Video Viral: ಮದ್ವೆ ಹೆಣ್ಣು ಮಸ್ತ್ ರೀಲ್ಸ್.. ಪೊಲೀಸರಿಂದ ದಂಡದ ಉಡುಗೊರೆ!
ಸೋಷಿಯಲ್ ಮೀಡಿಯಾ ಪ್ರಭಾವಿ ಮಾಧ್ಯಮವಾಗಿ ಬೆಳೆದು ಬಿಟ್ಟಿದ್ದು, ನಮ್ಮ ಜೀವನದ ಅವಿಭಾಗ್ಯ ಅಂಗವಾಗಿ ಮಾರ್ಪಟ್ಟಿದೆ. ಕೆಲವರಿಗೆ ತಾವು ಬೇಗ ಜನಪ್ರಿಯರಾಗಬೇಕೆಂಬ ಬಯಕೆ ಇರುತ್ತದೆ. ಅದಕ್ಕೆ ಹೊಸ ಹೊಸ ರೀಲ್ಸ್ ಮಾಡಿ, ಅಪ್ಲೋಡ್ ಮಾಡುತ್ತಿರುತ್ತಾರೆ. ಸದ್ಯ, ಅಂತಹದ್ದೇ ವಿಡಿಯೋವೊಂದು ಭಾರೀ ವೈರಲ್ ಆಗಿದೆ.
ಅಷ್ಟಕ್ಕೂ ಈ ಘಟನೆ ನಡೆದಿರುವುದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ. ಮದು ಮಗಳೊಬ್ಬಳು ಕಲ್ಯಾಣ ಮಂಟಪಕ್ಕೆ ಸ್ಕೂಟರ್ ಚಲಾಯಿಸಿಕೊಂಡು, ಹೋಗುವಾಗ ರೀಲ್ಸ್ ವಿಡಿಯೋ ಮಾಡಿದ್ದಾರೆ. ಅದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಗೊಂಡಿದೆ. ಕೆಲವೇ ಗಂಟೆಗಳಲ್ಲಿ ವಿಡಿಯೋ ಪೋಲೀಸರ ಗಮನಕ್ಕೂ ಬಂದಿದ್ದು, ಆ ಯುವತಿಗೆ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ.

ವಿಡಿಯೋದಲ್ಲಿ ಮದು ಮಗಳು ಆಕರ್ಷಕ ಉಡುಗೆಯೊಂದಿಗೆ ದೇವತೆಯರನ್ನೇ ನಾಚಿಸುವಂತೆ ರೆಡಿಯಾಗಿ ಸ್ಕೂಟರ್ ಓಡಿಸುತ್ತಿರುವುದನ್ನು ಕಾಣಬಹುದು. ಆದರೆ, ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಆಕೆಗೆ ಬರೋಬ್ಬರಿ ರೂ.6,000 ದಂಡ ವಿಧಿಸಿದ್ದಾರೆ. ಅದರಲ್ಲಿ ಹೆಲ್ಮೆಟ್ ಧರಿಸದೆ, ದ್ವಿಚಕ್ರ ವಾಹನ ಓಡಿಸಿದ್ದಕ್ಕಾಗಿ ರೂ.1000 ಹಾಗೂ ಪರವಾನಗಿ ಹೊಂದಿಲ್ಲದೆ ಇದ್ದ ಕಾರಣಕ್ಕೆ ರೂ.5,000 ಫೈನ್ ಹಾಕಲಾಗಿದೆ.
ಸ್ವತಃ ದೆಹಲಿ ಪೊಲೀಸರೇ ಈ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, 'ರೀಲ್‌ಗಾಗಿ ರಸ್ತೆಯಲ್ಲಿ ಈ ರೀತಿಯ ಮೂರ್ಖತನದ ಕೆಲಸವನ್ನು ಮಾಡಬೇಡಿ. ಸುರಕ್ಷತೆಯಿಂದ ವಾಹನವನ್ನು ಚಾಲನೆ ಮಾಡಿ' ಎಂದು ಹೇಳಿದ್ದಾರೆ. ನೆಟ್ಟಿಗರು ಕೂಡ ದೆಹಲಿ ಪೊಲೀಸರ ಕ್ರಮವನ್ನು ಶ್ಲಾಘಿಸಿದ್ದು, 'ಪೊಲೀಸರು ನಿಜಕ್ಕೂ ಉತ್ತಮ ಕೆಲಸ ಮಾಡಿದ್ದಾರೆ' ಎಂದು ಕಾಮೆಂಟ್ ಮಾಡಿದ್ದಾರೆ.
ಚಾಲನಾ ಪರವಾನಿಗೆ (Driving Licence) ಇಲ್ಲದೆ, ದ್ವಿಚಕ್ರ ಸೇರಿದಂತೆ ಯಾವುದೇ ವಾಹನಗಳನ್ನು ಓಡಿಸುವುದು ಭಾರತದಲ್ಲಿ ಕಾನೂನು ಬಾಹಿರವಾಗಿದೆ. ಒಂದು ವೇಳೆ ವಾಹನ ಚಲಾಯಿಸುವವರೂ ಅಪ್ರಾಪ್ತ ವಯಸ್ಕನಾಗಿದ್ದರೆ, ಸಂಬಂಧಪಟ್ಟ ಅಧಿಕಾರಿಗಳು, ಅವರಿಗೆ ವಾಹನವನ್ನು ಓಡಿಸಲು ಅವಕಾಶಕೊಟ್ಟ ಪೋಷಕರ ವಿರುದ್ಧ ಪ್ರಕರಣ ದಾಖಲಿಸಬಹುದು. ಅದರಲ್ಲೂ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ರಹಿತ ಚಾಲನೆ ಅಪಾಯಕಾರಿಯಾಗಿದೆ.
ಯಾರೇ ಆಗಲಿ ರಸ್ತೆಯಲ್ಲಿ ವಾಹನ ಚಲಾಯಿಸಬೇಕಾದರೆ, ಸಂಚಾರಿ ನಿಯಮಗಳನ್ನು ಪಾಲಿಸಿಕೊಂಡು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ದ್ವಿಚಕ್ರ ವಾಹನಗಳನ್ನು ಓಡಿಸುವ ಹೆಲ್ಮೆಟ್ ಧರಿಸಬೇಕು. ಕಾರುಗಳನ್ನು ಚಲಾಯಿಸುವಾಗ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಫೋನ್ ನಲ್ಲಿ ಮಾತನಾಡಿಕೊಂಡು ಅಥವಾ ಮದ್ಯಪಾನ ಮಾಡಿ ವಾಹನಗಳನ್ನು ಓಡಿಸಬಾರದು. ರಸ್ತೆಯಲ್ಲಿ ನಿಗದಿತ ವೇಗದ ಮಿತಿಯಲ್ಲಿಯೇ ಬೈಕ್, ಕಾರುಗಳನ್ನು ಚಲಾಯಿಸಬೇಕು.
ಇನ್ನು, ದೆಹಲಿಯ ಈ ಘಟನೆಯನ್ನು ನೋಡುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿಗಳಿಸಲು ಮದು ಮಗಳೊಬ್ಬಳು ಕಲ್ಯಾಣ ಮಂಟಪಕ್ಕೆ ಸ್ಕೂಟರ್ ಚಲಾಯಿಸಿಕೊಂಡು ಹೋಗುವಾಗ ರೀಲ್ಸ್ ವಿಡಿಯೋ ಮಾಡಿದ್ದಾರೆ. ಇದು ಅವರಿಗೆ ಬಿಟ್ಟ ವಿಚಾರ. ಆದರೆ, ಸಂಚಾರಿ ನಿಯಮ ಉಲ್ಲಂಘಿಸಿರುವುದು ಎಷ್ಟರ ಮಟ್ಟಿಗೆ ಸರಿ. ಅಪಘಾತವಾಗಿದ್ದರೆ ಯಾರು ಹೊಣೆ ಎಂಬ ಪ್ರಶ್ನೆಗಳು ಕಾಡುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications