Vande Metro: ಶೀಘ್ರ ಹಳಿಗೆ.. ದೊಡ್ಡ ನಗರಗಳಲ್ಲಿ ಮನೆ ಅಗತ್ಯವಿಲ್ಲ, ಬೇಗ ನಿಮ್ಮೂರಿಗೆ ಹೋಗಬಹುದು!

ದೇಶದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ (Vande Bharat Express) ಸೆಮಿ ಹೈಸ್ಪೀಡ್ ರೈಲಾಗಿ ಯಶಸ್ವಿಯಾಗಿ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಕೆಲವೇ ದಿನಗಳಲ್ಲಿ ಹತ್ತಿರದ ನಗರಗಳಿಗೆ ಸಂಪರ್ಕವನ್ನು ಕಲ್ಪಿಸಲು ವಂದೇ ಮೆಟ್ರೋ (Vande Metro) ಕೂಡ ಹಳಿಗೆ ಬರಲಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಎರಡು ನಗರಗಳ ನಡುವಿನ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ರೈಲು ಇಲಾಖೆಯು ಕಪುರ್ತಲಾದಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿ (ಆರ್‌ಸಿಎಫ್)ಯಲ್ಲಿ ವಂದೇ ಮೆಟ್ರೋ ಬೋಗಿ (ಕೋಚ್‌)ಗಳನ್ನು ಅಧಿವೃದ್ಧಿಪಡಿಸುತ್ತಿದೆ. 16 ಕೋಚ್‌ಗಳನ್ನು ಒಳಗೊಂಡ ಮೊದಲ ವಂದೇ ಮೆಟ್ರೋ ರೈಲು ಮೇ ತಿಂಗಳೊಳಗೆ ಸಿದ್ದವಾಗಲಿದೆ ಎಂದು ಉತ್ತರ ರೈಲ್ವೆ (Northern Railway)ಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

Vande Metro Train Launch Soon Easy Journey What Are Specialties

ಫ್ಯಾಕ್ಟರಿಯಲ್ಲಿ ಪರೀಕ್ಷಿಸಲು ಏಪ್ರಿಲ್ ಅಂತ್ಯದೊಳಗೆ ಮೊದಲ ಮಾದರಿ ತಯಾರಾಗಲಿದ್ದು, 16 ಕೋಚ್‌ಗಳನ್ನು ಹೊಂದಿರುವ ಈ ರೈಲಿನ ಅಧಿವೃದ್ಧಿಪಡಿಸುವಿಕೆ ಕೆಲಸಗಳು ಶೇಕಡ 70% ಮುಕ್ತಾಯಗೊಂಡಿವೆ. ಆರಂಭದಲ್ಲಿ ಹೊಸ ವಂದೇ ಮೆಟ್ರೋ ರೈಲನ್ನು ಭಾರತೀಯ ರೈಲ್ವೆ ಪ್ರಾಯೋಗಿಕ (Trials) ಸಂಚಾರಕ್ಕೆ ಒಳಪಡಿಸಲಿದ್ದು, ನಂತರ ಲೋಕಾರ್ಪಣೆಗೊಳಿಸಲಿದೆ. ಈ ಹಣಕಾಸು ವರ್ಷದಲ್ಲಿ 9 ರೈಲನ್ನು ತಯಾರಿಸಲಾಗುವುದು ಎಂದು ಉತ್ತರ ರೈಲ್ವೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಂದೇ ಮೆಟ್ರೋವನ್ನು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಆಧರಿಸಿ ಅಭಿವೃದ್ದಿಪಡಿಸಲಾಗಿದೆ. ಇದು ಎರಡು ಪ್ರಮುಖ ನಗರಗಳನ್ನು ಬೆಸೆಯಲಿದ್ದು, ಪ್ರಯಾಣಿಕರು 250 ಕಿ.ಮೀ ದೂರವನ್ನು ಆರಾಮದಾಯಕವಾಗಿ ಪ್ರಯಾಣಿಸಲು ಸಾದ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಸಂಪೂರ್ಣ ಹವಾನಿಯಂತ್ರಿತವಾಗಿರುವ ವಂದೇ ಮೆಟ್ರೋ, ಗಂಟೆಗೆ 130 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಸಂಚರಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Vande Metro Train Launch Soon Easy Journey What Are Specialties

16 ಕೋಚ್‌ಗಳನ್ನು ಹೊಂದಿರುವ ಈ ರೈಲಿನ ಪ್ರತಿ ಕೋಚ್‌ನಲ್ಲಿ 280 ಜನರು ಪ್ರಯಾಣಿಸಬಹುದು. ಅದರಲ್ಲಿ 100 ಜನರಿಗೆ ಆಸನ ವ್ಯವಸ್ಥೆಯಿದ್ದು, 180 ಮಂದಿ ನಿಂತುಕೊಂಡು ತೆರಳಬಹುದು. ಒಟ್ಟು 4,364 ಜನರು ಏಕಕಾಲದಲ್ಲಿ ವಂದೇ ಮೆಟ್ರೋದಲ್ಲಿ ಓಡಾಡಬಹುದು. ಇದರಲ್ಲಿ ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಂದೇ ಮೆಟ್ರೋ ಕೋಚ್‌ಗಳಲ್ಲಿ ವೀಲ್ ಚೇರ್ ಅನ್ನು ಸುಲಭವಾಗಿ ತೆಗೆದುಕೊಂಡು ಹೋಗಬಹುದಾದ ಶೌಚಾಲಯವಿರುತ್ತದೆ. ಅಪಾಯದ ಸಂದರ್ಭದಲ್ಲಿ ಲೋಕೋ ಪೈಲೆಟ್ ಜೊತೆಯಲ್ಲಿ ಪ್ರಯಾಣಿಕರು ಮಾತನಾಡಲು ಟಾಕ್ ಬ್ಯಾಕ್ ಸಿಸ್ಟಮ್ ಇರಲಿದೆ. ರೈಲಿನ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಫೇರ್ & ಸ್ಮೋಕ್ ಡಿಟೆಕ್ಷನ್ ಸಿಸ್ಟಮ್ ಮತ್ತು ಕವಚ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವಂದೇ ಮೆಟ್ರೋ ಮಾತ್ರವಲ್ಲದೆ ರೈಲ್ವೆ ಇಲಾಖೆಯು ವಂದೇ ಭಾರತ್ ಸ್ಲೀಪರ್ (Vande Bharat Sleeper) ರೈಲುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಮುಂಬರುವ ತಿಂಗಳಲ್ಲಿ ಈ ರೈಲು ಸಹ ಹಳಿಗೆ ಬರಲಿದೆ. ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳಿಗೆ ಪರ್ಯಾಯವಾಗಲಿವೆ ಎಂದು ಹೇಳಲಾಗಿದೆ. ಒಟ್ಟು 16 ಕೋಚ್‌ಗಳನ್ನು ಒಳಗೊಂಡಿರುವ ವಂದೇ ಭಾರತ್ ಸ್ಲೀಪರ್, 823 ಬರ್ತ್‌ಗಳನ್ನು ಹೊಂದಿರುವ ನಿರೀಕ್ಷೆಯಿದೆ.

ಈ ನೂತನ ವಂದೇ ಮೆಟ್ರೋ ರೈಲು ಗರಿಷ್ಠ ವೇಗದಲ್ಲಿ ಸಂಚರಿಸುವುದರೊಂದಿಗೆ ಪ್ರಯಾಣಿಕರನ್ನು ಬೇಗನೆ ಗಮ್ಯ ಸ್ಥಾನವನ್ನು ತಲುಪಿಸುತ್ತದೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಹತ್ತಿರದ ನಗರಗಳ ನಡುವೆ ದಿನನಿತ್ಯ ಉದ್ಯೋಗ ಸಂಬಂಧ ಓಡಾಟ ನಡೆಸುವವರಿಗೆ ಅಧಿಕ ಲಾಭವಾಗುತ್ತದೆ. ದೊಡ್ಡ ನಗರಗಳ ಮೇಲಿನ ಅವಲಂಬನೆಯೂ ಒಂದಷ್ಟು ಮಟ್ಟಿಗೆ ಇಳಿಮುಖವಾಗುತ್ತದೆ. ಕಡಿಮೆ ವೇತನ ಪಡೆಯುವ ನೌಕರರಿಗೆ ಹಣದ ಉಳಿತಾಯವಾಗುತ್ತದೆ ಎಂದು ಹೇಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, April 5, 2024, 12:23 [IST]
English summary
Vande metro train launch soon easy journey what are specialties
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+