Video: ಐಷಾರಾಮಿ ಬೆಂಜ್ ಕಾರು ನಿಲ್ತು.. ನೀರಿನಲ್ಲಿ ಅರ್ಧ ಮುಳುಗಿದ್ರು ಮುನ್ನುಗಿದ Ola, ಮುಂದೇನಾಯ್ತು?
ಭಾರತದಲ್ಲಿ ಓಲಾ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ದಿನದಿಂದ ದಿನಕ್ಕೆ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿವೆ. ಅದರಲ್ಲೂ ಎಸ್1 ಸರಣಿ ಸ್ಕೂಟರ್‌ಗಳಿಗೆ ಪ್ರತೇಕ ಅಭಿಮಾನಿ ಬಳಗವಿದೆ. ಇದರಿಂದಲೇ ಹಲವು ತಿಂಗಳಿಂದ ದೇಶೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಓಲಾ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.
ಇದೀಗ, ಓಲಾದ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಮತೊಮ್ಮೆ ತನ್ನ ತಾಕತ್ತನ್ನು ಸಾಬೀತುಪಡಿಸಿದೆ. ಇತ್ತೀಚೆಗೆ ಬಿಪರ್‌ಜೋಯ್ ಚಂಡಮಾರುತ ಭಾರತದ ಪೂರ್ವ ಕರಾವಳಿಗೆ ಅಪ್ಪಳಿಸಿದ ಕಾರಣ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗಿತ್ತು. ಪರಿಣಾಮ, ಕರಾವಳಿ ಸಮೀಪದ ನಗರಗಳಲ್ಲಿ ರಸ್ತೆ ತುಂಬೆಲ್ಲ ನೀರು ಹರಿದಿತ್ತು. ಅಲ್ಲಿನ ಜನರು ತೀವ್ರ ತೊಂದರೆಗೆ ಸಿಲುಕಿದ್ದರು.

ಸದ್ಯ, ಟ್ವಿಟರ್ ನಲ್ಲಿ ವಿಡಿಯೋವೊಂದು ಕಾಣಿಸಿಕೊಂಡಿದೆ. ಆದರೆ, ಯಾವ ರಾಜ್ಯಕ್ಕೆ ಸಂಬಂಧಿಸಿದೆ ಎಂಬುದು ತಿಳಿದುಬಂದಿಲ್ಲ. ರಾಷ್ಟ್ರಿಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಭಾರೀ ಮಳೆಯಿಂದ ಅದರ ತುಂಬಾ ನೀರು ಹರಿಯುತ್ತಿದೆ. ಅಲ್ಲಿ ಮುಂದೆ ಸಾಗದೇ 'ಮರ್ಸಿಡಿಸ್ ಬೆಂಜ್ ಬಿ ಕ್ಲಾಸ್' ಕಾರು ಸಿಲುಕಿಕೊಂಡಿದೆ. ಆದರೆ, ಓಲಾ ಎಸ್1 ಪ್ರೊ ಚಾಲಕ ಮಾತ್ರ ಹಿಂಭಾಗದಲ್ಲಿ ಮತ್ತೊಬ್ಬರು ಕುಳಿತ್ತಿದ್ದರೂ, ಸ್ಕೂಟರ್‌ನ್ನು ಆ ನೀರಿನಲ್ಲೂ ಲೀಲಾಜಾಲವಾಗಿ ಓಡಿಸಿದ್ದಾನೆ.
ಅಲ್ಲಿದ್ದ ಸ್ಥಳೀಯರು, ಈ ಓಲಾ ಎಸ್1 ಪ್ರೊ ಚಾಲಕನಿಗೆ ನೀರಿನಲ್ಲಿ ಸ್ಕೂಟರ್ ಚಲಿಸುವಂತೆ ಉತ್ತೇಜಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನಿಮಗೆ ಗೊತ್ತಿರಲಿ.. ಇಂಧನ ಚಾಲಿತ ವಾಹನಗಳು ಎಸ್ಹೌಸ್ಟ್ ಪೈಪ್ ಅನ್ನು ಹೊಂದಿರುತ್ತವೆ. ನೀರು ತುಂಬಿದ ರೋಡ್ ನಲ್ಲಿ ಇಂತಹ ದ್ವಿಚಕ್ರ ವಾಹನ ಅಥವಾ ಕಾರುಗಳನ್ನು ಓಡಿಸಿದರೆ, ಅದರೊಳಗೆ ನೀರು ಹೋಗಿ, ಅವು ರಸ್ತೆಯಲ್ಲಿ ನಿಲ್ಲುತ್ತವೆ.
ಆದರೆ, ಎಲೆಕ್ಟ್ರಿಕ್ ವಾಹನಗಳಿಗೆ ಅಂತಹ ಸಮಸ್ಯೆ ಇರುವುದಿಲ್ಲ. ಪ್ರಮುಖವಾಗಿ ಓಲಾ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ IP67 ಪ್ರಮಾಣೀಕೃತ ಬ್ಯಾಟರಿ ಪ್ಯಾಕ್ ಹೊಂದಿದೆ. ಇದು ವಾಟರ್ ಪ್ರೊಫ್ ಆಗಿದ್ದು, ಬ್ಯಾಟರಿಯನ್ನು ಸುರಕ್ಷಿತವಾಗಿ ಇಡುತ್ತದೆ. ಆದ್ದರಿಂದಲೇ, ರಸ್ತೆ ತುಂಬಾ ನೀರು ನಿಂತಿದ್ದರೂ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಸುಲಭವಾಗಿ ಚಲಿಸಲು ಸಾಧ್ಯವಾಯಿತು.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ, ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನ ಬಾಳಿಕೆ, ಸ್ವೀಡ್ ಹಾಗೂ ರೇಂಜ್ ಬಗ್ಗೆ ಯೂಟ್ಯೂಬರ್ ಒಬ್ಬ ಪರೀಕ್ಷಿಸಿದ ವಿಡಿಯೋಗಳು ಕಂಡುಬಂದಿದ್ದವು. ಆತ, ಓಲಾ ಎಸ್1 ಪ್ರೊ ಸ್ಕೂಟರ್ ಅನ್ನು ಸಮುದ್ರದೊಳಗೆ ಕೊಂಡೊಯ್ಯುತ್ತಾನೆ. ಅಲ್ಲಿ ಯಾವುದೇ ಅಲೆಗೂ ಜಗ್ಗದೆ, ಈ ಸ್ಕೂಟರ್ ಚಲಿಸುತ್ತದೆ. ಉಪ್ಪು ನೀರಿನಲ್ಲಿ ಮುಳುಗಿಸಿ, ಹೊರತಂದರೂ ಓಲಾ ಎಸ್1 ಪ್ರೊ ಮೊದಲಿನಂತೆ ಓಡುತ್ತದೆ.
ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಓಲಾ ಎಸ್1 ಪ್ರೊ, ರೂ.1.40 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ 4 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಸಂಪೂರ್ಣ ಚಾರ್ಜಿನಲ್ಲಿ 181 km ರೇಂಜ್ ನೀಡುತ್ತದೆ. ಕೇವಲ 2.9 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆಯಲಿದ್ದು, 116 km/h ಟಾಪ್ ಸ್ವೀಡ್ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications