Viral video: ಸಿಎಂ ಯೋಗಿ ನಾಡಲ್ಲಿ ಬಿಟ್ಟಿ ಶೋಕಿ ಮಾಡಿದ್ರೆ ಫಲಿತಾಂಶ ಹೀಗಿರುತ್ತೆ ನೋಡಿ!
ಇತ್ತಿಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೇಗಾದ್ರೂ ವೈರಲ್ ಆಗಿ ಹಣ ಮಾಡಬೇಕೆಂಬುದು ಉತ್ತರ ಭಾರತದಲ್ಲಿನ ಯವ ಜನತೆಗೆ ಹವ್ಯಾಸವಾಗಿಬಿಟ್ಟಿದೆ. ಕಾನೂನನ್ನು ಲೆಕ್ಕಿಸದೆ ಮನಬಂದಂತೆ ವರ್ತಿಸಿ ಇತರರನ್ನು ಪ್ರೇರೇಪಿಸುವ ಕೆಲ ಘಟನೆಗಳನ್ನು ಈಗಾಗಲೇ ನಾವು ನೋಡಿದ್ದೇವೆ. ಹಾಗೆಯೇ ಇಲ್ಲೂ ಕೂಡ ಓರ್ವ ಬೈಕಿಗೆ ಪೆಟ್ರೋಲ್ ಸುರಿದು ಜೈಲು ಸೇರಿದ್ದಾನೆ.
ಅಪಾಯಕಾರಿ ಸಾಹಸಗಳನ್ನು ಮಾಡಿರುವ ವೀಡಿಯೊಗಳು ವೈರಲ್ ಆದ ನಂತರ ಎಚ್ಚೆತ್ತ ಉತ್ತರ ಪ್ರದೇಶ ಪೊಲೀಸರು ನೌಶೆ ಅಲಿ ಎಂಬಾತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ತನ್ನ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಪೆಟ್ರೋಲ್ ತುಂಬಿಸಿದ ಬಳಿಕ ಬೈಕ್ ಮೇಲೆಯೂ ಪೆಟ್ರೋಲ್ ಸುರಿಯುವುದನ್ನು ಕ್ಯಾಮೆರಾದಲ್ಲಿ ಚಿತ್ರಿಸಲಾಗಿದೆ.

ಇದು ಸಂಪೂರ್ಣ ಪೂರ್ವ ಯೋಜಿತ ವಿಡಿಯೋದಂತೆ ಕಾಣುತ್ತಿದೆ. ಬಂಕ್ ಸಿಬ್ಬಂದಿ ಆತನನ್ನು ಆ ರೀತಿ ವರ್ತಿಸಲು ಬಿಟ್ಟಿದ್ದೇ ದೊಡ್ಡ ತಪ್ಪು. ಈ ವಿಡಿಯೋ ವೈರಲ್ ಆಗಿ ಹಲವರನ್ನು ಕೆರಳಿಸಿದೆ, ಇಂಧನ ದರ ಗಗನಕ್ಕೇರುತ್ತಿದ್ದರೇ ವೈರಲ್ ಆಗಲು ಇಂತಹ ಕೃತ್ಯಗಳನ್ನು ಎಸಗುವವರ ವಿರುದ್ಧ ಕ್ರಮ ಕೈಗೊಳ್ಳಲು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ವಿಡಿಯೋ ಪೊಲೀಸರಿಗೆ ತಲುಪುತ್ತಿದ್ದಂತೆ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಅಲಿ ಎಂಬಾತನನ್ನು ಬಂಧಿಸಿ ಬಂಧನದ ಕುರಿತ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಹಾಗಯೇ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮೋಟಾರ್‌ಸೈಕಲ್ ಅನ್ನು ಸಹ ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಬಂಧಿತರಿಗೆ ದಂಡ ವಿಧಿಸಿ ಚಲನ್ ಹೊರಡಿಸಿದ್ದಾರೆಯೇ ಎಂಬುದರ ಬಗ್ಗೆ ಮಾಹಿತಿಯಿಲ್ಲ.

ಬಂಧನದ ಬಳಿಕ ಇವರು ಇಂತಹದ್ದೇ ಹಲವು ಕಾನೂನು ವಿರೋಧಿಯಾಗಿ ಮಾಡಿರುವ ವಿಡಿಯೋಗಳು ಹೊರಬಿದ್ದಿವೆ. ಕ್ಲಾಸಿಕ್ 350 ಮೋಟಾರ್ ಸೈಕಲ್ ಮಡ್‌ಗಾರ್ಡ್ ಮೇಲೆ ಅವನ ಸ್ನೇಹಿತ ಕುಳಿತು ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್ ಮಾಡುವ ಅಪಾಯಕಾರಿ ವಿಡಿಯೋಗಳು ಬೆಳಕಿಗೆ ಬಂದಿದ್ದು, ಪೊಲೀಸರು ಇವೆಲ್ಲವನ್ನು ಗಣನೆಗೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಂಜಿನ್ ಬಿಸಿ ಇದ್ದಾಗ ಪೆಟ್ರೋಲ್‌ನ ಆವಿಯು ಬೆಂಕಿಯನ್ನು ಹಿಡಿಯಬಹುದು. ಘಟನೆ ವೇಳೆ ಅಂಥದ್ದೇನೂ ನಡೆಯದಿರುವುದು ಅಚ್ಚರಿ ಮೂಡಿಸಿದೆ. ಮೋಟಾರ್‌ಸೈಕಲ್‌ನಾದ್ಯಂತ ಇಂಧನವನ್ನು ಸುರಿಯುದಕ್ಕೆ ನಿಖರ ಕಾರಣ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆಯುವುದಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾನೆ ಎಂದು ಅಲ್ಲಿನ ಮಾದ್ಯಮಗಳು ವರದಿ ಮಾಡಿವೆ.
ಇಂತಹ ಕಾನೂನುಬಾಹಿರ ಕೃತ್ಯಗಳನ್ನು ಪತ್ತೆ ಹಚ್ಚಲು ಸಾಮಾಜಿಕ ಮಾಧ್ಯಮವನ್ನು ಮೇಲ್ವಿಚಾರಣೆ ಮಾಡುವುದರ ಜೊತೆಗೆ, ಪ್ರಮುಖ ನಗರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಸಮಗ್ರ ಜಾಲಗಳನ್ನು ಸ್ಥಾಪಿಸಲಾಗಿದೆ. ಯುಪಿಯಲ್ಲಿ ಸಮರ್ಪಿತ ಪೊಲೀಸ್ ಸಿಬ್ಬಂದಿಯಿಂದ ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ವಾಹನದ ನೋಂದಣಿ ಸಂಖ್ಯೆಗಳ ಮೂಲಕ ಉಲ್ಲಂಘನೆಗಳನ್ನು ಪತ್ತೆಹಚ್ಚಿ ದಂಡದ ಜೊತೆಗೆ ಜೈಲಿಗಟ್ಟಲಾಗುತ್ತಿದೆ.
ಭಾರತವು ವಿಶ್ವದ ಅತಿ ಹೆಚ್ಚು ರಸ್ತೆ ಅಪಘಾತಗಳು ನಡೆಯುವ ದೇಶಗಳಲ್ಲಿ ಗುರ್ತಿಸಿಕೊಂಡಿದೆ. ಅಜಾಗರೂಕ ಚಾಲನೆ ಮತ್ತು ಸಂಚಾರ ನಿಯಮಗಳನ್ನು ಪಾಲಿಸದಿರುವುದು ಅನೇಕ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತದೆ. ಸಿಸಿಟಿವಿ ವ್ಯವಸ್ಥೆಗಳು ರಸ್ತೆಗಳಲ್ಲಿನ ಅಪಾಯಕಾರಿ ಚಾಲನೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. ಆದ್ರೂ ಕೆಲ ಪುಂಡರು ಇದನ್ನು ಲೆಕ್ಕಸಿದೆ ಇಂತಹ ಕೃತ್ಯಗಳನ್ನು ಮಾಡುತ್ತಿದ್ದವರಿಗೆ ಯುಪಿ ಪೊಲೀಸರು ತಕ್ಕ ಶಾಸ್ತಿ ಮಾಡುತ್ತಿದ್ದಾರೆ.
ಸದ್ಯ ಅಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್ ಮಾಡುವುದನ್ನು ನಿಷೇಧಿಸಲಾಗಿದ್ದು, ಸಿಕ್ಕಿಬಿದ್ದವರು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತಿದೆ. ಕಳೆದ ವರ್ಷ ಯುವಕರ ಗುಂಪೊಂದು ಇಂತಹ ಸಾಹಸಗಳನ್ನು ಮಾಡಿ ಆರು ತಿಂಗಳ ಜೈಲು ಶಿಕ್ಷೆಗೆ ಒಳಗಾಗಿದ್ದರು. ಇಂತಹ ಕಾನೂನು ವಿರೋಧಿ ಚಟುವಟಿಕಗಳಿಗೆ ಪ್ರತಿ ರಾಜ್ಯದಲ್ಲೂ ಕಠಿಣ ಕ್ರಮ ಕೈಗೊಳ್ಳಬೇಕಿದೆ. ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications