Vande Sadharan: ವಂದೇ ಸಾಧಾರಣ್ ಇದೇ ತಿಂಗಳು ಬರುತ್ತೆ.. ಕಡಿಮೆ ದರಕ್ಕೆ ನಿಮ್ಮೂರಿಗೆ ಹೋಗಬಹುದು, ವಿಶೇಷತೆಗಳೇನು?
ಕರ್ನಾಟಕವು ಸೇರಿದಂತೆ ದೇಶದ ವಿವಿಧ ಭಾಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಪ್ರೀಮಿಯಂ ಹೈಸ್ವೀಡ್ ರೈಲಾಗಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿದೆ. ವಂದೇ ಭಾರತ್ ಸ್ಲೀಪರ್ (Vande Bharat sleeper) ಹಾಗೂ ವಂದೇ ಮೆಟ್ರೋ (Vande Metro) ಕೂಡ ಸಂಚಾರಿಸಲು ಸಿದ್ಧವಾಗುತ್ತಿವೆ.
ಇದೀಗ, ಸಾಮಾನ್ಯ ಜನರಿಗೆ ಉತ್ತಮ ಸೇವೆ ಒದಗಿಸಲು ಭಾರತೀಯ ರೈಲ್ವೆಯು (Indian Railway) ವಂದೇ ಸಾಧಾರಣ್ (Vande Sadharan) ರೈಲುಗಳನ್ನು ಅಭಿವೃದ್ಧಿಪಡಿಸುವ ಕೆಲಸದಲ್ಲಿ ನಿರತವಾಗಿದೆ. ಈ ತಿಂಗಳ (ಅಕ್ಟೋಬರ್) ಕೊನೆಯಲ್ಲಿ ಲೋಕಾರ್ಪಣೆಯಾಗುವ ನೀರಿಕ್ಷೆಯಿದ್ದು, ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ (Integral Coach Factory - ICF) ಈ ರೈಲನ್ನು ತಯಾರಿಸಲಾಗುತ್ತಿದೆ.

ಒಂದು ವಂದೇ ಸಾಧಾರಣ್ ರೈಲನ್ನು ಅಭಿವೃದ್ಧಿಪಡಿಸಲು ರೂ.65 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ರೈಲಿನಲ್ಲಿ ಸುಮಾರು 1,800 ಮಂದಿ ಪ್ರಯಾಣಿಸಲು ಅವಕಾಶ ಕಲ್ಪಿಬಹುದು. ಗರಿಷ್ಠ ವೇಗಮಿತಿಯನ್ನು ಗಂಟೆಗೆ 130 ಕಿಮೀ.ಗೆ ಸೀಮಿತಗೊಳಿಸಬಹುದು. ಈ ರೈಲು, ತನ್ನ ಎರಡು ತುದಿಗಳಲ್ಲಿ ಎಂಜಿನ್ ಹೊಂದಿರಲಿದ್ದು, ದ್ವಿತೀಯ ದರ್ಜೆಯ ಸ್ಲೀಪರ್ ಕೋಚ್ ಹಾಗೂ ಕಾಯ್ದಿರಿಸದ ಕೋಚ್‌ಗಳನ್ನು ಒಳಗೊಂಡಿರಲಿದೆ.
ವಂದೇ ಸಾಧಾರಣ್ (Vande Sadharan) ರೈಲಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದು, 22 ಬೋಗಿಗಳನ್ನು ಹೊಂದಿರಲಿದೆ. ಜೈವಿಕ ಶೌಚಾಲಯ, ಚಾರ್ಜಿನ್ ಪಾಯಿಂಟ್, ಸಿಸಿಟಿವಿ ಕ್ಯಾಮೆರಾ, ಸ್ವಯಂಚಾಲಿತ ಬಾಗಿಲು, ಎಲ್ಇಡಿ ಲೈಟ್, ಫ್ಯಾನ್ ಸೇರಿದಂತೆ ಸುರಕ್ಷತೆಯ ದೃಷ್ಟಿಯಿಂದ ಅತ್ಯಾಧುನಿಕ ಸೌಲಭ್ಯಗಳನ್ನು ಪಡೆದಿರಲಿದೆ. ಈ ರೈಲಿನಲ್ಲಿ ಕಡಿಮೆ ಖರ್ಚಿನಲ್ಲಿ ನಿಮ್ಮೂರಿಗೆ ಪ್ರಯಾಣಿಸಬಹುದು.

ಸದ್ಯ, ದೇಶಾದ್ಯಂತ ಕಾರ್ಯಾಚರಣೆ ನಡೆಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ರಾತ್ರಿ ವೇಳೆ ದೂರದ ಪ್ರಯಾಣ ಸಾಧ್ಯವಿಲ್ಲ. ಇದನ್ನು ಅರಿತಿರುವ ರೈಲ್ವೆ ಇಲಾಖೆಯೂ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ತಯಾರಿಸುತ್ತಿದೆ. ಇವು, ಯಾವುದೇ ವಿಮಾನಕ್ಕೂ ಕಮ್ಮಿ ಇಲ್ಲದ ರೀತಿಯಲ್ಲಿ ಸೌಕರ್ಯವನ್ನು ಒಳಗೊಂಡಿದ್ದು, 2024ರ ಫೆಬ್ರವರಿ ವೇಳೆಗೆ ಕಾರ್ಯಚರಣೆ ನಡೆಸುವ ನೀರಿಕ್ಷೆಯಿದೆ.
ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾದ ಮಾಹಿತಿ ಪ್ರಕಾರ, ಈ ಸ್ಲೀಪರ್ ರೈಲು 857 ಬರ್ತ್‌ಗಳನ್ನು ಹೊಂದಿರಲಿದ್ದು, ಪ್ರಯಾಣಿಕರಿಗೆ 823 ಹಾಗೂ ಉಳಿದ 34 ಬರ್ತ್‌ಗಳನ್ನು ರೈಲು ಸಿಬ್ಬಂದಿಗೆ ಮೀಸಲಿಡಲಾಗುತ್ತದೆ. ಪ್ರತಿ ಬೋಗಿಯಲ್ಲಿ ಮಿನಿ ಪ್ಯಾಂಟ್ರಿ ಇರುತ್ತದೆ. ರೈಲ್ವೆ ಇಲಾಖೆಯು 200 ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ.
ಹತ್ತಿರದ ನಗರಗಳ ಪ್ರಯಾಣಕ್ಕೆ ರೈಲ್ವೆ ಇಲಾಖೆಯೂ ವಂದೇ ಮೆಟ್ರೋ (Vande Metro) ರೈಲುಗಳನ್ನು ತಯಾರಿಸುತ್ತಿದೆ. ಇವು 12 ಬೋಗಿಗಳನ್ನು ಒಳಗೊಂಡಿರಲಿದ್ದು, 2024ರ ವೇಳೆಗೆ ಲೋಕಾರ್ಪಣೆಗೊಳ್ಳುವ ನೀರಿಕ್ಷೆಯಿದೆ. ಉದಾಹಣೆಗೆ ಈ ವಂದೇ ಮೆಟ್ರೋ ತುಮಕೂರು - ಬೆಂಗಳೂರು, ಬೆಂಗಳೂರು - ಮೈಸೂರು, ಹಾವೇರಿ - ಧಾರವಾಡ ನಡುವೆ ಓಡಾಟ ನಡೆಸಬಹುದು.
ಪ್ರಸ್ತುತ, ದೇಶಾದ್ಯಂತ ಕಾರ್ಯಾಚರಣೆ ನಡೆಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು, ಸಾಕಷ್ಟು ಅತ್ಯಾಧುನಿಕ ಸೌಕರ್ಯವನ್ನು ಹೊಂದಿವೆ. ಇವು ಅತಿವೇಗದಲ್ಲಿ ಸಂಚರಿಸಲಿದ್ದು, ಪ್ರತ್ಯೇಕ ಎಂಜಿನ್ ಹೊಂದಿಲ್ಲ. ಸೀಟುಗಳು ಹೆಚ್ಚು ಆರಾಮದಾಯಕವಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ವೈ-ಫೈ ಸೌಲಭ್ಯವಿದೆ. ಸಂಪೂರ್ಣ ಎಸಿ ವ್ಯವಸ್ಥೆ, ಜೈವಿಕ ಶೌಚಾಲಯ, ಸ್ವಯಂಚಾಲಿತ ಬಾಗಿಲು ಮತ್ತು ಅಗ್ನಿ ನಿರೋಧಕ ಸಾಧನಗಳನ್ನು ಪಡಿದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications