ವೈಫೈ ಸೀಟ್‍ಗಳನ್ನು ನೀಡಲಿದೆ ವಿಸ್ತಾರಾ ಏರ್‍ಲೈನ್ಸ್
ವಿಸ್ತಾರಾ ಏರ್‍ಲೈನ್ಸ್ ಸೋಮವಾರ ತನ್ನ ಮೊದಲ ಬೋಯಿಂಗ್ 787-9 ಡ್ರೀಮ್‍ಲೈನರ್ ವಿಮಾನವನ್ನು ಅನಾವರಣಗೊಳಿಸಿದೆ. ಇದು ಕಂಪನಿಯು ಹೊಂದುತ್ತಿರುವ ಮೊದಲ ವೈಡ್ ಬಾಡಿ ವಿಮಾನವಾಗಿದೆ.

ಇದರಿಂದಾಗಿ ವಿಸ್ತಾರಾ ಕಂಪನಿಯು ಭಾರತದ ಮೊದಲ ಬೋಯಿಂಗ್ 787-9 ಡ್ರೀಮ್‍ಲೈನರ್ ಕಂಪನಿಯಾಗಲಿದೆ. ಬೋಯಿಂಗ್ 787-9 ಡ್ರೀಮ್‍ಲೈನರ್ ವಿಮಾನವು ವಾಷಿಂಗ್ಟನ್‍ನಲ್ಲಿರುವ ಬೋಯಿಂಗ್ ಫ್ಯಾಕ್ಟರಿಯಿಂದ ನವದೆಹಲಿಗೆ ಫೆಬ್ರವರಿ 29ರಂದು ಆಗಮಿಸಿದೆ.

ಗಮನಿಸಬೇಕಾದ ಸಂಗತಿಯೆಂದರೆ 787-9 ಡ್ರೀಮ್‍ಲೈನರ್ ಹಾರಾಟ ನಡೆಸುವಾಗ ವೈಫೈ ಸೌಲಭ್ಯವನ್ನು ನೀಡುವ ಮೊದಲ ವಿಮಾನವಾಗಿದೆ. ಈ ವಿಮಾನವನ್ನು ಅಂತರ್‍ರಾಷ್ಟ್ರೀಯ ಹಾರಾಟಕ್ಕಾಗಿಯೂ ಸಹ ಬಳಸಬಹುದಾಗಿದೆ.

ಎಕಾನಮಿ ಕ್ಲಾಸ್ ವಿಮಾನದಲ್ಲಿರುವ ಸೀಟುಗಳ ಹಿಂಭಾಗದಲ್ಲಿ 12 ಇಂಚಿನ ಸ್ಕ್ರೀನ್ ಹಾಗೂ ಆರು ರೀತಿಯ ಹೆಡ್‍ರೆಸ್ಟ್ ಗಳನ್ನು ನೀಡಲಾದರೆ, ಬಿಸಿನೆಸ್ ಕ್ಲಾಸ್ ವಿಮಾನಗಳಲ್ಲಿ 18 ಇಂಚಿನ ಸ್ಕ್ರೀನ್‍ಗಳನ್ನು ನೀಡಲಾಗುವುದು. ಬಿಸಿನೆಸ್ ಕ್ಲಾಸ್ ವಿಮಾನಗಳಲ್ಲಿಯೂ ಸಹ ಆರು ರೀತಿಯ ಹೆಡ್‍ರೆಸ್ಟ್ ಗಳನ್ನು ನೀಡಲಾಗುವುದು.

ಲಗೇಜ್ ಬದಲಿಗೆ ಮಿರರ್, ದೊಡ್ಡ ಟೇಬಲ್‍ಗಳನ್ನು ಬಿಸಿನೆಸ್ ಕ್ಲಾಸ್ ವಿಮಾನಗಳ ಸೀಟ್‍ಗಳಲ್ಲಿ ನೀಡಲಾಗಿದೆ. ಪ್ರೀಮಿಯಂ ಎಕಾನಮಿ ಕ್ಲಾಸ್ ವಿಮಾನಗಳ ಸೀಟುಗಳ ಹಿಂಬದಿಯಲ್ಲಿ 13 ಇಂಚಿನ ಸ್ಕ್ರೀನ್ ನೀಡಲಾಗಿದೆ. ಇದರ ಜೊತೆಗೆ ವಿಸ್ತರಿಸಿದ ಫುಟ್‍ರೆಸ್ಟ್ ನೀಡಲಾಗಿದೆ.

ಇದರಿಂದಾಗಿ ಪ್ರಯಾಣಿಕರು ದೂರ ಪ್ರಯಾಣ ಮಾಡುವಾಗ ವಿಶ್ರಾಂತಿ ಪಡೆಯಬಹುದು. ಬೋಯಿಂಗ್ 787-9 ಡ್ರೀಮ್‍ಲೈನರ್ ವಿಮಾನದಲ್ಲಿ ಒಟ್ಟು 299 ಸೀಟುಗಳನ್ನು ನೀಡಲಾಗಿದೆ. ಈ ವಿಮಾನದ ಬಹುತೇಕ ಎಲ್ಲಾ ಜಾಗಗಳಲ್ಲಿಯೂ ಯುಎಸ್‍ಬಿ ಪೋರ್ಟ್ ಹಾಗೂ 3 ಪಿನ್ ಚಾರ್ಜಿಂಗ್ ಪಾಯಿಂಟ್‍ಗಳನ್ನು ನೀಡಲಾಗಿದೆ.

ಈ ವಿಮಾನವನ್ನು ಭಾರತದಿಂದ ಯುರೋಪ್ ಅಥವಾ ಜಪಾನ್‍ಗಳಿಗೆ ಪ್ರಯಾಣಕ್ಕಾಗಿ ಬಳಸುವ ಸಾಧ್ಯತೆಗಳಿವೆ. ಪ್ರಯಾಣಿಕರ ಮನರಂಜನೆಗಾಗಿ 150ಕ್ಕೂ ಹೆಚ್ಚು ಸಿನಿಮಾಗಳನ್ನು ಒದಗಿಸಲಾಗಿದೆ. ಈ ವಿಮಾನದಲ್ಲಿ 30 ಸೀಟುಗಳನ್ನು ಬಿಸಿನೆಸ್ ಕ್ಲಾಸ್‍ಗಾಗಿ, 21 ಸೀಟ್‍ಗಳನ್ನು ಪ್ರೀಮಿಯಂ ಎಕಾನಾಮಿ ಹಾಗೂ 248 ಸೀಟ್‍ಗಳನ್ನು ಎಕಾನಾಮಿ ಕ್ಲಾಸ್‍ಗಾಗಿ ನೀಡಲಾಗಿದೆ.

ಈ ಹೊಸ ವಿಮಾನವು ಹಲವಾರು ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ಈ ವಿಮಾನವು ಸದ್ಯದಲ್ಲಿಯೇ ಭಾರತದಿಂದ ತನ್ನ ಕಾರ್ಯಾಚರಣೆಯನ್ನು ಆರಂಭಿಸಲಿದೆ. ಭಾರತದಲ್ಲಿ ಮೊದಲ ಬಾರಿಗೆ ಕಾರ್ಯಾಚರಿಸಲಿರುವುದರಿಂದ ಈ ವಿಮಾನದ ಬಗ್ಗೆ ಹಲವಾರು ಕುತೂಹಲಗಳಿವೆ.


Click it and Unblock the Notifications