ಬೆಂಗಳೂರು: ಮೆಟ್ರೊದಲ್ಲಿ ಗೋಬಿ ಮಂಚೂರಿ ತಿಂದ.. 500 ರೂಪಾಯಿ ದಂಡ!
ಬೆಂಗಳೂರಿನ (Bengaluru) ನಮ್ಮ ಮೆಟ್ರೊದಲ್ಲಿ (Namma Metro) ನಿಯಮಾವಳಿಗಳನ್ನು ಮೀರಿ ಗೋಬಿ ಮಂಚೂರಿ ಸೇವಿಸಿದ ವ್ಯಕ್ತಿಗೆ ದಂಡ ವಿಧಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆಹಾರ ಸೇವಿಸುವ ವಿಡಿಯೋ ಕಾಣಿಸಿಕೊಂಡ ನಂತರ, ಅಧಿಕಾರಿಗಳು ಈ ಕ್ರಮವನ್ನು ಕೈಗೊಂಡಿದ್ದು, ಬುದ್ದಿಹೇಳಿ ಕಳುಹಿಸಿಕೊಟ್ಟಿದ್ದಾರೆ.
ಸದ್ಯ ದಂಡ ಕಟ್ಟಿರುವ ವ್ಯಕ್ತಿಯನ್ನು ಸುನಿಲ್ ಕುಮಾರ್ ಎಂದು ಗುರುತಿಸಲಾಗಿದ್ದು, ಜಯನಗರದ ಪ್ರತಿಷ್ಠಿತ ಆಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿದೆ. ಕೆಲಸದ ನಿಮಿತ್ತ ಸಂಪಿಗೆ ರಸ್ತೆ - ಜಯನಗರ ನಡುವೆ ಮೆಟ್ರೊದಲ್ಲಿ ನಿತ್ಯ ಪ್ರಯಾಣಿಸುತ್ತಿದ್ದರೂ ಎಂಬ ವಿವರಗಳು ತಿಳಿದುಬಂದಿದೆ. ಸುನಿಲ್, ಮೆಟ್ರೊದಲ್ಲಿ ಗೋಬಿ ಮಂಚೂರಿ ತಿನ್ನುತ್ತಿರುವ ವಿಡಿಯೋವನ್ನು ಆತನ ಸ್ನೇಹಿತ ಚಿತ್ರೀಕರಿಸಿದ್ದಾನೆ.

ವಿಡಿಯೋದಲ್ಲಿ ರೆಕಾರ್ಡ್ ಆಗಿರುವ ಧ್ವನಿ ಬಹುಶಃ ಆತನ ಸ್ನೇಹಿತನದ್ದು ಇರಬೇಕು. 'ಮೆಟ್ರೊದಲ್ಲಿ ಏನು ತಿನ್ನಬಾರದು ಅಂತ ಹೇಳುತ್ತಾರೆ. ಆದರೆ, ಈತ ಅಶಿಕ್ಷಿತ ಹೊರಗಿನ ಆಹಾರ ತಂದು ತಿನ್ನುತ್ತಿದ್ದಾನೆ' ಎಂದು ತಮಾಷೆಯಾಗಿ ಹೇಳಿದ್ದಾರೆ. ನಂತರ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಬಿಎಂಆರ್‌ಸಿಎಲ್ ಸಿಬ್ಬಂದಿ, ಮಂಗಳವಾರ ಗೋಬಿ ತಿಂದ ವ್ಯಕ್ತಿ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ರೂ.500 ವಿಧಿಸಿದ್ದಾರೆ.
ಈ ಬಗ್ಗೆ ನಮ್ಮ ಮೆಟ್ರೋದ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಬಿಎಂಆರ್‌ಸಿಎಲ್ ಇಂತಹ ಕ್ರಮಕೈಗೊಂಡಿರುವುದು ಇದೇ ಮೊದಲು. ನಿಯಮಗಳ ಪ್ರಕಾರ, ಮೆಟ್ರೊದಲ್ಲಿ ಆಹಾರ ಸೇವಿಸಬಾರದು. ಇಂತಹ ತಪ್ಪು ಮತ್ತೆ ಮಾಡುವುದಿಲ್ಲ ಎಂದು ಆ ವ್ಯಕ್ತಿ ಭರವಸೆ ನೀಡಿದ್ದಾನೆ. ವಿವಿಧ ವಿಡಿಯೋಗಳಲ್ಲಿ ಮೆಟ್ರೊದಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುತ್ತೇವೆ. ದಯಬಿಟ್ಟು ಪ್ರಯಾಣಿಕರು ಅವುಗಳನ್ನು ಅನುಸರಿಸಿ, ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಬೇಡಿ' ಎಂದು ಹೇಳಿದ್ದಾರೆ.
ಮೆಟ್ರೊ ರೈಲು ಮತ್ತು ನಿಲ್ದಾಣದ ಎಸ್ಕಲೇಟರ್‌ನಲ್ಲಿ ಮೂರ್ಛೆ ಬಂದಂತೆ ಪ್ರ್ಯಾಂಕ್ ಮಾಡಿದ ಯುಟ್ಯೂಬರ್, ವಿರುದ್ಧ ಬೆಂಗಳೂರಿನ ಗೋವಿಂದರಾಜ ನಗರ ಠಾಣೆಯಲ್ಲಿ ಬಿಎಂಆರ್‌ಸಿಎಲ್ ದೂರಿನ್ವಯ ಕೇಸ್ ದಾಖಲಾಗಿದೆ. ಆರೋಪಿ ಪತ್ತೆ ಮಾಡುವ ಕೆಲಸದಲ್ಲಿ ಪೊಲೀಸರು, ನಿರತರಾಗಿದ್ದಾರೆ. ಯುಟ್ಯೂಬರ್ ತನ್ನ ಪ್ರ್ಯಾಂಕ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾನೆ.
ಆತನ ಹೆಸರು 'ಪ್ರ್ಯಾಂಕ್ ಪ್ರಜ್ಜು' ಎಂದು ಗೊತ್ತಾಗಿದೆ. ವಿಜಯನಗರದಿಂದ ಮೆಜೆಸ್ಟಿಕ್‌ಗೆ ಬರುತ್ತಿದ್ದ ರೈಲಿನಲ್ಲಿ ಮೊದಲಿಗೆ ಮೂರ್ಛೆ ಬಂದಂತೆ ಪ್ರ್ಯಾಂಕ್ ಮಾಡಿದ್ದಾನೆ. ಆ ನಂತರ ಮೆಜೆಸ್ಟಿಕ್ ನಿಲ್ದಾಣದ ಎಸ್ಕಲೇಟರ್‌ನಲ್ಲಿ ವೃದ್ದೆಯ ಮುಂದೆಯೇ ಪ್ರ್ಯಾಂಕ್ ಮಾಡಿ, ಗಾಬರಿ ಹುಟ್ಟಿದ್ದಾನೆ. ಇನ್ನು, ಕೆಲವು ತಿಂಗಳ ಹಿಂದೆ, ಮೆಟ್ರೊದಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿ, ವಿಡಿಯೋ ಮಾಡಿದ್ದ ಯುಟ್ಯೂಬರ್ ಫಿಡಿಯಾಸ್ ಪನಾಯ್‌ಟೋಯ್ ಎಂಬುವವರಿಗೆ ರೂ.500 ದಂಡ ವಿಧಿಸಲಾಗಿತ್ತು.
ನಮ್ಮ ಮೆಟ್ರೊ ಸಾರ್ವಜನಿಕ ಸಾರಿಗೆ ಆಗಿದ್ದು, ಅಲ್ಲಿ ಜನರ ಅನುಕೂಲಕ್ಕಾಗಿಯೇ ನಿಯಮಗಳನ್ನು ರೂಪಿಸಲಾಗಿರುತ್ತದೆ. ಆದರೆ, ಕೆಲವರೂ ಇವುಗಳನ್ನು ಬೇಕೆಂದು ಮುರಿಯುತ್ತಾರೆ. ಆದರೆ, ಆ ರೀತಿ ಮಾಡುವುದು ತಪ್ಪು. ನಮಗಾಗಿ ಇರುವ ಸಾರ್ವಜನಿಕ ಸೇವೆಯನ್ನು ಅಚ್ಚುಕಟ್ಟಾಗಿ ಬಳಕೆ ಮಾಡಬೇಕಾಗಿದೆ. ಈ ರೀತಿ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿಗಳಿಸಲು ಯಾವುದೇ ನಿಯಮಗಳನ್ನು ಮುರಿಯಬಾರದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications