Video: ಬೈಕ್‌ನಲ್ಲಿ ತಬ್ಬಿಕೊಂಡು ಪ್ರಯಾಣಿಸಿದ ಜೋಡಿ: ಪೋಲೀಸರ ದಂಡ ನೋಡಿ ಫುಲ್ ಸುಸ್ತು..!

ಜನಸಂಚಾರಿ ರಸ್ತೆಯಲ್ಲಿ (public roads) ದ್ವಿಚಕ್ರ ವಾಹನ ಬಳಸಿಕೊಂಡು ಸಾಹಸ ಪ್ರದರ್ಶನ ಮಾಡುವುದು (Stunts) ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಅತಿವೇಗದಲ್ಲಿರುವ ಬೈಕ್‌ಗಳಲ್ಲಿ ತಬ್ಬಿಕೊಂಡು ಪ್ರಯಾಣಿಸುವ ಪ್ರವೃತ್ತಿಗಳು ಹೆಚ್ಚಾಗುತ್ತಿದೆ. ಉತ್ತರ ಪ್ರದೇಶದ ಹಾಪುರದಲ್ಲಿಯೂ ಅಂತಹದ್ದೇ ಘಟನೆಯೊಂದು ವರದಿಯಾಗಿದೆ.

ಯುವ ಜೋಡಿಗಳು, ಚಲಿಸುತ್ತಿರುವ ಬೈಕ್‌ನಲ್ಲಿ ರೋಮ್ಯಾನ್ಸ್ ಮಾಡುತ್ತಿರುವ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದಕ್ಕೆ ನೆಟ್ಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮಹಿಳೆಯೊಬ್ಬರು, ಮೋಟಾರ್ ಸೈಕಲ್ ಫ್ಯುಯೆಲ್ ಟ್ಯಾಂಕ್ ಮೇಲೆ ಕುಳಿತುಕೊಂಡು ಯುವಕನನ್ನು ತಬ್ಬಿಕೊಂಡಿದ್ದಾರೆ. ಆತ ಯಾವುದೇ ಭಯವಿಲ್ಲದೆ, ಬೈಕ್‌ ಓಡಿಸುತ್ತಿದ್ದಾನೆ. ಅವರಿಬ್ಬರೂ ಹೆಲ್ಮೆಟ್ ಧರಿಸಿಲ್ಲ. ಜೊತೆಗೆ, ಯಾವುದೇ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿಲ್ಲ.

Video: ಬೈಕ್‌ನಲ್ಲಿ ತಬ್ಬಿಕೊಂಡು ಪ್ರಯಾಣಿಸಿದ ಜೋಡಿ: ಪೋಲೀಸರ ದಂಡ ನೋಡಿ ಫುಲ್ ಸುಸ್ತು..!

ಸ್ಥಳೀಯ ಟ್ರಾಫಿಕ್ ಪೊಲೀಸರು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣ ಬಳಕೆದಾರರು ಒತ್ತಾಯಿಸಿದ್ದಾರೆ. ಈ ಘಟನೆ ಸಿಂಭೋಲಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ನಡೆದಿದೆ ಎಂದು ವರದಿಯಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು, ಆ ಜೋಡಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ರೂ. 8,000 ದಂಡ ಕಟ್ಟುವಂತೆ ಸೂಚಿಸಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡುರುವ ಹಾಪುರ ಪೊಲೀಸರು, 'ಸಿಂಭೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಜೋಡಿ, ಬೈಕ್‌ನಲ್ಲಿ ಸ್ಟಂಟ್ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಕ್ಷಣ ಗಮನ ಹರಿಸಲಾಗಿದೆ. ಮೋಟಾರು ವಾಹನ (ಎಂವಿ) ಕಾಯ್ದೆಯಡಿ ಪ್ರಕರಣ ದಾಖಲಿಸಲಿದ್ದು, ಆ ಬೈಕ್ ಮಾಲೀಕನಿಗೆ ರೂ.8000 ದಂಡ ಕಟ್ಟುವಂತೆ ತಿಳಿಸಲಾಗಿದೆ' ಎಂದು ಹೇಳಿದ್ದಾರೆ.

Video: ಬೈಕ್‌ನಲ್ಲಿ ತಬ್ಬಿಕೊಂಡು ಪ್ರಯಾಣಿಸಿದ ಜೋಡಿ: ಪೋಲೀಸರ ದಂಡ ನೋಡಿ ಫುಲ್ ಸುಸ್ತು..!

ಕೆಲವು ತಿಂಗಳ ಹಿಂದೆ, ಇದೇ ರೀತಿಯ ವಿಡಿಯೋಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ದೆಹಲಿಯ ಜೋಡಿಗಳು, ಚಲಿಸುತ್ತಿರುವ ಬೈಕ್‌ನಲ್ಲಿ ರೋಮ್ಯಾನ್ಸ್ ಮಾಡುತ್ತಿದ್ದ ವಿಡಿಯೋ ಅದಾಗಿತ್ತು. ಅಲ್ಲಿನ ಪೊಲೀಸರು, ಈ ಜೋಡಿ ಹೆಲ್ಮೆಟ್, ಲೈಸೆನ್ಸ್ ಇಲ್ಲದೇ ಅಪಾಯಕಾರಿಯಾಗಿ ವಾಹನ ಚಲಾಯಿಸಿದ್ದಕ್ಕಾಗಿ ಪ್ರಕರಣ ದಾಖಲು ಮಾಡಿ, ರೂ.11 ಸಾವಿರ ದಂಡ ವಿಧಿಸಿದ್ದರು.

ದೇಶದ ಸಾರ್ವಜನಿಕ ರಸ್ತೆಯಲ್ಲಿ ಸಾಹನ ಪ್ರದರ್ಶನ (ಸ್ಟಂಟ್) ಮಾಡುವುದು ಅಪಾಯಕಾರಿಯಾಗಿದೆ. ಇದರಿಂದ ವಾಹನ ಚಲಾಯಿಸುವವರೂ ಅಥವಾ ಇತರರ ಪ್ರಾಣಕ್ಕೂ ಹಾನಿಯಾಗಬಹುದು. ಇಲ್ಲವೇ ಗಾಯಗೊಳ್ಳಬಹುದು. ಆಗೊಮ್ಮೆ ನೀವು ಸ್ಟಂಟ್ ಮಾಡಬೇಕು ಅಂದುಕೊಂಡರೇ ನಿಮ್ಮ ಖಾಸಗಿ ಸ್ಥಳದಲ್ಲಿ ಅಥವಾ ರೇಸ್ ಟ್ರ್ಯಾಕ್ ನಲ್ಲಿ ನುರಿತ ವ್ಯಕ್ತಿಗಳ ಮಾರ್ಗದರ್ಶನದಲ್ಲಿ, ಅಗತ್ಯ ಸುರಕ್ಷತಾ ಪರಿಕರಗಳನ್ನು ಉಪಯೋಗಿಸಿ ನಡೆಸಿರಿ.

ರಸ್ತೆ ಅಪಘಾತ ತಡೆಯುವುದು ಹೇಗೆ: ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಸಂಭಾವ್ಯ ಅಪಘಾತವನ್ನು ತಪ್ಪಿಸಬಹುದು. ಇದರೊಟ್ಟಿಗೆ ಹೆದ್ದಾರಿಯಲ್ಲಿ ನಿಗದಿತ ವೇಗಮಿತಿಯಲ್ಲಿ ವಾಹನಗಳನ್ನು ಓಡಿಸಬೇಕು. ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರು ಓಡಿಸುವಾಗ ಸೀಟ್ ಬೆಲ್ಟ್ ಹಾಕುವುದನ್ನು ಮರೆಯಬೇಡಿ. ಮಧ್ಯಪಾನ ಅಥವಾ ಫೋನ್ ನಲ್ಲಿ ಮಾತನಾಡಿಕೊಂಡು ವಾಹನ ಚಲಾಯಿಸಬೇಡಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, October 11, 2023, 15:14 [IST]
English summary
Video viral couple hug riding bike police fined rs 8000
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+