ತನಗೆ ತಾನೇ ದಂಡವನ್ನು ವಿಧಿಸಿಕೊಂಡ ಪೊಲೀಸಪ್ಪ

ನೂತನ ಸಂಚಾರಿ ನಿಯಮ ಜಾರಿಯಾದ ಬಳಿಕ ಭಾರೀ ಪ್ರಮಾಣದಲ್ಲಿ ದುಬಾರಿ ದಂಡವನ್ನು ವಿಧಿಸಿದ ಹಲವು ಪ್ರಕರಣಗಳು ವರದಿಯಾಗಿವೆ. ಇದರ ನಡುವೆ ಕೆಲವು ಕಡೆಗಳಲ್ಲಿ ಪೊಲೀಸರು ಮತ್ತು ಸರ್ಕಾರಿ ಅಧಿಕಾರಿಗಳು ಸಂಚಾರಿ ನಿಯಮವನ್ನು ಉಲ್ಲಂಘಿಸಿದಾಗ ದಂಡ ವಿಧಿಸಿದ ಪ್ರಕರಣಗಳು ವರದಿಯಾಗಿವೆ. ಆದರೆ ಇಲ್ಲಿ ಒಂದು ಪೊಲೀಸ್ ಇನ್ಸ್‌ಪೆಕ್ಟರ್‌ ತನಗೆ ತಾನೇ ಚಲನ್ ನೀಡಿದ ವಿಚಿತ್ರ ಘಟನೆಯೊಂದು ನಡೆದಿದೆ.

ತನಗೆ ತಾನೇ ದಂಡವನ್ನು ವಿಧಿಸಿಕೊಂಡ ಪೊಲೀಸಪ್ಪ

ಈ ವಿಚಿತ್ರ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿದೆ. ಪೊಲೀಸ್ ಇನ್ಸ್‌ಪೆಕ್ಟರ್‌ ಹೆಲ್ಮೆಟ್ ಇಲ್ಲದ ಕಾರಣ ತನಗೆ ತಾನೇ ಚಲನ್ ಅನ್ನು ವಿಧಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಗ್ರಾಮಸ್ಥನೊಬ್ಬನಿಗೆ ಹೆಲ್ಮೆಟ್ ಧರಿಸದೆ ದ್ವಿಚಕ್ರ ಚಲಾಯಿಸಿದ್ದಕ್ಕೆ ರೂ.5,000 ದಂಡವನ್ನು ವಿಧಿಸಿದ್ದರು.

ತನಗೆ ತಾನೇ ದಂಡವನ್ನು ವಿಧಿಸಿಕೊಂಡ ಪೊಲೀಸಪ್ಪ

ಕೇಂದ್ರ ಸರ್ಕಾರವು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಹೊಸ ಮೋಟಾರ್ ವಾಹನ ಕಾಯ್ದೆಯನ್ನು ಜಾರಿಗೊಳಿಸಿದ್ದರು. ಹಳೇ ಮೋಟಾರ್ ವಾಹನ ಕಾಯ್ದೆಯನ್ನು ತಿದ್ದುಪಡಿ ಮಾಡಿ 10 ಪಟ್ಟು ದಂಡವನ್ನು ಹೆಚ್ಚಿಸಿದ್ದರು. ಹೊಸ ಮೋಟಾರು ಕಾಯ್ದೆಯ ಬಳಿಕ ದೇಶಾದ್ಯಂತ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣವು ಕಡಿಮೆಯಾಗಿತ್ತು.

ತನಗೆ ತಾನೇ ದಂಡವನ್ನು ವಿಧಿಸಿಕೊಂಡ ಪೊಲೀಸಪ್ಪ

ಕಳೆದ ಸೆಪ್ಟೆಂಬರ್ ತಿಂಗಳ ಬಳಿಕ ಸಂಚಾರಿ ನಿಯಮವನ್ನು ಉಲ್ಲಂಘಿಸುವುದು ಶೇ.30 ರಷ್ಟು ಇಳಿಕೆಯಾಗಿದೆ. ಬೆಂಗಳೂರು ಟ್ರಾಫಿಕ್ ಪೊಲೀಸರ ಸಂಗ್ರಹಿಸುವ ದಂಡವು ಶೇ.21 ರಷ್ಟು ಹೆಚ್ಚಳವಾಗಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ವರದಿ ಮಾಡಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಚಾರಿ ನಿಯಮವನ್ನು ಉಲ್ಲಂಘಿಸುವವರ ಸಂಖ್ಯೆ ಕಡಿಮೆಯಾಗಿದೆ.

ತನಗೆ ತಾನೇ ದಂಡವನ್ನು ವಿಧಿಸಿಕೊಂಡ ಪೊಲೀಸಪ್ಪ

ಆದರೆ ಕೆಲವು ನಕಾರಾತ್ಮಕ ವಿಷಯವು ಕೂಡ ಒಳಗೊಂಡಿದೆ. ದುಬಾರಿ ದಂಡವನ್ನು ಕಟ್ಟು‍ನಿಟ್ಟಾಗಿ ಜಾರಿಗೊಳಿಸುವುದರಿಂದ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಹಲವಾರು ಘರ್ಷಣೆಗಳು ನಡೆದಿವೆ. ದೇಶಾದ್ಯಂತ ಹಲವು ಭಾಗಗಳಲ್ಲಿ ಘರ್ಷಣೆಗಳು ಸಂಭವಿಸಿರುವ ವರದಿಗಳಾಗಿವೆ. ಅಲ್ಲದೇ ಮಧ್ಯಮ ಮತ್ತು ದಿನಕೊಲೀ ಕೆಲಸಗಾರರಿಗೆ ದುಬಾರಿ ಮೊತ್ತದ ದಂಡವು ದೊಡ್ಡ ಹೊರೆಯಾಗುತ್ತದೆ.

ತನಗೆ ತಾನೇ ದಂಡವನ್ನು ವಿಧಿಸಿಕೊಂಡ ಪೊಲೀಸಪ್ಪ

ಈ ಘಟನೆಯಲ್ಲಿ ಉತ್ತರ ಪ್ರದೇಶದ ರಾಯ್ ಬರೇಲಿ ಬಳಿಯ ಕಿವಾಡಾ ಗ್ರಾಮಕ್ಕೆ ಪೋಲಿಸ್ ಇನ್ಸ್‌ಪೆಕ್ಟರ್ ವಾಹನ ತಪಾಸಣೆ ನಡೆಸಲು ತನ್ನ ಸಹದ್ಯೋಗಿಗಳ ಜೊತೆ ಗ್ರಾಮಕ್ಕೆ ತೆರಳಿದ್ದರು. ವಾಹನ ತಪಾಸಣೆ ಮಾಡುವಾಗ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಗ್ರಾಮಸ್ಥನಿಗೆ ರೂ.5 ಸಾವಿರ ದಂಡವನ್ನು ವಿಧಿಸಿದ್ದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ವಾಗ್ವದವಾಗುತ್ತದೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಪೊಲೀಸರ ಬಳಿ ಹೆಲ್ಮೆಟ್ ಎಲ್ಲಿ ಎಂದು ಕೇಳಿದ್ದಾರೆ.

ಪೊಲೀಸ್ ಇನ್ಸ್‌ಪೆಕ್ಟರ್ ತಾನು ದ್ವಿಚಕ್ರ ವಾಹನವನ್ನು ಚಲಾಯಿಸುತ್ತಿಲ್ಲ ಎಂದು ವಿವರಿಸುತ್ತಾರೆ. ಆದರೆ ನೀವು ಕರ್ತವ್ಯಕ್ಕೆ ಬಂದಿರುವುದು ದ್ವಿಚಕ್ರ ವಾಹನದಲ್ಲಿ ಆದರೆ ನಿಮ್ಮ ಹೆಲ್ಮೆಟ್ ಎಲ್ಲಿ ಎಂದು ಗ್ರಾಮಸ್ಥರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಕಡೆಗೂ ಪೊಲೀಸ್ ಅಧಿಕಾರಿಗೆ ವಿಧಿ ಇಲ್ಲದೇ ತನಗೆ ತಾನೇ ಚಲನ್ ಅನ್ನು ವಿಧಿಸಿಕೊಂಡರು.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ತನಗೆ ತಾನೇ ದಂಡವನ್ನು ವಿಧಿಸಿಕೊಂಡ ಪೊಲೀಸಪ್ಪ

ಕಳೆದ ಬಾರಿ ಉತ್ತರ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಮಿತಾಭ್ ರಾಯ್ ಮಹೀಂದ್ರಾ ಬೊಲೆರೊದಲ್ಲಿ ತನ್ನ ವೈಯಕ್ತಿಕ ಭದ್ರತೆಯೊಂದಿಗೆ ಕರ್ತವ್ಯಕ್ಕೆ ತೆರಳುತ್ತಿದ್ದರು. ಇವರು ಕರ್ತವ್ಯಕ್ಕೆ ಬೊಲೆರೊ ವಾಹನದಲ್ಲಿ ತೆರಳುತ್ತಿರುವ ವೇಳೆಯಲ್ಲಿ ಇವರು ಸೀಟ್ ಬೆಲ್ಟ್ ಅನ್ನು ಧರಿಸಿರಲಿಲ್ಲ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ತನಗೆ ತಾನೇ ದಂಡವನ್ನು ವಿಧಿಸಿಕೊಂಡ ಪೊಲೀಸಪ್ಪ

ಆರ್‍‍ಟಿಒ ಅಧಿಕಾರಿಯು ಸೀಟ್‍‍ಬೆಲ್ಟ್ ಧರಿಸದೆ ವಾಹನದಲ್ಲಿ ಸಂಚಾರಿಸುತ್ತಿರುವಾಗ ಸಾರ್ವಜನಿಕರು ವಾಹನವನ್ನು ತಡೆದು ಸೀಟ್‍‍ಬೆಲ್ಟ್ ಯಾಕೆ ಧರಿಸಲಿಲ್ಲವೆಂದು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಯು ತನ್ನ ಚಾಲಕನು ಸೀಟ್‍‍ಬೆಲ್ಟ್ ಧರಿಸಿದ್ದಾನೆ, ಆತನು ಯಾವಾಗಲೂ ಸೀಟ್ ಬೆಲ್ಟ್ ಧರಿಸುತ್ತಾನೆ ಎಂದು ಹೇಳಿದ್ದಾರೆ.

ತನಗೆ ತಾನೇ ದಂಡವನ್ನು ವಿಧಿಸಿಕೊಂಡ ಪೊಲೀಸಪ್ಪ

ಸಾರ್ವಜನಿಕರು ಈ ಅಧಿಕಾರಿಯ ಉಡಾಫೆ ಉತ್ತರವನ್ನು ಒಪ್ಪುವುದಕ್ಕೆ ತಯಾರು ಇರಲಿಲ್ಲ. ಅಲ್ಲೇ ಇದ್ದ ಪೊಲೀಸರಿಗೆ ದಂಡವನ್ನು ವಿಧಿಸಲು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ದಂಡವನ್ನು ವಿಧಿಸಿದ್ದಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ತನಗೆ ತಾನೇ ದಂಡವನ್ನು ವಿಧಿಸಿಕೊಂಡ ಪೊಲೀಸಪ್ಪ

ಸೆಪ್ಟೆಂಬರ್ 1 ರಿಂದ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೆ ತಂದ ರಾಜ್ಯಗಳಲ್ಲಿ ಉತ್ತರಪ್ರದೇಶ ಕೂಡ ಒಂದು ಎಂಬುದನ್ನು ಗಮನಿಸಬೇಕು. ನೂತನ ಸಂಚಾರಿ ನಿಯಮ ಉಲ್ಲಂಘಿಸಿದರೆ ಸಾರ್ವಜನಿಕರಿಗೆ ದುಬಾರಿ ದಂಡವಾದರೇ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಅದರ ದುಪ್ಪಟ್ಟು ದಂಡ ವಿಧಿಸಲಾಗುತ್ತದೆ.

ತನಗೆ ತಾನೇ ದಂಡವನ್ನು ವಿಧಿಸಿಕೊಂಡ ಪೊಲೀಸಪ್ಪ

ನಿಯಮಗಳನ್ನು ಜಾರಿಗೊಳಿಸುವ ಪೊಲೀಸರು ಪದೇ ಪದೇ ನಿಯಮವನ್ನು ಮೀರುವುದು ವಿಪರ್ಯಾಸ. ಅಪಘಾತಗಳಾಗುದನ್ನು ತಪ್ಪಿಸಲು ಮತ್ತು ಚಾಲಕರು ಸಂಚಾರಿ ನಿಯಮ ಪಾಲಿಸಲಿ ಎಂದು ಹೊಸ ಸಂಚಾರಿ ನಿಯಮವನ್ನು ಜಾರಿಗೊಳಿಸಲಾಗಿದೆ. ದಂಡಕ್ಕೆ ಹೆದರಿಯಾದರೂ ಚಾಲಕರು ಸಂಚಾರಿ ನಿಯಮ ಪಾಲಿಸಲಿ ಎಂಬುದು ಇದರ ಉದ್ದೇಶವಾಗಿದೆ.

ತನಗೆ ತಾನೇ ದಂಡವನ್ನು ವಿಧಿಸಿಕೊಂಡ ಪೊಲೀಸಪ್ಪ

ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಹೊಸ ಮೋಟಾರು ವಾಹನ ಕಾಯ್ದೆಯನ್ವಯ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ. ಈ ಹೊಸ ಕಾಯ್ದೆಯನ್ನು ಸೆಪ್ಟೆಂಬರ್ 1ರಿಂದ ಜಾರಿಗೆ ತರಲಾಗಿದೆ. ಎಲ್ಲಾ ದಾಖಲೆಗಳು ಸರಿಯಿದ್ದರೂ ಏನಾದರೂ ಕಾರಣ ಹೇಳಿ ದಂಡ ವಿಧಿಸಲಾಗುತ್ತಿದೆ.

ತನಗೆ ತಾನೇ ದಂಡವನ್ನು ವಿಧಿಸಿಕೊಂಡ ಪೊಲೀಸಪ್ಪ

ಲುಂಗಿ ಧರಿಸಿ ವಾಹನ ಚಲಾಯಿಸಿದರೆ, ಚಪ್ಪಲಿ ಧರಿಸಿ ವಾಹನ ಚಲಾಯಿಸಿದರೆ ಕೆಲವು ರಾಜ್ಯಗಳಲ್ಲಿ ದಂಡ ವಿಧಿಸಲಾಗುತ್ತಿದೆ. ಇತ್ತೀಚಿಗೆ ಸಾಮಾಜಿಕ ಜಾಲ ತಾಣಗಳಲ್ಲಿ, ಕೇಂದ್ರ ಸರ್ಕಾರವು ವಾಹನಗಳನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸದಂತೆ ಪೊಲೀಸ್ ಇಲಾಖೆಗೆ ಸೂಚಿಸಿದೆ ಎಂಬ ವದಂತಿಗಳು ಹಬ್ಬಿದ್ದವು. ಈ ಕುರಿತು ಟ್ವೀಟ್ ಮಾಡಿರುವ ನಿತಿನ್ ಗಡ್ಕರಿರವರು ಕೆಲವು ವದಂತಿಗಳು ಹಬ್ಬಿದ್ದು, ಅವುಗಳನ್ನು ನಂಬದಂತೆ ಸೂಚಿಸಿದ್ದಾರೆ.

ತನಗೆ ತಾನೇ ದಂಡವನ್ನು ವಿಧಿಸಿಕೊಂಡ ಪೊಲೀಸಪ್ಪ

ಪೊಲೀಸರು ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ಸವಾರಿ ಮಾಡುವವರು ಚಪ್ಪಲಿ ಧರಿಸಿ ಚಾಲನೆ ಮಾಡುವವರಿಗೆ ದಂಡ ವಿಧಿಸುತ್ತಿದ್ದಾರೆ ಎಂಬುದಾಗಿ ಕೆಲವು ಪೋಸ್ಟ್ ಗಳನ್ನು ಮಾಡಲಾಗಿತ್ತು. ಅರ್ಧ ಶರ್ಟ್ ಧರಿಸುವವರಿಗೆ ಹಾಗೂ ಧೋತಿಯಂತಹ ಸಾಂಪ್ರಾದಾಯಿಕ ಉಡುಗೆ ತೊಡುವವರಿಗೂ ದಂಡ ವಿಧಿಸಲಾಗುತ್ತಿದೆ ಎಂಬ ವದಂತಿಗಳು ಹಬ್ಬಿದ್ದವು.

ತನಗೆ ತಾನೇ ದಂಡವನ್ನು ವಿಧಿಸಿಕೊಂಡ ಪೊಲೀಸಪ್ಪ

ಚಪ್ಪಲಿ ಧರಿಸಿ ದ್ವಿಚಕ್ರ ವಾಹನ ಚಲಾಯಿಸುವ ಸವಾರರಿಗೆ ರೂ.1,000 ದಂಡ ವಿಧಿಸಲಾಗುವುದೆಂದು ಈ ಹಿಂದೆ ವರದಿಯಾಗಿತ್ತು. ಕೆಲ ದಿನಗಳ ಹಿಂದಷ್ಟೆ ಶರ್ಟ್ ಗುಂಡಿ ಹಾಕದೇ, ಚಪ್ಪಲಿ ಧರಿಸಿ ವಾಹನ ಚಲಾಯಿಸುತ್ತಿದ್ದ ಟ್ಯಾಕ್ಸಿ ಡ್ರೈವರ್‍‍ಗೆ ಜೈಪುರದಲ್ಲಿ ದಂಡ ವಿಧಿಸಲಾಗಿತ್ತು.

ತನಗೆ ತಾನೇ ದಂಡವನ್ನು ವಿಧಿಸಿಕೊಂಡ ಪೊಲೀಸಪ್ಪ

ಹೊಸ ಮೋಟಾರು ಕಾಯ್ದೆಯ ಹಿಂದಿರುವ ರೂವಾರಿಯಾದ ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿರವರು ಈ ಕುರಿತು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಅಸಂಬದ್ದವಾದ ದಂಡವನ್ನು ವಾಹನ ಸವಾರರಿಗೆ ವಿಧಿಸುವಂತಿಲ್ಲವೆಂದು ಹೇಳಿದ್ದಾರೆ.

ತನಗೆ ತಾನೇ ದಂಡವನ್ನು ವಿಧಿಸಿಕೊಂಡ ಪೊಲೀಸಪ್ಪ

ತಮ್ಮ ಟ್ವೀಟ್‍‍ನಲ್ಲಿ ಪಟ್ಟಿಯೊಂದನ್ನು ಬಿಡುಗಡೆಗೊಳಿಸಿರುವ ಅವರು ಅರ್ಧ ಶರ್ಟುಗಳನ್ನು ಧರಿಸಿದರೆ, ಲುಂಗಿ ಅಥವಾ ಬನಿಯನ್ ಧರಿಸಿದರೆ, ಎಕ್ಸ್ ಟ್ರಾ ಬಲ್ಬ್ ಅನ್ನು ಕಾರಿನಲ್ಲಿ ಇಟ್ಟುಕೊಳ್ಳದಿದ್ದರೆ, ವಾಹನಗಳ ಗಾಜುಗಳನ್ನು ಗಲೀಜಾಗಿ ಇಟ್ಟುಕೊಂಡರೆ, ಚಾಲನೆ ಅಥವಾ ಸವಾರಿ ಮಾಡುವಾಗ ಚಪ್ಪಲಿ ಧರಿಸಿದರೆ ಯಾವುದೇ ದಂಡ ವಿಧಿಸುವಂತಿಲ್ಲವೆಂದು ತಿಳಿಸಿದ್ದಾರೆ.

ತನಗೆ ತಾನೇ ದಂಡವನ್ನು ವಿಧಿಸಿಕೊಂಡ ಪೊಲೀಸಪ್ಪ

ಈ ರೀತಿಯಾಗಿ ಯಾವುದೇ ವಾಹನ ಚಾಲಕರು ವಾಹನ ಚಲಾಯಿಸದರೆ ಪೊಲೀಸರು ದಂಡ ವಿಧಿಸುವಂತಿಲ್ಲ. ಇದರಿಂದಾಗಿ ವಾಹನ ಸವಾರರು ನಿಶ್ಚಿಂತೆಯಿಂದ ಇರಬಹುದು. ಹೊಸ ಮೋಟಾರು ವಾಹನ ಕಾಯ್ದೆಯನ್ವಯ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ.

ತನಗೆ ತಾನೇ ದಂಡವನ್ನು ವಿಧಿಸಿಕೊಂಡ ಪೊಲೀಸಪ್ಪ

ಕೆಲವು ಕಡೆ ವಾಹನದ ಬೆಲೆಗಿಂತ ಹೆಚ್ಚಿನ ಪ್ರಮಾಣದ ದಂಡವನ್ನು ವಿಧಿಸಲಾಗಿದೆ. ಭಾರೀ ಪ್ರಮಾಣದ ದಂಡಕ್ಕೆ ಹೆದರಿಯಾದರೂ ವಾಹನ ಸವಾರರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಿ ಎಂಬ ಕಾರಣಕ್ಕೆ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ.

ತನಗೆ ತಾನೇ ದಂಡವನ್ನು ವಿಧಿಸಿಕೊಂಡ ಪೊಲೀಸಪ್ಪ

ಈ ಬಗ್ಗೆ ಅರಿವಿರದ ಸಾರ್ವಜನಿಕರು, ಹೆಚ್ಚಿನ ಪ್ರಮಾಣದ ದಂಡ ವಿಧಿಸಿದ ಪೊಲೀಸರ ಜೊತೆಗೆ ವಾಗ್ವಾದಕ್ಕಿಳಿದ ಹಲವಾರು ಘಟನೆಗಳು ನಡೆದಿವೆ. ಗುಜರಾತ್, ರಾಜಸ್ತಾನ, ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ ರಾಜ್ಯಗಳು ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೊಳಿಸಿಲ್ಲ.

More from DriveSpark

Article Published On: Tuesday, October 8, 2019, 17:35 [IST]
English summary
Police Inspector Fines Himself For Not Wearing A Helmet - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+