Vande Bharat ಪ್ರಯಾಣಿಕರೇ ಖಂಡಿತ ಇವು ತಿಳಿದಿರಲಿ... ಎಚ್ಚರ ತಪ್ಪಿದ್ರೆ TC ಗೂ ಎಂಟ್ರಿ ಇಲ್ಲ!

ಜೂನ್ 26 ರಂದು ನಡೆದ ಆಘಾತಕಾರಿ ಘಟನೆಯೊಂದು ರೈಲ್ವೆ ಪ್ರಯಾಣಿಕರನ್ನು Vande Bharat ರೈಲಿನಲ್ಲಿ ಪ್ರಯಾಣಿಸಲು ಹೆದರುವಂತೆ ಮಾಡಿದೆ. ತುಸು ತಡವಾದ್ದರಿಂದ ಅಹಮದಾಬಾದ್ ನಿಲ್ದಾಣದಿಂದ ಮುಂಬೈಗೆ ಹೊರಟಿದ್ದ ರೈಲಿನ ಬಾಗಿಲು ಮುಚ್ಚಿಕೊಂಡಿದ್ದು, TC (ಟಿಕೆಟ್ ಚೆಕ್ಕರ್) ಹತ್ತುವಲ್ಲಿ ವಿಫಲವಾಗಿ ಕೆಳಗೆ ಬಿದ್ದಿದ್ದಾರೆ.

TC ಪರಿಸ್ಥಿತಿಯೇ ಹೀಗಿದ್ದರೆ ಜನ ಸಾಮಾನ್ಯರ ಪರಿಸ್ಥಿತೆಯೇನು ಎಂದು ಪ್ರಶ್ನಿಸುವಂತಾಗಿದೆ. ಈ ಸಂಪೂರ್ಣ ದೃಶ್ಯಗಳು ಅಹಮದಾಬಾದ್ ರೈಲ್ವೆ ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. TC ಮತ್ತು ಲೊಕೊಪೈಲಟ್ ನಡುವೆ ಏಕೆ ಸಂವಹನವಿಲ್ಲವೆಂದು ಬಳಕೆದಾರರು ರೈಲ್ವೆ ಅಧಿಕಾರಿಗಳನ್ನು ಪ್ರಶ್ನಿಸಿ ಟ್ವಿಟ್ಟರ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.

vande-bharat-tc-fell-down-trying-climb-moving-train

ರೈಲು ನಿರ್ಗಮನವನ್ನು ಅನುಮತಿಸುವ ಮೊದಲು ಎಲ್ಲಾ ಸಿಬ್ಬಂದಿ ಮತ್ತು ಪ್ರಯಾಣಿಕರು ಇದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಿಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ, ಪಶ್ಚಿಮ ರೈಲ್ವೆಯ ಮುಂಬೈ ಸೆಂಟ್ರಲ್ ವಿಭಾಗದ ಡಿವಿಜನ್ ರೈಲ್ವೆ ಮ್ಯಾನೇಜರ್, ದಯವಿಟ್ಟು ಈ ವಿಷಯವನ್ನು ಪರಿಶೀಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಂದೇ ಭಾರತ್ ಬೋಗಿಗಳು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಕನಿಷ್ಠ ಅಂತರವು ಮೂರು ಇಂಚುಗಳು ಇರುತ್ತದೆ. ಇದು ಪ್ಲಾಟ್‌ಫಾರ್ಮ್ ಮತ್ತು ಟ್ರ್ಯಾಕ್‌ಗಳ ನಡುವೆ ಯಾರೂ ಬೀಳದಂತೆ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ. ಹೆಚ್ಚುವರಿಯಾಗಿ, ರೈಲು ಪ್ರಾರಂಭವಾಗುವ ಮೊದಲು ಪ್ರಕಟಣೆ ಮಾಡಲಾಗುತ್ತದೆ, ಪ್ರಯಾಣಿಕರಿಗೆ ಮತ್ತು ರೈಲು ಸಿಬ್ಬಂದಿಗೆ ಸೂಚನೆ ನೀಡಲಾಗುತ್ತದೆ.

vande-bharat-tc-fell-down-trying-climb-moving-train

ಏಕೆಂದರೆ ಸಾಮಾನ್ಯ ರೈಲುಗಳಿಗಿಂತಲೂ ಶೇ 90 ರಷ್ಟು ಸುರಕ್ಷತೆಯನ್ನು ವಂದೇ ಭಾರತ್‌ನಲ್ಲಿ ನೀಡಲಾಗುತ್ತದೆ. ಹಾಗಾಗಿಯೇ ರೈಲು ಚಲಿಸುವಾಗ ನಿರ್ಗಮನ ಮತ್ತು ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಚಲಿಸುವ ರೈಲಿನಿಂದ ಯಾರು ಹತ್ತುವುದು ಅಥವಾ ಇಳಿಯುವುದನ್ನು ಮಾಡದಂತೆ ತಡೆಯಲಾಗುತ್ತದೆ. ಹಾಗಾಗಿಯೇ ಟಿಸಿ ಕೂಡ ಚಲಿಸುವ ರೈಲು ಹತ್ತಲೋಗಿ ಬಿದ್ದಿದ್ದರೂ ಯಾವುದೇ ಹಾನಿಯಾಗಿಲ್ಲ.

ಆಗಿದ್ದೇನೆ?: ಮೇಲೆ ಹೇಳಿದಂತೆ ರೈಲು ಹೊರಡುವ ಮೊದಲು ಎಲ್ಲಾ ಸಿಬ್ಬಂದಿ ಮತ್ತು ಪ್ರಯಾಣಿಕರು ರೈಲಿನಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳುವ ವ್ಯವಸ್ಥೆ ಇದೆ. ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ಎಚ್ಚರಿಸಲು ರೈಲಿನೊಳಗೆ ಪ್ರಕಟಣೆಯನ್ನು ಮಾಡಲಾಗಿದೆ. ಈ ಸಂದರ್ಭದಲ್ಲಿ TC ಗಮನ ಬೇರೆಡೆ ಇರಬಹುದು, ಇದರಿಂದಾಗಿ ಅವರಿಗೆ ರೈಲು ಹೊರುಡುವುದು ಗೊತ್ತಾಗಿಲ್ಲ ಎಂದು ಹೇಳಲಾಗುತ್ತಿದೆ.

ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲಿನ ಜೊತೆಗೆ TC ಕೂಡ ಓಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅವರು ಲೊಕೊ ಪೈಲಟ್‌ನ ಕಿಟಕಿಗೆ ಬಡಿಯುತ್ತಿರುವುದು ಕೂಡ ಕಂಡುಬಂದಿದೆ. ಕೊನೆಯ ಪ್ರಯತ್ನದಲ್ಲಿ ರೈಲು ಹತ್ತಲು ಯತ್ನಿಸಿ ವಿಫಲವಾಗಿ ಪ್ಲಾಟ್‌ಫಾರ್ಮ್ ಮೇಲೆ ಬಿದ್ದಿದ್ದಾರೆ. ಇದೇ ವೇಳೆ ಅಲ್ಲಿ ತುಂತುರು ಮಳೆಯಾಗುತ್ತಿರುವುದು ವಿಡಿಯೋದಲ್ಲಿ ನೋಡಬಹುದು.

ಟಿಸಿ ಬೀಳುತ್ತಿದ್ದಂತೆ ಪ್ಲಾಟ್‌ ಫಾರ್ಮ್‌ನಲ್ಲಿದ್ದ ಜನರು ಕೂಗುತ್ತಾ ಓಡಿಬಂದು ಅವರನ್ನು ಎಬ್ಬಿಸಿದ್ದಾರೆ. ಇದಾದ ಬಳಿಕ ಕೂಡಲೇ ರೈಲು ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಒಂದು ವೇಳೆ ಅದೇ ಜಾಗದಲ್ಲಿ ಸಾಮನ್ಯ ರೈಲು ಇದ್ದಿದ್ದರೇ ಟ್ರಾಕ್ ಒಳಗೆ ಬೀಳುವ ಸಾಧ್ಯತೆಗಳೆ ಹೆಚ್ಚು. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

Article Published On: Saturday, July 1, 2023, 17:39 [IST]
English summary
Vande bharat tc fell down trying climb moving train
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+