ಧೋನಿ ಮನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಬೈಕ್‌ಗಳು.. ಕ್ಷಣಕಾಲ ರೋಮಾಂಚನ: Viral video

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ (MS Dhoni) ಅವರಿಗೆ ಬೈಕ್‌ ಹಾಗೂ ಕಾರುಗಳೆಂದರೆ ತುಂಬಾ ಅಚ್ಚುಮೆಚ್ಚು. ಅವರ ರಾಂಚಿ ನಿವಾಸದಲ್ಲಿ ಅವುಗಳ ದೊಡ್ಡ ಸಂಗ್ರಹವಿರುವುದು ಬಹುತೇಕರಿಗೆ ಗೊತ್ತಿರುವ ವಿಚಾರವಾಗಿದೆ. ಆದರೆ, ಈ ಪರಿಪ್ರಮಾಣದಲ್ಲಿರುತ್ತದೆ ಎಂದು ಯಾರು ಅಂದಾಜಿಸಿರಲಿಲ್ಲ.

ಸದ್ಯ, ಅದಕ್ಕೆ ಸಂಬಂಧಿಸಿದ ವಿಡಿಯೋ (video) ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇತ್ತೀಚೆಗೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಹಾಗೂ ಮಾಜಿ ಸ್ಪಿನ್ನರ್ ಸುನಿಲ್ ಜೋಶಿ ಅವರು, ಧೋನಿ ಅವರ ರಾಂಚಿ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಕುರಿತ ವಿಡಿಯೋವೊಂದನ್ನು ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದರು. ಅಲ್ಲಿ ಧೋನಿ ಅವರ ಗ್ಯಾರೇಜ್ ನಲ್ಲಿ ಕಾರು, ಬೈಕ್‌ಗಳ ಸಂಗ್ರಹವನ್ನು ಕುತೂಹಲದಿಂದ ವೀಕ್ಷಿಸುತ್ತಿರುವುದನ್ನು ಕಾಣಬಹುದು.

ಧೋನಿ ಮನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಬೈಕ್‌ಗಳು.. ಕ್ಷಣಕಾಲ ರೋಮಾಂಚನ: Viral video

ಧೋನಿ ಅವರ ಬೈಕ್ ಹಾಗೂ ಕಾರು ಕಲೆಕ್ಷನ್ ನೋಡಿ ಅಚ್ಚರಿ ವ್ಯಕ್ತಪಡಿಸಿರುವ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವರು, 'ಇದು ನೋಡಲು ಬೈಕ್ ಶೋರೂಂ ರೀತಿ ಭಾಸವಾಗುತ್ತದೆ. ಈ ರೀತಿ ಮಾಡಲು ಸಖತ್ ಕ್ರೇಜ್ ಬೇಕು' ಎಂದು ಹೇಳಿದ್ದಾರೆ. ವೈರಲ್ ಆಗಿರುವ ಈ ವಿಡಿಯೋವನ್ನು ಧೋನಿ ಪತ್ನಿ ಸಾಕ್ಷಿ ರೆಕಾರ್ಡ್ ಮಾಡಿದ್ದಾರೆ. ವಿಡಿಯೋದಲ್ಲಿ ಬೈಕ್‌ಗಳು ಮಾತ್ರವಲ್ಲದೆ, ವಿಂಟೇಜ್‌ ಕಾರುಗಳು ಇರುವುದನ್ನು ನೋಡಬಹುದು.

ಸಾಮಾಜಿಕ ಜಾಲತಾಣದಲ್ಲಿ ಸಖತ್ ಹಲ್ ಚಲ್ ಸೃಷ್ಟಿಸಿರುವ ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದು, 'ಧೋನಿ ಅವರು ಎಲ್ಲ ವಾಹನಗಳ ಕೀಯನ್ನು ಎಲ್ಲಿಡುತ್ತಾರೆ ಎಂಬುದರ ಬಗ್ಗೆ ಕುತೂಹಲವಿದೆ' ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಮತ್ತೊಬ್ಬರು, 'ಎಂ.ಎಸ್.ಧೋನಿ ಬೈಕ್‌ಗಳ ಹುಚ್ಚು ಪ್ರೇಮಿ. ಸಾಕಷ್ಟು ಬಾರಿ ಅವರು, ಚೆನ್ನೈನಲ್ಲಿ ಬೈಕ್‌ನಲ್ಲಿ ಓಡಾಡಿದ್ದಾರೆ' ಎಂದು ಕಾಮೆಂಟ್ ಮಾಡಿದ್ದಾರೆ.

ಕಳೆದ ಫೆಬ್ರವರಿ ತಿಂಗಳಲ್ಲಿ ಮಹೇಂದ್ರ ಸಿಂಗ್‌ ಧೋನಿ ಅವರು, ಟಿವಿಎಸ್ 'ರೋನಿನ್' ಪ್ರೀಮಿಯಂ ಬೈಕ್‌ನ್ನು ವಿತರಣೆ ಪಡೆದಿದ್ದರು. ಇದಕ್ಕೂ ಮೊದಲು ಅದೇ ಬ್ರ್ಯಾಂಡ್ ನ ಅಪಾಚೆ RR 310ಯನ್ನು ಖರೀದಿಸಿದ್ದರು. ಅವರು, ಡಿಲೆವರಿ ಪಡೆದ ರೋನಿನ್ ಬೈಕ್, ಸುಮಾರು ರೂ.2 ಲಕ್ಷ ಆಸುಪಾಸಿನ ಬೆಲೆಯಲ್ಲಿ ಸಿಗಲಿದೆ. 225.9 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿರುವ ಈ ಮೋಟಾರ್ ಸೈಕಲ್ ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ.

ಧೋನಿ ಅವರು, ಆಗಾಗ ರಸ್ತೆಯಲ್ಲಿ ಬೈಕ್ ರೈಡ್ ಮಾಡುವಾಗ ಅಭಿಮಾನಿಗಳ ಕ್ಯಾಮೆರಾ ಕಣ್ಣಿಗೆ ಬೀಳಿತ್ತಿರುತ್ತಾರೆ. ಆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಇನ್ನು, ಅವರ ಬಳಿಯಿರುವ ಮೋಟಾರ್‌ಸೈಕಲ್ ಗಳ ಪಟ್ಟಿಯನ್ನು ನೋಡುವುದಾದರೆ, ಅಲ್ಲಿ ದುಬಾರಿ ಬೆಲೆಯಿಂದ ಹಿಡಿದು ಕಡಿಮೆ ದರದ ದ್ವಿಚಕ್ರ ವಾಹನಗಳಿದ್ದು, ಪ್ರಮುಖವಾಗಿ ಕವಾಸಕಿ ನಿಂಜಾ H2, ಡುಕಾಟಿ 1098, ಯಮಹಾ ರಾಜದೂತ್ ಸೇರಿವೆ.

ಬೈಕ್‌ಗಳು ಮಾತ್ರವಲ್ಲದೆ, ಧೋನಿ ಅವರ ಗ್ಯಾರೇಜ್ ನಲ್ಲಿ ಐಷಾರಾಮಿ ಹಾಗೂ ವಿಂಟೇಜ್ ಕಾರುಗಳ ದೊಡ್ಡ ಸಂಗ್ರಹವೇ ಇದೆ. ಫೆರಾರಿ 599 GTO, ಜೀಪ್ ಗ್ರ್ಯಾಂಡ್ ಚೆರೋಕೀ, ಪಾಂಟಿಯಾಕ್ ಫೈರ್ಬರ್ಡ್, ನಿಸ್ಸಾನ್ ಜೊಂಗಾ, ಹಮ್ಮರ್ ಸೇರಿದಂತೆ ಅನೇಕ ಕಾರುಗಳಿವೆ. ಅವರ ವೃತ್ತಿ ಜೀವನದ ಬಗ್ಗೆ ಒಂದಷ್ಟು ವಿಚಾರಗಳನ್ನು ತಿಳಿಯುವುದಾದರೆ, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ, 4 ವರ್ಷ ಕಳೆದಿದ್ದು, ಐಪಿಎಲ್ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಾರೆ.

ಈ ಬಾರಿಯ ಐಪಿಎಲ್‌ ಸೀಸನ್ ನಲ್ಲಿ ಧೋನಿ ನಾಯಕ್ವದ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಟ್ರೋಫಿಯನ್ನು ಎತ್ತಿ ಹಿಡಿದೆ. ಪ್ರಸ್ತುತ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವಿಡಿಯೋದಲ್ಲಿ ಧೋನಿ ಅವರ ಗ್ಯಾರೇಜ್ ನೋಡಿದರೆ, ಕ್ಷಣಕಾಲ ಎಂತಹವರಿಗಾದರೂ ಆಶ್ಚರ್ಯವಾಗುತ್ತದೆ. ಪ್ರತಿಯೊಬ್ಬರು ಜೀವನದಲ್ಲಿ ಒಂದಲ್ಲ ಒಂದು ರೀತಿಯ ಹವ್ಯಾಸವನ್ನು ರೂಡಿಸಿಕೊಂಡಿರುತ್ತಾರೆ. ಅದರಲ್ಲಿ ಧೋನಿ ಅವರಿಗೆ ಬೈಕ್ ಹಾಗೂ ಕಾರು ಕ್ರೇಜ್ ಕೊಂಚ ಜಾಸ್ತಿಯೇ.

Article Published On: Tuesday, July 18, 2023, 12:27 [IST]
English summary
Viral video ms dhoni massive bikes cars collection
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+