ಮೂರು ಆವೃತ್ತಿಗಳಲ್ಲಿ ವಂದೇ ಭಾರತ್ ರೈಲುಗಳು... 160 ಕಿ.ಮೀ ವೇಗಕ್ಕೆ ಅನುಗುಣವಾಗಿ ಹಳಿಗಳು

ವಂದೇ ಚೇರ್ ಕಾರ್, ವಂದೇ ಮೆಟ್ರೋ ಮತ್ತು ವಂದೇ ಸ್ಲೀಪರ್ಸ್ ಎಂಬ ಮೂರು ಆವೃತ್ತಿಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪರಿಚಯಿಸಲು ಭಾರತೀಯ ರೈಲ್ವೆ ಸಜ್ಜಾಗಿದೆ. ಅತಿ ಶೀಘ್ರದಲ್ಲೇ ಕಾರ್ಯಾಚರಣೆಗೆ ಬರಲಿದ್ದು, ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವ ನೀಡಲಿವೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.

ರೈಲ್ವೇಯನ್ನು ಹೊಸ ಪೀಳಿಗೆಗೆ ಅನುಗುಣವಾಗಿ ಸಂಪೂರ್ಣವಾಗಿ ಬದಲಿಸುವ ನಿಟ್ಟಿನಲ್ಲಿ ಶತಾಬ್ದಿ, ರಾಜಧಾನಿ ಎಕ್ಸ್‌ಪ್ರೆಸ್‌ಗಳು ಮತ್ತು ಸ್ಥಳೀಯ ರೈಲುಗಳನ್ನು ಬದಲಿಸಲು ಈ ಸ್ಥಳೀಯ ಸೆಮಿ ಹೈಸ್ಪೀಡ್ ರೈಲುಗಳನ್ನು ಚೆನ್ನೈನ ಇಂಟಿಗ್ರೇಟೆಡ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತಿದೆ. ಇವು ಅತ್ಯಾಧುನಿಕ ತಂತ್ರಜ್ಞಾನ, ಹಲವು ವಿಶೇಷತೆಗಳನ್ನು ಒಳಗೊಂಡಿರಲಿವೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.

Vande Bharat trains in three versions

ಒಂದೊಂದಾಗಿ ಅಭಿವೃದ್ಧಿ ಸಾಧಿಸುತ್ತಿರುವ ರೈಲ್ವೇ ಇಲಾಖೆಯು, ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ರೈಲ್ವೆ ಹಳಿಗಳ ನವೀಕರಣ ಕೂಡ ಕಾಣಲಿದೆ. ನವೀಕರಣಗೊಂಡ ಬಳಿಕ ಹೊಸ ಹಳಿಗಳು ವಂದೇ ಭಾರತ್ ರೈಲುಗಳನ್ನು ಗರಿಷ್ಠ 160 ಕಿ.ಮೀ ವೇಗವನ್ನು ತಲುಪಲು ಅನುವು ಮಾಡಿಕೊಡುತ್ತವೆ ಎಂದು ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ವೈಷ್ಣವ್ ಹೇಳಿದ್ದಾರೆ.

ಜೂನ್ ಮಧ್ಯದ ವೇಳೆಗೆ ಪ್ರತಿ ರಾಜ್ಯವು ವಂದೇ ಭಾರತ್ ರೈಲನ್ನು ಹೊಂದಿರಲಿದೆ. ಬೇಡಿಕೆಯನ್ನು ಪೂರೈಸಲು ಉತ್ಪಾದನೆಯನ್ನು ವೇಗಗೊಳಿಸಲಾಗುತ್ತಿದೆ. ರೈಲ್ವೆ ಹಳಿಗಳನ್ನು ಮೇಲ್ದರ್ಜೆಗೇರಿಸಲು ಮತ್ತು ವೇಗವನ್ನು ಹೆಚ್ಚಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಅವರು ವಿವರಿಸಿದ ಅವರು, ಹಳೆಯ ಹಳಿಗಳ ವೇಗದ ಮಿತಿ ಹಾಗೂ ಈಗ ನವೀಕರಣಗೊಳ್ಳುತ್ತಿರುವ ಹೊಸ ಹಳಿಗಳ ಪ್ರಗತಿಯನ್ನು ತಿಳಿಸಿದರು.

Vande Bharat trains in three versions

ಹಳೆಯ ಹಳಿಗಳನ್ನು 70 ರಿಂದ 80 ಕಿ.ಮೀ ವೇಗಕ್ಕೆ ವಿನ್ಯಾಸಗೊಳಿಸಲಾಗಿದೆ. ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ಸುಮಾರು 30,000 ದಿಂದ 35,000 ಕಿ.ಮೀ ಹಳಿಗಳನ್ನು 110 ಕಿ.ಮೀ, 130 ಕಿ.ಮೀ ಮತ್ತು 160 ಕಿ.ಮೀ ವರೆಗಿನ ವೇಗವನ್ನು ತಲುಪಲು ಒಗ್ಗಿಕೊಳ್ಳುವಂತೆ ಹೊಸ ಹಳಿಗಳ ನವೀಕರಣವಾಗಲಿದೆ ಎಂದು ವೈಶ್ಣವ್ ತಿಳಿಸಿದರು.

ಇನ್ನು ಕಳೆದ ಗುರುವಾರ ದೆಹಲಿ-ಡೆಹ್ರಾಡೂನ್ ವಂದೇ ಭಾರತ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು. ಮೊದಲು ಇದೇ ಮಾರ್ಗದಲ್ಲಿ ಚಲಿಸುತ್ತಿದ್ದ ಶತಾಬ್ದಿ ಎಕ್ಸ್‌ಪ್ರೆಸ್‌ ಆರು ಗಂಟೆ 10 ನಿಮಿಷಗಳಷ್ಟು ಪ್ರಯಾಣದ ಸಮಯ ತೆದುಕೊಳ್ಳುತ್ತಿತ್ತು. ಈಗ ಆಧುನಿಕ ಸೌಲಭ್ಯಗಳೊಂದಿಗೆ ಹೊಸ ರೈಲು ನಾಲ್ಕೂವರೆ ಗಂಟೆಗಳ ಸಮಯ ತೆಗುದಕೊಳ್ಳುತ್ತದೆ.

Vande Bharat trains in three versions

ಗಡಿ ಪ್ರದೇಶಗಳಲ್ಲಿ ರೈಲು ಸಂಪರ್ಕ ಯೋಜನೆಗಳಿಗೆ ಮತ್ತು ರೈಲು ಪ್ರಯಾಣಿಕರಿಗೆ 4 ಜಿ -5 ಜಿ ಸೇವೆಗಳನ್ನು ಒದಗಿಸುವ ರೈಲ್ವೆಯ ಬದ್ಧತೆಯನ್ನು ವೈಷ್ಣವ್ ಒತ್ತಿ ಹೇಳಿದರು. ರೈಲ್ವೆಯು 4 ಜಿ-5 ಜಿ ಟವರ್ ಗಳನ್ನು ಸ್ಥಾಪಿಸಿರುವುದನ್ನು ಪ್ರಸ್ತಾಪಿಸಿದ ಅವರು, ವಿವಿಧ ಸ್ಥಳಗಳಲ್ಲಿ ನಿರಂತರ ಕೆಲಸ ನಡೆಯುತ್ತಿದೆ. ಇದು ರೈಲ್ವೆಯ ಹೊಸ ಕ್ರಾಂತಿ ಎಂದು ಹೇಳಿದರು.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Friday, May 26, 2023, 17:50 [IST]
English summary
Vande bharat trains coming with three versions
Read more on ರೈಲು train
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+