2017-2021 ರ ನಡುವಿನ ಟ್ರಾಫಿಕ್ ದಂಡ ರದ್ದು ಮಾಡಿದ ಸರ್ಕಾರ: ಮಹತ್ವದ ನಿರ್ಧಾರಕ್ಕೆ ಹಲವರಿಂದ ವಿರೋಧ
ನಮ್ಮ ನಡುವೆ ಇರುವ ಬಹುತೇಕರೆಲ್ಲರೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ಅದರ ಹೆಸರಿನಲ್ಲಿ ದಂಡವನ್ನು ತೆತ್ತವರೇ ಆಗಿದ್ದೇವೆ. ಅದರಲ್ಲಿ ಇನ್ನೂ ಕೆಲವರು ಇನ್ನೂ ಸಹ ಆ ದಂಡವನ್ನು ಸಂಪೂರ್ಣವಾಗಿ ಪಾವತಿಸದೇ ಪೊಲೀಸರನ್ನು ಕಂಡರೆ ತಲೆಮರೆಸಿಕೊಂಡು ಓಡಾಡುತ್ತಿರುವವರೇ ಹೆಚ್ಚು.
ಈ ನಡುವೆ ಉತ್ತರ ಪ್ರದೇಶದಲ್ಲಿ (Uttar Pradesh) ಅಡಳಿತ ನಡೆಸುತ್ತಿರುವ ಯೋಗಿ ಆದಿತ್ಯನಾಥ್ ಸರ್ಕಾರ ತಮ್ಮ ರಾಜ್ಯದಲ್ಲಿ ಬಾಕಿ ಉಳಿದುಕೊಂಡಿರುವ ಎಲ್ಲಾ ಟ್ರಾಫಿಕ್ ದಂಡ ಚಲನ್ ರದ್ದು ಮಾಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಜನವರಿ 1, 2017 ರಿಂದ 31 ಡಿಸೆಂಬರ್ 2021ರ ತನಕ ಬಾಕಿಯಿರುವ ಎಲ್ಲಾ ಚಲನ್ ಅನ್ನು ರದ್ದುಗೊಳಿಸಲಿದ್ದಾರೆ.

ಯೋಗಿ ಸರ್ಕಾರದ ಈ ನಿರ್ಧಾರದಿಂದ ಪೊಲೀಸರೆದುರು ತಲೆಮರೆಸಿ, ಕದ್ದು ಮುಚ್ಚಿ ಓಡಾಡುತ್ತಿದ್ದ ಹಲವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಇನ್ನು ಮುಂದೆ 2017 ರಿಂದ 2021ರ ನಡುವೆ ದಂಡ ಪಾವತಿಸದೇ ಇದ್ದವರು ಧೈರ್ಯವಾಗಿ ಓಡಾಡುವಂತಾಗಿದೆ. ಇದು ಕೋರ್ಟ್‌ನಲ್ಲಿ ಪ್ರಸ್ತುತ ಕೇಸ್ ನಡೆಯುತ್ತಿರುವ ಪ್ರಕರಣಗಳಿಗೂ ಅನ್ವಯವಾಗಲಿದೆ.
ಇನ್ನು ವರದಿಗಳ ಪ್ರಕಾರ ಯೋಗಿ ಆದಿತ್ಯನಾಥ್ ಸರ್ಕಾರದ ಅವಧಿಯಲ್ಲಿ ದಂಡ ಬಾಕಿ ಉಳಿಸಿಕೊಂಡಿದ್ದ ಲಕ್ಷಕ್ಕೂ ಅಧಿಕ ಮಂದಿ ಯೋಗಿ ಆದಿತ್ಯನಾಥರ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೇ ಸಂಧರ್ಭದಲ್ಲಿ ದಂಡ ಪಾವತಿಸಿದ ಹಲವರು ಯೋಗಿ ಸರ್ಕಾರದ ಈ ನಿರ್ಧಾರದ ವಿರುದ್ದ ಆಕ್ರೋಶ ವ್ಯಕ್ತಡಿಸಿದ್ದಾರೆ.

ಉತ್ತರ ಪ್ರದೇಶದ ಸಾರಿಗೆ ಆಯುಕ್ತ ಚಂದ್ರಭೂಷಣ್ ಸಿಂಗ್ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ಈ ಕುರಿತಾಗಿ ಎಲ್ಲಾ ಸಾರಿಗೆ ಅಧಿಕಾರಿಗಳಿಗೆ ಆದೇಶವನ್ನು ಜಾರಿಗೊಳಿಸುವಂತೆ ಸೂಚನೆ ನೀಡಿದ್ದಾರೆ. ಇನ್ನು ಜನವರಿ 1, 2022 ರಿಂದ ದಾಖಲಿಸಿರುವ ಕೇಸ್‌ಗಳನ್ನು ದಂಡ ಪಾವತಿಸಿ ತಮ್ಮ ಪ್ರಕರಣಗಳಿಗೆ ಇತಿಶ್ರೀ ಹಾಡಬಹುದಾಗಿದೆ.
ನೋಯ್ಡಾದಲ್ಲಿ 2021 ರಲ್ಲಿ ಪ್ರತಿಭಟನೆಯ ವೇಳೆ ನಿಯಮ ಉಲ್ಲಂಘಿಸಿದ್ದ ತಮ್ಮ ವಾಹನಗಳ ಮೇಲಿರುವ ಪ್ರಕರಣಗಳನ್ನು ರದ್ದು ಮಾಡುವಂತೆ ಕೋರಿ ಪ್ರತಿಭಟನೆ ಮಾಡಿದ್ದ ಹಲವು ಕೃಷಿ ಸಂಘಟನೆಗಳು, ರೈತರು ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರು. ಇದೀಗ ಯೋಗಿ ಸರ್ಕಾರ ಅವೆಲ್ಲವನ್ನೂ ರದ್ದು ಮಾಡುವಂತೆ ಆದೇಶ ನೀಡಿರುವುದು ಶ್ಲಾಘನೀಯ.
ಕೆಲವು ತಿಂಗಳ ಹಿಂದೆ ಕರ್ನಾಟಕದಲ್ಲೂ ಸಹ ಬಾಕಿ ಉಳಿದುಕೊಂಡಿದ್ದ ಟ್ರಾಫಿಕ್ ಪ್ರಕರಣಗಳಲ್ಲಿ ಶೇ. 50 ರಷ್ಟು ರಿಯಾಯಿತಿಯನ್ನು ನೀಡಲಾಗಿತ್ತು. ಈ ಕುರಿತಾಗಿ ಹಲವರು ಈ ನಿರ್ಧಾರವನ್ನು ಸ್ವಾಗತಿಸಿದ್ದರೆ ಇನ್ನು ಕೆಲವರು ಇದನ್ನು ವಿರೋಧಿಸಿದ್ದರು. ಆದರೆ, ಕೆಲವೇ ದಿನಗಳಲ್ಲಿ ಕರ್ನಾಟಕ ಸರ್ಕಾರವೂ ಭಾರೀ ಮೊತ್ತವನ್ನು ಕಲೆ ಹಾಕಿ ಗಮನ ಸೆಳೆದಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications