Video: ಮಾತೃ ವಾತ್ಸಲ್ಯ.. ಮಡಿಲಿನಲ್ಲಿ ಮಗುವಿಟ್ಟುಕೊಂಡು ಆಟೋ ಏರಿ ಜೀವನದ ಬಂಡಿ ಎಳೆಯುವ ಮಹಾತಾಯಿ!

ಮಾತೃ ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವೇ.. ಆಕೆ ತನ್ನ ಮಕ್ಕಳನ್ನು ಸಾಕಲು ನಾನಾ ರೀತಿಯಲ್ಲಿ ಕಷ್ಟ ಪಡುತ್ತಾಳೆ. ಮಡಿಲಿನಲ್ಲಿ ಮಗುವಿಟ್ಟುಕೊಂಡು ಜೀವನ ಸಾಗಿಸಲು ಮಹಾತಾಯಿಯೊಬ್ಬಳು ಆಟೋ ಓಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಆ ಮಹಿಳೆಯ ಕಷ್ಟದ ಹಾದಿಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ವೈರಲ್ ಭಯಾನಿ' ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಡಿನಲ್ಲಿ ಮಗುವಿಟ್ಟುಕೊಂಡು ತಾಯಿಯೊಬ್ಬಳು ಆಟೋ ಓಡಿಸುತ್ತಿರುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದಕ್ಕೆ 'ಯಾವುದೇ ಕ್ಯಾಪ್ಷನ್ ಅಗತ್ಯವಿಲ್ಲ.. ತಾಯಿ' ಎಂದು ಶೀರ್ಷೆಕೆ ಬರೆಯಲಾಗಿದೆ. ಸದ್ಯ, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆದರೆ, ಯಾವ ರಾಜ್ಯಕ್ಕೆ ಸಂಬಂಧಿಸಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

Video: ಮಾತೃ ವಾತ್ಸಲ್ಯ.. ಮಡಿಲಿನಲ್ಲಿ ಮಗುವಿಟ್ಟುಕೊಂಡು ಆಟೋ ಏರಿ ಜೀವನದ ಬಂಡಿ ಎಳೆಯುವ ಮಹಾತಾಯಿ!

ಈ ವಿಡಿಯೋವನ್ನು ಪಾದಚಾರಿಯೊಬ್ಬರು ಸೆರೆಯಿಡಿದಿದ್ದು, ಆಟೋ ರಿಕ್ಷಾ ಓಡಿಸುವ ಮಹಿಳೆಯೊಬ್ಬಳು, ಮಡಿಲಿನಲ್ಲಿ ಮಗುವನ್ನು ಮಲಗಿಸಿಕೊಂಡು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಮಗುವು ಪ್ರಪಂಚದ ಪರಿವೇ ಇಲ್ಲವೆಂಬಂತೆ ಹೆಬ್ಬೆರಳನ್ನು ಚೀಪುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಮಿಲಿಯನ್ ಗಟ್ಟಲೇ ಮಂದಿ ವೀಕ್ಷಿಸಿದ್ದಾರೆ.

ಮಾತೃ ವಾತ್ಸಲ್ಯದ ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ಬಳಕೆದಾರನೊಬ್ಬ 'ಇದು ವಾಸ್ತವವಾಗಿ ತುಂಬಾ ಅಪಾಯಕಾರಿ. ಆಕೆ ತನ್ನ ಮಗುವಿನ ಮತ್ತು ಪ್ರಯಾಣಿಕರ ಜೀವವನ್ನು ಪಣಕ್ಕಿಡುತ್ತಾಳೆ' ಎಂದು ಹೇಳಿದ್ದಾರೆ. ಮತ್ತೊಬ್ಬರು, 'ಈ ಜಗತ್ತಿನಲ್ಲಿ ಕೆಟ್ಟದ್ದೇನೂ ಸಂಭವಿಸುವುದಿಲ್ಲ' ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಮ್ಮ ತಾಯಂದಿರನ್ನು ಪ್ರೀತಿಸಿ ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬ ಬಳಕೆದಾರ, 'ತಾಯಿ ದೇವರಿಗಿಂತ ದೊಡ್ಡವರು, ತಾಯಿಯ ಸ್ಥಾನವನ್ನು ಜಗತ್ತಿನಲ್ಲಿ ಬೇರೆ ಯಾರೂ ತುಂಬಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ. ಇನ್ನೊಬ್ಬ ನೆಟ್ಟಿಗ, 'ಈ ರೀತಿ ಡ್ರೈವಿಂಗ್ ಮಾಡಿದ್ದಕ್ಕೆ ಆಕೆಯ ಲೈಸೆನ್ಸ್ ರದ್ದು ಮಾಡಬೇಕು. ಕೊಂಚ ಆಯ ತಪ್ಪಿದರೆ ಮಗು ಬೀಳಬಹುದು ಎಂದು ಕಾಮೆಂಟ್ ಮಾಡಿದ್ದಾರೆ.

ಈ ರೀತಿಯಾಗಿ ತಾಯಿ ತನ್ನ ಮಗುವನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಜನಸಾಮಾನ್ಯರಲ್ಲಿ ಮಾತ್ರವೇ ಕಂಡು ಬರುವುದಿಲ್ಲ. ಉನ್ನತ ಹುದ್ದೆಯಲ್ಲಿರುವ ಮಹಿಳೆಯರು ತಮ್ಮ ಮಕ್ಕಳನ್ನು ಅಕ್ಕರೆಯಿಂದಲೇ ಸಾಕುತ್ತಾರೆ. 2018ರಲ್ಲಿ ನ್ಯೂಜಿಲಾಂಡ್ ಮಾಜಿ ಪ್ರಧಾನಿಯಾಗಿದ್ದ ಜಸಿಂದಾ ಆರ್ಡೆರ್ನ್ ತಮ್ಮ ಮಗುವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಕರೆದುಕೊಂಡು ಬಂದಿದ್ದರು. ಇದಕ್ಕೆ ಅಲ್ಲಿ ನೆರೆದಿದ್ದವರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಮಡಿಲಿನಲ್ಲಿ ಮಗುವಿಟ್ಟುಕೊಂಡು ಆಟೋ ಏರಿ ಜೀವನದ ಬಂಡಿ ಎಳೆಯುತ್ತಿರುವ ಮಹಾತಾಯಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಶಭಾಷ್ ಗಿರಿ ನೀಡಿದ್ದಾರೆ. ಮತ್ತಷ್ಟು ಮಂದಿ ಸುರಕ್ಷಿತೆಯ ದೃಷ್ಟಿಯಿಂದ ತಪ್ಪು ಎಂದಿದ್ದಾರೆ. ಏನೇ ಆಗಲಿ.. ಮಾತೃ ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, July 11, 2023, 13:20 [IST]
English summary
Viral video rickshaw driver doubles mother work details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+