ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್: ಬೆಂಗಳೂರು - ಮಧುರೈ.. ಮೀನಾಕ್ಷಿ ದರ್ಶನಕ್ಕೆ ಹೋಗುವವರಿಗೆ ಸಿಹಿಸುದ್ದಿ?
ಕರ್ನಾಟಕವು ಸೇರಿದಂತೆ ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲುಗಳು ಯಶಸ್ವಿಯಾಗಿ ಕಾರ್ಯಚರಣೆ ನಡೆಸುತ್ತಿವೆ. ರೈಲ್ವೆ ಇಲಾಖೆಯು ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ, ವಿವಿಧ ಮಾರ್ಗಗಳಲ್ಲಿ ಇಂತಹ ಹಲವು ರೈಲುಗಳನ್ನು ಪರಿಚಯಿಸುತ್ತಿದೆ. ಶೀಘ್ರದಲ್ಲೇ ಬೆಂಗಳೂರು (Bengaluru) - ಮಧುರೈ (Madurai) ನಡುವೆ ಪ್ರಯಾಣಿಸುವವರಿಗೆ ಸಿಹಿಸುದ್ದಿ ಸಿಗಲಿದೆ.
ಮಧುರೈ - ಬೆಂಗಳೂರು ಮಧ್ಯೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸಲು ದಕ್ಷಿಣ ರೈಲ್ವೆ (Southern Railway) ಭರದಿಂದ ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆದರೆ, ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಈ ರೈಲು, ಹಗಲಿನಲ್ಲಿ ಮಾತ್ರ ಚಲಿಸಲಿದ್ದು, 8 ಕೋಚ್‌ಗಳನ್ನು ಹೊಂದಿರುವ ನೀರಿಕ್ಷೆಯಿದೆ. ಪ್ರಯಾಣಿಕರು ಅಧಿಕಗೊಂಡರೆ ಬೋಗಿಗಳನ್ನು ಹೆಚ್ಚಿಸಬಹುದು ಎನ್ನಲಾಗಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಂಚಾರದಿಂದ ಮದುರೈ ಮೀನಾಕ್ಷಿ ದೇಗುಲಕ್ಕೆ ತೆರಳುವ ಪ್ರಯಾಣಿಕರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ. ಈ ರೈಲು, ಮಧುರೈನಿಂದ ಸಂಚಾರ ಆರಂಭಿಸಲಿದ್ದು, ದಿಂಡಿಗಲ್, ಕರೂರ್, ಸೇಲಂ, ಧರ್ಮಪುರಿ, ಹೊಸೂರು ಮಾರ್ಗವಾಗಿ ಬೆಂಗಳೂರು ತಲುಪುತ್ತದೆ. ಇದು, ಪ್ರೀಮಿಯಂ ರೈಲು ಆಗಿರುವುದರಿಂದ ಟಿಕೆಟ್ ದರಗಳು ಕೊಂಚ ಹೆಚ್ಚಿರಬಹುದು.
ಯಶವಂತಪುರದಿಂದ ಓಡಾಟ ನಡೆಸುವ ತಿರುನೆಲ್ವೇಲಿ ಚಾಲುಕ್ಯ ಎಕ್ಸ್‌ಪ್ರೆಸ್ (tirunelveli chalukya express), ರಾತ್ರಿ 9.40ಕ್ಕೆ ಇಲ್ಲಿಂದ ಹೊರಟು ಮಧುರೈಗೆ ಬೆಳಗ್ಗೆ 8.15ಕ್ಕೆ ತಲುಪುತ್ತದೆ. ಅದೇ ರೀತಿ ರಸ್ತೆ ಮೂಲಕ ಪ್ರಯಾಣಿಸಿದರೆ, ಬೆಂಗಳೂರಿನಿಂದ ಮಧುರೈ 509.4 km ದೂರವಿದ್ದು, ಪ್ರಯಾಣದ ಅವಧಿ 9 ಗಂಟೆ 35 ನಿಮಿಷಗಳು. ಆದರೆ, ವಂದೇ ಭಾರತ್ ಎಕ್ಸ್‌ಪ್ರೆಸ್ ಕೇವಲ 6 ಗಂಟೆಯಲ್ಲಿ ಈ ದಾರಿಯನ್ನು ಕ್ರಮಿಸುತ್ತದೆ.

ಸದ್ಯ, ಚೆನ್ನೈ - ಬೆಂಗಳೂರು - ಮೈಸೂರು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ನಡೆಸುತ್ತಿದೆ. ಚೆನ್ನೈನಿಂದ ಬೆಳಗ್ಗೆ 5.50ಕ್ಕೆ ಹೊರಡಲಿದ್ದು, ಬೆಂಗಳೂರಿಗೆ 10.10ಕ್ಕೆ ಹಾಗೂ ಮೈಸೂರಿಗೆ 12.20ಕ್ಕೆ ತಲುಪುತ್ತದೆ. ಕರ್ನಾಟಕದ ಬೆಂಗಳೂರು - ಹುಬ್ಬಳ್ಳಿ - ಧಾರವಾಡ ಮಾರ್ಗದಲ್ಲೂ ಈ ರೈಲು ಓಡಾಟ ನಡೆಸುತ್ತಿದ್ದು, ಕೆಲವೇ ದಿನಗಳಲ್ಲಿ ಬೆಂಗಳೂರು - ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚರಿಸಲಿದೆ.
ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು, ಅತ್ಯಂತ ವೇಗದ ರೈಲುಗಳೆಂದು ಖ್ಯಾತಿಗಳಿಸಿದ್ದು, ಎಲ್ಲ ವರ್ಗದ ಜನರನ್ನು ಸೆಳೆದಿದೆ. ಸುರಕ್ಷತೆಯ ಸಲುವಾಗಿ 130 ಕಿಮೀ ವೇಗದಲ್ಲಿ ಸಂಚರಿಸಲಿದ್ದು, ಆರಾಮದಾಯಕ ಸೀಟುಗಳು, ವೈಫೈ ವ್ಯವಸ್ಥೆ, ಸಂಪೂರ್ಣ ಎಸಿ, ಸ್ವಯಂಚಾಲಿತ ಬಾಗಿಲು, ಅಗ್ನಿ ನಿರೋಧಕ ಸಾಧನ, ಜೈವಿಕ ಶೌಚಾಲಯವನ್ನು ಹೊಂದಿದ್ದು, ವಿಮಾನದಷ್ಟೇ ಅತ್ಯಾಧುನಿಕವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇನ್ನು, ರೈಲ್ವೆ ಇಲಾಖೆ ರಾತ್ರಿ ಪ್ರಯಾಣದ ಅನುಕೂಲಕ್ಕೆ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಅಭಿವೃದ್ಧಿಪಡಿಸುತ್ತಿದ್ದು, 2024ರ ಫೆಬ್ರವರಿ ವೇಳೆಗೆ ಕಾರ್ಯಚರಣೆ ಶುರು ಮಾಡಲಿದೆ. ಪ್ರಯಾಣಿಕರಿಗಾಗಿ 823, ಉಳಿದವು 34 ಬರ್ತ್‌ಗಳನ್ನು ಸಿಬ್ಬಂದಿಗೆ ಮೀಸಲಿಡಲಾಗುತ್ತದೆ ಎಂದು ಹೇಳಲಾಗಿದೆ. ಜೊತೆಯಲ್ಲಿ ಹತ್ತಿರದ ನಗರ ಪ್ರಯಾಣಕ್ಕೆ ವಂದೇ ಮೆಟ್ರೋ ರೈಲುಗಳನ್ನು ಸಿದ್ಧಪಡಿಸುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications