ಪ್ರಧಾನಿ ಮೋದಿ ಕನಸಿನ ವಂದೇ ಭಾರತ್ ಎಕ್ಸ್‌ಪ್ರೆಸ್.. ಯುವ ಜನತೆ ಮೆಚ್ಚಿದ್ರು!, ಇದಕ್ಕಿಂತ ಸಾಕ್ಷಿ ಬೇಕಾ?

ಕರ್ನಾಟಕವು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲುಗಳು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ. ಸದ್ಯ, ಈ ರೈಲುಗಳಲ್ಲಿ ಯುವ ಜನರು ಇಷ್ಟಪಟ್ಟು ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ದಕ್ಷಿಣ ಮಧ್ಯೆ ರೈಲ್ವೆ (South Central Railway - SCR) ವಿಭಾಗದಡಿ ಕಾರ್ಯಾಚರಣೆ ನಡೆಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಶೇಕಡ 29% ಯುವ ಜನರು ಪ್ರಯಾಣಿಸಿದ್ದು, ಅವರೆಲ್ಲರೂ 25 ರಿಂದ 34 ವರ್ಷ ವಯೋಮಾನದವರಾಗಿದ್ದಾರೆ. ಈ ಬಗ್ಗೆ ಎಸ್‌ಸಿಆರ್‌ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಿ.ಹೆಚ್.ರಾಕೇಶ್ ಪ್ರತಿಕ್ರಿಯಿಸಿದ್ದು, 'ಈ ರೈಲುಗಳಲ್ಲಿ ಶೇಕಡ 56% ಮಂದಿ ಯುವಕರು ಹಾಗೂ ಕಾರ್ಮಿಕ ವರ್ಗದವರೂ ಪ್ರಯಾಣಿಸಿದ್ದಾರೆ' ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಕನಸಿನ ವಂದೇ ಭಾರತ್ ಎಕ್ಸ್‌ಪ್ರೆಸ್.. ಯುವ ಜನತೆ ಮೆಚ್ಚಿದ್ರು!, ಯಶಸ್ಸಿಗೆ ಇದಕ್ಕಿಂತ ಸಾಕ್ಷಿ ಬೇಕಾ?

'ವಂದೇ ಭಾರತ್ ಎಕ್ಸ್‌ಪ್ರೆಸ್ ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಲಾಗಿದ್ದು, ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ಒದಗಿಸಲಾಗುತ್ತದೆ. ಆ ಕಾರಣಕ್ಕೆ ಈ ರೈಲುಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ' ಎಂದು ಸಿ.ಹೆಚ್.ರಾಕೇಶ್ ಅವರು ಹೇಳಿದ್ದಾರೆ. ಪ್ರಸ್ತುತ, ದಕ್ಷಿಣ ಮಧ್ಯೆ ರೈಲ್ವೆ (South Central Railway) ಐದು ವಂದೇ ಭಾರತ್ ರೈಲುಗಳಲ್ಲಿ ನಿರ್ವಹಣೆ ಮಾಡುತ್ತಿದೆ.

ಸಿಕಂದರಾಬಾದ್ - ವಿಶಾಖಪಟ್ಟಣ (Secunderabad - Visakhapatnam), ಸಿಕಂದರಾಬಾದ್ - ತಿರುಪತಿ (Secunderabad - Tirupati), ತಿರುಪತಿ - ಸಿಕಂದರಾಬಾದ್ (Tirupati - Secunderabad), ಕಾಚಿಗುಡ (ಹೈದರಾಬಾದ್) - ಯಶವಂತಪುರ (ಬೆಂಗಳೂರು) (Kacheguda - Yesvantpur), ವಿಜಯವಾಡ - ಚೆನ್ನೈ ಸೆಂಟ್ರಲ್ (Vijayawada - Chennai Central) ಮಾರ್ಗದಲ್ಲಿ ಈ ರೈಲುಗಳು ಕಾರ್ಯಚರಣೆ ನಡೆಸುತ್ತಿವೆ.

ಪ್ರಧಾನಿ ಮೋದಿ ಕನಸಿನ ವಂದೇ ಭಾರತ್ ಎಕ್ಸ್‌ಪ್ರೆಸ್.. ಯುವ ಜನತೆ ಮೆಚ್ಚಿದ್ರು!, ಯಶಸ್ಸಿಗೆ ಇದಕ್ಕಿಂತ ಸಾಕ್ಷಿ ಬೇಕಾ?

ದಕ್ಷಿಣ ಮಧ್ಯೆ ರೈಲ್ವೆ ವಿಭಾಗದಡಿ ಕಾರ್ಯನಿರ್ವಹಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು, ಶೇಕಡ 100% ಪ್ರಯಾಣಿಕರ ಸಾಮರ್ಥ್ಯದೊಂದಿಗೆ ಓಡಾಟ ನಡೆಸುತ್ತಿದ್ದು, 7.16 ಲಕ್ಷ ಜನರು ಪ್ರಯಾಣಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 35 ರಿಂದ 49 ವಯೋಮಾನದ ಶೇಕಡ 27% ಮಂದಿ ಹಾಗೂ ಶೇಕಡ 12% ಹಿರಿಯ ನಾಗರಿಕರು ಸಂಚಾರ ನಡೆಸಿದ್ದಾರೆ ಎಂದು ಕೂಡ ತಿಳಿದುಬಂದಿದೆ.

ಸದ್ಯ, ಪ್ರೀಮಿಯಂ ಹೈಸ್ವೀಡ್ ರೈಲುಗಳೆಂದು ಖ್ಯಾತಿಗಳಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ಸಾಕಷ್ಟು ಅತ್ಯಾಧುನಿಕ ಸೌಲಭ್ಯವನ್ನು ಹೊಂದಿವೆ. ವೇಗವಾಗಿ ಚಲಿಸುವ ಈ ರೈಲುಗಳ ಬೋಗಿಗಳು ಸಂಪೂರ್ಣ ಎಸಿ ವ್ಯವಸ್ಥೆಯನ್ನು ಪಡೆದಿದ್ದು, ಆರಾಮದಾಯಕ ಆಸನ, ವೈಫೈ ಸೌಲಭ್ಯ, ಸ್ವಯಂ ಚಾಲಿತ ಬಾಗಿಲು, ಅಗ್ನಿ ನಿರೋಧಕ ಸಾಧನಗಳನ್ನು ಒಳಗೊಂಡಿವೆ.

ಪ್ರಯಾಣಿಕರಿಗೆ ರಾತ್ರಿ ವೇಳೆ ಪ್ರಯಾಣಕ್ಕೆ ಅನುಕೂಲವಾಗುವಂತೆ ರೈಲ್ವೆ ಇಲಾಖೆಯು ವಂದೇ ಭಾರತ್ ಸ್ಲೀಪರ್ (Vande Bharat sleeper) ರೈಲುಗಳನ್ನು ಅಭಿವೃದ್ಧಿಪಡಿಸುತ್ತಿದೆ. 2024ರ ಫೆಬ್ರವರಿ ವೇಳೆಗೆ ಹೊಸ ರೈಲುಗಳು ಓಡಾಟ ನಡೆಸುವ ನಿರೀಕ್ಷೆಯಿದೆ. ಇವು, 857 ಬರ್ತ್‌ಗಳನ್ನು ಒಳಗೊಂಡಿರುತ್ತವೆ. ಅದರಲ್ಲಿ ಪ್ರಯಾಣಿಕರಿಗಾಗಿ 823, ಉಳಿದ 34 ಬರ್ತ್‌ಗಳನ್ನು ಸಿಬ್ಬಂದಿಗೆ ಮೀಸಲಿಡಲಾಗುತ್ತದೆ ಎಂದು ವರದಿಯಾಗಿದೆ.

ಇನ್ನು, ಜಮ್ಮು - ಕಾಶ್ಮೀರ ಸೇರಿದಂತೆ ದೇಶದೆಲ್ಲೆಡೆ ಹಲವು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಮುಂದಿನ ವರ್ಷದ ಮಾರ್ಚ್ ವೇಳೆಗೆ 75 ಹೊಸ ರೈಲುಗಳನ್ನು ಲೋಕಾರ್ಪಣೆ ಮಾಡುವ ನಿರೀಕ್ಷೆಯಿದ್ದು, ಇದರಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳು ಸೇರಿರಲಿವೆ ಎಂದು ಹೇಳಲಾಗಿದೆ. ಜೊತೆಗೆ ಹತ್ತಿರದ ನಗರಗಳ ಪ್ರಯಾಣಕ್ಕಾಗಿ ವಂದೇ ಮೆಟ್ರೋವನ್ನು ಸಿದ್ದಪಡಿಸಲಾಗುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, October 26, 2023, 15:14 [IST]
English summary
Vande bharat express travelling like youths details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+