ಹಳೆ ವಾಹನಗಳ ನೋಂದಣಿ ನವೀಕರಣ ಶುಲ್ಕ 8 ಪಟ್ಟು ಹೆಚ್ಚಳ: ಏಪ್ರಿಲ್ 1ರಿಂದ ನಿಯಮ ಜಾರಿ

ಕೇಂದ್ರ ಸರ್ಕಾರವು ಹಳೇ ವಾಹನ ಮಾಲೀಕರಿಗೆ ದೊಡ್ಡ ಆಘಾತ ನೀಡಿದ್ದು, 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ನೀತಿ ಜಾರಿಯಾಗಿರುವುದರಿಂದ ಹಳೆ ವಾಹನಗಳ ನೋಂದಣಿ ನವೀಕರಣ ಶುಲ್ಕವನ್ನು ಬರೋಬ್ಬರಿ 8 ಪಟ್ಟು ಹೆಚ್ಚಳ ಮಾಡಿದೆ.

ಹಳೆ ವಾಹನಗಳ ನೋಂದಣಿ ನವೀಕರಣ ಶುಲ್ಕ 8 ಪಟ್ಟು ಹೆಚ್ಚಳ: ಏಪ್ರಿಲ್ 1ರಿಂದ ನಿಯಮ ಜಾರಿ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಸಂಬಂಧ ಆದೇಶವನ್ನು ಹೊರಡಿಸಿದ್ದು, 15 ವರ್ಷಗಳ ಹಳೆಯ ವಾಹನ ನೋಂದಣಿ ನವೀಕರಣಕ್ಕೆ ಕಟ್ಟುವ ಶುಲ್ಕ ಈಗಿರುವ 600ರೂ. ನಿಂದ 5000ರೂ.ಗೆ ಏರಿಕೆಯಾಗಲಿದ್ದು, 2022ರ ಏಪ್ರಿಲ್ 1ರಿಂದ ಈ ನಿಯಮ ಜಾರಿಗೆ ಬರಲಿದೆ.

ಹಳೆ ವಾಹನಗಳ ನೋಂದಣಿ ನವೀಕರಣ ಶುಲ್ಕ 8 ಪಟ್ಟು ಹೆಚ್ಚಳ: ಏಪ್ರಿಲ್ 1ರಿಂದ ನಿಯಮ ಜಾರಿ

ದ್ವಿಚಕ್ರ ವಾಹನಗಳ ನೋಂದಣಿ ನವೀಕರಣ ದರ 300 ರೂ.ನಿಂದ 1000 ರೂ.ಗೆ ಏರಿಕೆಯಾಗಲಿದೆ. 15 ವರ್ಷ ಮೇಲ್ಪಟ್ಟ ಬಸ್, ಟ್ರಕ್‌ಗಳಿಗೆ ಫಿಟ್‌ನೆಸ್ ಪ್ರಮಾಣ ಪತ್ರ ನವೀಕರಣ ಶುಲ್ಕ 1,500 ರೂ.ನಿಂದ 12,500 ರೂ.ಗೆ ಹೆಚ್ಚಳ ಆಗಲಿದೆ. ಜೊತೆಗೆ 15 ವರ್ಷ ಹಳೆಯ ವಾಹನಗಳ ಬಳಕೆಯನ್ನು ಮುಂದುವರೆಸಿದರೆ 5 ವರ್ಷಗಳಿಗೆ ಒಮ್ಮೆ ನೋಂದಣಿ ನವೀಕರಿಸಬೇಕು.

ಹಳೆ ವಾಹನಗಳ ನೋಂದಣಿ ನವೀಕರಣ ಶುಲ್ಕ 8 ಪಟ್ಟು ಹೆಚ್ಚಳ: ಏಪ್ರಿಲ್ 1ರಿಂದ ನಿಯಮ ಜಾರಿ

ವಾಣಿಜ್ಯ ವಾಹನಗಳಿಗೆ 8 ವರ್ಷಗಳಿಗೆ ಒಮ್ಮೆ ಫಿಟ್‌ನೆಸ್ ಪ್ರಮಾಣ ನವೀಕರಸಬೇಕು ಎಂದು ಕೇಂದ್ರ ಹೆದ್ದಾರಿ ಸಚಿವಾಲಯ ತಿಳಿಸಿದೆ. ಇನ್ನು ಖಾಸಗಿ ವಾಹನಗಳ ನೋಂದಣಿ ನವೀಕರಣದಲ್ಲಿ ವಿಳಂಬವಾದರೆ ಪ್ರತಿ ತಿಂಗಳೂ 300ರೂ. ಮತ್ತು ವಾಣಿಜ್ಯ ವಾಹನಗಳಿಗೆ 500 ರೂಪಾಯಿ ದಂಡಕ್ಕೆ ಆಹ್ವಾನ ನೀಡಲಿದೆ. ಹಾಗೆಯೇ ವಾಣಿಜ್ಯ ವಾಹನಗಳ ಫಿಟ್‌ನೆಸ್ ಪ್ರಮಾಣ ಪತ್ರ ನವೀಕರಣ ವಿಳಂಬವಾದರೆ ಪ್ರತಿ ದಿನ 50ರೂ. ದಂಡ ಬೀಳಲಿದೆ.

ಹಳೆ ವಾಹನಗಳ ನೋಂದಣಿ ನವೀಕರಣ ಶುಲ್ಕ 8 ಪಟ್ಟು ಹೆಚ್ಚಳ: ಏಪ್ರಿಲ್ 1ರಿಂದ ನಿಯಮ ಜಾರಿ

ಆಮದು ಕಾರುಗಳ ನೋಂದಣಿಯನ್ನು ನವೀಕರಿಸಲು ಪ್ರಸ್ತುತ ಕೇವಲ 5,000 ರೂ.ಗಳನ್ನು ಶುಲ್ಕವಾಗಿ ಸಂಗ್ರಹಿಸಲಾಗುತ್ತಿದೆ. ಆದರೆ ಏಪ್ರಿಲ್ 1ರಿಂದ ಈ ಕಾರುಗಳ ನೋಂದಣಿಯನ್ನು ನವೀಕರಿಸಬೇಕಾದರೆ 40,000 ರೂ.ಗಳ ಶುಲ್ಕ ಪಾವತಿಸಬೇಕಾಗುತ್ತದೆ. ಅಲ್ಲದೇ ವಿದೇಶದಿಂದ ಆಮದಾಗುವ ದ್ವಿಚಕ್ರ ವಾಹನಗಳ ನೋಂದಣಿಯನ್ನು ನವೀಕರಿಸುವ ಶುಲ್ಕವೂ ಹೆಚ್ಚಾಗಲಿದೆ.

ಹಳೆ ವಾಹನಗಳ ನೋಂದಣಿ ನವೀಕರಣ ಶುಲ್ಕ 8 ಪಟ್ಟು ಹೆಚ್ಚಳ: ಏಪ್ರಿಲ್ 1ರಿಂದ ನಿಯಮ ಜಾರಿ

ಸದ್ಯ ಆಮದು ಮಾಡಿಕೊಂಡ ದ್ವಿಚಕ್ರ ವಾಹನಗಳಿಗೆ ಶುಲ್ಕವಾಗಿ ಕೇವಲ 2,500 ರೂ.ಗಳನ್ನು ಮಾತ್ರ ಸಂಗ್ರಹಿಸಲಾಗುತ್ತಿದೆ. ಆದರೆ ಏಪ್ರಿಲ್ 1ರಿಂದ 10,000 ರೂ.ಶುಲ್ಕ ಪಾವತಿಸಬೇಕಾಗುತ್ತದೆ. 15 ವರ್ಷಕ್ಕಿಂತ ಹಳೆಯ ವಾಹನಗಳ ನೋಂದಣಿ ನವೀಕರಣ ವಿಳಂಬವಾದಲ್ಲಿ ತಿಂಗಳಿಗೆ 300ರೂ ದಂಡ ವಿಧಿಸಲಾಗುತ್ತದೆ.

