Vande Metro: ವಂದೇ ಭಾರತ್ ಮೆಟ್ರೋ ಸಿದ್ಧ.. ಎಲ್ಲ ಕಾಲದಲ್ಲೂ ಆರಾಮಾಗಿ ಓಡಾಡಬಹುದು, ವಿಶೇಷತೆಗಳೇನು?

ಭಾರತೀಯ ರೈಲ್ವೆ (Indian Railway) ಇಲಾಖೆಯು ಮೂಲಸೌಕರ್ಯ ಅಭಿವೃದ್ಧಿಯ ಹಿತದೃಷ್ಟಿಯಿಂದ ಸಮೀಪದ ನಗರಗಳಿಗೆ ಸಂಪರ್ಕವನ್ನು ಕಲ್ಪಿಸಲು ಶೀಘ್ರದಲ್ಲಿಯೇ ವಂದೇ ಭಾರತ್ ಮೆಟ್ರೋ (Vande Bharat Metro)ವನ್ನು ಪರಿಚಯಿಸಲಿದೆ. ಈ ಮೂಲಕ ದೇಶದಲ್ಲಿ ಆಧುನಿಕ ಸಾರಿಗೆಯ ಹೊಸ ಯುಗವನ್ನು ಪ್ರಾರಂಭಿಸಲು ಸಿದ್ಧವಾಗುತ್ತಿದೆ.

ಪಂಜಾಬ್‌ನ ಕಪುರ್ತಲಾದಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ಮಂಗಳವಾರ ಮೊದಲ ವಂದೇ ಭಾರತ್ ಮೆಟ್ರೋ ರೈಲಿನ ಕೆಲವು ಕೋಚ್‌ಗಳನ್ನು ಹೊರತರಲಾಗಿದೆ. ಆ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಜುಲೈನಲ್ಲಿ ಈ ರೈಲು ಪ್ರಾಯೋಗಿಕ ಸಂಚಾರ (Trail Run)ವನ್ನು ನಡೆಸುವ ನಿರೀಕ್ಷೆಯಿದ್ದು, ಪ್ರಸ್ತುತ 50 ರೈಲುಗಳನ್ನು ತಯಾರಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ 400 ವಂದೇ ಮೆಟ್ರೋ ರೈಲುಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ವರದಿಯಾಗಿದೆ.

Vande Bharat Metro First Train Set Rolls Out First-Look Video And Trail Run Details

ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಲಾಗಿರುವ ಈ ರೈಲುಗಳು 100 ರಿಂದ 250 ಕಿಲೋಮಿಟರ್ ವ್ಯಾಪ್ತಿಯೊಳಗೆ ಓಡಾಟವನ್ನು ನಡೆಸಲಿವೆ. ವಂದೇ ಮೆಟ್ರೋ 12 ಕೋಚ್‌ಗಳನ್ನು ಹೊಂದಿಲಿದ್ದು, ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ 16 ಕೋಚ್‌ಗಳಿಗೆ ಹೆಚ್ಚಿಸಬಹುದು ಎನ್ನಲಾಗಿದೆ. ದೇಶಾದ್ಯಂತ 124 ಪ್ರಮುಖ ನಗರಗಳನ್ನು ಸಂಪರ್ಕಿಸಲಿದ್ದು, ಲಕ್ನೋ-ಕಾನ್ಪುರ, ಆಗ್ರಾ-ಮಥುರಾ ಹಾಗೂ ತಿರುಪತಿ-ಚೆನ್ನೈ ಮಾರ್ಗದಲ್ಲಿ ಮೊದಲಿಗೆ ಸಂಚಾರವನ್ನು ನಡೆಸಲಿದೆ ಎಂದು ಹೇಳಲಾಗಿದೆ.

ವಂದೇ ಭಾರತ್ ಮೆಟ್ರೋ ರೈಲು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಒಳಭಾಗ (Inside) ಬಹಳ ವಿಶಾಲವಾಗಿದೆ. ಜೊತೆಗೆ ಸ್ವಯಂ ಚಾಲಿತ ಬಾಗಿಲನ್ನು ಪಡೆದಿದೆ. ಪ್ರತಿನಿತ್ಯ ಒಂದು ನಗರದಿಂದ ಮತ್ತೊಂದು ನಗರಕ್ಕೆ ಕೆಲಸಕ್ಕೆ ತೆರಳುವ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ವೇಗವಾಗಿ ಸಂಚಾರಿಸುವ ಈ ರೈಲುಗಳಲ್ಲಿ ಆರಾಮದಾಯಕವಾಗಿ ಪ್ರಯಾಣಿಸಬಹುದು.

Vande Bharat Metro First Train Set Rolls Out First-Look Video And Trail Run Details

ನೂತನ ವಂದೇ ಮೆಟ್ರೋ ರೈಲಿನ ಕೋಚ್‌ವೊಂದರಲ್ಲಿ 280 ಜನರು (ಕುಳಿತು ಮತ್ತು ನಿಂತುಕೊಂಡು) ಪ್ರಯಾಣಿಸಬಹುದು. ಇದರಲ್ಲಿ ವೀಲ್ ಚೇರ್‌ನ್ನು ಸುಲಭವಾಗಿ ತೆಗೆದುಕೊಂಡು ಹೋಗಬಹುದಾದ ಶೌಚಾಲಯವಿರಲಿದ್ದು, ಅಪಾಯ ಎದುರಾದಾಗ ಲೋಕೋ ಪೈಲೆಟ್ ಜೊತೆಯಲ್ಲಿ ಪ್ರಯಾಣಿಕರು ಮಾತನಾಡಲು ಟಾಕ್ ಬ್ಯಾಕ್ ಸಿಸ್ಟಮ್‌ನ್ನು ಹೊಂದಿರಲಿದೆ. ಸುರಕ್ಷತೆಗಾಗಿ ಫೇರ್ - ಸ್ಮೋಕ್ ಡಿಟೆಕ್ಷನ್ & ಕವಚ್ ಸಿಸ್ಟಮ್ ಇರಲಿದೆ ಎಂದು ಈ ಹಿಂದೆ ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದರು.

ರೈಲ್ವೆ ಇಲಾಖೆಯು ವಂದೇ ಭಾರತ್ ಮೆಟ್ರೋ ಮಾತ್ರವಲ್ಲದೆ, ವಂದೇ ಭಾರತ್ ಸ್ಲೀಪರ್ (Vande Bharat sleeper) ರೈಲನ್ನು ಕೂಡ ಅಭಿವೃದ್ಧಿಪಡಿಸುತ್ತದೆ. ಮುಂಬರುವ ಕೆಲವೇ ದಿನಗಳಲ್ಲಿ ಈ ರೈಲು ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯಿದೆ. ರಾಜಧಾನಿ ಎಕ್ಸ್‌ಪ್ರೆಸ್‌ಗಳಿಗೆ ಪರ್ಯಾಯವಾಗಲಿರುವ ವಂದೇ ಭಾರತ್ ಸ್ಲೀಪರ್, ಒಟ್ಟು 16 ಕೋಚ್‌ಗಳನ್ನು ಒಳಗೊಂಡಿರಲಿದೆ. ಹಾಗೆಯೇ 823 ಬರ್ತ್‌ಗಳನ್ನು ಪಡೆದಿರುವ ಸಾಧ್ಯತೆಯಿದೆ.

ವಂದೇ ಭಾರತ್ (Vande Bharat) ಸರಣಿ ರೈಲುಗಳನ್ನು ಪರಿಚಯಿಸುವುದರೊಂದಿಗೆ ಸಾರ್ವಜನಿಕರಿಗೆ ಸುಖಕರ ಪ್ರಯಾಣವನ್ನು ಒದಗಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಈಗಾಗಲೇ ವಂದೇ ಭಾರತ್ ಎಕ್ಸ್‌ಪ್ರೆಸ್‌ (ಚೇರ್ ಕಾರ್) ಕರ್ನಾಟಕವು ಸೇರಿದಂತೆ ದೇಶಾದ್ಯಂತ ಯಶಸ್ವಿಯಾಗಿ ಓಡಾಟವನ್ನು ನಡೆಸುತ್ತಿದ್ದು, ಕೆಲವೇ ತಿಂಗಳಲ್ಲಿ ಹಳಿಗೆ ಬರಲಿರುವ ವಂದೇ ಭಾರತ್ ಮೆಟ್ರೋ ಮೇಲೆಯೂ ಪ್ರಯಾಣಿಕರಿಗೆ ನಿರೀಕ್ಷೆಗಳು ದುಪ್ಪಟ್ಟಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, May 2, 2024, 12:55 [IST]
English summary
Vande bharat metro first train set rolls out first look video trail run details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+