ದರ್ಶನ್ ಜೊತೆ ನಟಿಸಿ ಮಿಂಚಿದ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಬಳಿಯಿರುವ ಐಷಾರಾಮಿ ಕಾರುಗಳಿವು...
ಊರ್ವಶಿ ರೌಟೇಲಾ ಬಾಲಿವುಡ್ ನಟಿ ಮತ್ತು ಫ್ಯಾಷನ್ ಮಾಡೆಲ್. ಇವರು 2015ರ ಮಿಸ್ ದಿವಾ ಯೂನಿವರ್ಸ್ ಕಿರೀಟವನ್ನು ಗೆದ್ದಿದರು. ಆದರೆ ಈ ನಟಿಯ ಹೆಸರು ಕೇಳಿದರೆ ಬಹುತೇಕರಿಗೆ ನೆನಪಾಗುವುದು ಭಾರತೀಯ ಕ್ರಿಕೆಟಿಗನಾದ ರಿಷಭ್ ಪಂತ್. ಯಾಕೆಂದರೆ ಈ ನಟಿಯು ರಿಷಭ್ ಪಂತ್ ಜೊತೆಗಿನ ವಿವಾದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ ತುಂಬಾನೇ ಸುದ್ದಿಯಲ್ಲಿದ್ದರು.

ಈ ನಟಿ ಇತ್ತೀಚೆಗೆ ಆಸ್ಟ್ರೇಲಿಯಾಕ್ಕೆ ತೆರಳುವ ಚಿತ್ರ ಪೋಸ್ಟ್ ಮಾಡಿದ್ದರು. ಇದೇ ವೇಳೆ ರಿಷಭ್ ಪಂತ್ ಸಹ ಮುಂಬರುವ ಟ್ವೆಂಟಿ20 ವಿಶ್ವಕಪ್ ಟೂರ್ನಿಯನ್ನು ಆಡಲು ಹೋಗಿದ್ದು ಅಭಿಮಾನಿಗಳಲ್ಲಿ ಇನ್ನೂ ಕುತೂಹಲ ಹೆಚ್ಚು ಮಾಡಿತು. ಆಸೀಸ್ಗೆ ತೆರಳಿದ ಊರ್ವಶಿ ಅವರ ಕುರಿತು ನೆಟ್ಟಿಗರು ಅನೇಕ ರೀತಿ ಮಾತನಾಡಿಕೊಳ್ಳುತ್ತಿದ್ದಾರೆ. ಊರ್ವಶಿ ರೌಟೇಲಾ ಅವರ ಈ ಚಿತ್ರಗಳನ್ನು ನೋಡಿದ ನಂತರ, ನೆಟಿಜನ್‌ಗಳು ಊರ್ವಶಿ ರಿಷಭ್ ಪಂತ್ ಅವರನ್ನು ಹಿಂಬಾಲಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೊಬ್ಬ ಬಳಕೆದಾರರು ರಿಷಭ್ ಅವರನ್ನು ಅನುಸರಿಸುವುದನ್ನು ನಿಲ್ಲಿಸಿ ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, ರಿಷಭ್‌ನನ್ನು ಬಿಡಲು ಹೋಗುತ್ತಿದ್ದೀರಾ ಎಂದು ಕೇಳಿದ್ದಾರೆ. ರಿಷಭ್ ಪಂತ್ ಮತ್ತು ಊರ್ವಶಿ ರೌಟೇಲಾ ಕೆಲವು ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಅದಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ನಡುವೆ ಕೋಲ್ಡ್ ವಾರ್ ಮುಂದುವರಿದಿದ್ದು ಗೊತ್ತೇ ಇದೆ. ಸದ್ಯ ಟೀಮ್ ಇಂಡಿಯಾ ಟಿ20 ವಿಶ್ವಕಪ್ ತಯಾರಿಯಲ್ಲಿ ನಿರತವಾಗಿದೆ. ರಿಷಬ್ ಪಂತ್ ಕೂಡ ಈ ತಂಡದ ಭಾಗವಾಗಿದೆ.

ನಟಿ ಊರ್ವಶಿ ರೌಟೇಲಾ ಮತ್ತು ರಿಷಬ್ ಪಂತ್ ನಡುವೆ ನಡೆಯುತ್ತಿರುವ ಈ ಕೋಲ್ಡ್ ಸಮರದ ನಡುವೆ ನಟಿ ಅಲ್ಲಿಗೆ ಹೋಗಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಕಳೆದ ಕೆಲವು ದಿನಗಳಿಂದ ಊರ್ವಶಿ ರೌಟೇಲಾ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ರಿಷಬ್ ಪಂತ್ ಬಗ್ಗೆ ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತಿದದ್ರು.

ಈ ಬಾರಿ ಅವರು ಯಾವ ಬಾಂಬ್ ಸಿಡಿಸುತ್ತಾರೋ ಎಂದು ನೆಟ್ಟಿಗರು ಕಾದುಕುಳಿತ್ತಿದ್ದಾರೆ. ಈಗ ಹೇಗೆ ಊರ್ವಶಿ ಆಸ್ಟ್ರೇಲಿಯಾಕ್ಕೆ ಹೋಗಿದ್ದಾರೋ ಹಾಗೆಯೇ ಕಳೆದ ತಿಂಗಳು ದುಬೈಗೆ ಹಾರಿದ್ದರು. ಆ ಸಂದರ್ಭದಲ್ಲಿ ಏಷ್ಯಾಕಪ್‌ನಲ್ಲಿ ಭಾಗವಹಿಸಲು ಟೀಂ ಇಂಡಿಯಾ ಕೂಡ ದುಬೈಗೆ ತೆರಳಿತ್ತು. ಆ ಸಮಯದಲ್ಲೂ ರಿಷಬ್ ಮತ್ತು ಊರ್ವಶಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿತ್ತು.

ಇದರ ಜೊತೆಗೆ ಪಾಕಿಸ್ತಾನಿ ಕ್ರಿಕೆಟಿಗ ನಸೀಮ್ ಶಾ ಜೊತೆ ಊರ್ವಶಿ ಹೆಸರು ತಳುಕು ಹಾಕಿಕೊಂಡಿತ್ತು. ಇನ್ನು ನಟಿ ಊರ್ವಶಿ ರೌಟೇಲಾ ಅವರು ದರ್ಶನ್ ಅವರ ಐರವಾತ ಚಿತ್ರದಲಿ ನಟಿಸಿದ್ದರು. ಇನ್ನು ನಟಿ ಊರ್ವಶಿ ರಾಷ್ಟ್ರೀಯ ಮಟ್ಟದ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿಯೂ ಆಗಿದ್ದಾರೆ.

ಈ ನಟಿ ಐಷಾರಾಮಿ ಕಾರುಗಳ ದೊಡ್ಡ ಅಭಿಮಾನಿಯಾಗಿದ್ದು, ಮೂಲಗಳ ಪ್ರಕಾರ ಆಲ್ಫಾ ರೋಮಿಯೋ, ಮುಸ್ತಾಂಗ್, ಬುಗಾಟ್ಟಿ, ಮಾಸೆರೋಟಿ, ಮೆಕ್ಲಾರೆನ್‌ನಂತಹ ಕಾರುಗಳನ್ನು ಒಂದು ದಿನ ಖರೀದಿಸಲು ಅವಳು ಆಶಿಸುತ್ತಾಳೆ ಎಂದು ಹೆಳಿದ್ದರು. ಇನ್ನು ಅವರ ಕಾರು ಸಂಗ್ರಹವು ಸ್ಫೋರ್ಟ್ಸ್ ಮತ್ತು ಐಷಾರಾಮಿ ಕಾರುಗಳನ್ನು ಹೊಂದಿವೆ. ಈ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಮರ್ಸಿಡಿಸ್ ಎಸ್-ಕ್ಲಾಸ್
ಮರ್ಸಿಡಿಸ್ ಎಸ್-ಸೀರಿಸ್ S500 ಮರ್ಸಿಡಿಸ್‌ನ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ಇದು 5 ಆಸನ ಸಾಮರ್ಥ್ಯವನ್ನು ಹೊಂದಿದೆ. ಈ ಕಾರಿನಲ್ಲಿ 4.6-ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 453.26 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ನೊಂದಿಗೆ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ. ಈ ಕಾರು 4.8 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಕಾರು ಗಂಟೆಗೆ ಟಾಪ್ ಸ್ಪೀಡ್ 250 ಕಿ.ಮೀ ಆಗಿದೆ.

ರೇಂಜ್ ರೋವರ್ ವೋಗ್
ನಟಿ ಊರ್ವಶಿ ಗ್ಯಾರೇಜ್‌ನಲ್ಲಿ ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ ಅನ್ನು ಹೊಂದಿದೆ. ಈ . ರೇಂಜ್ ರೋವರ್ ವೋಗ್ ಲ್ಯಾಂಡ್ ರೋವರ್‌ನಿಂದ ಆಕರ್ಷಕವಾಗಿ ಕಾಣುವ ಕಾರುಗಳಲ್ಲಿ ಒಂದಾಗಿದೆ. ಇದು 5 ಸೀಟರ್ ಸಾಮರ್ಥ್ಯವನ್ನು ಹೊಂದಿದೆ.

ಈ ರೇಂಜ್ ರೋವರ್ ವೋಗ್ ಕಾರಿನಲ್ಲಿ 3.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 394 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಕಾರು 7.4 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಮರ್ಸಿಡಿಸ್ ಬಿ-ಕ್ಲಾಸ್
ಮರ್ಸಿಡಿಸ್ ಬಿ-ಕ್ಲಾಸ್ ಬಿ 200 ಮರ್ಸಿಡಿಸ್‌ನ ಸೆಡಾನ್ ಕಾರುಗಳಲ್ಲಿ ಒಂದಾಗಿದೆ. ಇದು 5 ಆಸನ ಸಾಮರ್ಥ್ಯವನ್ನು ಹೊಂದಿದೆ. ಈ ಕಾರಿನಲ್ಲಿ 2.1-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 134.10 ಬಿಹೆಚ್‍ಪಿ ಪವರ್ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಕಾರಿನಲ್ಲಿ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಕಾರು 10.7 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಗಂಟೆಗೆ 210 ಕಿಮೀ. ಆಗಿದೆ.

ಬಿಎಂಡಬ್ಲ್ಯು 520d
ಆಕೆಯ ಗ್ಯಾರೇಜ್‌ನಲ್ಲಿನ ಮೊದಲ ಸೆಡಾನ್ ಬಿಎಂಡಬ್ಲ್ಯು 5 ಸೀರಿಸ್ 520d ಆಗಿದೆ, ಈ ಐಷಾರಾಮಿ ಕಾರಿನಲ್ಲಿ 1995cc ಟ್ವಿನ್ ಪವರ್ ಟರ್ಬೊ ಇನ್‌ಲೈನ್ 4 ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 187.74 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಫೆರಾರಿ 458 ಸ್ಪೈಡರ್
ನಟಿ ಊರ್ವಶಿ ಬಳಿ ಐಷಾರಾಮಿ ಫೆರಾರಿ 458 ಸ್ಪೈಡರ್ ಕಾರನ್ನು ಹೊಂದಿದೆ. ಈ ಕಾರಿನಲ್ಲಿ 4.5 ಲೀಟರ್ V8 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 561.9 ಬಿಹೆಚ್‍ಪಿ ಪವರ್ ಮತ್ತು 540 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರಿನಲ್ಲಿ 7-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿದೆ.


Click it and Unblock the Notifications








