ಸ್ಮಾರ್ಟ್‌ಫೋನ್ ನಿಯಂತ್ರಿತ ಹೈಟೆಕ್ ಸೈಕಲ್ ನೋಡಿದ್ರಾ?

By Nagaraja

ಇದು ಸ್ಮಾರ್ಟ್‌ಫೋನ್ ಯುಗ. ನಿಮ್ಮ ಪ್ರತಿಯೊಂದು ಅಗತ್ಯಗಳಿಗೂ ಸ್ಮಾರ್ಟ್‌ಫೋನ್‌ಗಳನ್ನು ಅವಲಂಬಿಸುವೀರಾ. ಇಂತಹದೊಂದು ಸಾಧ್ಯತೆಯನ್ನು ಮನಗಂಡಿರುವ ವಿಷಿಯೊಬೈಕ್ (Visiobike) ಸ್ಮಾರ್ಟ್‌ಫೋನ್ ನಿಯಂತ್ರಿತ ಸೈಕಲ್ ಅನ್ನು ಅಭಿವೃದ್ಧಿಪಡಿಸಿದೆ.

ಸೈಕಲ್ ತುಳಿಯುವುದು ಪರಿಸರ ಸ್ನೇಹಿ ಜೊತೆಗೆ ನಿಮ್ಮ ಆರೋಗ್ಯಕ್ಕೂ ಹಿತಕರ. ಇದರಂತೆ ಭವಿಷ್ಯ ವಾಹಕವಾದ ಸಂಪೂರ್ಣ ವಿದ್ಯುತ್ ಚಾಲಿತ ಸೈಕಲ್ ನಿರ್ಮಿಸುವಲ್ಲಿ ವಿಷಿಯೊಬೈಕ್ ಯಶಸ್ವಿಯಾಗಿದೆ.

ಸ್ಮಾರ್ಟ್‌ಫೋನ್ ನಿಯಂತ್ರಿತ ಹೈಟೆಕ್ ಸೈಕಲ್ - ವಿಷಿಯೊಬೈಕ್

ಕ್ರೋವೇಶಿಯಾ ಮೂಲದ ವಿಷಿಯೊಬೈಕ್ ಇದನ್ನು ನಿರ್ಮಿಸಿದೆ. ಇಲ್ಲಿ ಸ್ಮಾರ್ಟ್‌ಫೋನ್ ಕನೆಕ್ಟ್ ಮಾಡುವ ಮೂಲಕ ಸೈಕಲನ್ನು ಅನ್‌ಲಾಕ್ ಮಾಡುವುದು, ವೇಗ ನಿಯಂತ್ರಿಸುವುದು ಮುಂತಾದ ಅನೇಕ ವಿಶಿಷ್ಟಗಳನ್ನು ಒಳಗೊಂಡಿದೆ.

ಸ್ಮಾರ್ಟ್‌ಫೋನ್ ನಿಯಂತ್ರಿತ ಹೈಟೆಕ್ ಸೈಕಲ್ - ವಿಷಿಯೊಬೈಕ್

ಅಷ್ಟೇ ಯಾಕೆ ಇದೇ ಸ್ಮಾರ್ಟ್ ಫೋನ್ ಪರದೆ ರಿಯರ್ ವ್ಯೂ ಕ್ಯಾಮೆರಾ ಅಂತೆಯೇ ಜಿಪಿಎಸ್ ಮ್ಯಾಪ್ ರೂಪದಲ್ಲೂ ಕೆಲಸ ಮಾಡಲಿದೆ. ಈ ಮೂಲಕ ಸವಾರರ ಎಲ್ಲ ಅಗತ್ಯಗಳನ್ನು ಪೂರೈಸಲಿದೆ.

ಸ್ಮಾರ್ಟ್‌ಫೋನ್ ನಿಯಂತ್ರಿತ ಹೈಟೆಕ್ ಸೈಕಲ್ - ವಿಷಿಯೊಬೈಕ್

ಆಂಡ್ರಾಯ್ಡ್ ಹಾಗೂ ಐ ಫೋನ್ ನಿಯಂತ್ರಿತ ಸ್ಮಾರ್ಟ್‌ಫೋನ್‌ಗಳು ಸೈಕಲ್‌ನ ಹ್ಯಾಂಡಲ್ ಬಾರ್‌ನಲ್ಲಿ ಲಗತ್ತಿಸಲಾಗಿದ್ದು, ಬ್ಲೂಟೂತ್ ಮುಖಾಂತರ ಕನೆಕ್ಟ್ ಮಾಡಬಹುದಾಗಿದೆ. ಇದು ಹವಾಮಾನ ಸ್ಥಿತಿಗತಿಗಳ ಬಗ್ಗೆಯೂ ಮಾಹಿತಿ ಒದಗಿಸಲಿದೆ.

ಸ್ಮಾರ್ಟ್‌ಫೋನ್ ನಿಯಂತ್ರಿತ ಹೈಟೆಕ್ ಸೈಕಲ್ - ವಿಷಿಯೊಬೈಕ್

ಸ್ಮಾಟ್‌ಫೋನ್ ಸಂಪರ್ಕಿತ ವಿಷಿಯೊಬೈಕ್ ಸೈಕಲ್‌ನ ಮಗದೊಂದು ಗಮನಾರ್ಹ ವೈಶಿಷ್ಟ್ಯವೆಂದರೆ ಇದರ ಆಟೋಮ್ಯಾಟಿಕ್ ಅಪಘಾತ ರೆಕಾರ್ಡಿಂಗ್ ತಂತ್ರಜ್ಞಾನವು ಸೈಕಲ್ ಅಪಘಾತಕ್ಕೀಡಾದ್ದಲ್ಲಿ ತಕ್ಷಣ ಎಮರ್ಜನ್ಸಿ ಅಲರ್ಟ್ ಸಂದೇಶ ರವಾನಿಸಲಿದೆ.

ಸ್ಮಾರ್ಟ್‌ಫೋನ್ ನಿಯಂತ್ರಿತ ಹೈಟೆಕ್ ಸೈಕಲ್ - ವಿಷಿಯೊಬೈಕ್

ಅಷ್ಟೇ ಅಲ್ಲದೆ ಪುರಾವೆಯ ರೂಪದಲ್ಲಿ ಕೊನೆಯ ಮೂರು ನಿಮಿಷಗಳ ಚಾಲನೆಯನ್ನು ಸಂಪೂರ್ಣವಾಗಿ ರೆಕಾರ್ಡಿಂಗ್ ಮಾಡುತ್ತದೆ. ಇದು ನಿಮ್ಮ ಸುಗಮ ಚಾಲನೆಗಾಗಿ ಮಾಹಿತಿಗಳನ್ನು ಶೇಖರಿಸುತ್ತದೆ.

ಸ್ಮಾರ್ಟ್‌ಫೋನ್ ನಿಯಂತ್ರಿತ ಹೈಟೆಕ್ ಸೈಕಲ್ - ವಿಷಿಯೊಬೈಕ್

ಮಡಚುವ ತಂತ್ರಜ್ಞಾನ ಇಲ್ಲದಿದ್ದರೂ ಕಾರ್ಬನ್ ಫೈಬರ್ ದೇಹ ವಿನ್ಯಾಸ ಹೊಂದಿರುವ ವಿಷಿಯೊಬೈಕ್ 180ಎಂಎಂ/160ಎಂಎಂ ಹೈಡ್ರಾಲಿಕ್ ಡಿಸ್ಕ್ ಬ್ರೇಕ್ ಮತ್ತು ಸಾಂಕ್ಚರ್ ಫಾರ್ಕ್ ಪಡೆದುಕೊಂಡಿದೆ. ಇದು ಮೌಂಟೆನ್ ಬೈಕ್‌ಗಿಂತಲೂ ಸ್ವಲ್ಪ ದೊಡ್ಡದಾಗಿರುತ್ತದೆ.

ಸ್ಮಾರ್ಟ್‌ಫೋನ್ ನಿಯಂತ್ರಿತ ಹೈಟೆಕ್ ಸೈಕಲ್ - ವಿಷಿಯೊಬೈಕ್

21 ಕೆ.ಜಿ ಭಾರದ ಈ ವಿದ್ಯುತ್ ಚಾಲಿತ ಬೈಕ್ ಗಂಟೆಗೆ 64 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಸ್ಮಾರ್ಟ್‌ಫೋನ್ ನಿಯಂತ್ರಿತ ಹೈಟೆಕ್ ಸೈಕಲ್ - ವಿಷಿಯೊಬೈಕ್

ಎರಡು ವಿಧದ ವಿದ್ಯುತ್ ಚಾಲಿತ ಮೋಟಾರುಗಳಲ್ಲಿ ವಿಷಿಯೊಬೈಕ್ (250w, 500w) ಲಭ್ಯವಿದೆ. ಮಾತ್ರವಲ್ಲದೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ತಂತ್ರಜ್ಞಾನವು ಇತರ ಸೈಕಲ್‌ಗಿಂತಲೂ ವಿಭಿನ್ನವಾಗಿಸುತ್ತದೆ.

ಸ್ಮಾರ್ಟ್‌ಫೋನ್ ನಿಯಂತ್ರಿತ ಹೈಟೆಕ್ ಸೈಕಲ್ - ವಿಷಿಯೊಬೈಕ್

ಇದರ ಲಿಥಿಯಂ ಇಯಾನ್ ಬ್ಯಾಟರಿಯನ್ನು (14.5Ah battery) ಸಾಮಾನ್ಯ ಪ್ಲಗ್‌ಗಳಲ್ಲಿ ಮೂರು ತಾಸುಗಳಷ್ಟು ಚಾರ್ಜ್ ಮಾಡಿಸಿದ್ದಲ್ಲಿ 62 ಮೈಲ್ ದೂರದ ವರೆಗೆ ಸರಾಗವಾಗಿ ಸಾಗಬಹುದಾಗಿದೆ.

ಸ್ಮಾರ್ಟ್‌ಫೋನ್ ನಿಯಂತ್ರಿತ ಹೈಟೆಕ್ ಸೈಕಲ್ - ವಿಷಿಯೊಬೈಕ್

ಸಹಜವಾಗಿಯೇ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ವಿಷಿಯೋಬೈಕ್ ದರ ಕೂಡಾ ಸ್ವಲ್ಪ ದುಬಾರಿಯಾಗಿದೆ. ಇದು ಮೂರರಿಂದ ನಾಲ್ಕು ಲಕ್ಷ ರು.ಗಳಷ್ಟು ಬೆಲೆಬಾಳುತ್ತದೆ.

ಸ್ಮಾರ್ಟ್‌ಫೋನ್ ನಿಯಂತ್ರಿತ ಹೈಟೆಕ್ ಸೈಕಲ್ - ವಿಷಿಯೊಬೈಕ್

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಇದರಲ್ಲಿರುವ ವಿದ್ಯುನ್ಮಾನ ತಂತ್ರಜ್ಞಾನವು ನೀವು ಸೆಟ್ ಮಾಡಿರುವ ವೈಯಕ್ತಿಕ ಕೋಡ್ ಅನ್‌ಲಾಕ್ ಮಾಡಿದ್ದಲ್ಲಿ ಮಾತ್ರ ಚಾಲನಾ ಮುಕ್ತವಾಗಲಿದೆ. ಅಂತೆಯೇ ರಿಯರ್ ವೀಲ್‌ನಲ್ಲಿ ಆಟೋಮ್ಯಾಟಿಕ್ ಲಾಕಿಂಗ್ ಹಾರ್ಡ್‌ವೇರ್ ತಂತ್ರಜ್ಞಾನ ಸಹ ಆಳವಡಿಸಲಾಗಿದೆ.

ಸ್ಮಾರ್ಟ್‌ಫೋನ್ ನಿಯಂತ್ರಿತ ಹೈಟೆಕ್ ಸೈಕಲ್ - ವಿಷಿಯೊಬೈಕ್

ಇವೆಲ್ಲದಕ್ಕಿಂತಲೂ ಮಿಗಿಲಾಗಿ ನಿಮ್ಮ ವಿಷಿಯೊಬೈಕ್ ಕಳ್ಳತನವಾದ್ದಲ್ಲಿ ಜಿಪಿಎಸ್ ಹಾಗೂ ಮೋಷನ್ ಸೆನ್ಸಾರ್ ಮೂಲಕ ಟ್ರ್ಯಾಕ್ ಮಾಡಬಹುದಾಗಿದೆ. ಒಟ್ಟಿನಲ್ಲಿ ಸಂಪೂರ್ಣವಾಗಿಯೂ ಗ್ರಾಹಕ ಸ್ನೇಹಿ ಸೈಕಲ್ ಎನಿಸಿಕೊಂಡಿದೆ.

More from DriveSpark

Article Published On: Monday, June 30, 2014, 11:05 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+