Vijay Mallya: ಮುಂಬೈನಲ್ಲಿ ದರ್ಶನ ಕೊಟ್ಟ ಮದ್ಯದ ದೊರೆ ವಿಜಯ್ ಮಲ್ಯ ಕಾರು!
ಐಷಾರಾಮಿ ಜೀವನದ ಬಗ್ಗೆ ಒಲವು ಹೊಂದಿದ್ದ ಉದ್ಯಮಿ ವಿಜಯ್ ಮಲ್ಯ, ತಮ್ಮ ವಿವಿಧ ವ್ಯವಹಾರ ಉದ್ಯಮಗಳ ಮೂಲಕ ಗಮನಾರ್ಹ ಸಂಪತ್ತನ್ನು ಗಳಿಸಿದ್ದರು. ಆರ್ಥಿಕ ತೊಂದರೆಗಳಿಂದಾಗಿ 2012 ರಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸಿದ ಪ್ರಮುಖ ಭಾರತೀಯ ವಿಮಾನಯಾನ ಸಂಸ್ಥೆಯಾದ ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಅಧ್ಯಕ್ಷರೂ ಆಗಿದ್ದರು. 2016 ರಲ್ಲಿ ಮನಿ ಲಾಂಡರಿಂಗ್ ಸೇರಿದಂತೆ ವಿವಿಧ ಬ್ಯಾಂಕುಗಳಿಂದ ಪಡೆದ 9,000 ಕೋಟಿ ರೂ. ಸಾಲವನ್ನು ಮರುಪಾವತಿಸಲು ಮಲ್ಯ ವಿಫಲರಾಗಿ ದೇಶದಿಂದ ಪಲಾಯನಗೊಂಡಿದ್ದರು. ಇದೀಗ ಅವರ ಐಷಾರಾಮಿ ಕಾರೊಂದು ಮುಂಬೈನಲ್ಲಿ ಕಾಣಿಸಿಕೊಂಡಿದೆ.
ಭಾರತದಲ್ಲಿ "ಕಿಂಗ್ ಆಫ್ ಗುಡ್ ಟೈಮ್ಸ್" ಎಂದು ಕರೆಸಿಕೊಂಡಿದ್ದ ಅವರು, ಅತಿರಂಜಿತ ಜೀವನಶೈಲಿ ಮತ್ತು ಐಷಾರಾಮಿ ಕಾರುಗಳು, ಭವನಗಳಿಂದಲೇ ಫೇಮಸ್ ಆಗಿದ್ದರು. ಇಂದು, ಅವರು ಭಾರತದಲ್ಲಿ ವಾಸಿಸುತ್ತಿಲ್ಲವಾದರೂ, ಅವರು ಬಳಸಿದ ಒಂದಷ್ಟು ವಸ್ತುಗಳು ಆಗಾಗ್ಗೆ ಸದ್ದು ಮಾಡುತ್ತವೆ. ಇತ್ತೀಚೆಗೆ, ಈ ಹಿಂದೆ ಅವರ ಒಡೆತನದಲ್ಲಿದ್ದ ಫೆರಾರಿ 328 ಜಿಟಿಎಸ್ ಟಾರ್ಗಾ ಐಷಾರಾಮಿ ಕಾರು ಕಾಣಿಸಿಕೊಂಡು ಅಚ್ಚರಿಗೊಳಿಸಿದೆ.

ಮುಂಬೈನ ಸಂಗ್ರಾಮ್ ಸಿನ್ಹ ಪ್ರತಾಪ್ ಸಿಂಗ್ ಗಾಯಕ್ವಾಡ್ ಅವರ ನಿವಾಸದಲ್ಲಿ ಈ ಕಾರು ಕಾಣಿಸಿಕೊಂಡಿದೆ. ಮೂಲಗಳ ಪ್ರಕಾರ ವಿಜಯ್ ಮಲ್ಯಗೆ ಸೇರಿದ್ದ ಈ ಫೆರಾರಿ 328 ಜಿಟಿಎಸ್ ಕಾರನ್ನು ಪ್ರತಾಪ್ ಸಿಂಗ್ ಗಾಯಕ್ವಾಡ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪ್ರತಾಪ್ ಸಿಂಗ್ ಗಾಯಕ್ವಾಡ್ ಈ ಸೂಪರ್ ಕಾರನ್ನು ಚಾಲನೆ ಮಾಡುತ್ತಿರುವುದು ಕಂಡುಬಂದಿದೆ.
ಯಾರೀತ?: ಭಾರತದ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಮತ್ತು ಕ್ರಿಕೆಟ್ ತರಬೇತುದಾರ ಪ್ರತಾಪ್ ಸಿಂಗ್ ಗಾಯಕ್ವಾಡ್, ಬರೋಡಾದ ಗಾಯಕ್ವಾಡ್ ರಾಜವಂಶದ ಸದಸ್ಯರಾಗಿದ್ದಾರೆ. ಇವರು ಕಾರು ಉತ್ಸಾಹಿಯಾಗಿದ್ದು, ಫೆರಾರಿ 328 ಜಿಟಿಎಸ್ ಜೊತೆಗೆ, ಹಲವಾರು ವಿಲಕ್ಷಣ ಮತ್ತು ಅಪರೂಪದ ಐಷಾರಾಮಿ ಮತ್ತು ಸೂಪರ್ ಕಾರುಗಳನ್ನು ಸಹ ಹೊಂದಿದ್ದಾರೆ.

ಮೇಲೆ ಹೇಳಿದಂತೆ, ಈ ನಿರ್ದಿಷ್ಟ ಫೆರಾರಿ 328 ಜಿಟಿಎಸ್ ಈ ಹಿಂದೆ ಕಿಂಗ್‌ಫಿಶರ್ ಏರ್‌ಲೈನ್ಸ್ ಮಾಜಿ ಮಾಲೀಕ ವಿಜಯ್ ಮಲ್ಯ ಅವರ ಒಡೆತನದಲ್ಲಿತ್ತು. ಅವರು ಬಳಸಿದ ಅದೆಷ್ಟೋ ಕಾರುಗಳು ಸದ್ಯ ಇತರರನ್ನು ಸೇರಿವೆ. ವಿಜಯ್ ಮಲ್ಯ 2016 ರಲ್ಲಿ ಭಾರತವನ್ನು ತೊರೆದು ಪ್ರಸ್ತುತ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ.
ಫೆರಾರಿ 328 ಜಿಟಿಎಸ್ ವಿಶೇಷತೆಗಳು: ಭಾರತದ ಅಪರೂಪದ ಫೆರಾರಿ ಕಾರುಗಳಲ್ಲಿ 'ಫೆರಾರಿ 328 ಜಿಟಿಎಸ್' ಕೂಡ ಒಂದು. ಏಕೆಂದರೆ ಆಗಿನ ಕಾಲಕ್ಕೆ ಹೆಚ್ಚಿನ ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿಲ್ಲ. ಇದನ್ನು 1985 ರಲ್ಲಿ ಫೆರಾರಿ 308 ಹೆಸರಿನಲ್ಲಿ ಮತ್ತೆ ಬಿಡುಗಡೆ ಮಾಡಲಾಯಿತು. ಆದರೆ ಫೆರಾರಿ 328 ಜಿಟಿಎಸ್ ಮಾತ್ರ ಐಕಾನಿಕ್ ಮಾದರಿಗಳಲ್ಲಿ ಒಂದಾಗಿ ಉಳಿದಿದೆ.
ಫೆರಾರಿ 328 ಜಿಟಿಎಸ್ ಕಾರಿನಲ್ಲಿ 3.2 ಲೀಟರಿನ ನ್ಯಾಚುರಲಿ ಆಸ್ಪಿರೇಟೆಡ್ ವಿ8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 270 ಬಿಹೆಚ್ ಪವರ್ ಮತ್ತು 304 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು ಗಂಟೆಗೆ 267 ಕಿ.ಮೀ ವೇಗವನ್ನು ತಲುಪಲಿದ್ದು, 100 ಕಿ.ಮೀ ವೇಗವನ್ನು ಕೇವಲ 6 ಸೆಕೆಂಡುಗಳಲ್ಲಿ ಕ್ರಮಿಸಬಲ್ಲದು. ಆ ದಿನಗಳಲ್ಲಿ ಇದು ಪವರ್‌ಫುಲ್ ಪರ್ಫಾಮೆನ್ಸ್ ಕಾರುಗಳಲ್ಲಿ ಒಂದಾಗಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications