ವಿಶ್ವಕಪ್ ಗೆದ್ದುಕೊಟ್ಟ ಕಿಂಗ್ ಕೊಹ್ಲಿ ಖರೀದಿಸಿದ ಮೊದಲ ಕಾರು ಯಾವುದು? ಕಾರ್ ಕಲೆಕ್ಷನ್ ಡೀಟೆಲ್ಸ್
17 ವರ್ಷಗಳ ಬಳಿಕ ಟೀಂ ಇಂಡಿಯಾ ಟಿ20 ವಿಶ್ವಕಪ್ ಕಿರೀಟ ಗೆದ್ದ ಬೆನ್ನಲ್ಲೇ ಭಾರತದ ಇಬ್ಬರು ಶ್ರೇಷ್ಠ ಕ್ರಿಕೆಟಿಗರಾದ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಫೈನಲ್‌ನಲ್ಲಿ 59 ಎಸೆತಗಳಲ್ಲಿ 76 ರನ್ ಸಿಡಿಸಿ ಪಂದ್ಯ ಶ್ರೇಷ್ಠ ಗೌರವ ಪಡೆದ ವಿರಾಟ್ ಕೊಹ್ಲಿ, ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಇದು ಭಾರತ ತಂಡದ ಪರ ತಾವು ಆಡಿದ ಕಟ್ಟ ಕಡೇಯ ಟಿ20 ಪಂದ್ಯ ಎನ್ನುವ ಮೂಲಕ ನಿವೃತ್ತಿ ಘೋಷಿಸಿದರು.
ಮಾಜಿ ನಾಯಕ, ರನ್ ಮಷಿನ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿ ಗೆಲುವಿನ ಖುಷಿಯಲ್ಲಿ ಟೀಂ ಇಂಡಿಯಾಕ್ಕೆ ಆಘಾತ ನೀಡಿದೆ. ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಕೊಹ್ಲಿ , ಇದು ನನ್ನ ಕೊನೆಯ ಟಿ20 ವಿಶ್ವಕಪ್ ಆಗಿದ್ದು, ಇದನ್ನು ಗೆಲುವಿನೊಂದಿಗೆ ಅಂತ್ಯಗೊಳಿಸಲು ಬಯಸಿದ್ದೇನೆ ಎಂದರು. ಆ ನಂತರ ಕೊಹ್ಲಿ ಇದೇ ಫೈನಲ್ ತನ್ನ ಕೊನೆಯ ಟಿ20 ಅಂತರಾಷ್ಟ್ರೀಯ ಪಂದ್ಯ ಎಂಬುದನ್ನು ಹೇಳಿದರು.

ಕೊಹ್ಲಿ ಕೊನೆಯ ಪಂದ್ಯವಾಗಿದ್ದರೂ ಸಹ, ಅವರು ಟೀಂ ಇಂಡಿಯಾಕ್ಕಾಗಿ ಅನೇಕ ದಾಖಲೆಗಳೊಂದಿಗೆ ತಮ್ಮ ಟಿ20 ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸಿದರು. ಬ್ಯಾಟ್ ಹಿಡಿದರೆ ಬೌಂಡರಿಗಳ ಸುರಿಮಳೆ ಸುರಿಸುವ ಕೊಹ್ಲಿ ಕ್ರಿಕೆಟ್ ಅಂಗಳದ ಕಿಂಗ್ ಆಗಿ ರಾಜ್ಯಭಾರ ಮಾಡಿದವರು. ಕ್ರಿಕೆಟ್ ಅಂಗಳದಲ್ಲಿ ವಿರಾಟ ರೂಪ ತೋರಿಸುವ ಕೊಹ್ಲಿ ಎಂದೆಂದಿಗೂ ಕಿಂಗೇ. ಅಲ್ಲದೇ ಇವರು ನಮ್ಮ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ.
ಇನ್ನು ಕ್ರಿಕೆಟ್ ಆಟಗಾರರು ಹೆಚ್ಚು ಕಾರ್ ಕ್ರೇಜ್ ಹೊಂದಿರುತ್ತಾರೆ. ವಿರಾಟ್ ಕೊಹ್ಲಿ ಅವರು ಕೂಡ ಹೆಚ್ಚು ಕಾರ್ ಕ್ರೇಜ್ ಹೊಂದಿದ್ದಾರೆ. ಆದರೆ ವಿರಾಟ್ ಸ್ವಂತ ಹಣದಿಂದ ಖರೀದಿಸಿದ ಮೊದಲ ಕಾರು ಯಾವುದು ಗೊತ್ತಾ? ಅದು ಬೇರೆ ಯಾವುದೇ ಅಲ್ಲ ಅದು ಸ್ವದೇಶಿ ಟಾಟಾ ಸಫಾರಿ ಆಗಿದೆ. ವಿರಾಟ್ ಕೊಹ್ಲಿ, ನಾನು ನನ್ನ ಸ್ವಂತ ಹಣದಿಂದ ಖರೀದಿಸಿದ ಮೊದಲ ಕಾರು ಸಫಾರಿ.

ಈ ಸಫಾರಿ ಕಾರನ್ನು ಖರೀದಿಸಲು ಕಾರಣವೆಂದರೆ ಫೀಚರ್ಸ್ ಮಾತ್ರವಲ್ಲದೆ ರಸ್ತೆಯಲ್ಲಿ ಓಡಿಸುವಾಗ ಜನರು ತಾವಾಗಿಯೇ ದಾರಿ ಬಿಟ್ಟುಕೊಡುತ್ತಾರೆ ಎಂಬ ಭಾವನೆಯಿಂದ ನಾನು ಈ ಕಾರನ್ನು ಖರೀದಿಸಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಮುಂಚೆ ಸ್ಪೋಟ್ಸ್ ಕಾರುಗಳನ್ನು ಹೆಚ್ಚು ಇಷ್ಟಪಡುತಿದ್ದಾರೆ. ಆದ್ರೆ ಈಗ ಫ್ಯಾಮಿಲ್ ಮ್ಯಾನ್ ಆದ ನಂತರ ವಿರಾಟ್ ಕೊಹ್ಲಿ ಅವರು ಕಾರು ಖರೀದಿಸುವಾಗ ಏನೆಲ್ಲಾ ವಿಷಯಗಳನ್ನು ನೋಡುತ್ತಾರೆ ಎಂಬುದನ್ನು ತಿಳಿಸಿದ್ದಾರೆ.
ಅವರು ಫ್ಯಾಮಿಲಿ ಕಾರ್ ಅನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಅವರು ಹೇಳುತ್ತಾರೆ. ಅವನು ಕಾರಿನಲ್ಲಿನ ಸ್ಪೇಸ್ ನೋಡುತ್ತಾನೆ. ಇದಲ್ಲದೇ ಕಾರನ್ನು ನೋಡಿ ಅದು ಆರಾಮದಾಯಕವಾಗಿದೆಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ವಿರಾಟ್ ತಮ್ಮ ದೆಹಲಿಯಲ್ಲಿರುವ ಮನೆಯಲ್ಲಿ ಸಾಕಷ್ಟು ಐಷಾರಾಮಿ ಹಾಗೂ ದುಬಾರಿ ಕಾರುಗಳನ್ನು ಹೊಂದಿದ್ದಾರೆ.

ಆಡಿ R8 LMX : ಕೊಹ್ಲಿ ಖುದ್ದಾಗಿ ಆಡಿ ಕಾರ್ ಕಂಪೆನಿಯ ರಾಯಭಾರಿಯೂ ಸಹ ಹೌದು. ಹೀಗಾಗಿಯ ಅವರಿಗೆ ಒಂದಷ್ಟು ದುಬಾರಿ ಕಾರುಗಳು ಉಡುಗೊರೆಯಾಗಿ ಸಿಕ್ಕರೆ, ಇನ್ನೊಂದಷ್ಟು ಕಾರುಗಳನ್ನು ಅವರೇ ಖರೀದಿಸಿದ್ದಾರೆ. ಆಡಿ R8 LMX ಎಂಬುದು ವಿರಾಟ್ ಕೊಹ್ಲಿ ಬಳಿ ಇರುವ ಕಾರು ಕಲೆಕ್ಷನ್‌ಗಳಲ್ಲಿಯೇ ಅತ್ಯಂತ ವೇಗದ ಕಾರು. ಈ ಸೂಪರ್ ಕಾರ್‌ನ ಎಂಜಿನ್ ಬಗ್ಗೆ ನೋಡುವುದಾದರೆ, 5.2 ಲೀಟರ್ V10 ಇಂಜಿನ್‌ನೊಂದಿಗೆ ಬರುತ್ತದೆ.
ಇತರ ಆಡಿ ಕಾರುಗಳು: ವಿರಾಟ್ ಕೊಹ್ಲಿ ಬಳಿ ಇರುವ ಇನ್ನೊಂದು ಆಕರ್ಷಕ ಕಾರ್ ಎಂದರೆ ಅದು ಆಡಿ A8L W12 ಆಗಿದ್ದು. ಇದು 6.3 litre W12 ಎಂಜಿನ್‌ನೊಂದಿಗೆ ಬರುತ್ತದೆ. ಇನ್ನು ಮತ್ತೊಂದು ಲಕ್ಷುರಿಯಸ್ ಕಾರೆಂದರೆ ಅದು ಆಡಿ ಕ್ಯೂ 7 ಆಗಿದ್ದು. ಇದು 3.0 ಲೀಟರ್ V6 ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಇನ್ನು ಆಡಿ ಎಸ್6 ವಿರಾಟ್ ಕೊಹ್ಲಿ ಬಳಿಯಿರುವ ಮತ್ತೊಂದು ಆಡಿ ಕಂಪೆನಿಯ ಕಾರು.
ರೇಂಜ್ ರೋವರ್ ವೋಗ್: ವಿರಾಟ್ ಕೊಹ್ಲಿ ಬಳಿ ಇರುವ ಮತ್ತೊಂದು ಐಷಾರಾಮಿ ಕಾರು. ಈ ಎಸ್‍ಯುವಿ, 4.4 ಲೀಟರ್ ಎಸ್‌ಡಿವಿ೮ ಪೆಟ್ರೋಲ್ ಎಂಜಿನ್‌ನನ್ನು ಹೊಂದಿದೆ. 4.4 ಲೀಟರ್ ಶಕ್ತಿಶಾಲಿ ಎಂಜಿನ್ ಅನ್ನು ಹೊಂದಿದೆ. ಇನ್ನು ಅವರ ಬಳಿ ಬೆಂಟ್ಲಿ ಫ್ಲೈಯಿಂಗ್ ಸ್ಪೆರ್, ಟೋಯೊಟಾ ಫಾರ್ಚೂನರ್, ಮತ್ತು ರೆನಾಲ್ಟ್ ಡಸ್ಟರ್ ಕಾರುಗಳು ಕೂಡ ಇವೆ.


Click it and Unblock the Notifications








