ಶೀಘ್ರ ವಂದೇ ಭಾರತ್ ಮೆಟ್ರೋ ಟ್ರೈಯಲ್ ರನ್: ಈ ಮಾರ್ಗಗಳಲ್ಲಿ ಓಡಾಟ.. ಕೆಲಸಕ್ಕೆ ಬೇಗ ಹೋಗಬಹುದು!

ಕರ್ನಾಟಕ ಸೇರಿದಂತೆ ದೇಶಾದ್ಯಂತ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸೆಮಿ - ಹೈಸ್ಪೀಡ್ ರೈಲಾಗಿ ಯಶಸ್ವಿಯಾಗಿ ಓಡಾಟವನ್ನು ನಡೆಸುತ್ತಿದೆ. ಶೀಘ್ರದಲ್ಲಿಯೇ ಸಮೀಪದ ನಗರಗಳನ್ನು ಸಂಪರ್ಕಿಸಲು ವಂದೇ ಭಾರತ್ ಮೆಟ್ರೋ (Vande Bharat Metro) ಕೂಡ ಬರಲಿದೆ. ಆ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.

ಎರಡು ಪ್ರಮುಖ ಪಟ್ಟಣಗಳ ಮಧ್ಯೆ ಕಾರ್ಯಾಚರಣೆಯನ್ನು ನಡೆಸಲಿರುವ 'ವಂದೇ ಭಾರತ್ ಮೆಟ್ರೋ' ಜುಲೈನಲ್ಲಿ ಪ್ರಾಯೋಗಿಕ ಸಂಚಾರ (Trial Runs)ವನ್ನು ನಡೆಸಲಿದೆ ಎಂದು ಕೇಂದ್ರ ಸರ್ಕಾರ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ರೈಲು ನಿಲುಗಡೆಯಾದ ಬಳಿಕ, ಮತ್ತೆ ಬೇಗನೆ ವೇಗವನ್ನು ಪಡೆಯಲಿದೆ. ಸ್ವಯಂ ಚಾಲಿತ ಬಾಗಿಲು ಹಾಗೂ 12 ಕೋಚ್‌ಗಳನ್ನು ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

Vande Bharat Metro trial run in july 2024 details

ಪ್ರಯಾಣಿಕರ ದಟ್ಟಣೆಯನ್ನು ಆಧರಿಸಿ ನೂತನ ವಂದೇ ಭಾರತ್ ಮೆಟ್ರೋದ ಕೋಚ್‌ಗಳನ್ನು 12 ರಿಂದ 16ಕ್ಕೂ ಹೆಚ್ಚಳ ಮಾಡಬಹುದು. ಈ ರೈಲಿನಲ್ಲಿ ಕಾಯ್ದಿರಿಸದ ಅಥವಾ ಸಾಮಾನ್ಯ ವರ್ಗದ ಪ್ರಯಾಣಿಕರ ದೈನಂದಿನ ಸಂಚಾರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ಪ್ರಮುಖವಾಗಿ ವಂದೇ ಭಾರತ್ ಮೆಟ್ರೋ, ದೇಶದ 124 ನಗರಗಳನ್ನು ಸಂಪರ್ಕಿಸಲಿದ್ದು, 100 ರಿಂದ 250 ಕಿಲೋಮೀಟರ್ ವ್ಯಾಪ್ತಿಯೊಳಗೆ ಓಡಾಟವನ್ನು ಮಾಡಲಿದೆ ಎಂದು ತಿಳಿದುಬಂದಿದೆ.

ವಂದೇ ಭಾರತ್ ಮೆಟ್ರೋ ಸಂಚಾರಕ್ಕೆ ಲಕ್ನೋ - ಕಾನ್ಪುರ, ಆಗ್ರಾ - ಮಥುರಾ ಮತ್ತು ತಿರುಪತಿ - ಚೆನ್ನೈ ಮಾರ್ಗಗಳನ್ನು ಗುರುತಿಸಲಾಗಿದೆ. ಈ ಹಿಂದೆ, ರೈಲ್ವೆ ಇಲಾಖೆಯನ್ನು ಆಧುನೀಕರಣಗೊಳಿಸುವ ಭಾಗವಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು, ವಂದೇ ಭಾರತ್ ಮೆಟ್ರೋ ಯೋಜನೆಯನ್ನು ಘೋಷಿಸಿದ್ದರು.

Vande Bharat Metro trial run in july 2024 details

ಭಾರತೀಯ ರೈಲ್ವೆಯು ಲೋಕಸಭಾ ಚುನಾವಣೆ ನಂತರ, ಮೂರು ತಿಂಗಳಲ್ಲಿ ಅನುಷ್ಠಾನಗೊಳಿಸಬೇಕಾದ ಯೋಜನೆಗಳ ಬಗ್ಗೆಯೂ ಕಾರ್ಯತಂತ್ರವನ್ನು ರೂಪಿಸಿದೆ. ಅದರ ಭಾಗವಾಗಿ ವಂದೇ ಭಾರತ್ ಮೆಟ್ರೋ ಮಾತ್ರವಲ್ಲದೆ, 550 ಕಿಲೋಮೀಟರ್‌ಗಿಂತ ದೂರದ ಮಾರ್ಗಗಳಲ್ಲಿ ವಂದೇ ಭಾರತ್ ಸ್ಲೀಪರ್ ಮತ್ತು 100 - 550 ಕಿಲೋಮೀಟರ್‌ನೊಳಗೆ ಮತ್ತಷ್ಟು ಚೇರ್ ಕಾರ್ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳನ್ನು ಬಿಡಲು ಸಿದ್ಧತೆಯನ್ನು ನಡೆಸುತ್ತಿದೆ ಎಂದು ವರದಿಯಾಗಿದೆ.

ಹೊಸ ವಂದೇ ಭಾರತ್ ಸ್ಲೀಪರ್ ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳಿಗೆ ಪರ್ಯಾಯವಾಗಲಿವೆ ಎಂದು ಹೇಳಲಾಗಿದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಸಹಯೋಗದಲ್ಲಿ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಉತ್ಪಾದನಾ ಘಟಕದಲ್ಲಿ ಈ ರೈಲನ್ನು ಸಿದ್ಧಪಡಿಸಲಾಗುತ್ತಿದ್ದು, ಸಾರ್ವಜನಿಕರು ಸುಖಕರವಾಗಿ ನಿದ್ರಿಸುತ್ತಾ ಪ್ರಯಾಣಿಸಲು ಬಹಳಷ್ಟು ಅತ್ಯಾಧುನಿಕ ಸೌಕರ್ಯವನ್ನು ಹೊಂದಿರಲಿದೆ ಎನ್ನಲಾಗಿದೆ.

ಈ ವಂದೇ ಭಾರತ್ ಸ್ಲೀಪರ್ ರೈಲು 16 ಕೋಚ್‌ಗಳನ್ನು ಒಳಗೊಂಡಿರಲಿದ್ದು, ಮೊದಲ ದರ್ಜೆ ಎಸಿಯ 1 ಕೋಚ್, ದ್ವಿತೀಯ ದರ್ಜೆಯ 4 ಕೋಚ್‌ಗಳನ್ನು ಪಡೆದಿರಲಿದೆ. ಉಳಿದಂತೆ ಮೂರನೇ ದರ್ಜೆಯ ಕೋಚ್‌ಗಳಿರಲಿವೆ. ಗಂಟೆಗೆ 160 ಕಿ.ಮೀ ಗರಿಷ್ಠ ವೇಗದಲ್ಲಿ ಸಂಚಾರಿಸುವ ವಂದೇ ಸ್ಲೀಪರ್, ಸ್ವಯಂ ಚಾಲಿತ ಬಾಗಿಲುಗಳು ಹಾಗೂ ಆರಾಮದಾಯಕ ಆಸನಗಳು ಸೇರಿದಂತೆ ಪ್ರಯಾಣಿಕ ಸ್ನೇಹಿಯಾಗಿರುವ ವಿವಿಧ ಸೌಲಭ್ಯಗಳನ್ನು ಪಡೆದಿರಲಿದೆ ಎಂದು ಹೇಳಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, April 30, 2024, 15:11 [IST]
English summary
Vande bharat metro trial run in july 2024 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+