ಸ್ಕೂಟರ್ ಹೆಡ್‌ಲ್ಯಾಂಪ್‌ನಲ್ಲಿದ್ದ ಹಾವು ಹೊರಬಂದಿದ್ದು ಹೇಗೆ ಗೊತ್ತಾ?

ಜನಸಂಖ್ಯೆ ಹೆಚ್ಚಳದಿಂದಾಗಿ ಕಾಡುಗಳು ನಾಶವಾಗಿ, ನಗರಗಳು ಹೆಚ್ಕು ರೂಪಗೊಳ್ಳುತ್ತಿವೆ. ಇದರ ಪರಿಣಾಮವಾಗಿ ಮನುಷ್ಯ-ಪ್ರಾಣಿಗಳ ನಡುವೆ ಸಂಘರ್ಷ ಉಂಟಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಪ್ರಾಣಿಗಳ ಆವಾಸಸ್ಥಾನದ ನಷ್ಟ. ಈ ಕಾರಣಕ್ಕೆ ಕಾಡು ಪ್ರಾಣಿಗಳು ಕಾಡು ಬಿಟ್ಟು ನಗರಗಳತ್ತ ಮುಖ ಮಾಡುತ್ತವೆ.

ಸ್ಕೂಟರ್ ಹೆಡ್‌ಲ್ಯಾಂಪ್‌ನಲ್ಲಿದ್ದ ಹಾವು ಹೊರಬಂದಿದ್ದು ಹೇಗೆ ಗೊತ್ತಾ?

ಮಾನವರು ವಾಸ ಮಾಡುವ ಪ್ರದೇಶಗಳಿಗೆ ಆನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತವೆ. ಆನೆಗಳಿಗಿಂತ ಹೆಚ್ಚಾಗಿ ಹಾವುಗಳು, ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತವೆ. ಹಾವುಗಳು ಸಾಮಾನ್ಯವಾಗಿ ನೀರು ಹಾಗೂ ಖಾಲಿ ಜಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ.

ಸ್ಕೂಟರ್ ಹೆಡ್‌ಲ್ಯಾಂಪ್‌ನಲ್ಲಿದ್ದ ಹಾವು ಹೊರಬಂದಿದ್ದು ಹೇಗೆ ಗೊತ್ತಾ?

ಹಾವುಗಳು ರಾತ್ರಿ ವೇಳೆಯಲ್ಲಿ ತಂಪು ವಾತಾವರಣದಲ್ಲಿ ಹಾಗೂ ಹಗಲು ವೇಳೆಯಲ್ಲಿ ಬೆಚ್ಚಗಿರುವ ಪ್ರದೇಶದಲ್ಲಿರಲು ಬಯಸುತ್ತವೆ. ಈ ಕಾರಣಕ್ಕೆ ಮನೆಗಳ ಗದ್ದಲವಿಲ್ಲದ ಜಾಗಗಳಿಗೆ ಹೋಗುತ್ತವೆ. ಕೆಲವೊಮ್ಮೆ ಯಾವುದಾದರೂ ವಾಹನಗಳಲ್ಲಿ ನೆಲೆಸುತ್ತವೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಸ್ಕೂಟರ್ ಹೆಡ್‌ಲ್ಯಾಂಪ್‌ನಲ್ಲಿದ್ದ ಹಾವು ಹೊರಬಂದಿದ್ದು ಹೇಗೆ ಗೊತ್ತಾ?

ಇದೇ ರೀತಿಯ ಘಟನೆಯೊಂದು ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದಿದೆ. ಕರೋನಾ ವೈರಸ್ ಕಾರಣಕ್ಕೆ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿರುವ ಕಾರಣಕ್ಕೆ ಎಲ್ಲಾ ವಾಹನಗಳು ನಿಂತಲ್ಲೇ ನಿಂತಿವೆ.

ಸ್ಕೂಟರ್ ಹೆಡ್‌ಲ್ಯಾಂಪ್‌ನಲ್ಲಿದ್ದ ಹಾವು ಹೊರಬಂದಿದ್ದು ಹೇಗೆ ಗೊತ್ತಾ?

ಇಂತಹ ಸಮಯದಲ್ಲಿ ವಿಷಕಾರಿ ಹಾವೊಂದು ಹೋಂಡಾ ಆಕ್ಟಿವಾ ಸ್ಕೂಟರ್‌ನ ಹೆಡ್‌ಲ್ಯಾಂಪ್‌ನೊಳಗೆ ಸೇರಿಕೊಂಡಿದೆ. ಅದೃಷ್ಟವಶಾತ್, ಈ ಹಾವು ಯಾರಿಗಾದರೂ ಕಡಿಯುವ ಮುನ್ನವೇ ಹಾವನ್ನು ಕಂಡ ಸ್ಕೂಟರ್‌ನ ಮಾಲೀಕರು, ಹಾವು ಹಿಡಿಯುವವರನ್ನು ಕರೆಸಿ ಹಾವನ್ನು ಸುರಕ್ಷಿತವಾಗಿ ಹಿಡಿಸಿದ್ದಾರೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಸ್ಕೂಟರ್ ಹೆಡ್‌ಲ್ಯಾಂಪ್‌ನಲ್ಲಿದ್ದ ಹಾವು ಹೊರಬಂದಿದ್ದು ಹೇಗೆ ಗೊತ್ತಾ?

ಹಾವುಗಳು ವಾಹನಗಳೊಳಗೆ ಹೋಗುವುದು ಇದು ಮೊದಲ ಸಲವಲ್ಲ. ಕಾಡುಗಳು ಹತ್ತಿರವಿರುವ ಹಳ್ಳಿಗಳಲ್ಲಿ, ಇದು ಸಾಮಾನ್ಯವಾದ ಸಂಗತಿಯಾಗಿದೆ.

ಸ್ಕೂಟರ್ ಹೆಡ್‌ಲ್ಯಾಂಪ್‌ನಲ್ಲಿದ್ದ ಹಾವು ಹೊರಬಂದಿದ್ದು ಹೇಗೆ ಗೊತ್ತಾ?

ಆದರೆ, ಈ ಘಟನೆ ಹೈದರಾಬಾದ್‌ನಂತಹ ನಗರದಲ್ಲಿಯೇ ನಡೆದಿದೆ. ಸರಿಯಾದ ಸಮಯಕ್ಕೆ ಹಾವನ್ನು ಹಿಡಿಯುವುದರೊಂದಿಗೆ ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸ್ಕೂಟರ್ ಹೆಡ್‌ಲ್ಯಾಂಪ್‌ನಲ್ಲಿದ್ದ ಹಾವು ಹೊರಬಂದಿದ್ದು ಹೇಗೆ ಗೊತ್ತಾ?

ಹಾವನ್ನು ಹಿಡಿಯಲು ನೀರಿನ ಕ್ಯಾನ್‌ಗಳನ್ನು ಬಳಸಲಾಗಿದೆ. ಹಲವು ಗಂಟೆಗಳ ಹೆಣಗಾಟದ ನಂತರ ಹಾವನ್ನು ಕ್ಯಾನ್‌ನೊಳಗೆ ಸೇರಿಸಲಾಗಿದೆ. ನಂತರ ಹಾವನ್ನು ಹತ್ತಿರದಲ್ಲಿರುವ ಕಾಡಿನೊಳಗೆ ಬಿಟ್ಟಿದ್ದಾರೆ.

ಈ ಲಾಕ್‌ಡೌನ್ ಜನರನ್ನು ನಾನಾ ರೀತಿಯಲ್ಲಿ ಕಾಡುತ್ತಿದೆ. ದಿನಗೂಲಿ ನೌಕರರು ಹಾಗೂ ಕೂಲಿ ಕಾರ್ಮಿಕರು ಹೆಚ್ಚು ತೊಂದರೆಗೆ ಸಿಲುಕಿದ್ದಾರೆ. ಇದರ ಜೊತೆಗೆ ನಿಂತಿರುವ ವಾಹನದಲ್ಲಿ ಹಾವು ಸೇರಿಕೊಂಡಿರುವ ಘಟನೆ ನಡೆದಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಸ್ಕೂಟರ್ ಹೆಡ್‌ಲ್ಯಾಂಪ್‌ನಲ್ಲಿದ್ದ ಹಾವು ಹೊರಬಂದಿದ್ದು ಹೇಗೆ ಗೊತ್ತಾ?

ಈ ಘಟನೆಯು ಹೆಚ್ಚು ಕಾಲ ವಾಹನಗಳನ್ನು ಒಂದೇ ಕಡೆ ನಿಲ್ಲಿಸುವ ವಾಹನ ಚಾಲಕರಿಗೆ ಪಾಠವಾಗಿದೆ. ಒಂದೇ ಕಡೆ ಹೆಚ್ಚು ಕಾಲ ವಾಹನವನ್ನು ನಿಲ್ಲಿಸಿದರೆ ಆಗಾಗ ಆ ವಾಹನಗಳನ್ನು ಸ್ಟಾರ್ಟ್ ಮಾಡುವುದು ಒಳ್ಳೆಯದು. ಇದರ ಜೊತೆಗೆ ವಾಹನವನ್ನು ಹೊರತೆಗೆಯುವ ಮುನ್ನ ಕೂಲಂಕುಷವಾಗಿ ಪರಿಶೀಲಿಸಿದರೇ ಉತ್ತಮ.

Most Read Articles

Kannada
English summary
Venomous Cobra rescued from Honda Activa. Read in Kannada.
Story first published: Wednesday, April 15, 2020, 15:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X