ಗಾತ್ರ ಚಿಕ್ಕದಾದ್ರೂ ಸೇಫ್ಟಿಯಲ್ಲಿ ದೊಡ್ಡದು: ಎರಡು 5-ಸ್ಟಾರ್ ರೇಟೆಡ್ ಕಾರುಗಳ ನಡುವೆ ಸಿಲುಕಿದ ಪೋಲೊ
ವಾಹನ ಸ್ಥಗಿತಗೊಂಡ್ರು ಅದರ ಕ್ರೇಜ್ ಕಡಿಮೆಯಾಗದ ಕಾರಂದ್ರೆ ಅದು ಫೊಕ್ಸ್‌ವ್ಯಾಗನ್ ಪೋಲೊ. ಈ ಮಾದರಿಗೆ ದೇಶದಾದ್ಯಂತ ಹಲವಾರು ಅಭಿಮಾನಿಗಳು ಇದ್ದಾರೆ. ಇದು ಸುರಕ್ಷಿತ ಕಾರು ಕೂಡ ಹೌದು, ಇತ್ತೀಚೆಗೆ 5- ಸ್ಟಾರ್ ರೇಟಿಂಗ್ ಪಡೆದಿರುವ ಎರಡು ಕಾರುಗಳ ನಡುವೆ ಸಿಲುಕಿ ಅಪಘಾತಕ್ಕೊಳಗಾಗಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ.
5- ಸ್ಟಾರ್ ರೇಟೆಡ್ ಮಹೀಂದ್ರಾ ಸ್ಕಾರ್ಪಿಯೊ-ಎನ್ ಎಸ್‌ಯುವಿಗಳ ನಡುವೆ ಪೋಲೊ ಸ್ಯಾಂಡ್‌ವಿಚ್‌ನಂತೆ ಸಿಲುಕಿ ಅಪಘಾತಕ್ಕೆ ಒಳಗಾಗಿದೆ. ಬಾನೆಟ್ ಹಾಗೂ ಹಿಂಭಾಗದಲ್ಲಿ ಹಾನಿಯಾಗಿದ್ರು ಅದರ ಪ್ರಭಾವ ಒಳಭಾಗದವೆರೆಗೆ ತಲುಪಿಲ್ಲ. ಹಾಗೆಯೇ ಡಿಕ್ಕಿ ಹೊಡೆದ ಸ್ಕಾರ್ಪಿಯೋ-ಎನ್ ಕಾರುಗಳಿಗು ಕೂಡ ಹಾನಿಯಾಗಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು.

ಮಾಹಿತಿಯ ಪ್ರಕಾರ, ಪೋಲೊ ಮತ್ತು ಸ್ಕಾರ್ಪಿಯೊ-ಎನ್ ಎಸ್‌ಯುವಿಗಳಲ್ಲಿ ಒಂದನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಅದೇ ಸಮಯದಲ್ಲಿ ಮತ್ತೊಂದು ಸ್ಕಾರ್ಪಿಯೋ-ಎನ್ ಪೋಲೋಗೆ ಹೆಚ್ಚಿನ ವೇಗದಲ್ಲಿ ಡಿಕ್ಕಿ ಹೊಡೆದಿದ್ದು, ಪೋಲೋ ನೇರವಾಗಿ ರಸ್ತೆಬದಿ ನಿಲ್ಲಿಸಿದ್ದ ಮತ್ತೊಂದು ಸ್ಕಾರ್ಪಿಯೋ ಎನ್ ಕಾರಿಗೆ ಅಪ್ಪಳಿಸಿದೆ. ನಂತರ ಎರಡು SUVಗಳ ನಡುವೆ ಸಿಲುಕಿದೆ.
ಡಿಕ್ಕಿ ಹೊಡೆದ ಸ್ಕಾರ್ಪಿಯೋ ಎನ್ ಚಾಲಕ ಕುಡಿದು ಚಾಲನೆ ಮಾಡಿರುವುದು ತಿಳಿದುಬಂದಿದೆ. ಕುಡಿದ ಅಮಲಿನಲ್ಲಿ ನಿಲ್ಲಿಸಿದ್ದ ಕಾರುಗಳು ಚಲಿಸುತ್ತಿರುವಂತೆ ಭಾವಿಸಿದ್ದು, ಈ ವೇಳೆ ಡಿಕ್ಕಿ ಸಂಭವಿಸಿದೆ ಎಂದು ಆತ ಹೇಳಿದ್ದಾನೆ. ಪೊಲೊಗೆ ಅಪ್ಪಳಿಸಿದ ಬಳಿಕ ಸಿಲ್ವರ್ ಸ್ಕಾರ್ಪಿಯೊ-ಎನ್ ಮುಂಭಾಗ ಹಾನಿಯಾದ್ರೆ, ಪೋಲೊ ಎರಡು ಕಾರುಗಳ ನಡುವೆ ಸಿಲುಕಿಕೊಂಡು ಹೆಚ್ಚಿನ ಹಾನಿಯಾಗಿರುವುದು ವಿಡಿಯೋದಲ್ಲಿ ನೋಡಬಹುದು.

ಪೋಲೋ 4-ಸ್ಟಾರ್ ರೇಟಿಂಗ್: ಪೊಲೋ ಕೂಡ ಉತ್ತಮ ರಕ್ಷಣೆ ನೀಡುವ ಕಾರಾಗಿರುವುದರಿಂದ ಪೋಲೋ ಮುಂಭಾಗ ಮತ್ತು ಹಿಂಭಾಗದಲ್ಲಿ ಹಾನಿಯಾದ್ರೂ ಅದರ ಪಿಲ್ಲರ್‌ಗಳು ಮತ್ತು ಕ್ಯಾಬಿನ್‌ಗಳು ಯಥಾಸ್ಥಿತಿಯಲ್ಲಿದ್ದು, ಬಾಗಿಲುಗಳು ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ವೋಕ್ಸ್‌ವ್ಯಾಗನ್ ಪೋಲೊ NCAP ನಿಂದ ನಾಲ್ಕು-ಸ್ಟಾರ್ ರೇಟಿಂಗ್ ಪಡೆದಿದೆ.
ಮೊದಲಿಗೆ 0 ರೇಟಿಂಗ್: ಹಿಂದೆ 2014 ರಲ್ಲಿ, ವೋಕ್ಸ್‌ವ್ಯಾಗನ್ ಪೋಲೊ ಪರೀಕ್ಷೆಗೆ ಒಳಗಾದಾಗ ಶೂನ್ಯ-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿತ್ತು. ಬಳಿಕ ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ವರ್ಧನೆಗಳೊಂದಿಗೆ ಸಜ್ಜುಗೊಳಿಸುವ ಮೂಲಕ ಫೋಕ್ಸ್‌ವ್ಯಾಗನ್ ಪೊಲೊ ಗ್ಲೋಬಲ್ NCAP ನಿಂದ ಪ್ರಭಾವಶಾಲಿ ನಾಲ್ಕು-ಸ್ಟಾರ್ ವಯಸ್ಕರ ಸುರಕ್ಷತಾ ರೇಟಿಂಗ್ ಪಡೆಯಿತು.
ಸ್ಕಾರ್ಪಿಯೋ-ಎನ್ 5-ಸ್ಟಾರ್ ರೇಟಿಂಗ್: ಗ್ಲೋಬಲ್ ಎನ್‌ಸಿಎಪಿ ಹೊಸ ಮಹೀಂದ್ರಾ ಸ್ಕಾರ್ಪಿಯೊ-ಎನ್‌ಗೆ 5-ಸ್ಟಾರ್ ಸುರಕ್ಷತಾ ರೇಟಿಂಗ್ ನೀಡಿದೆ. ವಯಸ್ಕರ ಸುರಕ್ಷತೆಯಲ್ಲಿ 5-ಸ್ಟಾರ್ ಹಾಗೂ ಮಕ್ಕಳ ಸುರಕ್ಷತೆಯಲ್ಲಿ ಶ್ಲಾಘನೀಯ 3-ಸ್ಟಾರ್ ರೇಟಿಂಗ್ ಪಡೆದಿದೆ. ಒಟ್ಟಾರೆ ಮಹೀಂದ್ರಾ ಕಂಪನಿಯು ಪ್ರಯಾಣಿಕರಿಗೆ ಅತ್ಯಂತ ಸುರಕ್ಷತೆಯ ಕಾರನ್ನು ನೀಡುವಲ್ಲಿ ಯಶಸ್ವಿಯಾಗಿದೆ.
ಟಾಟಾ ಹಾಗೂ ಮಹೀಂದ್ರಾ ಎರಡೂ ಬ್ರಾಂಡ್‌ಗಳು ದೇಶದಲ್ಲಿ ಅತ್ಯುತ್ತಮ ಫೀಚರ್‌ಗಳ ಜೊತೆಗೆ ಸುರಕ್ಷತೆಯನ್ನು ಖಾತ್ರಿ ಪಡಿಸಿಕೊಳ್ಳುತ್ತಿವೆ. ದೇಶಿಯ ಬ್ರಾಂಡ್‌ಗಳು ಸದ್ಯ ಭಾರತದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುತ್ತಿರುವುದು ಖುಷಿಯ ಸಂಗತಿ. ಸೇಫ್ಟಿ ವಿಷಯದಲ್ಲಿ ಭಾರತದಲ್ಲಿ ವಿದೇಶಿ ಬ್ರಾಂಡ್‌ಗಳನ್ನು ಹಿಂದುಕ್ಕುತ್ತಿರುವ ಸ್ವದೇಶಿ ಬ್ರಾಂಡ್‌ಗಳ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications