ನಟ ವಿಜಯ್ ದೇವರಕೊಂಡ ಬಳಿಯಿವೆ 5 ಐಷಾರಾಮಿ ಕಾರುಗಳು: ಮುಸ್ತಾಂಗ್ ಅವರ ಫೇವರೆಟ್

'ಗೀತ ಗೋವಿಂದಂ' ಮತ್ತು 'ಅರ್ಜುನ್ ರೆಡ್ಡಿ' ಚಿತ್ರಗಳ ಮೂಲಕ ತೆಲುಗು ಭಾಷಿಗರನ್ನು ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಭಾಷೆಯ ಚಿತ್ರಗಳ ಅಭಿಮಾನಿಗಳನ್ನೂ ಮೆಚ್ಚಿಸಿದ ನಟ ವಿಜಯ್ ದೇವರಕೊಂಡ, ತಮ್ಮ ಅದ್ಬುತ ಅಭಿನಯದಿಂದ ಈಗ ಲಕ್ಷಾಂತರ ಜನರನ್ನು ತಮ್ಮ ಕಟ್ಟಾ ಅಭಿಮಾನಿಗಳನ್ನಾಗಿ ಮಾಡಿಕೊಂಡಿದ್ದಾರೆ.

ನಟ ವಿಜಯ್ ದೇವರಕೊಂಡ ಬಳಿಯಿವೆ 5 ಐಷಾರಾಮಿ ಕಾರುಗಳು: ಮುಸ್ತಾಂಗ್ ಅವರ ಫೇವರೆಟ್

ಅದರಲ್ಲೂ ಮುಖ್ಯವಾಗಿ ಸಾಕಷ್ಟು ಮಹಿಳಾ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ನಟನಿಗೆ ವಾಹನಗಳ ವ್ಯಾಮೋಹ ಹೆಚ್ಚು. ಅವರ ಬಳಕೆಯಲ್ಲಿರುವ ಸೂಪರ್ ಮತ್ತು ಐಷಾರಾಮಿ ಕಾರುಗಳನ್ನು ನೋಡಿದರೆ, ಅವರು ದೊಡ್ಡ ಕಾರು ಪ್ರೇಮಿ ಎಂದೇ ಹೇಳತ್ತೀರಿ. ಈ ಲೇಖನದಲ್ಲಿ ಅವರು ಬಳಸುತ್ತಿರುವ ಕಾರು ಮಾದರಿಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ನಟ ವಿಜಯ್ ದೇವರಕೊಂಡ ಬಳಿಯಿವೆ 5 ಐಷಾರಾಮಿ ಕಾರುಗಳು: ಮುಸ್ತಾಂಗ್ ಅವರ ಫೇವರೆಟ್

ಫೋರ್ಡ್ ಮುಸ್ತಾಂಗ್

ಅನೇಕ ಕಾರು ಪ್ರೇಮಿಗಳ ನೆಚ್ಚಿನ ಮಾದರಿ ಫೋರ್ಡ್ ಮಸ್ಟಾಂಗ್. ಇದು ಹೆವಿ ಪರ್ಫಾಮೆನ್ಸ್ ಹೊಂದಿರುವ ಸೂಪರ್ ಕಾರಾಗಿದ್ದು, ಇದಕ್ಕೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಅದರಲ್ಲಿ ವಿಜಯ್ ದೇವರಕೊಂಡ ಕೂಡ ಒಬ್ಬರಾಗಿದ್ದು ಸದ್ಯ ಈ ಕಾರನ್ನು ಬಳಸುತ್ತಿದ್ದಾರೆ. ಈ ಹಿಂದೆ ವಿಜಯ್ ಅವರು ಸಂದರ್ಶನವೊಂದರಲ್ಲಿ ತಮ್ಮ ನೆಚ್ಚಿನ ಕಾರ್‌ ಮಸ್ಟಾಂಗ್ ಎಂದು ಹೇಳಿಕೊಂಡಿದ್ದರು.

ನಟ ವಿಜಯ್ ದೇವರಕೊಂಡ ಬಳಿಯಿವೆ 5 ಐಷಾರಾಮಿ ಕಾರುಗಳು: ಮುಸ್ತಾಂಗ್ ಅವರ ಫೇವರೆಟ್

ವರದಿಗಳ ಪ್ರಕಾರ, ಅವರು ಹೊಂದಿರುವ ಮಸ್ಟಾಂಗ್ ಸುಮಾರು 75 ಲಕ್ಷ ರೂ. ಇದ್ದು, ಈ ಕಾರು 5.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಗರಿಷ್ಠ 363 bhp ಮತ್ತು 515 Nm ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದ್ದು, ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಕಾರಿಗೆ ಜೋಡಿಸಲಾಗಿದೆ.

ನಟ ವಿಜಯ್ ದೇವರಕೊಂಡ ಬಳಿಯಿವೆ 5 ಐಷಾರಾಮಿ ಕಾರುಗಳು: ಮುಸ್ತಾಂಗ್ ಅವರ ಫೇವರೆಟ್

ಇವೆರಡೂ ಸೇರಿ ಮಸ್ಟಾಂಗ್ ಕಾರನ್ನು ಹೆಚ್ಚಿನ ಸಾಮರ್ಥ್ಯದ ಎಕ್ಸಾಸ್ಟ್ ವಾಹನವನ್ನಾಗಿ ಪರಿವರ್ತಿಸಿವೆ. ಈ ಸಾಮರ್ಥ್ಯದಿಂದಾಗಿಯೇ ಹಲವರು ಈ ಕಾರನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅಲ್ಲದೇ ಅಡ್ವೆಂಚರ್ ರೈಡ್‌ಗಳಿಗಾಗಿ ಹೆಚ್ಚಾಗಿ ಬಳಸುತ್ತಾರೆ.

ನಟ ವಿಜಯ್ ದೇವರಕೊಂಡ ಬಳಿಯಿವೆ 5 ಐಷಾರಾಮಿ ಕಾರುಗಳು: ಮುಸ್ತಾಂಗ್ ಅವರ ಫೇವರೆಟ್

Mercedes Benz GLC

ವರದಿಗಳ ಪ್ರಕಾರ, ನಟ ವಿಜಯ್ ದೇವರಕೊಂಡ ಅವರು Mercedes Benz GLC ಕಾರನ್ನು ಹೆಚ್ಚಾಗಿ ಬಳಸುತ್ತಾರೆ. ಹೈದರಾಬಾದ್‌ನ ರಸ್ತೆಗಳಲ್ಲಿ ಈ ಕಾರಿನಲ್ಲಿ ಅವರು ಅಡ್ಡಾಡುವುದನ್ನು ಅನೇಕರು ನೋಡಿದ್ದಾರೆ ಎಂದು ಹೇಳಲಾಗುತ್ತದೆ. ಈ ಕ್ಲಾಸಿಕ್ ಬೆಂಝ್ ಕಾರಿನ ಮೌಲ್ಯ 60 ಲಕ್ಷ ರೂ. ಇದ್ದು, ತನ್ನ ಐಷಾರಾಮಿ ವೈಶಿಷ್ಟ್ಯಗಳಿಂದೇ ಜನಪ್ರಿಯತೆ ಪಡೆದುಕೊಂಡಿದೆ.

