Vande Bharat Sleeper: ವಂದೇ ಭಾರತ್ ಸ್ಲೀಪರ್ ರೈಲಿನ ವಿಶೇಷತೆಗಳೇನು? ಇದರ ಮುಂದೆ ವಿಮಾನವು ಡಲ್...!
ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಪ್ರೀಮಿಯಂ ಹೈ - ಸ್ವೀಡ್ ರೈಲುಗಳಾಗಿ ಯಶಸ್ವಿಯಾಗಿ ಸಂಚಾರ ನಡೆಯುತ್ತಿವೆ. ಆದರೆ, ಇವುಗಳಲ್ಲಿ ರಾತ್ರಿ ಪ್ರಯಾಣ ಅಸಾಧ್ಯವಾಗಿದ್ದು, ರೈಲ್ವೆ ಇಲಾಖೆಯು ವಂದೇ ಭಾರತ್ ಸ್ಲೀಪರ್ (Vande Bharat Sleeper) ರೈಲುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಫೆಬ್ರವರಿ 2024 ರೊಳಗೆ ಲೋಕಾರ್ಪಣೆಯಾಗುವ ನಿರೀಕ್ಷೆಯಿದೆ.
ನೂತನ ವಂದೇ ಭಾರತ್ ಸ್ಲೀಪರ್ ರೈಲುಗಳು ಪ್ರಯಾಣಿಕರಿಗೆ ಅತ್ಯುತ್ತಮ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸಲಿದ್ದು, ರಾಜಧಾನಿ ಎಕ್ಸ್‌ಪ್ರೆಸ್ (Rajdhani Express) ರೈಲುಗಳಿಗೆ ಪರ್ಯಾಯವಾಗಲಿವೆ. ಮುಂಬರುವ ಕೆಲವೇ ವರ್ಷಗಳಲ್ಲಿ ವಂದೇ ಭಾರತ್ ಸ್ಲೀಪರ್, ರಾಜಧಾನಿ ಎಕ್ಸ್‌ಪ್ರೆಸ್ ಜಾಗವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳಲಿದ್ದು, ಈ ಸ್ಲೀಪರ್ ರೈಲಿನ ಕೆಲವೊಂದು ವಿಶೇಷತೆಗಳ ಬಗ್ಗೆ ತಿಳಿಯೋಣ.

ಪ್ರೀಮಿಯಂ ವಂದೇ ಭಾರತ್ ಸ್ಲೀಪರ್ ರೈಲಿನ ತಯಾರಿಕೆ ಕೆಲಸಗಳು ಅಕ್ಟೋಬರ್ (October) ತಿಂಗಳಿನಿಂದಲೇ ಆರಂಭವಾಗಿದ್ದು, ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (Integral Coach Factory - ICF) ಸಹಯೋಗದಲ್ಲಿ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (Bharat Earth Movers Limited - BEML) ಉತ್ಪಾದನಾ ಘಟಕದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ಹೊಸ ವಂದೇ ಭಾರತ್ ಸ್ಲೀಪರ್ (Vande Bharat Sleeper) ರೈಲು, ಒಟ್ಟು 16 ಕೋಚ್‌ಗಳನ್ನು ಹೊಂದಿರಲಿದೆ. ಅದರಲ್ಲಿ 11 ಎಸಿ 3-ಟೈರ್ ಕೋಚ್, 4 ಎಸಿ 2-ಟೈರ್ ಕೋಚ್ ಹಾಗೂ 1 ಎಸಿ 1st ಕ್ಲಾಸ್ ಕೋಚ್ ಇರುತ್ತದೆ. ಎಲ್ಲವು ಸೇರಿ, 823 ಬರ್ತ್‌ಗಳನ್ನು ಒಳಗೊಂಡಿರುವ ನೀರಿಕ್ಷೆಯಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲಿನಂತೆ ನೂತನ ವಂದೇ ಭಾರತ್ ಸ್ಲೀಪರ್ ಕೂಡ ಗಂಟೆಗೆ 160 ಕಿ.ಮೀ ವೇಗದಲ್ಲಿ ಸಂಚಾರಿಸುವ ಸಾಮರ್ಥ್ಯ ಹೊಂದಿರುವ ಸಾಧ್ಯತೆಯಿದೆ. ಇದರಿಂದ ಪ್ರಯಾಣದ ಅವಧಿಯು ಸಾಕಷ್ಟು ಉಳಿತಾಯವಾಗಲಿದ್ದು, ಸಾರ್ವಜನಿಕರಿಗೆ ದೊಡ್ಡಮಟ್ಟದಲ್ಲಿ ಅನುಕೂಲವಾಗಲಿದೆ. ಈ ಸ್ಲೀಪರ್ ರೈಲು, ಈಗಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೀತಿಯಲ್ಲಿ ಹೊರಭಾಗದ ವಿನ್ಯಾಸವನ್ನು ಪಡೆದಿರಲಿದ್ದು, ನೋಡುಗಡರನ್ನು ಸೆಳೆಯುತ್ತದೆ.
ಈ ವಂದೇ ಭಾರತ್ ಸ್ಲೀಪರ್ ರೈಲುಗಳು ಸಾಕಷ್ಟು ಅತ್ಯಾಧುನಿಕವಾಗಿರಲಿದ್ದು, ಪ್ಯಾಂಟ್ರಿ ವ್ಯವಸ್ಥೆ ಇರಲಿದ್ದು, ಸೇನಾರ್ ಡ್ರೈವೆನ್ ಇಂಟರ್ ಕಮ್ಯುನಿಕೇಷನ್ ಡೋರ್, ವಾಸನೆ ಮುಕ್ತ ಶೌಚಾಲಯ (Odor-Free Toilet Facilities), ಹೊರಭಾಗದಲ್ಲಿ ಸ್ವಯಂ ಚಾಲಿತ ಬಾಗಿಲು (Automatic Exterior Passenger Doors), ಮೊದಲ ದರ್ಜೆಯ ಎಸಿ ಕೋಚ್ ನಲ್ಲಿ ಬಿಸಿನೀರಿನ (Hot Water) ಶವರ್ ಹೊಂದಿರಲಿದೆ. ಜೊತೆಗೆ ಶಬ್ದ ನಿರೋಧಕವು ಆಗಿದೆ.

ನೂತನ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಅದಕ್ಕಾಗಿ ಕವಾಚ್ (KAVACH) ವ್ಯವಸ್ಥೆಯನ್ನು ಪಡೆದಿರಲಿದೆ. ಈಗ 10 ರೈಲುಗಳು ತಯಾರಾಗುತ್ತಿದ್ದು, ಎಲ್ಲವು ಅಂದುಕೊಂಡಂತೆ ನಡೆದರೆ, ಫೆಬ್ರವರಿ 2024 ರೊಳಗೆ ಈ ರೈಲುಗಳು ಕಾರ್ಯಾಚರಣೆ ಆರಂಭಿಸಲಿದ್ದು, ವಿಮಾನಗಳಿಗೆ ಸೆಡ್ಡು ಹೊಡೆಯುವ ವೈಶಿಷ್ಟ್ಯಗಳನ್ನು ಹೊಂದಿವ ಸಾಧ್ಯತೆಯಿರುವುದರಿಂದ ಹೆಚ್ಚಿನ ಜನರಿಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications