Video: ಮೊದಲ ಕಾರು ಖರೀದಿಸಿದ ಯುವನಟಿ: ತೆಂಗಿನಕಾಯಿ ಒಡೆದು, ದೃಷ್ಟಿ ತೆಗೆದು ಸಂಭ್ರಮ..!
ಸಿನಿಮಾ ಸೆಲೆಬ್ರಿಟಿಗಳಿಂದ ಸಾಮಾನ್ಯರವರೆಗೆ ತಮ್ಮ ಮೊದಲ ಕಾರು ಖರೀದಿಸಿದಾಗ ಆಗುವ ಸಂತೋಷ ಇನ್ನೊಂದು ಹಂತದಲ್ಲಿ ಇರುತ್ತದೆ. ಅಂದಹಾಗೆ ಹಿಂದಿ, ಪಂಜಾಬಿ ಹಾಗೂ ತಮಿಳು ಚಿತ್ರಗಳಲ್ಲಿ ನಟಿಸುವ ಯುವನಟಿ ವಾಮಿಕಾ ಗಬ್ಬಿ (Wamiqa Gabbi) ಹೊಚ್ಚ ಹೊಸ ಕಾರನ್ನು ಖರೀದಿಸಿದ್ದು, ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಖುಷಿಯನ್ನು ಹಂಚಿಕೊಂಡಿದ್ದಾರೆ.
ಇತರೆ ಸಿನಿ ತಾರೆಗಳಂತೆ ವಾಮಿಕಾ ಗಬ್ಬಿ ದುಬಾರಿ ಬೆಲೆಯ ಐಷಾರಾಮಿ ಮರ್ಸಿಡಿಸ್-ಬೆನ್ಜ್ ಅಥವಾ ಬಿಎಂಡಬ್ಲ್ಯೂ ಕಾರುಗಳನ್ನು ಖರೀದಿಸಿಲ್ಲ. ಬದಲಾಗಿ ರೂ.40 ಲಕ್ಷ ಬೆಲೆಯ ಜೀಪ್ ಮೆರಿಡಿಯನ್ (Jeep Meridian) ಎಸ್‌ಯುವಿಯನ್ನು ಕೊಂಡುಕೊಂಡಿದ್ದಾರೆ. ಮುಂಬೈನ ಜೀಪ್ ಡೀಲರ್‌ಶಿಪ್‌ನಲ್ಲಿ ಕಾರನ್ನು ವಿತರಣೆ ಪಡೆದ ನಟಿ, ಕೇಕ್ ಕತ್ತರಿಸಿ, ತೆಂಗಿನಕಾಯಿ ಒಡೆದು ಪೂಜೆ ಮಾಡಿದ್ದಾರೆ. ಜೊತೆಗೆ ದೃಷ್ಟಿ ತೆಗೆದು ಸಂಭ್ರಮಿಸಿದ್ದಾರೆ.

ಈ ವಿಡಿಯೋ (Video)ವನ್ನು ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಹಚ್ಚಿಕೊಂಡಿರುವ ನಟಿ ವಾಮಿಕಾ ಗಬ್ಬಿ 'ಇದು ನನ್ನ ಜೀವನದಲ್ಲಿ ಅದ್ಬುತವಾದ ಕ್ಷಣವಾಗಿದೆ. ನನಗೆ ಹೆಚ್ಚಿನ ಪ್ರೀತಿಯನ್ನು ನೀಡಿರುವ ನನ್ನ ಪೋಷಕರು ಹಾಗೂ ಅಭಿಮಾನಿಗಳಿಗೆ ತುಂಬು ಹೃದಯದ ಕೃತಜ್ಞತೆಗಳು. ಜೀವನ ಮತ್ತು ಪ್ರೀತಿಯ ಅಮೂಲ್ಯ ಪಾಠ ಕಲಿಸಿದ ಎಲ್ಲರಿಗೂ ಧನ್ಯವಾದಗಳು. ಪ್ರೀತಿಯು ಒಂದು ಶಕ್ತಿಯಾಗಿದೆ' ಎಂದು ಶೀರ್ಷಿಕೆ ಬರೆದಿದ್ದಾರೆ.
ನಟಿ ವಾಮಿಕಾ ಗಬ್ಬಿ ಖರೀದಿಸಿರುವ ಜೀಪ್ ಮೆರಿಡಿಯನ್ ಎಸ್‌ಯುವಿ ವೆಲ್ವೆಟ್ ರೆಡ್ (velvet red) ಬಣ್ಣವನ್ನು ಹೊಂದಿದೆ. ಇದು, ಕಾರನ್ನು ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಕಳೆದ ವರ್ಷ ಭಾರತದ ಮಾರುಕಟ್ಟೆಯಲ್ಲಿ ಅದ್ದೂರಿಯಾಗಿ ಬಿಡುಗಡೆಯಾದ ಜೀಪ್ ಮೆರಿಡಿಯನ್, ಜೀಪ್ ಕಂಪಾಸ್ (Jeep Compass) ಅನ್ನೇ ಆಧರಿಸಿರುವುದು ಗಮನಾರ್ಹ ಅಂಶವಾಗಿದೆ.
ದೇಶದಲ್ಲಿ ಖರೀದಿಗೆ ದೊರೆಯುವ ಜೀಪ್ ಮೆರಿಡಿಯನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿದ್ದು, 170 PS ಗರಿಷ್ಠ ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 ಸ್ವೀಡ್ ಮ್ಯಾನುವಲ್ ಅಥವಾ 9 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ. ಜೊತೆಗೆ AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.
ಈ ಕಾರು, ಬೆಲೆಗೆ ತಕ್ಕಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 10 ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಕನೆಕ್ಟ್ದ್ ಕಾರ್ ಟೆಕ್ನಲಾಜಿ, 9 ಸ್ಪೀಕರ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಲ್ಪೈನ್-ಟ್ಯೂನ್ಡ್ ಸೌಂಡ್ ಸಿಸ್ಟಮ್, ಮಲ್ಟಿ ಜೋನ್ ಕ್ಲೇಮೇಟ್ ಕಂಟ್ರೋಲ್, ಅಂಬಿಯೇಟ್ ಲೈಟಿಂಗ್ ಸೇರಿದಂತೆ ಭರಪೂರ ಫೀಚರ್ಸ್ ಪಡೆದಿದೆ.
ಏಳು ಆಸನ ವ್ಯವಸ್ಥೆಯನ್ನು ಹೊಂದಿರುವ ಜೀಪ್ ಮೆರಿಡಿಯನ್ ಎಸ್‌ಯುವಿ ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಈ ಕಾರಿಗೆ ಟೊಯೊಟಾ ಫಾರ್ಚುನರ್, ಎಂಜಿ ಗ್ಲೋಸ್ಟರ್ ಹಾಗೂ ಸ್ಕೋಡಾ ಕುಶಾನ್ ಪ್ರತಿಸ್ಪರ್ಧಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications