೆ.

ವಾರಣಾಸಿ-ರಾಂಚಿ-ಕೋಲ್ಕತ್ತಾ ಎಕ್ಸ್‌ಪ್ರೆಸ್‌ವೇ ಕೂಡ ಮುಂಬರುವ ವರ್ಷಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. 612 ಕಿಲೋಮೀಟರ್‌ವಿರುವ ಈ ಹೆದ್ದಾರಿಯು ಪ್ರಯಾಣದ ಅವಧಿಯನ್ನು 15 ಗಂಟೆಗಳಿಂದ ಕೇವಲ 9 ಗಂಟೆಗಳಿಗೆ ಇಳಿಸಲಿದೆ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳವನ್ನು ರಾಜ್ಯಗಳಲ್ಲಿ ಹಾದುಹೋಗುತ್ತದೆ. ಅಮೃತಸರ-ಜಾಮ್‌ನಗರ, ಸೂರತ್-ನಾಸಿಕ್-ಸೋಲಾಪುರ, ಇಂದೋರ್-ಹೈದರಾಬಾದ್ ಎಕ್ಸ್‌ಪ್ರೆಸ್‌ವೇಗಳು ಸಹ ಅಭಿವೃದ್ಧಿ ಹಂತದಲ್ಲಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, June 1, 2024, 14:11 [IST]
English summary
Upcoming 10 expressway in india journey very easy
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+