ಸೈಕಲ್ ತುಳಿಯುವಾಗ ಅವಮಾನ: ಮೀನು ಹಿಡಿಯುವ ವೀಡಿಯೊದಿಂದ ಬಂದ ಹಣದಿಂದ ಕಾರು ಖರೀದಿಸಿ ಪ್ರತೀಕಾರ!

ಇಂದು ಸೋಷಿಯಲ್ ಮೀಡಿಯಾಗಳ (Social media) ಯುಗ. ಸೋಷಿಯಲ್ ಮೀಡಿಯಾಗಳಲ್ಲಿ ಮಿಂಚಿ ಹಲವರು ಸೆಲೆಬ್ರಿಟಿಗಳಾಗಿ ಮಿಂಚುತ್ತಿದ್ದಾರೆ. ಹೆಚ್ಚಿನ ಜನರು ವ್ಲಾಗ್ ಮಾಡುವುದನ್ನು ವೃತ್ತಿಯಾಗಿ ಅನುಸರಿಸುತ್ತಾರೆ, ಇದು ಹೆಚ್ಚಿನ ಸಂಖ್ಯೆಯ ಜನರಿಗೆ ಆದಾಯದ ಮೂಲವಾಗಿದೆ. ಅವರಿಗೂ ಇಂದು ಸೆಲೆಬ್ರಿಟಿ ಸ್ಥಾನಮಾನವಿದೆ. ಕೆಲವರು ಫುಡ್, ಟ್ರಾವೆಲ್ ಮತ್ತು ಇತರ ಭಿನ್ನ ಕ್ಷೇತ್ರದ ವ್ಲಾಗ್ ಮಾಡುತ್ತಾರೆ. ಇದೇ ರೀತಿ ಫಿಶಿಂಗ್ ವ್ಲಾಗ್ ಮಾಡುವರು ಕೂಡ ಇದ್ದಾರೆ. ಇವರಗಳು ಕೂಡ ಇತರ ಕ್ಷೇತ್ರದ ವ್ಲಾಗರ್ ಗಳೆಂತೆ ದೊಡ್ಡ ಮಟ್ಟದ ಫಾಲವರ್ಸ್ ಗಳನ್ನು ಹೊಂದಿದ್ದಾರೆ.

ಆದರೆ ಈ ಗುಂಪಿನಲ್ಲಿ ಯಾರು ರಾಜ ಕೇಳಿದರೆ ಕಡಲ್ ಕೊಂಬನ್ (Kadal komban) ಎಂಬ ಶ್ರೀರಾಜ್ ಹೆಸರನ್ನೇ ಹೇಳಬೇಕಾಗುತ್ತದೆ. ವಾರಗಟ್ಟಲೆ ಆಳ ಸಮುದ್ರಕ್ಕೆ ಹೋಗಿ ಮೀನು ಹಿಡಿದು ವೀಕ್ಷಕರಿಗೆ ತಲುಪಿಸುವ ನಿಜವಾದ ಸೀ ವ್ಲಾಗರ್ ಎಂದು ಇವರು ಎಂದು ಅವರ ಅಭಿಮಾನಿಗಳು ಬಣ್ಣಿಸುತ್ತಾರೆ. ಫಿಶಿಂಗ್ ವ್ಲಾಗ್ ವಿಭಾಗದಲ್ಲಿ ಕಡಲ್ ಕೊಂಬನ್ ಎಂಬ ಶ್ರೀರಾಜ್ ಹೆಚ್ಚು ಜನಪ್ರಿಯರಲ್ಲಿ ಒಬ್ಬರು.

Maruti Suzuki Alto

ವಾರಗಟ್ಟಲೆ ಆಳ ಸಮುದ್ರಕ್ಕೆ ಹೋಗಿ ಮೀನು ಹಿಡಿದು ವೀಕ್ಷಕರಿಗೆ ತಲುಪಿಸುವ ನಿಜವಾದ ಸೀ ವ್ಲಾಗರ್ ಎಂದು ಅವರ ಅಭಿಮಾನಿಗಳು ಬಣ್ಣಿಸುತ್ತಾರೆ. ಕಡಲ್ ಕೊಂಬನ್ ಇನ್‌ಸ್ಟಾಗ್ರಾಮ್‌ನಲ್ಲಿ 4 ಲಕ್ಷ, ಫೇಸ್‌ಬುಕ್‌ನಲ್ಲಿ 5 ಲಕ್ಷ ಮತ್ತು ಯೂಟ್ಯೂಬ್‌ನಲ್ಲಿ 8 ಲಕ್ಷ ಫಾಲವರ್ಸ್ ಹೊಂದಿದ್ದಾರೆ. ಕಡಲ್ ಕೊಂಬನ್ ಶ್ರೀರಾಜ್ ಅವರು ಈಗ ಹೊಸ ಮಾರುತಿ ಸುಜುಕಿ ಆಲ್ಟೋ ಕಾರನ್ನು ಖರೀದಿಸಿದ್ದಾರೆ.

ಶ್ರೀರಾಜ್ ಅವರು ತಮ್ಮ ಪ್ರಯಾಣಕ್ಕಗಿ ಖರೀದಿಸಿರುವುದು ಕೋಟಿಗಟ್ಟಲೆ ಬೆಲೆಬಾಳುವ ಐಷಾರಾಮಿ ಕಾರು ಏನೂ ಅಲ್ಲ. ಅದು ಮಾರುತಿ ಸುಜುಕಿ ಆಲ್ಟೊ (Maruti Suzuki Alto) ಆಗಿದೆ. ಈ ಜನಸಾಮಾನ್ಯರ ಮೆಚ್ಚಿನ ಕಾರ್ ಇದಾಗಿದೆ. ಇವರು ಖರೀದಿಸಿರುವುದು ಸೆಕೆಂಡ್ ಹ್ಯಾಂಡ್ ಮಾಡೆಲ್ ಮಾರುತಿ ಸುಜುಕಿ ಆಲ್ಟೊ ಆಗಿದೆ. ಶ್ರೀರಾಜ್ ಅವರು ತಮ್ಮ ಈ ಕಾರನ್ನು ಲಕ್ಸ್ ಮೋಟೋ ಮಿನಿ ಎಂಬ ಹೊಟೇಲ್ ಶೋರೂಮ್‌ನಿಂದ ಸ್ವಾಗತಿಸಿದ್ದಾರೆ.

Maruti Suzuki Alto

ಈ ವಿಡಿಯೋವನ್ನು ಅವರು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಪ್ರೀತಿಗೆ ಮೋಸ ಮಾಡವನಲ್ಲ. ಸೈಕಲ್ ತುಳಿದು ಜೀವನ ಸಾಗಿಸು ಎಂದು ಅವಮಾನಿಸಿದ ಇದು ಪ್ರತ್ಯುತ್ತರ ಎಂಬ ಶೀರ್ಷಿಕೆಯೊಂದಿಗೆ ಹೊಸ ಕಾರಿನ ವಿಡಿಯೋವನ್ನು ಕಡಲ್ ಕೊಂಬನ್ ಶೇರ್ ಮಾಡಿದ್ದಾರೆ. ನಾನು ಸಾಧಿಸುವ ಪ್ರತಿಯೊಂದು ಯಶಸ್ಸು ನನ್ನನ್ನು ಪ್ರೀತಿಸುವ ಅನೇಕ ಜನರ ಪ್ರೀತಿಯಿಂದದಾಗಿದೆ ಮತ್ತು ಅವರ ಪ್ರೀತಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಈ ವಿಡಿಯೋವನ್ನು ಈಗಾಗಲೇ ಸುಮಾರು ಒಂದು ಲಕ್ಷ ಮಂದಿ ಲೈಕ್ ಮಾಡಿದ್ದಾರೆ. ಮಾರುತಿ ಸುಜುಕಿ ಆಲ್ಟೊ ಭಾರತದಲ್ಲಿ ಅತ್ಯಂತ ಜನಪ್ರಿಯ ವಾಹನಗಳಲ್ಲಿ ಒಂದಾಗಿದೆ, ಎರಡು ದಶಕಗಳ ಹಿಂದೆ ಮಾರುಕಟ್ಟೆಗೆ ಬಂದ ನಂತರ 40 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿದೆ. ಆಲ್ಟೊ ತನ್ನ ಮೈಲೇಜ್, ಪ್ರಾಯೋಗಿಕತೆ ಮತ್ತು ಕೈಗೆಟುಕುವ ಬೆಲೆಯಿಂದಾಗಿ ಮಾರುಕಟ್ಟೆಯಲ್ಲಿ ಅಲೆಯನ್ನು ಸೃಷ್ಟಿಸಿತು.

ಮಾರುತಿ ಸುಜುಕಿ ಆಲ್ಟೊ ಕಾರು ಸತತ 16 ವರ್ಷಗಳಿಂದ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರು. ಮಾರುತಿ ಆಲ್ಟೊ 800cc 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 48 bhp ಪವರ್ ಮತ್ತು 96 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಗಮನಾರ್ಹವಾಗಿ, ಮಾರುತಿಯು ಕಾರ್ಖಾನೆಯಲ್ಲಿ ಅಳವಡಿಸಲಾಗಿರುವ CNG ಕಿಟ್‌ನೊಂದಿಗೆ ಬರುವ S-CNG ರೂಪಾಂತರವನ್ನು ಸಹ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.

Article Published On: Tuesday, December 10, 2024, 17:19 [IST]
English summary
Vlogger kadalkomban buys used maruti suzuki alto details
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+