ನಿಮ್ಮ ಚಾಲನಾ ಸಾಮರ್ಥ್ಯ ಪರೀಕ್ಷೆ ಮಾಡ್ತೀರಾ?
ರೋಚಕ ಸುದ್ದಿಗಳನ್ನು ಪ್ರಕಟಿಸುವುದರಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ನಮ್ಮ ಡ್ರೈವ್ ಸ್ಪಾರ್ಕ್ ಇಂದಿನ ಲೇಖನದ ಮೂಲಕ ಮಗದೊಂದು ಸಾಹಸ ವೀಡಿಯೋವನ್ನು ಪರಿಚಯಿಸಲಿದೆ.
ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಕಾರಾಯ್ತು, ಬೈಕಾಯ್ತು ಇನ್ನೇನು? ಹಾಗಿರುವಾಗ ನಮ್ಮ ಮುಂದೆ ಬಂದಿರುವ ವಿಷಯವೇ ಟ್ರಕ್. ಹೌದು, ಘನ ವಾಹನಗಳಲ್ಲಿ ಟ್ರಕ್‌ಗಳಿಗೆ ಬಹಳ ಪ್ರಾಮುಖ್ಯತೆಯಿದೆ.

ಅತಿ ಹೆಚ್ಚು ತೂಕದ ವಸ್ತುಗಳನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗಿಸಲು ಟ್ರಕ್‌ಗಳನ್ನು ಬಳಕೆ ಮಾಡಲಾಗುತ್ತದೆ. ಅಷ್ಟೊಂದು ಭಾರದ ಟ್ರಕ್‌ನಲ್ಲೇ ರೇಸರ್‌ವೊಬ್ಬ ತಮ್ಮ ಚಾಲನಾ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.
ಮೈಕಲ್ ಬೆಕ್ಸ್ ಎಂಬವರೇ ಈ ಸಾಧನೆ ಮೆರೆದಿದ್ದಾರೆ. ಅಂದ ಹಾಗೆ ಜರ್ಮನಿಯ ಫರ್ಸ್ಟನ್ ಅರಣ್ಯ ಪ್ರದೇಶದಲ್ಲಿ ಹಾದು ಹೋಗುತ್ತಿರುವ ರಸ್ತೆಯಲ್ಲಿ ಈ ಜಿಮ್ಖಾನಾ ಸಾಹಸ ವೀಡಿಯೋ ಚಿತ್ರಿಕರಿಸಲಾಗಿದೆ. ಹಾಗಿದ್ದರೆ ಬನ್ನಿ 1100 ಬಿಎಚ್‌ಪಿ ಉತ್ಪಾದಿಸಬಲ್ಲ ಈ ಟ್ರಕ್‌ನಲ್ಲಿ ಮೈಕಲ್ ಚಾಲನಾ ಸಾಮರ್ಥ್ಯವನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸೋಣವೇ...
<center><iframe width="100%" height="450" src="//www.youtube.com/embed/OT8Eh7BBqOQ?rel=0" frameborder="0" allowfullscreen></iframe></center>


Click it and Unblock the Notifications








