ಅಟಲ್ ಜೀ ಅವರು ಅಂಬಾಸಿಡರ್ ಬಿಟ್ಟು ಬಿಎಂಡಬ್ಲ್ಯು 7 ಸೀರಿಸ್ ಕಾರು ಏರಿದ್ದೇಕೆ ಗೊತ್ತಾ?

By Praveen Sannamani

ಭಾರತ ಕಂಡ ಅಗ್ರಮಾನ್ಯ ರಾಜಕೀಯ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕಳೆದುಕೊಂಡ ಇಡೀ ದೇಶವೇ ಮಮ್ಮಲ ಮರುಗುತ್ತಿದೆ. ದೇಶವಷ್ಟೇ ಅಲ್ಲದೇ ಅಂತಾರಾಷ್ಟೀಯ ವಲಯದಲ್ಲಿಯೂ ಮನ್ನಣೆ ಗಳಿಸಿದ್ದ ಅಟಲ್ ಜೀ ಅವರನ್ನು ಅಜಾತಶತ್ರು ಎಂದೇ ಗುರುತಿಸಲಾಗುತ್ತದೆ. ಹೀಗೆ ತಮ್ಮ ಆಡಳಿತ ಅವಧಿಯಲ್ಲಿ ಹಲವು ಬದಲಾವಣೆಗಳಿಗೆ ನಾಂದಿ ಹಾಡಿದ್ದ ಅಟಲ್ ಬಿಹಾರಿ ವಾಜಪೇಯಿಯವರ ಬದುಕಿನ ಹಿಂದಿನ ಕೆಲವು ಇಂಟ್ರಸ್ಟಿಂಗ್ ವಿಚಾರಗಳನ್ನು ನೀವು ತಿಳಿದುಕೊಳ್ಳಲೇಬೇಕು.

ಭಾರತದಲ್ಲಿ ಬಿಎಂಡಬ್ಲ್ಯು 7 ಸೀರಿಸ್ ಬಳಕೆ ಮಾಡಿದ ಮೊದಲ ಪ್ರಧಾನಿ ಯಾರು ಗೊತ್ತಾ?

ಹೌದು, ಅಟಲ್ ಜೀ ಅವರು ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ ಹಲವು ಹೊಸತನಗಳಿಗೆ ಮುನ್ನಡಿ ಬರೆದಿದ್ದಲ್ಲದೇ ಪ್ರಧಾನಿಗಳಿಗೆ ಅದುವರೆಗೆ ಇದ್ದ ಭದ್ರತಾ ಸೌಲಭ್ಯವನ್ನು ಹೆಚ್ಚಿಸಿದ್ದೇ ವಾಜಪೇಯಿ ಅವರು. ಮೊದಮೊದಲು ಅಂಬಾಸಿಡರ್ ಮತ್ತು ಮಹೀಂದ್ರಾ ಸ್ಕಾರ್ಪಿಯೋಗಳನ್ನ ಬಳಸುತ್ತಿದ್ದ ಅಟಲ್ ಜೀ ಅವರು ಇತಿಹಾಸದಲ್ಲಿ ಮೊದಲ ಅತಿ ಹೆಚ್ಚು ಸುರಕ್ಷಾ ಸೌಲಭ್ಯ ಹೊಂದಿಕೊಂಡಿರುವ ಬಿಎಂಡಬ್ಲ್ಯು 7 ಸೀರಿಸ್ ಕಾರು ಬಳಕೆಗೆ ಚಾಲನೆ ನೀಡಿದ್ದರು.

ಭಾರತದಲ್ಲಿ ಬಿಎಂಡಬ್ಲ್ಯು 7 ಸೀರಿಸ್ ಬಳಕೆ ಮಾಡಿದ ಮೊದಲ ಪ್ರಧಾನಿ ಯಾರು ಗೊತ್ತಾ?

ಆದಾದ ಬಳಿಕ ಪ್ರಧಾನಿಯಾಗಿ ಬಂದ ಮನಮೋಹನ್ ಸಿಂಗ್ ಮತ್ತು ಸದ್ಯ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ಸಹ ಗರಿಷ್ಠ ಸುರಕ್ಷಾ ಸೌಲಭ್ಯ ಹೊಂದಿದ್ದ ಬಿಎಂಡಬ್ಲ್ಯು 7 ಸೀರಿಸ್ ಕಾರುಗಳನ್ನ ಬಳಕೆ ಮಾಡಿದ್ದು ಬಹುತೇಕರಿಗೆ ಎಲ್ಲರಿಗೂ ಗೊತ್ತಿರುವ ವಿಚಾರ.

ಭಾರತದಲ್ಲಿ ಬಿಎಂಡಬ್ಲ್ಯು 7 ಸೀರಿಸ್ ಬಳಕೆ ಮಾಡಿದ ಮೊದಲ ಪ್ರಧಾನಿ ಯಾರು ಗೊತ್ತಾ?

ಅಟಲ್ ಜೀ ಅವರು ಬಿಎಂಡಬ್ಲ್ಯು 7 ಸೀರಿಸ್ ಬಳಸುವುದಕ್ಕೂ ಮುನ್ನ ವಿಶ್ವ ನಾಯಕರ ಬಳಿ ಅದಾಗಲೇ ವಿಶ್ವದರ್ಜೆ ಪ್ರೇರಣೆಯ ಹಲವು ಐಷಾರಾಮಿ ಕಾರುಗಳು ಬಳಕೆಯಲ್ಲಿದ್ದವು. ಹೀಗಾಗಿ ಭಾರತದಲ್ಲೂ ಬದಲಾಣೆ ನಾಂದಿ ಹಾಡಿದ ವಾಜಪೇಯಿಯವರು 2001ರಲ್ಲಿ ಮೊದಲ ಬಾರಿಗೆ ತಮ್ಮಅಧಿಕೃತ ವಾಹನವನ್ನ ಅಂಬಾಸಿಡರ್‌ಗೆ ಬದಲಾಗಿ ಬಿಎಂಡಬ್ಲ್ಯು 7 ಸೀರಿಸ್ ಬಳಕೆಗೆ ಚಾಲನೆ ನೀಡಿದರು.

ಭಾರತದಲ್ಲಿ ಬಿಎಂಡಬ್ಲ್ಯು 7 ಸೀರಿಸ್ ಬಳಕೆ ಮಾಡಿದ ಮೊದಲ ಪ್ರಧಾನಿ ಯಾರು ಗೊತ್ತಾ?

ಭದ್ರತೆಗಾಗಿ ಬಿಎಂಡಬ್ಲ್ಯು

ಹೌದು, ಇದು ಐಷಾರಾಮಿ ಜೀವನ ನಡೆಸಲಾದ ಮಾಡಲಾದ ಬದಲಾವಣೆ ಅಂತು ಅಲ್ಲವೇ ಅಲ್ಲ. ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ನಡೆದ ಹಲವು ಅಘಾತಕಾರಿ ಘಟನೆಗಳು ಪ್ರಧಾನಿಯವರ ಭದ್ರತೆಯನ್ನ ಪ್ರಶ್ನೆ ಮಾಡುವಂತಿತ್ತು. ಹೀಗಾಗಿಯೇ ಅದುವರೆಗೆ ಇದ್ದ ಭದ್ರತೆ ಮತ್ತು ಬೆಂಗಾವಲು ಪಡೆಯಲ್ಲಿ ಸಾಕಷ್ಟು ಬದಲಾವಣೆ ತರಲಾಯಿತು.

ಭಾರತದಲ್ಲಿ ಬಿಎಂಡಬ್ಲ್ಯು 7 ಸೀರಿಸ್ ಬಳಕೆ ಮಾಡಿದ ಮೊದಲ ಪ್ರಧಾನಿ ಯಾರು ಗೊತ್ತಾ?

ಬಿಎಂಡಬ್ಲ್ಯು 7 ಸೀರಿಸ್ ಕಾರಿನ ವಿಶೇಷತೆ ಏನು?

ಕಡಿಮೆ ರಸ್ತೆ ಸಾನಿಧ್ಯವನ್ನು ಹೊಂದಿರುವ ಬಿಎಂಡಬ್ಲ್ಯು 7 ಸಿರೀಸ್ ಕಾರು ಹೆಚ್ಚಿನ ಸುರಕ್ಷತೆಗೆ ಹೆಸರುವಾಸಿಯಾಗಿದ್ದು, ಎಸ್‌ಪಿಜೆ ಕಮಾಂಡೋಗಳನ್ನು ಒಳಗೊಂಡಿರುವ ಬಿಎಂಡಬ್ಲ್ಯು ಎಕ್ಸ್ 5 ಕಾರುಗಳು ಸುತ್ತುವರಿಯುವ ಮೂಲಕ ಗರಿಷ್ಠ ರಕ್ಷಣೆ ನೀಡಬಲ್ಲವು.

ಭಾರತದಲ್ಲಿ ಬಿಎಂಡಬ್ಲ್ಯು 7 ಸೀರಿಸ್ ಬಳಕೆ ಮಾಡಿದ ಮೊದಲ ಪ್ರಧಾನಿ ಯಾರು ಗೊತ್ತಾ?

ಕಡಿಮೆ ಗ್ರೌಂಡ್ ಕ್ಲಿಯರನ್ಸ್ ಹೊಂದಿರುವ ಕಾರುಗಳನ್ನು ನಿರ್ವಹಿಸುವುದು ಅತಿ ಸುಲಭವಾಗಿದ್ದು, ನೆಲಕ್ಕೆ ಹತ್ತಿರವಾಗಿರುವುದರಿಂದ ತಕ್ಷಣ ಬದಲಾವಣೆಗಳನ್ನು ತರಬಹುದಾಗಿದೆ. ಹೀಗಾಗಿಯೇ ಅಟಲ್ ಜೀ ಅವರು ಬಿಎಂಡಬ್ಲ್ಯು 7 ಸೀರಿಸ್ ಆಯ್ಕೆ ಮಾಡಿದ್ದರು.

ಭಾರತದಲ್ಲಿ ಬಿಎಂಡಬ್ಲ್ಯು 7 ಸೀರಿಸ್ ಬಳಕೆ ಮಾಡಿದ ಮೊದಲ ಪ್ರಧಾನಿ ಯಾರು ಗೊತ್ತಾ?

ಇನ್ನೊಂದೆಡೆ ಜರ್ಮನಿಯ ಬಿಎಂಡಬ್ಲ್ಯು ನಿರ್ಮಿತ ಶಸ್ತ್ರಸಜ್ಜಿತ ಕಾರುಗಳು ವಿಶ್ವದೆಲ್ಲೆಡೆ ಅತಿ ಹೆಚ್ಚು ವಿಶ್ವಾಸಾರ್ಹವೆನಿಸಿದೆ. ಆದ್ರೆ ಅಟಲ್ ಜೀ ಅವರು 7 ಸೀರಿಸ್ ಬಳಸದಕ್ಕೂ ಮುನ್ನ ಬಳಸಲಾಗುತ್ತಿದ್ದ ಅಂಬಾಸಿಡರ್ ಮತ್ತು ಸ್ಕಾರ್ಪಿಯೋ ಕಾರುಗಳಿಗೆ ಇಂತಹ ಯಾವುದೇ ಸುರಕ್ಷಾ ಬೆಂಬಲವಿಲ್ಲ.

ಭಾರತದಲ್ಲಿ ಬಿಎಂಡಬ್ಲ್ಯು 7 ಸೀರಿಸ್ ಬಳಕೆ ಮಾಡಿದ ಮೊದಲ ಪ್ರಧಾನಿ ಯಾರು ಗೊತ್ತಾ?

ಮಾಜಿ ಪ್ರಧಾನಿಯಿಂದಲೂ ಬಿಎಂಡಬ್ಲ್ಯು 7 ಸೀರಿಸ್ ಕಾರು ಬಳಕೆ

ಆಗಲೇ ಹೇಳಿದ ಹಾಗೆ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಅಷ್ಟೇ ಅಲ್ಲದೇ ಈಗಲೂ ಸಹ ತಮ್ಮ ಅಧಿಕೃತ ಪ್ರವಾಸಕ್ಕಾಗಿ ಬಿಎಂಡಬ್ಲ್ಯು 7 ಸಿರೀಸ್ ಕಾರುಗಳನ್ನೇ ಬಳಕೆ ಮಾಡುತ್ತಿದ್ದಾರೆ.

ಭಾರತದಲ್ಲಿ ಬಿಎಂಡಬ್ಲ್ಯು 7 ಸೀರಿಸ್ ಬಳಕೆ ಮಾಡಿದ ಮೊದಲ ಪ್ರಧಾನಿ ಯಾರು ಗೊತ್ತಾ?

ಇದಲ್ಲದೇ 1988ರಲ್ಲಿ ಸ್ಥಾಪಿತಗೊಂಡಿದ್ದ ವಿಶೇಷ ರಕ್ಷಣಾ ಪಡೆಯು (ಎಸ್‌ಪಿಜಿ) ದೇಶದ ಪ್ರಧಾನಿ ಮಂತ್ರಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಭದ್ರತೆಯನ್ನು ಒದಗಿಸುವಲ್ಲಿ ಕಟುಬದ್ಧವಾಗಿದೆ. ಅಲ್ಲದೆ ಮಹೀಂದ್ರಗಿಂತಲೂ ಹೆಚ್ಚು ಭದ್ರತೆಯನ್ನು ಒಳಗೊಂಡಿರುವ ಬಿಎಂಡಬ್ಲ್ಯು 7 ಸಿರೀಸ್ ಹೆಚ್ಚು ಸೂಕ್ತ ಎಂದು ಸಲಹೆ ನೀಡಿತ್ತು.

ಭಾರತದಲ್ಲಿ ಬಿಎಂಡಬ್ಲ್ಯು 7 ಸೀರಿಸ್ ಬಳಕೆ ಮಾಡಿದ ಮೊದಲ ಪ್ರಧಾನಿ ಯಾರು ಗೊತ್ತಾ?

ದೇಶದ ಅತ್ಯಂತ ಸುರಕ್ಷಿತ ವಾಹನ ಎಂದು ಗುರುತಿಸಿಕೊಂಡಿರುವ ಬಿಎಂಡಬ್ಲ್ಯು 7 ಸಿರೀಸ್, ಬಾಂಬ್, ಗುಂಡಿನ ದಾಳಿ ಹಾಗೂ ರಾಸಾಯನಿಕ ದಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ.

ಭಾರತದಲ್ಲಿ ಬಿಎಂಡಬ್ಲ್ಯು 7 ಸೀರಿಸ್ ಬಳಕೆ ಮಾಡಿದ ಮೊದಲ ಪ್ರಧಾನಿ ಯಾರು ಗೊತ್ತಾ?

ವಿಶೇಷ ತಂತ್ರಜ್ಞಾನಗಳನ್ನು ಒಳಗೊಂಡ ಬಿಎಂಡಬ್ಲ್ಯು 7 ಸಿರೀಸ್ ಕಾರಿನ ಮಗದೊಂದು ವೈಶಿಷ್ಟ್ಯವೆಂದರೆ ಇದು ಫ್ಲ್ಯಾಟ್ ಟೈರ್‌ನಲ್ಲೇ ಸುಮಾರು ಕೀ.ಮೀ.ಗಳಷ್ಟು ಸಂಚರಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಆಳವಡಿಸಲಾಗಿರುವ ಮುಂದುವರಿದ ಶಾಖ ಸಂದೇಕಗಳು ಕ್ಷಿಪಣಿ ಹಾಗೂ ಆ್ಯಸಿಡ್ ದಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಭಾರತದಲ್ಲಿ ಬಿಎಂಡಬ್ಲ್ಯು 7 ಸೀರಿಸ್ ಬಳಕೆ ಮಾಡಿದ ಮೊದಲ ಪ್ರಧಾನಿ ಯಾರು ಗೊತ್ತಾ?

ಇನ್ನು ಇಂಧನ ಟ್ಯಾಂಕ್‌ಗಳನ್ನು ವಿಶೇಷ ಕವಚಗಳಾಗಿ ವಿನ್ಯಾಸಗೊಳಿಸಲಾಗಿದ್ದು, ಎಂತಹುದೇ ಶಕ್ತಿಶಾಲಿ ಬಾಂಬ್ ದಾಳಿಯಲ್ಲೂ ಸ್ಪೋಟಗೊಳ್ಳುವುದಿಲ್ಲ. ಅಷ್ಟೇ ಅಲ್ಲದೆ ಇದರ ಕ್ಯಾಬಿನ್‌ನಲ್ಲಿ ಆಳವಡಿಸಲಾಗಿರುವ ಗ್ಯಾಸ್ ಫ್ರೂಪ್ ಚೇಂಬರ್ ನಿರಂತರ ಆಮ್ಲಜನಕವನ್ನು ಒದಗಿಸುತ್ತದೆ.

ಭಾರತದಲ್ಲಿ ಬಿಎಂಡಬ್ಲ್ಯು 7 ಸೀರಿಸ್ ಬಳಕೆ ಮಾಡಿದ ಮೊದಲ ಪ್ರಧಾನಿ ಯಾರು ಗೊತ್ತಾ?

ಅಷ್ಟೇ ಅಲ್ಲದೆ ವಿಶೇಷ ಪರಣಿತಿ ಪಡೆದ ಚಾಲಕರು ಮಾತ್ರ ಇದನ್ನು ಚಾಲನೆ ಮಾಡುತ್ತಾರೆ. ಬಿಎಂಡಬ್ಲ್ಯು ಇದಕ್ಕಾಗಿ ವಿಶೇಷ 'ಟ್ರೈನಿಂಗ್ ಫಾರ್ ಫ್ರೊಫೆಷನಲ್' ಎಂಬ ತರಬೇತಿಯನ್ನು ಚಾಲಕರಿಗೆ ನೀಡುತ್ತಿದ್ದು, ತೀವ್ರತರ ಪರಿಸ್ಥಿತಿಯಲ್ಲೂ ಹೇಗೆ ವಾಹನ ನಿಭಾಯಿಸಬೇಕು ಎಂಬುದನ್ನು ಹೇಳಿಕೊಡಲಾಗುತ್ತೆ.

ಭಾರತದಲ್ಲಿ ಬಿಎಂಡಬ್ಲ್ಯು 7 ಸೀರಿಸ್ ಬಳಕೆ ಮಾಡಿದ ಮೊದಲ ಪ್ರಧಾನಿ ಯಾರು ಗೊತ್ತಾ?

ಇದರ ಜೊತೆಗೆ ಅತ್ಯಂತ ನುರಿತ ಭದ್ರತಾ ಪಡೆಯ ಮಾರ್ಗದರ್ಶನದಲ್ಲಿ ದಾಳಿ ವೇಳೆಯಲ್ಲೂ ಕಾರನ್ನು ಹೇಗೆ ಪಾರು ಮಾಡಬೇಕು ಎಂಬುದನ್ನು ಚಾಲಕರು ಕರಗತ ಮಾಡಿಕೊಂಡಿರುತ್ತಾರೆ.

ಭಾರತದಲ್ಲಿ ಬಿಎಂಡಬ್ಲ್ಯು 7 ಸೀರಿಸ್ ಬಳಕೆ ಮಾಡಿದ ಮೊದಲ ಪ್ರಧಾನಿ ಯಾರು ಗೊತ್ತಾ?

ವೈಯಕ್ತಿಕರಣಗೊಳಿಸಿದ ಪ್ರಧಾನಿ ಬಳಕೆಯ ಬಿಎಂಡಬ್ಲ್ಯು 7 ಸೀರಿಸ್ ಕಾರುಗಳು ಅತ್ಯುನ್ನತ್ತ ವೈಶಿಷ್ಟ್ಯಗಳನ್ನು ಪಡೆದಿರುತ್ತವೆ. ಆದ್ರೆ ಭದ್ರತಾ ದೃಷ್ಟಿಯ ಹಿನ್ನಲೆಯಲ್ಲಿ ಕೆಲವು ವಿಶಿಷ್ಟತೆಗಳನ್ನು ಗೌಪ್ಯವಾಗಿಡಲಾಗುತ್ತೆ. ಈ ಪೈಕಿ ಬೆಂಗಾವಲು ಪಡೆಯಲ್ಲಿ ನಕಲಿ ಬಿಎಂಡಬ್ಲ್ಯು ಕಾರುಗಳ ಸೇರ್ಪಡೆ, ಉಪಗ್ರಹ ದೂರವಾಣಿ ಮತ್ತು ಜಾಮ್ಮರ್‌ಗಳಲ್ಲಿ ಹೊಸ ಗುಪ್ತಚರ ಹಾಗೂ ಸಂವಹನ ವೈಶಿಷ್ಟ್ಯಗಳು ಸಹ ಇರುತ್ತವೆ.

ಭಾರತದಲ್ಲಿ ಬಿಎಂಡಬ್ಲ್ಯು 7 ಸೀರಿಸ್ ಬಳಕೆ ಮಾಡಿದ ಮೊದಲ ಪ್ರಧಾನಿ ಯಾರು ಗೊತ್ತಾ?

ಆದ್ರೆ ಅದೇನೇ ಇರಲಿ ದೇಶವನ್ನು ಬದಲಾವಣೆಯತ್ತ ತೆಗೆದುಕೊಂಡು ಹೊಗುವಲ್ಲಿ ಅವಿರತ ಶ್ರಮವಹಿಸಿದ್ದ ಅಟಲ್ ಜೀ ಅವರು ನಮ್ಮೊಂದಿಗೆ ಇಲ್ಲವಾದರೂ ಅವರ ಆದರ್ಶ ರಾಜಕಾರಣದ ಸಿದ್ದಾಂತವನ್ನು ಮೆಚ್ಚದವರಿಲ್ಲ. 'ಅಟಲ್ ಜೀ ಅಮರ್ ರಹೇ'.

More from DriveSpark

Article Published On: Friday, August 17, 2018, 18:22 [IST]
English summary
India’s first PM to use BMW 7-Series Replacing Hindustan Ambassador.
Read more on auto facts off beat bmw
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+