Vande Metro: ವಂದೇ ಮೆಟ್ರೋ ಶೀಘ್ರ ಹಳಿಗೆ.. ನಿರೀಕ್ಷಿತ ಮಾರ್ಗಗಳಾವುವು, ಸುಲಭ ಪ್ರಯಾಣ.. ವಿಶೇಷತೆಗಳೇನು?

ದೇಶಾದ್ಯಂತ ಸೆಮಿ-ಹೈ ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲುಗಳು ಯಶಸ್ವಿಯಾಗಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಕೊಂಡಿಯಾಗಿವೆ. ಭಾರತೀಯ ರೈಲ್ವೆಯು ಹತ್ತಿರದ ನಗರಗಳನ್ನು ಸಂಪರ್ಕಿಸುವ ಉದ್ದೇಶದಿಂದ ವಂದೇ ಮೆಟ್ರೋ (Vande Metro)ವನ್ನು ಹೊರತರಲು ಸಿದ್ಧವಾಗಿದೆ. ಈ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವಿನ್ಯಾಸವನ್ನು ಆಧರಿಸಿದ್ದು, ಶೀಘ್ರದಲ್ಲಿಯೇ ಹಳಿಗೆ ಬರಲಿದೆ. ಇಲ್ಲಿ ನೂತನ ವಂದೇ ಮೆಟ್ರೋ ಓಡಾಟವನ್ನು ನಡೆಸುವ ನಿರೀಕ್ಷಿತ ಮಾರ್ಗಗಳು ಹಾಗೂ ವಿಶೇಷತೆಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದೇವೆ.

ಎಲ್ಲಿ ತಯಾರಿಕೆ: ಭಾರತೀಯ ರೈಲ್ವೆ ಇಲಾಖೆಯು ವಂದೇ ಮೆಟ್ರೋವನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಫೆಬ್ರವರಿ 2023ರಲ್ಲಿ ಘೋಷಿಸಿದ್ದರು. ನೂತನ ರೈಲುಗಳನ್ನು ಕಪುರ್ತಲಾದಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿ (ಆರ್‌ಸಿಎಫ್) ಹಾಗೂ ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ಯಲ್ಲಿ ತಯಾರಿಸಲಾಗುತ್ತಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಸಿದ್ಧಗೊಳ್ಳಲಿವೆ. ಆ ಬಳಿಕ, ಪ್ರಾಯೋಗಿಕ ಸಂಚಾರವನ್ನು ನಡೆಸುವ ಸಾಧ್ಯತೆಯಿದೆ.

Vande Metro Soon Roll Out Features And Expected Routes Details

ವಂದೇ ಮೆಟ್ರೋ ವೇಗ: ಈ ರೈಲಿನ ತಯಾರಿಕೆಯಲ್ಲಿ ಅತ್ಯುನ್ನತ ತಂತ್ರಜ್ಞಾನವನ್ನು ಉಪಯೋಗಿಸಲಾಗಿದೆ. ಗರಿಷ್ಠ 130 ಕೆಎಂಪಿಹೆಚ್ ವೇಗದಲ್ಲಿ ಸಂಚರಿಸಲಿದ್ದು, ಈಗಿರುವ ಇಎಂಯು (ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್) ರೈಲುಗಳ ವೇಗವನ್ನು ಮೀರಿಸಲಿದೆ. ಪ್ರಯಾಣಿಕರನ್ನು ಬೇಗನೆ ಗಮ್ಯ ಸ್ಥಾನಕ್ಕೆ ತಲುಪಿಸಲಿದ್ದು, ಇದರಿಂದ ದಿನನಿತ್ಯದ ಕೆಲಸ ಕಾರ್ಯಗಳಿಗೆ ಓಡಾಟ ನಡೆಸುವವರಿಗೆ ಹೆಚ್ಚಿನ ಅನುಕೂಲವಾಗಲಿದೆ.

ವಂದೇ ಮೆಟ್ರೋ ವೈಶಿಷ್ಟ್ಯಗಳು: ವಂದೇ ಮೆಟ್ರೋ ಸಂಪೂರ್ಣ ಹವಾನಿಯಂತ್ರಿತ ಕೋಚ್‌ಗಳನ್ನು ಹೊಂದಿರಲಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಓಡಾಟ ಮಾಡಬಹುದು. ಮುಚ್ಚಿದ ಕಿಟಕಿಗಳನ್ನು ಪಡೆದುಕೊಂಡಿರುವುದರಿಂದ ವಾತಾವರಣ ಬದಲಾವಣೆಯಾದರೂ ಸೂಕ್ತ ರಕ್ಷಣೆ ಸಿಗಲಿದೆ. ಲಗೇಜ್ ರ‍್ಯಾಕ್, ಮುಂದಿನ ನಿಲ್ದಾಣದ ಕುರಿತ ಮಾಹಿತಿಗೆ ಎಲ್‌ಸಿಡಿ ಡಿಸ್ಪ್ಲೇ, ಸ್ವಯಂಚಾಲಿತ ಬಾಗಿಲುಗಳು (ಆಟೋಮೆಟಿಕ್ ಡೋರ್ಸ್), ಮೊಬೈಲ್ ಚಾರ್ಜಿಂಗ್ ಸಾಕೆಟ್‌ಗಳು ಮತ್ತು ಮೆತ್ತನೆಯ ಆಸನಗಳನ್ನು ಒಳಗೊಂಡಿರಲಿದೆ.

Vande Metro Soon Roll Out Features And Expected Routes Details

ಸುರಕ್ಷತಾ ವೈಶಿಷ್ಟ್ಯಗಳು: ಈ ರೈಲುಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದು, ಅದಕ್ಕಾಗಿ 'ಕವಾಚ್' ವ್ಯವಸ್ಥೆಯನ್ನು ಹೊಂದಿರಲಿವೆ. ಸಿಸಿಟಿವಿ ಕ್ಯಾಮೆರಾಗಳು, ತುರ್ತು ಮಾತುಕತೆ ಘಟಕಗಳು (ಎಮರ್ಜೆನ್ಸಿ ಟಾಕ್-ಬ್ಯಾಕ್ ಯುನಿಟ್ಸ್), ಸ್ವಯಂಚಾಲಿತ ಅಗ್ನಿ ಪತ್ತೆ & ಎಚ್ಚರಿಕೆ ವ್ಯವಸ್ಥೆ (ಫೈರ್ ಡಿಟೆಕ್ಷನ್ & ಅಲಾರಾಂ ಸಿಸ್ಟಮ್) ಅನ್ನು ಪಡೆದಿರಲಿವೆ.

ವಂದೇ ಮೆಟ್ರೋ ನಿರೀಕ್ಷಿತ ಮಾರ್ಗಗಳು: ಈ ರೈಲು ಮೊದಲಿಗೆ ಆಗ್ರಾ-ಮಥುರಾ, ದೆಹಲಿ-ರೇವಾರಿ, ಲಕ್ನೋ-ಕಾನ್ಪುರ, ತಿರುಪತಿ-ಚೆನ್ನೈ, ಮತ್ತು ಭುವನೇಶ್ವರ- ಬಾಲಾಸೋರ್ ಮಾರ್ಗಗಳಲ್ಲಿ ಕಾರ್ಯಚರಣೆಯನ್ನು ನಡೆಸುವ ಸಾಧ್ಯತೆಯಿದೆ. ಮುಂಬರುವ ದಿನಗಳಲ್ಲಿ ಬೇರೆ-ಬೇರೆ ಮಾರ್ಗದಲ್ಲಿಯೂ ಓಡಾಟವನ್ನು ನಡೆಸಬಹದು. ವಂದೇ ಮೆಟ್ರೋ 12 ಅಥವಾ 16 ಕೋಚ್‌ಗಳನ್ನು ಒಳಗೊಂಡಿರಬಹುದು. ಜೊತೆಗೆ ಕೋಚ್‌ವೊಂದರಲ್ಲಿ 100 ಜನ ಕುಳಿತುಕೊಂಡು ಪ್ರಯಾಣಿಸಿದರೆ, 200 ಮಂದಿ ನಿಂತುಕೊಂಡು ತೆರಳಬಹುದು.

ಯಾರಿಗೆ ಅನುಕೂಲ: ವಂದೇ ಮೆಟ್ರೋ ಸಮೀಪದ ನಗರಗಳಿಗೆ ಸಂಪರ್ಕ ಕಲ್ಪಿಸುವುದರಿಂದ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ರೈಲು ಗರಿಷ್ಠ ವೇಗದಲ್ಲಿ ಸಂಚರಿಸುವುದರಿಂದ ಕೆಲಸ ಅಥವಾ ಶಾಲಾ-ಕಾಲೇಜುಗಳಿಗೆ ಆದಷ್ಟು ಬೇಗನೆ ತಲುಪಬಹುದಾಗಿದ್ದು, ಹೆಚ್ಚಿನ ಸಮಯಾವಕಾಶವು ಉಳಿತಾಯವಾಗುತ್ತದೆ. ಕರ್ನಾಟಕದ ಯಾವ ಮಾರ್ಗದಲ್ಲಿ ವಂದೇ ಮೆಟ್ರೋ ಸಂಚಾರವನ್ನು ಆರಂಭಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, June 15, 2024, 13:23 [IST]
English summary
Vande metro soon roll out features and expected routes details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+