Vande Bharat Express: ರಾಜ್ಯದ ಈ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ.. ಎಲ್ಲಿಂದ, ಎಲ್ಲಿಗೆ?

ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲುಗಳು ಸೆಮಿ-ಹೈಸ್ವೀಡ್ ರೈಲುಗಳಾಗಿ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿವೆ. ಇದೀಗ, ರೈಲ್ವೆ ಇಲಾಖೆ ತನ್ನ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಹಬ್ಬದ ಋತುವಿನಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆಗೊಳಿಸಲು ಈ ಮಾರ್ಗದಲ್ಲಿ ಮತ್ತೊಂದು ವಂದೇ ಭಾರತ್ ರೈಲನ್ನು ಪರಿಚಯಿಸಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ವಿಶೇಷ ರೈಲು ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ (Dr MGR Chennai Central) ಮತ್ತು ಮೈಸೂರು ಜಂಕ್ಷನ್ (Mysuru Junction) ನಡುವೆ ಸಂಚರಿಸಲಿದ್ದು, ದಕ್ಷಿಣ ರೈಲ್ವೆ (Southern Railway) ಈ ರೈಲನ್ನು ನಿರ್ವಹಣೆ ಮಾಡಲಿದೆ. ಇದು ಚೆನ್ನೈ ಸೆಂಟ್ರಲ್-ಮೈಸೂರು ಮಾರ್ಗದಲ್ಲಿ ರೈಲು ಸಂಖ್ಯೆ 06037 ಹಾಗೂ ಮೈಸೂರು-ಚೆನ್ನೈ ಸೆಂಟ್ರಲ್ ಮಾರ್ಗದಲ್ಲಿ ರೈಲು ಸಂಖ್ಯೆ 06038 ಅನ್ನು ಹೊಂದಿರಲಿದೆ.

Vande Bharat Express: ರಾಜ್ಯದ ಈ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ.. ಎಲ್ಲಿಂದ, ಎಲ್ಲಿಗೆ?

ಚೆನ್ನೈ ಸೆಂಟ್ರಲ್-ಮೈಸೂರು-ಚೆನ್ನೈ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ವಿಶೇಷ ರೈಲು, ಇವೆರೆಡು ನಗರಗಳ ನಡುವಿನ 500 ಕಿಲೋಮೀಟರ್ ಅಂತರವನ್ನು 6.30 ಗಂಟೆಗೆ ಕ್ರಮಿಸಲಿದೆ. ಮೈಸೂರು ಎಕ್ಸ್‌ಪ್ರೆಸ್ (Mysuru Express), ಕಾವೇರಿ ಎಕ್ಸ್‌ಪ್ರೆಸ್ (Kaveri Express) ನಂತರ ಈ ಮಾರ್ಗದಲ್ಲಿ ವಂದೇ ಭಾರತ್ ಅತ್ಯಂತ ವೇಗದಲ್ಲಿ ಸಂಚಾರಲಿದೆ. ಇವೆರೆಡು ಎಕ್ಸ್‌ಪ್ರೆಸ್ ರೈಲುಗಳು ಇದೇ ದೂರವನ್ನು ಕ್ರಮಿಸಲು 09:15 - 09:25 ಗಂಟೆ ತೆಗೆದುಕೊಳ್ಳುತ್ತವೆ.

ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ವಿಶೇಷ ರೈಲು, ಕಟಪಾಡಿ (Katpadi) ಮತ್ತು ಕೆಎಸ್ಆರ್ ಬೆಂಗಳೂರು (KSR Bengaluru) ರೈಲು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಈ ಮಾರ್ಗದಲ್ಲಿ ಸಾಪ್ತಾಹಿಕ ವಿಶೇಷ ರೈಲಿನಂತೆ ಸಂಚರಿಸಲಿದ್ದು, ಬುಧವಾರ ಮಾತ್ರ ಕಾರ್ಯಚರಣೆ ನಡೆಸಲಿದೆ. ಈ ರೈಲು ಡಿಸೆಂಬರ್ 27 ರವರೆಗೆ ಸೇವೆಯಲ್ಲಿರುತ್ತದೆ ಎಂದು ಫೈನಾಶಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

Vande Bharat Express: ರಾಜ್ಯದ ಈ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ.. ಎಲ್ಲಿಂದ, ಎಲ್ಲಿಗೆ?

ನವೆಂಬರ್ 21 ರಂದು ಬೆಂಗಳೂರು-ಬೆಳಗಾವಿ ಮಧ್ಯೆ ಸೆಮಿ ಪ್ರೀಮಿಯಂ ಹೈಸ್ವೀಡ್ ರೈಲು 'ವಂದೇ ಭಾರತ್ ಎಕ್ಸ್‌ಪ್ರೆಸ್' ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರ ನಡೆಸಿದೆ. ಪರೀಕ್ಷಾರ್ಥ ಓಡಾಟದ ವೇಳೆ ಈ ರೈಲು, ಗಂಟೆಗೆ 110 ಕಿ.ಮೀ ವೇಗದಲ್ಲಿ ಸಂಚರಿಸಿದೆ. ಬೆಂಗಳೂರಿನಿಂದ ಬೆಳಗ್ಗೆ 5:45ಕ್ಕೆ ಹೊರಟ ವಂದೇ ಭಾರತ್, ಮಧ್ಯಾಹ್ನ 1:37ಕ್ಕೆ ಬೆಳಗಾವಿ ತಲುಪಿತು. 611 ಕಿಮೀ ದೂರವನ್ನು ಕ್ರಮಿಸಲು 7.50 ನಿಮಿಷ ತೆಗೆದುಕೊಂಡಿತ್ತು.

ಬೆಳಗಾವಿಯಿಂದ ಮಧ್ಯಾಹ್ನ 2 ಗಂಟೆಗೆ ಪ್ರಯಾಣ ಆರಂಭಿಸಿದ ವಂದೇ ಭಾರತ್ ರಾತ್ರಿ 10:10 ಗಂಟೆ ಸುಮಾರಿಗೆ ಬೆಂಗಳೂರು ತಲುಪಿತ್ತು. ಈ ರೈಲು ಕೆಲವೇ ದಿನಗಳಲ್ಲಿ ಕಾರ್ಯಾಚರಣೆಯನ್ನು ಶುರು ಮಾಡಲಿದ್ದು, ಆ ಬಳಿಕ, ಟಿಕೆಟ್ ದರದ ಬಗ್ಗೆ ಮಾಹಿತಿ ಸಿಗಲಿದೆ. ಪ್ರತಿ ಟಿಕೆಟ್ ವೊಂದಕ್ಕೆ ಸುಮಾರು 1500 ರೂಪಾಯಿ ದರ ಇರಬಹುದು ಎಂದು ಹೇಳಲಾಗಿದೆ.

ಸದ್ಯ, ದೇಶದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ವೇಗದ ರೈಲು ಎಂದು ಖ್ಯಾತಿಗಳಿಸಿದೆ. ಸುರಕ್ಷತೆ ದೃಷ್ಟಿಯಿಂದ ಈ ರೈಲಿನ ವೇಗವನ್ನು ಗಂಟೆಗೆ 130 ಕಿಮೀಗೆ ಸೀಮಿತಗೊಳಿಲಾಗಿದೆ. ಈ ರೈಲುಗಳು ಅತ್ಯಾಧುನಿಕ ಸೌಲಭ್ಯವನ್ನು ಒಳಗೊಂಡಿದೆ. ಆರಾಮದಾಯಕ ಸೀಟುಗಳು, ಸಂಪೂರ್ಣ ಹವಾ ನಿಯಂತ್ರಣ (ಎಸಿ) ಬೋಗಿಗಳು, ವೈಫೈ ವ್ಯವಸ್ಥೆ, ಸ್ವಯಂಚಾಲಿತ ಬಾಗಿಲು, ಅಗ್ನಿ ನಿರೋಧಕ ಸಾಧನ, ಜೈವಿಕ ಶೌಚಾಲಯವನ್ನು ಹೊಂದಿದೆ.

ಇನ್ನು, ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ರಾತ್ರಿ ವೇಳೆ ಸಂಚರಿಸಲು ಅನುಕೂಲ ಮಾಡಿಕೊಳ್ಳುವ ನಿಟ್ಟಿನಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಮುಂದಿನ ವರ್ಷದಿಂದ ಕಾರ್ಯಾಚರಣೆಯನ್ನು ನಡೆಸಲಿವೆ. ಅದೇ ರೀತಿಯಲ್ಲಿ ಕಡಿಮೆ ಖರ್ಚಿನ ವಂದೇ ಸಾಧಾರಣ್ ಹಾಗೂ ಹತ್ತಿರದ ನಗರಗಳ ಪ್ರಯಾಣಕ್ಕಾಗಿ ವಂದೇ ಮೆಟ್ರೋ ರೈಲುಗಳನ್ನು ತಯಾರಿಸುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, November 30, 2023, 10:37 [IST]
English summary
Vande bharat express special train from chennai to mysore good news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+