ಆಕ್ರಮಣಕಾರಿ ನಾಯಕನ 'ವಿರಾಟ' ದರ್ಶನ

By Nagaraja

ಕೂಲ್ ಕಪ್ತಾನ ಮಹೇಂದ್ರ ಸಿಂಗ್ ಧೋನಿ ವಿರುದ್ಧವಾಗಿ ಯುವ ನಾಯಕ ವಿರಾಟ್ ಕೊಹಿ, ತನ್ನ ಆಕ್ರಮಣಕಾರಿ ಸ್ವಭಾವ ಗುಣದಿಂದಲೇ ಏಕಕಾಲಕ್ಕೆ ಮೈದಾನ ಒಳಗೂ ಹೊರಗೂ ಸುದ್ದಿಯಾಗುತ್ತಾರೆ. ಇದರಿಂದಾಗಿ ಕೊಹ್ಲಿ ಸುತ್ತ ಸದಾ ವಿವಾದದ ಹುತ್ತ ಹುಟ್ಟಿಕೊಂಡಿದೆ. ಇದು ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಮೇಲೂ ಕೆಟ್ಟ ಪರಿಣಾಮ ಬೀರಲು ಕಾರಣವಾಗಿದೆ.

ತಾರೆಗಳು ಕಾರುಗಳನ್ನು ಮಿಸ್ ಮಾಡಿದ್ದೀರಾ?

ಅದೆಲ್ಲ ಏನೇ ಆಗಿರಲಿ ವಿಷಯ ಏನೆಂದರೆ ಇತರ ಸೆಲೆಬ್ರಿಟಿಗಳಂತೆಯೇ ವಿರಾಟ್ ಕೊಹ್ಲಿ ಸಹ ಕಾರು ಪ್ರೇಮಿಯಾಗಿದ್ದಾರೆ. ಅಲ್ಲದೆ ತಮ್ಮ ಬಳಿ ಐಷಾರಾಮಿ ಕಾರುಗಳನ್ನು ಇಟುಕೊಟ್ಟಿದ್ದಾರೆ. ಅಷ್ಟೇ ಯಾಕೆ ಇಂಡಿಯನ್ ಪ್ರೀಮಿಯಲ್ ಲೀಗ್ ಎಂಟನೇ ಆವೃತ್ತಿಯ ವೇಳೆಯಲ್ಲೇ ಎರಡೆರಡು ದುಬಾರಿ ಕಾರುಗಳನ್ನು ತಮ್ಮ ಗ್ಯಾರೇಜ್ ಗೆ ಸೇರಿಸಿಕೊಂಡಿದ್ದಾರೆ. ಅಷ್ಟಕ್ಕೂ ಕೊಹ್ಲಿ ಬಳಿ ಸೇರಿರುವ ಹೊಸ ಕಾರುಗಳ ಯಾವುವು? ಈ ಯುವ ಕ್ರಿಕೆಟಿನಗ ಬಳಿಯಿರುವ ಕಾರುಗಳ ಸಂಪೂರ್ಣ ಪಟ್ಟಿಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

ಆಕ್ರಮಣಕಾರಿ ನಾಯಕನ 'ವಿರಾಟ' ದರ್ಶನ

ಆಗಲೇ ಎರಡು ಆಡಿ ಕಾರುಗಳನ್ನು ತಮ್ಮ ಬಳಿ ಹೊಂದಿರುವ ವಿರಾಟ್ ಅತ್ಯಂತ ವೇಗದ ಹಾಗೂ ದುಬಾರಿ ಆಡಿ ಆರ್8 ಎಲ್ ಎಂಎಕ್ಸ್ ಸೀಮಿತ ಆವೃತ್ತಿಯನ್ನು ತಮ್ಮದಾಗಿಸಿರುವುದು ಸದ್ಯದ ಬಿಸಿ ಬಿಸಿ ಸಮಾಚಾರ.

ಆಕ್ರಮಣಕಾರಿ ನಾಯಕನ 'ವಿರಾಟ' ದರ್ಶನ

ಸ್ವತ: ಆಡಿ ಇಂಡಿಯಾದ ನಿರ್ದೇಶಕ ಜೋ ಕಿಂಗ್ ಅವರೇ ಮುಂದೆ ಬಂದು ಈ ಐಷಾರಾಮಿ ಕ್ರೀಡಾ ಕಾರನ್ನು ವಿರಾಟ್ ಗೆ ಒಪ್ಪಿಸಿರುವುದು ಗಮನಾರ್ಹವೆನಿಸಿದೆ.

ಆಕ್ರಮಣಕಾರಿ ನಾಯಕನ 'ವಿರಾಟ' ದರ್ಶನ

ನಾಲ್ಕು ಉಂಗುರಗಳ ಈ ಆಡಿ ರೂಪದರ್ಶಿಯ ದೆಹಲಿ ಹಾಗೂ ಮುಂಬೈ ಎಕ್ಸ್ ಶೋ ರೂಂ ಬೆಲೆ 2.97 ಕೋಟಿ ರು.ಗಳಿಷ್ಟಿದೆ.

ಆಕ್ರಮಣಕಾರಿ ನಾಯಕನ 'ವಿರಾಟ' ದರ್ಶನ

5.2 ಲೀಟರ್ ವಿ10 ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಆಡಿ ಆರ್ ಎಲ್ ಎಂಎಕ್ಸ್ ಮಾದರಿಯು ಬರೋಬ್ಬರಿ 570 ಅಶ್ವಶಕ್ತಿ (540 ತಿರುಗುಬಲ) ಉತ್ಪಾದಿಸುತ್ತದೆ. 7 ಸ್ಪೀಡ್ ಎಸ್ ಟ್ರಾನಿಕ್ ಗೇರ್ ಬಾಕ್ಸ್ ಸಹ ಇದರಲ್ಲಿರಲಿದ್ದು, ಆಲ್ ವೀಲ್ ಡ್ರೈವಿಂಗ್ ವ್ಯವಸ್ಥೆಯನ್ನು ಹೊಂದಿದೆ.

ಆಕ್ರಮಣಕಾರಿ ನಾಯಕನ 'ವಿರಾಟ' ದರ್ಶನ

ಕೊಹ್ಲಿ ಅವರಂತೆಯೇ ಆಕ್ರಮಣಕಾರಿಯಾಗಿರುವ ಆಡಿ ಎಲ್ ಎಂಎಕ್ಸ್ ಕೇವಲ 3.4 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಹಾಗೂ ಗಂಟೆಗೆ ಗರಿಷ್ಠ 320 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಆಕ್ರಮಣಕಾರಿ ನಾಯಕನ 'ವಿರಾಟ' ದರ್ಶನ

ಎಲ್ ಇಡಿ ಹಾಗೂ ಲೇಸರ್ ಹೈ ಬೀಮ್ ಲೈಟಿಂಗ್ ತಂತ್ರಜ್ಞಾನವು ಆಡಿ ಎಲ್ ಎಂಎಕ್ಸ್ ಮಾದರಿಯ ವಿಶಿಷ್ಟತೆಯಾಗಿದೆ. ಇದನ್ನು ಮೊದಲ ಬಾರಿಗೆ 2013ರ 24 ಹವರ್ಸ್ ಲಿ ಮ್ಯಾನ್ ರೇಸ್ ನಲ್ಲಿ ಬಳಕೆ ಮಾಡಲಾಗಿತ್ತು. ಅಲ್ಲದೆ ರಾತ್ರಿ ಪಯಣದ ವೇಳೆ ಅತ್ಯಂತ ಹೆಚ್ಚು ಸುರಕ್ಷತೆ ಜೊತೆಗೆ ಗರಿಷ್ಠ ನಿರ್ವಹಣೆ, ಹ್ಯಾಡ್ಲಿಂಗ್ ಹಾಗೂ ಆರಾಮದಾಯಕತೆ ಕಾಪಾಡಿಕೊಂಡಿದೆ.

ಆಕ್ರಮಣಕಾರಿ ನಾಯಕನ 'ವಿರಾಟ' ದರ್ಶನ

ಅಂದ ಹಾಗೆ ಸೀಮಿತ 99 ಯುನಿಟ್ ಗಳಷ್ಟು ಮಾತ್ರ ಆಡಿ ಆರ್8 ಎಲ್ ಎಂಎಂಕ್ಸ್ ಮಾರಾಟವಾಗಲಿದೆ. ಈಗ ಇಂತಹದೊಂದು ಅದೃಷ್ಟ ವಿರಾಟ್ ಅವರನ್ನು ಒಲಿದು ಬಂದಿದೆ.

ಆಕ್ರಮಣಕಾರಿ ನಾಯಕನ 'ವಿರಾಟ' ದರ್ಶನ

ಈ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ, ಈ ವಿಶೇಷ ಕಾರಿನ ಸೀಮಿತ 99 ಮಾಲಿಕರ ಪೈಕಿ ತಾನು ಓರ್ವನಾಗಿರುವುದು ಅತೀವ ಖುಷಿ ನೀಡುತ್ತಿದೆ ಎಂದಿದ್ದಾರೆ. ವಾಹನ ಉತ್ಸಾಹಿಯಾಗಿರುವ ತಾನು ಯಾವತ್ತೂ ಆಡಿ ಅಭಿಮಾನಿಯಾಗಿದ್ದೇನೆ ಎಂದಿದ್ದಾರೆ.

ಲಂಬೋರ್ಗಿನಿ ಗಲರ್ಡೊ

ಲಂಬೋರ್ಗಿನಿ ಗಲರ್ಡೊ

ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಅವರು ತಮ್ಮ ಸಹ ಆಟಗಾರ ಸೀನ್ ಅಬಾಟ್ ಜೊತೆ ದೆಹಲಿಯ ರಸ್ತೆಯಲ್ಲಿ ಚಕ್ಕಂದವಾಡುತ್ತಿರುವುದು ಕಂಡುಬಂದಿತ್ತು. ಐಪಿಎಲ್ ಬಿಡುವಿನ ವೇಳೆಯಲ್ಲಿ ಕೊಹ್ಲಿ ಅವರು ತಮ್ಮ ನೂತನ ಲಂಬೋರ್ಗಿನಿ ಗಲರ್ಡೊ ಕಾರಿನಲ್ಲಿ ಜಾಲಿ ರೈಡ್ ಹೊರಟಿದ್ದರು.

ರೆನೊ ಡಸ್ಟರ್

ರೆನೊ ಡಸ್ಟರ್

ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಂಪಾದನೆ ಮಾಡುತ್ತಿರುವ ಕೊಹ್ಲಿ 2012ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿಯಲ್ಲಿನ ಅತ್ಯುತ್ತಮ ಪ್ರದರ್ಶನಕ್ಕಾಗಿ ಸರಣಿಶ್ರೇಷ್ಠ ಪ್ರಶಸ್ತಿ ರೂಪದಲ್ಲಿ ಡಸ್ಟರ್ ಕಾರು ಪಡೆದುಕೊಂಡಿದ್ದರು. ಬಳಿಕ ಕಾಂಪಾಕ್ಟ್ ಎಸ್ ಯುವಿ ವಿಭಾಗದಲ್ಲಿ ಡಸ್ಟರ್ ಮೋಡಿ ಮಾಡಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ.

ಟೊಯೊಟಾ ಫಾರ್ಚ್ಯುನರ್ 4x4

ಟೊಯೊಟಾ ಫಾರ್ಚ್ಯುನರ್ 4x4

ಆಗಲೇ 25 ಲಕ್ಷ ರು.ಗಳಷ್ಟು ದುಬಾರಿಯ ಟೊಯೊಟಾ ಫಾರ್ಚ್ಯುನರ್ 4x4 ಕೊಹ್ಲಿ ಕಾರು ಸಂಗ್ರಹಾಲಯವನ್ನು ಬಂದು ಸೇರಿದೆ. ಇದರಲ್ಲಿ ತ್ರಿ ಲೀಟರ್, ಫೋರ್ ಸಿಲಿಂಡರ್ ಡಿ4ಡಿ ಟರ್ಬೊ ಎಂಜಿನ್ ಆಳವಡಿಸಲಾಗಿದ್ದು, 170 ಅಶ್ವಶಕ್ತಿ (343 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಆಡಿ ಕ್ಯೂ7

ಆಡಿ ಕ್ಯೂ7

ಈಗಾಗಲೇ ನಾವು ತಿಳಿಸಿರುವಂತೆಯೇ ವಿರಾಟ್ ಕೊಹ್ಲಿ ಆಡಿ ಕಾರಿನ ಅಪ್ಪಟ ಅಭಿಮಾನಿಯಾಗಿದ್ದಾರೆ. ಅವರು ಜರ್ಮನಿಯ ಈ ಐಷಾರಾಮಿ ಆಡಿ ಕ್ಯೂ7 ಕ್ರಾಸೋವರ್ ಕಾರನ್ನು ಹೊಂದಿದ್ದಾರೆ. ಇದು 4.2 ಲೀಟರ್ ವಿ8 ಹಾಗೂ 3 ಲೀಟರ್ ವಿ6 ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಇವೆರಡು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೊತೆ ಆಲ್ ವೀಲ್ ಡ್ರೈವ್ ವ್ಯವಸ್ಥೆಯೊಂದಿಗೆ ಲಭ್ಯವಿರಲಿದೆ.

ಆಡಿ ಎಸ್6

ಆಡಿ ಎಸ್6

ಇಲ್ಲಿಗೂ ಕೊಹ್ಲಿ ಆಡಿ ಪ್ರೇಮ ನಿಲ್ಲುವುದಿಲ್ಲ. ಆಡಿ ಎಸ್6 ಐಷಾರಾಮಿ ಸೆಡಾನ್ ಕಾರನ್ನು ಕೊಹ್ಲಿ ಹೊಂದಿದ್ದಾರೆ. ಇದರಲ್ಲಿ ವಿ8 ಟ್ವಿನ್ ಟರ್ಬೊ ಪೆಟ್ರೋಲ್ ಎಂಜಿನ್ ಬಳಕೆಯಾಗಿದ್ದು, 420 ಅಶ್ವಶಕ್ತಿ (550 ತಿರುಗುಬಲ) ಉತ್ಪಾದಿಸಲಾಗುತ್ತದೆ. ಇದರಲ್ಲಿ ಏಳು ಸ್ಪೀಡ್ ಟ್ವಿನ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಇರಲಿದೆ. ಇದು ಒಂದು ಕೋಟಿ ರು.ಗಳಷ್ಟು ದುಬಾರಿಯೆನಿಸಿದೆ.

ಆಡಿ ಆರ್8 ವಿ10

ಆಡಿ ಆರ್8 ವಿ10

ಪ್ರಸ್ತುತ ಲೇಖನದಲ್ಲಿ ನಾವು ಆಡಿ ಆರ್8 ಎಲ್ ಎಂಎಕ್ಸ್ ಸೀಮಿತ ಮಾದರಿಯ ಬಗ್ಗೆ ಮಾತನಾಡಿರುತ್ತೇವೆ. ಇದಕ್ಕೂ ಮೊದಲೇ ಕೊಹ್ಲಿ ಆಡಿ ಆರ್8 ಅತಿ ವೇಗದ ಮಾದರಿಯನ್ನು ತಮ್ಮದಾಗಿಸಿಕೊಂಡಿದ್ದರು. ಇದು ಭಾರತದಲ್ಲಿ ವಿ8 ಹಾಗೂ ವಿ10 ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಪೈಕಿ ವಿ10 ಅತ್ಯಂತ ಶಕ್ತಿಶಾಲಿ 5.2 ಲೀಟರ್ ಎಂಜಿನ್ ಪಡೆದುಕೊಂಡಿದ್ದು, 517 ಅಶ್ವಶಕ್ತಿ (530 ತಿರುಗುಬಲ) ಉತ್ಪಾದಿಸುತ್ತದೆ. ಪ್ರಸ್ತುತ ಕಾರು ಎರಡು ಕೋಟಿ ರು.ಗಳಷ್ಟು ದುಬಾರಿಯೆನಿಸುತ್ತದೆ.

Most Read Articles

Kannada
English summary
Indian Cricketer Virat Kohli Takes Delivery of the Fastest Audi Ever
Story first published: Friday, May 8, 2015, 15:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X