ವಿಡಿಯೋ: ಹೋಂಡಾ ಆಕ್ಟಿವಾದಲ್ಲಿ ಮಗು ಮಾಡಿದ ಸಣ್ಣ ಎಡವಟ್ಟು.. ಮುಂದೇನಾಯ್ತು?

ಪ್ರತಿಯೊಬ್ಬರ ದೈನಂದಿನ ಜೀವನದಲ್ಲಿ ವಿವಿಧ ಕೆಲಸಗಳಿಗೆ ದ್ವಿಚಕ್ರ ವಾಹನಗಳು ಆಧಾರವಾಗಿವೆ. ಒಂದಲ್ಲ ಒಂದು ರೀತಿಯ ಕೆಲಸಗಳಿಗೆ ಇವು ಬೇಕೇ-ಬೇಕು. ಎಷ್ಟರ ಮಟ್ಟಿಗೆ ಬೈಕ್, ಸ್ಕೂಟರ್‌ಗಳಿಂದ ಉಪಯೋಗವಿದೆಯೋ.. ಅಷ್ಟರ ಮಟ್ಟಿಗೆ ಅಪಾಯವು ಇರುತ್ತದೆ. ಇದರಿಂದಾಗಿ ದ್ವಿಚಕ್ರ ವಾಹನಗಳನ್ನು ಓಡಿಸುವಾಗ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಸಹ ಮುಖ್ಯ.

ನಮ್ಮ ಭಾರತದಂತಹ ದೇಶದ ರಸ್ತೆಗಳಲ್ಲಿ ಸ್ಕೂಟರ್ ಅನ್ನು ವೇಗವಾಗಿ ಓಡಿಸುವುದು ತುಂಬಾ ಅಪಾಯಕಾರಿ. ಇದರಿಂದ ಪ್ರಾಣ ಹಾನಿ ಹಾಗೂ ದೊಡ್ಡ ಮಟ್ಟದ ಗಾಯಗಳಾಗಿ ಅಂಗವೈಕಲ್ಯಕ್ಕೂ ಒಳಗಾಗಬಹುದು. ಆದರೆ, ಅಲರ್ಟ್ ಇಲ್ಲದಿದ್ದರೆ ಸ್ಕೂಟರ್ ನಿಂತಾಗ ಸಾಕಷ್ಟು ಅವಘಡಗಳು ಸಂಭವಿಸಬಹುದು. ಅಂತಹದೇ ಘಟನೆಯೊಂದು ಇತ್ತೀಚಿಗೆ ನಡೆದಿದೆ. ಸೋಮವಾರ ಟ್ವಿಟರ್‌ನಲ್ಲಿ ವಿಡಿಯೋವೊಂದನ್ನು ಅಪ್‌ಲೋಡ್ ಮಾಡಲಾಗಿದ್ದು, ಅದು ಅತಿ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ವಿಡಿಯೋ: ಹೋಂಡಾ ಆಕ್ಟಿವಾದಲ್ಲಿ ಮಗು ಮಾಡಿದ ಸಣ್ಣ ಎಡವಟ್ಟು.. ಮುಂದೇನಾಯ್ತು?

ನ್ಯೂಸ್ 18 ಇಂಡಿಯಾದ ವಿಶೇಷ ವರದಿಗಾರ ವಿವೇಕ್ ಗುಪ್ತಾ ಅವರು, ವ್ಯಕ್ತಿಯೊಬ್ಬ ಮಗುವಿನೊಂದಿಗೆ ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಕುಳಿತುಕೊಂಡಿರುವಂತೆ ತೋರಿಸುವ ವಿಡಿಯೋವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ವ್ಯಕ್ತಿ ತನ್ನ ಸ್ಕೂಟರ್ ಸ್ವಿಚ್ ಆನ್ ಮಾಡಿಕೊಂಡು ತನ್ನ ಮನೆಯ ಮುಂಭಾಗ ನಿಂತಿರುವುದು ಕಾಣುತ್ತದೆ. ಕೇವಲ ಒಂದು ಸೆಕೆಂಡಿನಲ್ಲಿ ಅವರ ಮುಂದೆ ನಿಂತಿದ್ದ ಮಗು ತಿಳಿಯದೆ ಎಕ್ಸ್ಲೆಟರ್ ಅನ್ನು ತಿರುಗಿಸುತ್ತದೆ. ಇದರಿಂದ ಸ್ಕೂಟರ್ ಮುಂದೆ ಹೋಗಿದ್ದು, ಆ ವ್ಯಕ್ತಿ ದ್ವಿಚಕ್ರ ವಾಹನದಿಂದ ಹಾರಿ ಕೆಳಗೆ ಬಿದ್ದಿದ್ದಾನೆ.

ಸಿಸಿಟಿವಿ ದೃಶ್ಯಾವಳಿಗಳಿಂದ, ಮಗು ಎಕ್ಸ್ಲೆಟರ್ ತಿರುಗಿಸಲು ಪ್ರಯತ್ನಿಸುವಾಗ ಆ ವ್ಯಕ್ತಿ ತನ್ನ ಸೆಲ್ ಫೋನ್‌ನಲ್ಲಿ ಮಾತನಾಡುತ್ತಿದ್ದನು. ಆ ಕ್ಷಣದಲ್ಲಿ, ಈ ಘಟನೆ ನಡೆದಿದ್ದು ಅವಾಗ ಏನೂ ಮಾಡಲಾಗದೆ ನೆಲದ ಮೇಲೆ ಬಿದ್ದಿದ್ದಾನೆ. ಇದನ್ನು ನೋಡಿದ ತಕ್ಷಣವೇ ಹಲವಾರು ಜನರು ವ್ಯಕ್ತಿ ಮತ್ತು ಮಗುವಿನ ಸಹಾಯಕ್ಕೆ ಧಾವಿಸಿದ್ದಾರೆ. ಆದರೆ, ಮಗುವಿಗೆ ಯಾವುದೇ ದೊಡ್ಡ ಪ್ರಮಾಣದ ಗಾಯಗಳಾಗಿಲ್ಲ ಎಂದು ತೋರುತ್ತದೆಯಾದರೂ, ಆ ವ್ಯಕ್ತಿಯ ತಲೆಯ ಹಿಂಭಾಗದ ಮೇಲೆ ದೊಡ್ಡ ಮಟ್ಟದಲ್ಲಿ ತೊಂದರೆ ಆಗಿದೆ ಎಂಬಂತೆ ಕಾಣುತ್ತಿದೆ.

ಅಲ್ಲಿದ್ದ ಪ್ರತಿಯೊಬ್ಬರೂ ಆ ವ್ಯಕ್ತಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು. ಕೆಲವು ಜನರು ಅವರನ್ನು ಎತ್ತಿ ಕುಳಿತುಕೊಳ್ಳಲು ಸಹಾಯ ಮಾಡುವುದನ್ನು ಕಾಣಬಹುದು. ಬಹುಶಃ ಪ್ರಥಮ ಚಿಕಿತ್ಸೆ ನೀಡಲು ಮಹಿಳೆಯೊಬ್ಬರು ಮಗುವನ್ನು ಎತ್ತಿಕೊಂಡು ಮನೆಯೊಳಗೆ ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. 'ಮಗು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರೆ, ಅದನ್ನು ನಿಲ್ಲಿಸಿದಾಗ ತಕ್ಷಣವೇ ಆಫ್ ಮಾಡಬೇಕು. ಈ ರೀತಿ ಯಾರಿಗೂ ಆಗಬಾರದು' ಎಂದು ಈ ವಿಡಿಯೋಗೆ ಶೀರ್ಷಿಕೆ ಬರೆಯಲಾಗಿದ್ದು, ಮಹಾರಾಷ್ಟ್ರದ ಸಣ್ಣ ಜಿಲ್ಲೆ ಸಿಂಧುದುರ್ಗದಲ್ಲಿ ಈ ಘಟನೆ ನಡೆದಿದೆ.

ಸುರಕ್ಷತಾ ಮಾನದಂಡಗಳು ಇಲ್ಲಿ ಉಲ್ಲಂಘನೆಯಾಗಿರುವುದನ್ನು ನಾವು ನೋಡಬಹುದು. ಆ ವ್ಯಕ್ತಿ ಅಥವಾ ಮಗು ಹೆಲ್ಮೆಟ್ ಧರಿಸಿರಲಿಲ್ಲ. ಅದರ ಹೊರತಾಗಿ, ಮಗುವನ್ನು ಸ್ವತಃ ಸ್ಕೂಟರ್ ಮುಂದೆ ನಿಲ್ಲುವಂತೆ ಮಾಡುವುದು ತುಂಬಾ ಅಪಾಯಕಾರಿ ಸಂಗತಿ ಎಂಬುದನ್ನು ಸಹ ಮರೆಯುವಂತಿಲ್ಲ. ಮಕ್ಕಳೊಂದಿಗೆ ದ್ವಿಚಕ್ರ ವಾಹನಗಳನ್ನು ಓಡಿಸುವಾಗ ಇಂತಹ ಅಜಾಗರೂಕತೆಯಿಂದ ಉಂಟಾಗುವ ಘಟನೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು 2021ರಲ್ಲಿ ಹೊಸ ನಿಯಮಾವಳಿಗಳನ್ನು ಘೋಷಿಸಿತ್ತು.

ಮಕ್ಕಳೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದರೆ ತುಂಬಾ ಒಳ್ಳೆಯದು. ಮೊದಲನೆಯದಾಗಿ, ನೀವು ಮತ್ತು ನಿಮ್ಮ ಮಗು ಹೆಲ್ಮೆಟ್ ಧರಿಸುವ ಮೂಲಕ ಸಿದ್ಧರಾಗಿರಬೇಕು. ಮಕ್ಕಳನ್ನು ಕರೆದುಕೊಂಡು ಹೋಗಬೇಕಾದರೆ ಅವರು ಧರಿಸುವ ಬಟ್ಟೆಯು ಮುಖ್ಯವಾಗುತ್ತದೆ. ಝಿಪ್ಪರ್‌ಗಳು ಮತ್ತು ಜಿಪ್ಡ್ ಕಫ್‌ಗಳೊಂದಿಗೆ ಲೆದರ್ ಅಥವಾ ಡೆನಿಮ್ ಜಾಕೆಟ್, ಒಂದು ಜೋಡಿ ಡೆನಿಮ್ ಜೀನ್ಸ್ ಮತ್ತು ಹೈ ಆಂಕ್ಲೆ ಬೂಟುಗಳು ನಿಮ್ಮ ಮಗುವಿಗೆ ರಕ್ಷಣೆ ಒದಗಿಸುತ್ತದೆ.

ಇಷ್ಟೇ ಅಲ್ಲದೆ, ಪ್ರತಿ ಬಾರಿ ದ್ವಿಚಕ್ರ ವಾಹನದಲ್ಲಿ ತೆರಳುವ ಮೊದಲು, ನಿಮ್ಮ ಮಗುವಿಗೆ ರಸ್ತೆಯ ಸುರಕ್ಷತೆ ಖಾತ್ರಿಪಡಿಸುವ ಕೆಲವು ಅಂಶಗಳನ್ನು ನೆನಪಿಸಬೇಕು. ನೀವು ಇದನ್ನು ಮಾಡುವಾಗ ತುಂಬಾ ತಾಳ್ಮೆಯಿಂದಿರಬೇಕು. ಏಕೆಂದರೆ, ಮಕ್ಕಳು ಸಾಮಾನ್ಯವಾಗಿ ಅಂತಹ ವಿಷಯಗಳನ್ನು ಬಹಳ ಸುಲಭವಾಗಿ ಮರೆತುಬಿಡುತ್ತಾರೆ. ನೀವು ತಿರುವುಗಳನ್ನು ತೆಗೆದುಕೊಳ್ಳುವಾಗ ಅಥವಾ ಬ್ರೇಕ್ ಹಾಕಿದಾಗ ಜಾಗರೂಕರಾಗಿರಲು ಅವರನ್ನು ಕೇಳಿ. ಅಲ್ಲದೆ, ಮಕ್ಕಳನ್ನು ಬೆಲ್ಟ್‌ನಿಂದ ಭದ್ರಪಡಿಸಿದ್ದರೂ ಸಹ, ನಿಮ್ಮನ್ನು ಹಿಡಿದಿಟ್ಟುಕೊಳ್ಳಲು ಹೇಳಿರಿ.

Article Published On: Thursday, December 22, 2022, 15:06 [IST]
English summary
Video a small mistake made by a child in honda activa what happened next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+