ಶೀಘ್ರ ಸಂಚರಿಸಲಿವೆ ಪ್ರೀಮಿಯಂ ವಂದೇ ಭಾರತ್ ಸ್ಲೀಪರ್, ಕಡಿಮೆ ಖರ್ಚಿನ ವಂದೇ ಸಾಧಾರಣ್: ವಿಶೇಷತೆಗಳೇನು?
ಕರ್ನಾಟಕವು ಸೇರಿದಂತೆ ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ವೇಗದ ರೈಲೆಂದು ಖ್ಯಾತಿಗಳಿಸಿದೆ. ಆದರೆ, ಇವುಗಳಲ್ಲಿ ಕುಳಿತುಕೊಂಡು ಹೋಗಬೇಕಾಗಿರುವುದರಿಂದ ರೈಲ್ವೆ ಇಲಾಖೆಯು ವಂದೇ ಭಾರತ್ ಸ್ಲೀಪರ್ ಹಾಗೂ ವಂದೇ ಸಾಧಾರಣ್ ರೈಲುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಮೊದಲಿಗೆ ವಂದೇ ಭಾರತ್ ಸ್ಲೀಪರ್ (Vande Bharat Sleeper) ಬಗ್ಗೆ ಮಾತನಾಡೋಣ. ಈ ರೈಲು, ಫೆಬ್ರವರಿ 2024ರೊಳಗೆ ಸಂಚಾರ ಆರಂಭಿಸುವ ನೀರಿಕ್ಷೆಯಿದೆ. ಈಗಾಗಲೇ ವಂದೇ ಭಾರತ್ ಸ್ಲೀಪರ್ ರೈಲಿನ ತಯಾರಿಕೆ ಕೆಲಸಗಳು ಶುರುವಾಗಿದ್ದು, ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಸಹಯೋಗದಲ್ಲಿ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುತ್ತಿದೆ.

ಈ ರೈಲು, ಒಟ್ಟು 16 ಕೋಚ್‌ಗಳನ್ನು ಹೊಂದಿರಲಿದೆ. ಅದರಲ್ಲಿ 11 ಎಸಿ 3-ಟೈರ್ ಕೋಚ್, 4 ಎಸಿ 2-ಟೈರ್ ಕೋಚ್ ಹಾಗೂ 1 ಎಸಿ ಮೊದಲ ದರ್ಜೆ ಕೋಚ್ ಇರಲಿದೆ. ಎಲ್ಲವೂ ಸೇರಿ, 823 ಬರ್ತ್‌ಗಳನ್ನು ಒಳಗೊಂಡಿರಲಿದೆ. ನೂತನ ವಂದೇ ಭಾರತ್ ಸ್ಲೀಪರ್ ರೈಲು, ಹೊರ, ಒಳಭಾಗದಲ್ಲಿ ಅತ್ಯುತ್ತಮ ವಿನ್ಯಾಸವನ್ನು ಹೊಂದಿರಲಿದ್ದು, ಗಂಟೆಗೆ 160 ವೇಗದಲ್ಲಿ ಸಂಚಾರಿಸುವ ಸಾಮರ್ಥ್ಯ ಪಡೆದಿರುವ ಸಾಧ್ಯತೆಯಿದೆ.
ವಂದೇ ಭಾರತ್ ಸ್ಲೀಪರ್ ಯಾವುದೇ ವಿಮಾನಕ್ಕೆ ಕಮ್ಮಿಯಿಲ್ಲದಂತೆ ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿರಲಿದ್ದು, ಸೇನಾರ್ ಡ್ರೈವೆನ್ ಇಂಟರ್ ಕಮ್ಯುನಿಕೇಷನ್ ಡೋರ್, ವಾಸನೆ ಮುಕ್ತ ಶೌಚಾಲಯ, ಹೊರಭಾಗದಲ್ಲಿ ಸ್ವಯಂ ಚಾಲಿತ ಬಾಗಿಲು, ಮೊದಲ ದರ್ಜೆಯ ಎಸಿ ಕೋಚ್ ನಲ್ಲಿ ಬಿಸಿನೀರಿನ ಶವರ್ ಹೊಂದಿರಲಿದೆ. ಜೊತೆಗೆ ಪ್ಯಾಂಟ್ರಿ ವ್ಯವಸ್ಥೆ ಇರಲಿದೆ. ಪ್ರಯಾಣಿಕರ ಸುರಕ್ಷತೆಯ ಸಲುವಾಗಿ 'ಕವಾಚ್' ಅನ್ನು ಹೊಂದಲಿದೆ.

ರೈಲ್ವೆ ಇಲಾಖೆಯು ದೂರದ ಊರುಗಳಿಗೆ ಜನರು ಪ್ರಯಾಣಿಸಲು ಅನುಕೂಲ ಮಾಡಿಕೊಂಡುವ ನಿಟ್ಟಿನಲ್ಲಿ ಶೀಘ್ರದಲ್ಲೇ ವಂದೇ ಸಾಧಾರಣ್ ಎಕ್ಸ್‌ಪ್ರೆಸ್ (Vande Sadharan Express) ರೈಲುಗಳನ್ನು ಓಡಿಸಲಿದೆ. ಈ ರೈಲುಗಳು, 800 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದ್ದು, ಹಗಲು - ರಾತ್ರಿ ಸಂಚಾರಕ್ಕೆ ಉಪಯೋಗ ಮಾಡಬಹುದಾಗಿದೆ.
ವಂದೇ ಸಾಧಾರಣ್ ಎಕ್ಸ್‌ಪ್ರೆಸ್ 22 ಕೋಚ್‌ಗಳು, ಮುಂಭಾಗ ಹಾಗೂ 2 ಎಂಜಿನ್‌ಗಳನ್ನು ಹೊಂದಿರುತ್ತದೆ. ಕಾಯ್ದಿರಿಸದ 12 ಸ್ಲೀಪರ್ ಕೋಚ್ ಮತ್ತು 8 ಜನರಲ್ ಕೋಚ್ ಇರಲಿದ್ದು, 1,800 ಪ್ರಯಾಣಿಕರು ಆರಾಮದಾಯವಾಗಿ ಪ್ರಯಾಣಿಸಬಹುದು. ಈ ರೈಲು 130 kmph ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಸುರಕ್ಷತೆಯ ಸಲುವಾಗಿ ವೇಗವನ್ನು 110 kmph ಸೀಮಿತಗೊಳಿಸಬಹುದು ಎಂದು ವರದಿಯಾಗಿದೆ.

ಇದು ನಾನ್ ಎಸಿ ರೈಲು ಆಗಿದ್ದು, ಅತ್ಯಾಧುನಿಕ ಸೌಕರ್ಯಗಳನ್ನು ಪಡೆದಿದೆ. ಬಯೋ - ವ್ಯಾಕ್ಯೂಮ್ ಟಾಯ್ಲೆಟ್, ಎಲ್‌ಇಡಿ ಲೈಟ್, ಫ್ಯಾನ್, ಮೊಬೈಲ್ ಚಾರ್ಜಿಂಗ್ ಪೋರ್ಟ್ ಹೊಂದಿರುತ್ತದೆ. ಈಗಾಗಲೇ, ಅಹಮದಾಬಾದ್ - ಮುಂಬೈ ನಡುವೆ ಯಶಸ್ವಿಯಾಗಿ ಪರೀಕ್ಷಾರ್ಥ ಸಂಚಾರವನ್ನು ನಡೆಸಿದ್ದು, ದೇಶಾದ್ಯಂತ ರೈಲ್ವೆ ಇಲಾಖೆಯು 30 ಮಾರ್ಗಗಳಲ್ಲಿ ವಂದೇ ಸಾಧಾರಣ್ ರೈಲಿನ ಓಡಾಟಕ್ಕೆ ತೀರ್ಮಾನಿಸಿದೆ ಎಂದು ಹೇಳಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications