Viral Video: ಕಾರು ಚಾಲಕನ ಕೃತ್ಯಕ್ಕೆ ತಲ್ಲಣಗೊಂಡ ಸಹ ಪ್ರಯಾಣಿಕರು!

ರಸ್ತೆಯಲ್ಲಿ ಹೋಗುತ್ತಿರುವಾಗ ಕಾರು ಚಾಲಕನೊಂದಿಗೆ ಮಾತಿನ ಚಕಮಕಿಯಾಗಿ ಆತ ನಮ್ಮ ಬೈಕ್‌ಗೆ ಬೇಕಂತಲೇ ಡಿಕ್ಕಿ ಹೊಡೆದ್ರೆ ಏನು ಮಾಡುತ್ತೀರಾ? ಅಂತಹದ್ದೇ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು ಬೈಕ್ ಹಾಗೂ ಕ್ಯಾಬ್ ಚಾಲಕರ ನಡುವಿನ ಜಗಳವನ್ನು ಹಿಂದೆ ಬರುತ್ತಿದ್ದ ಮತ್ತೊಬ್ಬ ಬೈಕ್ ಸವಾರ ರೆಕಾರ್ಡ್ ಮಾಡಿದ್ದಾನೆ.

ಭಾರತೀಯ ರಸ್ತೆಗಳಲ್ಲಿ ವಾಹನ ಚಾಲಕರ ನಡುವೆ ಅನಗತ್ಯವಾದ ವಿವಾದಗಳು ಇತ್ತೀಚಿನ ದಿನಗಳಲ್ಲಿ ಬಹಳ ಸಾಮಾನ್ಯವಾಗಿಬಿಟ್ಟಿವೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಇಬ್ಬರು ವಾಹನ ಸವಾರರ ಮಧ್ಯೆ ಉಂಟಾಗಿರುವ ಸಮಸ್ಯೆ ಸಾರ್ವಜನಿಕರಲ್ಲಿ ತೀವ್ರ ಆಘಾತ ಉಂಟು ಮಾಡಿದೆ. ಕ್ಯಾಬ್ ಚಾಲಕನೊಬ್ಬ ಉದ್ದೇಶಪೂರ್ವಕವಾಗಿಯೇ ಬೈಕ್‌ಗೆ ಡಿಕ್ಕಿ ಹೊಡೆದು ರಸ್ತೆ ಮಧ್ಯೆ ವಾಗ್ವಾದ ನಡೆಸಿದ್ದಾನೆ.

car driver intentionally collided with bike

ವಿಡಿಯೋದಲ್ಲಿ ಕಂಡುಬರುವಂತೆ ಮಾರುತಿ ಸುಜುಕಿ ಟೂರ್ ಎಸ್‌ ಕ್ಯಾಬ್ ಡ್ರೈವರ್ ಮತ್ತು ರಾಯಲ್ ಎನ್‌ಫೀಲ್ಡ್ ಬುಲೆಟ್ 350 ರೈಡರ್ ನಡುವೆ ಜಗಳವಾಗಿ ನಡುರಸ್ತೆಯಲ್ಲಿ ವಾಗ್ವಾದಕ್ಕಿಳಿದ ದೃಶ್ಯಗಳನ್ನು ಈ ವಿಡಿಯೊದಲ್ಲಿ ನೋಡಬಹುದು. ಒಂದು ಹಂತದಲ್ಲಿ ರಾಯಲ್ ಎನ್ ಫೀಲ್ಡ್ ಬುಲೆಟ್ 350 ಬೈಕ್‌ನ ರೈಡರ್ ಕೈ ತೋರಿಸಿ ಮಾತನಾಡಿದ್ದೇ ತಡ ಸಿಟ್ಟಿಗೆದ್ದ ಕಾರು ಚಾಲಕ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ.

ಏಕಾ-ಏಕಿ ಬುಲೆಟ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಬುಲೆಟ್ ಸವಾರ ತುಸು ನಿಯಂತ್ರಣ ಕಳೆದುಕೊಂಡರು ಬೈಕ್ ಅನ್ನು ಕೆಳಗೆ ಬೀಳಿಸದೆ ನಿಯಂತ್ರಿಸಿದ್ದಾನೆ. ಆದ್ರೆ ಡಿಕ್ಕಿಯ ರಭಸಕ್ಕೆ ಬೈಕ್‌ಗೆ ಕಟ್ಟಿದ್ದ ಬ್ಯಾಗ್ ನೆಲಕ್ಕುರುಳಿದೆ. ಬಿದ್ದ ಬ್ಯಾಗಿಗಾಗಿ ಬೈಕ್ ನಿಲ್ಲಿಸಿದ ಸವಾರನನ್ನು ಕಂಡು ಕ್ಯಾಬ್ ಚಾಲಕ ಕೂಡ ನಿಲ್ಲಿಸಿ ಹೊರಬಂದು ಜಗಳವನ್ನು ದೊಡ್ಡದಾಗಿಸಲು ಪ್ರಯತ್ನಿಸಿದರೂ ಬೈಕ್ ಚಾಲಕ ಇದನ್ನು ಲೆಕ್ಕಿಸದೇ ಅಲ್ಲಿಂದ ಹೊರಟಿದ್ದಾರೆ.

ಮೊದಲಿಗೆ ವಾದವನ್ನು ಯಾರು ಆರಂಭಿಸಿದರು ಎಂಬುದು ಸ್ಪಷ್ಟವಾಗಿಲ್ಲ. ಆದ್ರೆ, ಕ್ಯಾಬ್ ಚಾಲಕ ಮೋಟಾರ್ಸೈಕಲ್ ಸವಾರನಿಗೆ ಹೊಡೆಯಲೆಂದೆ ನಿರ್ಧರಿಸಿದ್ದ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಸವಾರನು ಬಿದ್ದು ಗಾಯಗೊಂಡಿದ್ದರೆ, ಕ್ಯಾಬ್ ಚಾಲಕನಿಗೆ ಪರಿಸ್ಥಿತಿಯನ್ನು ಪೊಲೀಸರೊಂದಿಗೆ ಊಹಿಸಬಹುದಿತ್ತು. ಒಂದು ವೇಳೆ ಬಿದ್ದು ಮಾರಣಾಂತಿಕ ಗಾಯಗಳಾಗಿದ್ದರೇ ಕ್ಯಾಬ್ ಚಾಲಕನೇ ಹೊಣೆಯಾಗುತ್ತಿದ್ದ.

ಅವರಿಬ್ಬರ ನಡುವೆ ಜಗಳ ನಡೆದಿದ್ದಾದ್ರೂ ಏಕೆ? ಎಂಬುದು ಸ್ಪಷ್ಟವಾಗಿಲ್ಲ. ಆದರೆ ಈ ಘಟನೆಯಲ್ಲಿ ಮಾರುತಿ ಸುಜುಕಿ ಟೂರ್ ಎಸ್ ಚಾಲಕನದ್ದೆ ತಪ್ಪಿದೆ. ಬಹುಶಃ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ನ ಸವಾರ ಕಾಲು ಜಾರಿ ಕೆಳಗೆ ಬಿದ್ದಿದ್ದರೆ, ಪರಿಣಾಮಗಳು ಭೀಕರವಾಗಿರುತ್ತಿದ್ದವು. ಜೊತೆಗೆ ಇತರ ವಾಹನ ಚಾಲಕರಿಗೂ ಅಪಘಾತ ಸಂಭವಿಸುತ್ತಿತ್ತು.

ವಾಹನಗಳು ವೇಗವಾಗಿ ಬರುವಾಗ ಬೈಕ್ ಬಿದ್ದರೆ ಇತರರಿಗೆ ಡಿಕ್ಕಿ ಹೊಡೆದು ಬೀಳುವ ಸಾಧ್ಯತೆ ಇದೆ. ಆದರೆ ಅದೃಷ್ಟವಶಾತ್ ಅಂಥದ್ದೇನೂ ಆಗಲಿಲ್ಲ. ಆದ್ದರಿಂದ ಇಂತಹ ಪರಿಸ್ಥಿತಿಗಳಲ್ಲಿ ಕೋಪವನ್ನು ನಿಯಂತ್ರಿಸುವುದು ಉತ್ತಮ. ಇಲ್ಲದಿದ್ದರೆ ನೀವು ತುಂಬಾ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಯಾವಾಗಲೂ ಶಾಂತವಾಗಿರುವುದು ಉತ್ತಮ.

ಅನಗತ್ಯವಾಗಿ ಹಾರ್ನ್ ಮಾಡುವುದು ಇತರರು ಅವಸರದಲ್ಲಿದ್ದಾಗ ಅವರ ದಾರಿಗೆ ಅಡ್ಡ ಹೋಗುವಂತಹದ್ದನ್ನು ಮಾಡಬೇಡಿ. ಅವರಿಗೆ ದಾರಿ ಮಾಡಿಕೊಟ್ಟು ತಾಳ್ಮೆಯಿಂದಿರಿ. ಯಾರಾದರೂ ರಸ್ತೆಯಲ್ಲಿ ಬೇಕಂತಲೆ ಜಗಳಕ್ಕಿಳಿದರೆ ಪ್ರತಿಕ್ರಿಯಿಸದಿರಿ ನಿಮ್ಮ ಚಾಲನೆಯ ಮೇಲೆ ಕೇಂದ್ರೀಕರಿಸಿ, ಅಂತಹ ಚಾಲಕರಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಿ. ನೆನಪಿಡಿ, ನಿಮ್ಮ ಸುರಕ್ಷತೆಯು ಅತ್ಯಂತ ಮಹತ್ವದ್ದಾಗಿದೆ.

Article Published On: Saturday, June 24, 2023, 17:48 [IST]
English summary
Viral video car driver intentionally collided with bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+