Viral video: ಭಿಕ್ಷೆ ಬೇಡ್ತಿಲ್ಲ, ಮದರಸಾಗಾಗಿ ದೇಣಿಗೆ ನೀಡಿ... ಪಾಕಿಸ್ತಾನ ವ್ಯಕ್ತಿಯ ವಿಚಿತ್ರ ವರ್ತನೆ
ಇತ್ತೀಚೆಗೆ ವಿಮಾನಗಳು ಬಸ್, ರೈಲುಗಳಂತೆ ಎಲ್ಲಾ ರೀತಿಯ ಮನರಂಜನೆಗಳಿಗೆ ಸಾಕ್ಷಿಯಾಗುತ್ತಿದೆ. ಗಲಾಟೆ, ಹೊಡೆದಾಟ, ಗೊಂದಲಮಯ ವಾತಾವರಣದಂತಹ ವಿಮಾನದೊಳಗಿನ ದೃಶ್ಯಗಳು ವೈರಲ್ ಆಗುತ್ತಿವೆ. ಇದೀಗ ಮತ್ತೊಂದು ವಿಡಿಯೋ ವೈರಲ್ (Viral video) ಆಗಿದ್ದು, ಪಾಕಿಸ್ಥಾನದ ವ್ಯಕ್ತಿಯೊಬ್ಬರು ಮದರಸಾ ಕಟ್ಟಲು ಹಣ ನೀಡುವಂತೆ ವಿಮಾನದೊಳಗೆ ಪ್ರಯಾಣಿಕರ ಬಳಿ ಕೇಳಿಕೊಂಡಿದ್ದಾನೆ.
ಇತ್ತೀಚೆಗೆ ವೈರಲ್ ಆದ ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಸಹ ಪ್ರಯಾಣಿಕರೊಂದಿಗೆ ಹಣ ದೇಣಿಗೆ ನೀಡುವಂತೆ ಕೇಳಿಕೊಂಡಿರುವ ಕುರಿತು ನಾನಾ ರೀತಿಯಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಈ ವ್ಯಕ್ತಿ ತಾನು ಭಿಕ್ಷೆ ಬೇಡುತ್ತಿಲ್ಲ, ಬದಲಿಗೆ ಲಾಹೋರ್‌ನಲ್ಲಿ ಮದರಸಾ ನಿರ್ಮಿಸಲು ಹಣವನ್ನು ಸಂಗ್ರಹಿಸುತ್ತಿದ್ದೇನೆ ಎಂದು ಹೇಳುವುದನ್ನು ವಿಡಿಯೋದಲ್ಲಿ ನೋಡಬಹುದು.

ನೀಲಿ ಬಣ್ಣದ ಜಾಕೆಟ್, ಬಿಳಿ ಕುರ್ತಾ, ಪೈಜಾಮ ಧರಿಸಿ ವಿಮಾನದಲ್ಲಿ ಎರಡೂ ಬದಿ ಪ್ರಯಾಣಿಕರು ಕುಳಿತಿದ್ದರೇ, ಮಧ್ಯದಲ್ಲಿ ನಿಂತು ಮಾತನಾಡುವುದು ವಿಡಿಯೋದಲ್ಲಿ ಸೆರೆಯಾಗಿದೆ. "ನಾವು ಮದರಸಾವನ್ನು ನಿರ್ಮಿಸಲು ಹಣವನ್ನು ಸಂಗ್ರಹಿಸುತ್ತಿದ್ದೇವೆ" "ನೀವು ದಾನ ಮಾಡಲು ಬಯಸಿದರೆ, ಎದ್ದು ನನ್ನ ಬಳಿಗೆ ಬರಬೇಡಿ. ನಾನೇ ನಿಮ್ಮ ಸೀಟಿನ ಬಳಿ ಬರುತ್ತೇನೆ ಎಂದು ಹೇಳಿದ್ದಾನೆ."
ವೀಡಿಯೊವನ್ನು ಯಾವಾಗ ಚಿತ್ರೀಕರಿಸಲಾಗಿದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಆದರೆ ಇದು ಎರಡು ವಾರಗಳ ಹಿಂದಿನಿಂದ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ನಿನ್ನೆ ಟ್ವಿಟರ್‌ನಲ್ಲಿ ಹಲವಾರು ಖಾತೆಗಳು ಪೋಸ್ಟ್ ಮಾಡಿದ ನಂತರ ವೀಡಿಯೊ ವ್ಯಾಪಕವಾಗಿ ವೈರಲ್ ಆಗಿದೆ. ಸದ್ಯ ನೆಟ್ಟಿಗರು ಈತನ ವರ್ತನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಒಂದೆಡೆ ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವ ಸಮಯದಲ್ಲಿ ವೀಡಿಯೊ ಆನ್‌ಲೈನ್‌ನಲ್ಲಿ ಹೊರಹೊಮ್ಮಿದೆ ಎಂದು ಹಲವರು ಟೀಕಿಸಿದ್ದಾರೆ. ಪ್ರಯಾಣಿಕರಿಂದ ಸಾವಿರಾರು ಹಣ ಪೀಕುವ ವಿಮಾನಯಾನ ಸಂಸ್ಥೆಗಳು ಇಂತಹ ಕೆಲಸಗಳನ್ನು ಮಾಡುವವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ. ಆತ ಹೀಗೆಲ್ಲಾ ವರ್ತಿಸುತ್ತಿದ್ದರೇ ಸಿಬ್ಬಂದಿ ಏನು ಮಾಡುತ್ತಿದೆ ಎಂದು ಪ್ರಶ್ನಿಸುತ್ತಿದ್ದಾರೆ.
ಇನ್ನೊಂದೆಡೆ ವಿಮಾನ ನಿಲ್ದಾಣದಲ್ಲಿ ಅಷ್ಟು ಕಟ್ಟುನಿಟ್ಟಾಗಿ ವ್ಯವಹರಿಸುವ ಅಧಿಕಾರಿಗಳು ವಿಮಾನದೊಳಗೆ ಇಂತಹ ಕೃತ್ಯಗಳು ಜರುಗಿದಾಗ ಏಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಆದ್ರೆ ಇದು ಪಾಕಿಸ್ತಾನದಲ್ಲಿ ನಡೆದಿರಬಹುದು ಹಾಗಾಗಿ ಕ್ರಮ ಕೈಗೊಂಡಿಲ್ಲ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ಏಕೆಂದರೆ ಮದರಸಾಗಾಗಿ ದೇಣಿಗೆ ಕೇಳುವುದರಲ್ಲಿ ತಪ್ಪಿಲ್ಲ ಎಂದು ಇಸ್ಲಾಂ ಪ್ರಮುಖರು ನಂಬುತ್ತಾರೆ.
ಆ ವ್ಯಕ್ತಿಗೆ ಸಂಬಂಧಿಸಿದಂತೆ ಯಾವುದೇ ವಿವರಗಳು ಇನ್ನು ಬಹಿರಂಗವಾಗಿಲ್ಲ. ಆದರೆ ಕೆಲವರು ಈತನನ್ನು ಗುರ್ತಿಸಿ ಪಾಕಿಸ್ತಾನದ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ವ್ಯಕ್ತಿಯೆಂದು ಹೇಳಿದ್ದಾರೆ. ಈತ ಉದ್ಯಮಿ ಹಾಗೂ ಪ್ರಮುಖ ರಾಜಕೀಯ ಮುಖಂಡನಾಗಿದ್ದಾನೆ. ಕಳೆದ ವರ್ಷ ಹೀಗೆ ಕೆಲ ವಿಡಿಯೋಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದಿದ್ದ ಎಂದು ಹೇಳಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳನ್ನ ಫಾಲೋ ಮಾಡಿ.


Click it and Unblock the Notifications