ಹಳೆ ವಾಹನಗಳ ನೋಂದಣಿ ನವೀಕರಣ ಶುಲ್ಕ 8 ಪಟ್ಟು ಹೆಚ್ಚಳ: ಏಪ್ರಿಲ್ 1ರಿಂದ ನಿಯಮ ಜಾರಿ

ಆದರೆ ದೇಶ ರಾಜಧಾನಿ ದೆಹಲಿಗೆ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ. ದೆಹಲಿಯಲ್ಲಿ 15 ವರ್ಷಗಳ ಪೆಟ್ರೋಲ್ ವಾಹನಗಳು ಮತ್ತು 10 ವರ್ಷಗಳ ಡೀಸೆಲ್ ವಾಹನಗಳ ನೋಂದಣಿಯನ್ನು ಡಿನೋಜಿಸ್ಟ್ರೇಶನ್ ಮಾಡಿರುವುದು ಇದಕ್ಕೆ ಕಾರಣವಾಗಿದೆ. ಸ್ಪಷ್ಟವಾಗಿ ಹೇಳುವುದಾದರೆ, ದೆಹಲಿ ಸಾರಿಗೆ ಇಲಾಖೆಯು 15 ವರ್ಷ ಅಥವಾ ಅದಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳಿಗೆ ಯಾವುದೇ ಎನ್‌ಒಸಿ ನೀಡುವುದಿಲ್ಲವೆಂದು ಹೇಳಿದೆ.

ಹಳೆ ವಾಹನಗಳ ನೋಂದಣಿ ನವೀಕರಣ ಶುಲ್ಕ 8 ಪಟ್ಟು ಹೆಚ್ಚಳ: ಏಪ್ರಿಲ್ 1ರಿಂದ ನಿಯಮ ಜಾರಿ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಈಗಾಗಲೇ ದೆಹಲಿ - ಎನ್‌ಸಿಆರ್‌ನಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ಹಾಗೂ 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನಗಳ ನೋಂದಣಿ ಹಾಗೂ ಸಂಚಾರ ಓಡಾಟದ ನಿಷೇಧಕ್ಕೆ ಸಂಬಂಧಿಸಿದಂತೆ ಈ ಹಿಂದಯೇ ನಿರ್ದೇಶನಗಳನ್ನು ನೀಡಿತ್ತು.

ಹಳೆ ವಾಹನಗಳ ನೋಂದಣಿ ನವೀಕರಣ ಶುಲ್ಕ 8 ಪಟ್ಟು ಹೆಚ್ಚಳ: ಏಪ್ರಿಲ್ 1ರಿಂದ ನಿಯಮ ಜಾರಿ

ಈ ಹಿನ್ನೆಲೆಯಲ್ಲಿ ದೆಹಲಿ ಎನ್‌ಸಿ‌ಆರ್ ಪ್ರದೇಶದಲ್ಲಿ ಈ ವಾಹನಗಳನ್ನು ಚಾಲನೆ ಮಾಡುವುದನ್ನು ಕಾನೂನು ಬಾಹಿರವೆಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2016ರ ಜುಲೈನಲ್ಲಿ ನೀಡಿದ್ದ ನಿರ್ದೇಶನವನ್ನು ರಾಷ್ಟ್ರ ರಾಜಧಾನಿಯಲ್ಲಿ ವಾಹನ ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡಲು ಜಾರಿಗೊಳಿಸಲಾಗಿದೆ.

ಹಳೆ ವಾಹನಗಳ ನೋಂದಣಿ ನವೀಕರಣ ಶುಲ್ಕ 8 ಪಟ್ಟು ಹೆಚ್ಚಳ: ಏಪ್ರಿಲ್ 1ರಿಂದ ನಿಯಮ ಜಾರಿ

ದೆಹಲಿ ಸರ್ಕಾರವು ಇ-ವಾಹನ ಕಿಟ್‌ಗಳೊಂದಿಗೆ ಹಳೆಯ ಡೀಸೆಲ್ ಹಾಗೂ ಪೆಟ್ರೋಲ್ ವಾಹನಗಳನ್ನು ಮರುಹೊಂದಿಸಲು ಅವಕಾಶ ನೀಡುವುದಾಗಿ ತಿಳಿಸಿತ್ತು. ಹಳೆ ವಾಹನಗಳ ಮಾಲೀಕರು ತಮ್ಮ ಹಳೆ ಪೆಟ್ರೋಲ್ ಅಥವಾ ಡೀಸೆಲ್ ವಾಹನಗಳಲ್ಲಿ ಅಳವಡಿಸಲು ಎಲೆಕ್ಟ್ರಿಕ್ ಕಿಟ್‌ಗಳನ್ನು ದೆಹಲಿ ಸಾರಿಗೆ ಇಲಾಖೆಯಿಂದ ಅನುಮೋದಿಸಲಾದ ಏಜೆನ್ಸಿಗಳ ಮೂಲಕ ಪಡೆಯಬಹುದು.

ಹಳೆ ವಾಹನಗಳ ನೋಂದಣಿ ನವೀಕರಣ ಶುಲ್ಕ 8 ಪಟ್ಟು ಹೆಚ್ಚಳ: ಏಪ್ರಿಲ್ 1ರಿಂದ ನಿಯಮ ಜಾರಿ

ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗಲು ಬಯಸದೇ ಇರುವ ವಾಹನ ಮಾಲೀಕರು ತಮ್ಮ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಬೇಕಾಗುತ್ತದೆ. ದೆಹಲಿ ಸಾರಿಗೆ ಇಲಾಖೆ ಹಾಗೂ ದೆಹಲಿ ಸಂಚಾರಿ ಪೊಲೀಸರ ತಂಡಗಳು ಈಗಾಗಲೇ ಹಳೆಯ ವಾಹನಗಳನ್ನು ವಶಪಡಿಸಿಕೊಳ್ಳುತ್ತಿದ್ದು, ಅವುಗಳನ್ನು ಅಧಿಕೃತ ಮಾರಾಟಗಾರರ ಮೂಲಕ ಸ್ಕ್ರ್ಯಾಪ್‌ಗೆ ಕಳುಹಿಸುತ್ತಿವೆ.

ಹಳೆ ವಾಹನಗಳ ನೋಂದಣಿ ನವೀಕರಣ ಶುಲ್ಕ 8 ಪಟ್ಟು ಹೆಚ್ಚಳ: ಏಪ್ರಿಲ್ 1ರಿಂದ ನಿಯಮ ಜಾರಿ

ಆದ್ದರಿಂದ ಅಲ್ಲಿ ಹಳೆಯ ವಾಹನಗಳ ನೋಂದಣಿಯನ್ನು ನವೀಕರಿಸಲು ಸಾಧ್ಯವಿಲ್ಲ. ಈ ಕಾರಣದಿಂದಲೇ ದೆಹಲಿಯಲ್ಲಿ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ. ಆದರೆ ಭಾರತದ ಇತರ ಭಾಗಗಳಲ್ಲಿ, 15 ವರ್ಷಗಳಿಗಿಂತ ಹಳೆಯ ಪೆಟ್ರೋಲ್ ವಾಹನಗಳು ಮತ್ತು 10 ವರ್ಷಗಳ ಡೀಸೆಲ್ ವಾಹನಗಳ ನೋಂದಣಿಯನ್ನು ನವೀಕರಿಸಿ ಬಳಸಬಹುದು.

ಹಳೆ ವಾಹನಗಳ ನೋಂದಣಿ ನವೀಕರಣ ಶುಲ್ಕ 8 ಪಟ್ಟು ಹೆಚ್ಚಳ: ಏಪ್ರಿಲ್ 1ರಿಂದ ನಿಯಮ ಜಾರಿ

ಹಳೆಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ಗಾಳಿಯನ್ನು ಹೆಚ್ಚು ಕಲುಷಿತಗೊಳಿಸುತ್ತವೆ. ಆದ್ದರಿಂದ ಸರ್ಕಾರವು ನೋಂದಣಿ ನವೀಕರಣದ ಶುಲ್ಕವನ್ನು ಹೆಚ್ಚಿಸುತ್ತಿದೆ, ಈ ಮೂಲಕವಾದರೂ ಜನರು ಅವುಗಳನ್ನು ಬಳಸುವುದನ್ನು ಕಡಿಮೆ ಮಾಡುತ್ತಾರೆ ಎಂಬುದು ಸರ್ಕಾರದ ಉದ್ದೇಶ. ಹಳೆಯ ವಾಹನಗಳ ನೋಂದಣಿ ನವೀಕರಣದ ದರ ಹೆಚ್ಚಳವನ್ನು ಈ ಕ್ರಮಗಳ ಭಾಗವಾಗಿಯೂ ಕಾಣಬಹುದು. ಭಾರತ ಸರ್ಕಾರವು ಈಗ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳನ್ನು ಜನಪ್ರಿಯಗೊಳಿಸಲು ಪ್ರಯತ್ನಗಳನ್ನು ಮಾಡುತ್ತಿದೆ. ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ತುಂಬಾ ಆಸಕ್ತಿ ತೋರುತ್ತಿವೆ.

Most Read Articles

Kannada
English summary
Vehicle registration renewal fee to be hiked from april 1 here are all the details
Story first published: Monday, March 14, 2022, 15:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X