ನಟ ವಿಜಯ್ ದೇವರಕೊಂಡ ಬಳಿಯಿವೆ 5 ಐಷಾರಾಮಿ ಕಾರುಗಳು: ಮುಸ್ತಾಂಗ್ ಅವರ ಫೇವರೆಟ್

ಬೆಂಝ್ ಜಿಎಲ್‌ಸಿ ಕ್ಲಾಸ್ ದೇವರಕೊಂಡ ಅವರ ಗ್ಯಾರೇಜ್‌ನಲ್ಲಿರುವ ಅತ್ಯಂತ ದುಬಾರಿ ಮತ್ತು ಐಷಾರಾಮಿ ಕಾರು ಮಾದರಿಗಳಲ್ಲಿ ಒಂದಾಗಿದೆ. ಇದರ ಸ್ಪೋರ್ಟಿ ಹಾಗೂ ಲಕ್ಸೂರಿ ಲುಕ್ ಆಕರ್ಷಣೀಯವಾಗಿರುತ್ತದೆ. ಇದು SUV ಮಾದರಿಯ ಕಾರಾಗಿದ್ದು ಅತ್ಯಂತ ಉದಾರವಾದ ಜಾಗವನ್ನು ನೀಡುತ್ತದೆ. ಕಾರಿನ 2021 ಆವೃತ್ತಿಯು ಮರ್ಸಿಡಿಸ್ ಮಿ ಎಂಬ ಹೊಸ ಆವೃತ್ತಿಯನ್ನು ಹೊಂದಿದೆ.

ನಟ ವಿಜಯ್ ದೇವರಕೊಂಡ ಬಳಿಯಿವೆ 5 ಐಷಾರಾಮಿ ಕಾರುಗಳು: ಮುಸ್ತಾಂಗ್ ಅವರ ಫೇವರೆಟ್

ಇದರ ಮೂಲಕ ವಾಯ್ಸ್ ಕಮಾಂಡ್ ಮೂಲಕ ಅದರ ಮಾಲೀಕರು ವಿವಿಧ ಸೌಲಭ್ಯಗಳನ್ನು ಪಡೆಯಬಹುದು. ಇದರ ಜೊತೆಗೆ, ಸರ್ಚಿಂಗ್ ಮತ್ತು ಪಾರ್ಕಿಂಗ್‌ಗಾಗಿ ನ್ಯಾವಿಗೇಷನ್ ಸಿಸ್ಟಮ್ ಅನ್ನು ಕಾರ್‌ನಲ್ಲಿ ಒದಗಿಸಲಾಗಿದೆ. ಇದರ ಜೊತೆಗೆ, ಕಾರು ಇತರ ಹಲವು ವಿಶೇಷ ತಾಂತ್ರಿಕ ವೈಶಿಷ್ಟ್ಯಗಳನ್ನು ಮತ್ತು ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿದೆ.

ನಟ ವಿಜಯ್ ದೇವರಕೊಂಡ ಬಳಿಯಿವೆ 5 ಐಷಾರಾಮಿ ಕಾರುಗಳು: ಮುಸ್ತಾಂಗ್ ಅವರ ಫೇವರೆಟ್

BMW 5-ಸಿರೀಸ್

5 ಸಿರೀಸ್ ಕಾರು ಮಾದರಿಯು BMW ನ ಪ್ರಮುಖ ಉತ್ಪನ್ನಗಳಲ್ಲಿ ಒಂದಾಗಿದೆ. ಇದು ಸೆಡಾನ್ ಆಗಿದ್ದು ರಾಯಲ್ ಪ್ರಯಾಣದ ಅನುಭವವನ್ನು ನೀಡಲು BMW ವ್ಯಾಪಕ ಶ್ರೇಣಿಯ ಐಷಾರಾಮಿ ಸೌಕರ್ಯಗಳು ಮತ್ತು ವಿಶೇಷ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ. ಅದಕ್ಕಾಗಿಯೇ ಉದ್ಯಮಿಗಳು ಈ ಕಾರಿನ ದೊಡ್ಡ ಅಭಿಮಾನಿಯಾಗಿದ್ದಾರೆ.

ನಟ ವಿಜಯ್ ದೇವರಕೊಂಡ ಬಳಿಯಿವೆ 5 ಐಷಾರಾಮಿ ಕಾರುಗಳು: ಮುಸ್ತಾಂಗ್ ಅವರ ಫೇವರೆಟ್

ಅಂದಹಾಗೆ, ನಟ ವಿಜಯ್ ದೇವರಕೊಂಡ ಕೂಡ ಈ ಕಾರಿನ ಅಭಿಮಾನಿ. ವಿಜಯ್ ಅವರು ಖರೀದಿಸಿರುವ 5 ಸಿರೀಸ್‌ನ ಐಷಾರಾಮಿ ಸೆಡಾನ್ ಬೆಲೆ ರೂ. 65 ಲಕ್ಷ ಹೆಚ್ಚು ಎನ್ನಲಾಗಿದೆ. ವಿಜಯ್ ದೇವರಕೊಂಡ ಅವರು ತಮ್ಮ ಶೂಟಿಂಗ್ ಸ್ಪಾಟ್‌ಗಳಿಗೆ ತೆರಳಲು ಹೆಚ್ಚಾಗಿ ಈ ಕಾರನ್ನು ಬಳಸುತ್ತಾರೆ. ವಿಜಯ್ ಮಾತ್ರವಲ್ಲದೆ ಇನ್ನೂ ಅನೇಕ ಸೆಲೆಬ್ರಿಟಿಗಳು ಭಾರತದಲ್ಲಿ ಈ ಕಾರನ್ನು ಬಳಸುತ್ತಿದ್ದಾರೆ.

ನಟ ವಿಜಯ್ ದೇವರಕೊಂಡ ಬಳಿಯಿವೆ 5 ಐಷಾರಾಮಿ ಕಾರುಗಳು: ಮುಸ್ತಾಂಗ್ ಅವರ ಫೇವರೆಟ್

ವೋಲ್ವೋ XC 90

ವೋಲ್ವೋ XC90 ತನ್ನನ್ನು ತಾನು ಭವ್ಯವಾಗಿ ಕಾಣುವ SUV ಕಾರು ಮಾದರಿಯಾಗಿ ಪ್ರಸ್ತುತಪಡಿಸುತ್ತದೆ. ಈ ಕಾರ್ ಹೆಚ್ಚು ವಿಶಾಲವಾದದ್ದು ಮಾತ್ರವಲ್ಲದೆ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ. ಇಷ್ಟೇ ಅಲ್ಲ, ಭದ್ರತಾ ವೈಶಿಷ್ಟ್ಯಗಳನ್ನು ಸಹ ಬಹಳ ಉದಾರವಾಗಿ ಒದಗಿಸಲಾಗಿದೆ. ಹಾಗಾಗಿ ಬೆಲೆ ಸ್ವಲ್ಪ ಜಾಸ್ತಿ. ವೋಲ್ವೋ XC90 ಬೆಲೆ 85 ಲಕ್ಷ ರೂ. ಇದೆ.

ನಟ ವಿಜಯ್ ದೇವರಕೊಂಡ ಬಳಿಯಿವೆ 5 ಐಷಾರಾಮಿ ಕಾರುಗಳು: ಮುಸ್ತಾಂಗ್ ಅವರ ಫೇವರೆಟ್

ಲ್ಯಾಂಡ್ ರೋವರ್ ರೇಂಜ್ ರೋವರ್

ಲ್ಯಾಂಡ್ ರೋವರ್ ರೇಂಜ್ ರೋವರ್ ಮಾದರಿಯು ಹೊಸ ಪೀಳಿಗೆಯನ್ನು ಆಕರ್ಷಿಸುವ ವಾಹನವಾಗಿದೆ. ಈ ಕಾರಿನ ಮೌಲ್ಯ ರೂ. 65 ಲಕ್ಷ. ಇದ್ದು, ವಿಜಯ್ ತಮ್ಮ ಐಷಾರಾಮಿ ಕಾರ್ ಟ್ರಿಪ್‌ಗಳಿಗೆ ಈ ಕಾರನ್ನು ಬಳಸುತ್ತಿದ್ದಾರೆ. ಭಾರತದ ಬಹುತೇಕ ಶ್ರೀಮಂತರು ಮತ್ತು ನಟರು ಈ ಕಾರನ್ನು ಬಳಸುತ್ತಿದ್ದಾರೆ.

Most Read Articles

Kannada
English summary
Vijay devarakonda s top five most expensive cars list
Story first published: Monday, May 9, 2022, 19:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X