ಬರೋಬ್ಬರಿ 16 ಲಕ್ಷ ಕಿ.ಮೀ ಕ್ರಮಿಸಿದ ವ್ಯಕ್ತಿಗೆ ದುಬಾರಿ ಕಾರನ್ನು ಗಿಫ್ಟ್ ನೀಡಿದ ವೋಲ್ವೋ ಕಂಪನಿ

ಭಾರತದಲ್ಲಿ ಟೊಯೋಟಾ ಕಂಪನಿಯು ಸಾಮಾನ್ಯವಾಗಿ ವಿಶ್ವಾಸಾರ್ಹತೆಗೆ ಹೆಸರುವಾಸಿಯಾದ ಬ್ರ್ಯಾಂಡ್ ಆಗಿ ಗುರ್ತಿಸಿಕೊಂಡಿದೆ. ಮೊದಲ ತಲೆಮಾರಿನ ಕೆಲವು ಟೊಯೊಟಾ ಇನ್ನೋವಾ ಮತ್ತು ಕ್ವಾಲಿಸ್ ಲಕ್ಷ ಕಿ.ಮೀ ಓಡಿದ್ದರೂ ಯಾವುದೇ ಸಮಸ್ಯೆಗಳಿಲ್ಲದೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.

Recommended Video

Kia EV6 ಎಸ್‌ಯುವಿ ಭಾರತದಲ್ಲಿ ಬಿಡುಗಡೆ | Price Rs 59.95 Lakh | Warranty, Deliveries, Variants #Launch

ವೋಲ್ವೋ ಕೂಡ ಅಂತಹ ತಯಾರಕ ಕಂಪನಿಗಳಲ್ಲಿ ಒಂದಾಗಿದೆ, ಈ ಕಂಪನಿಯು ಕೆಲವು ಸುರಕ್ಷಿತ ಕಾರುಗಳನ್ನು ತಯಾರಿಸುವ ಮೂಲಕ ಖರೀದಿದಾರರಲ್ಲಿ ಜನಪ್ರಿಯವಾಗಿದೆ. ಕಂಪನಿಯು ಸುರಕ್ಷತೆಯಲ್ಲಿ ಯಾವುದೇ ರಾಜೀಯಿಲ್ಲದೇ ವಿಶ್ವಾಸಾರ್ಹ ಕಾರುಗಳನ್ನು ತಯಾರಿಸುತ್ತಿದೆ.

ಬರೋಬ್ಬರಿ 16 ಲಕ್ಷ ಕಿ.ಮೀ ಕ್ರಮಿಸಿದ ವ್ಯಕ್ತಿಗೆ ಐಷಾರಾಮಿ ಕಾರನ್ನು ಗಿಫ್ಟ್ ನೀಡಿದ ವೋಲ್ವೋ ಕಂಪನಿ

ಇದಕ್ಕೆ ಸಾಕ್ಷವೆಂಬಂತೆ ವೋಲ್ವೋ ಮಾಲೀಕರೊಬ್ಬರು ತಮ್ಮ ಕಾರಿನಲ್ಲಿ 10 ಲಕ್ಷ ಮೈಲುಗಳನ್ನು (16 ಲಕ್ಷ ಕಿ.ಮೀ) ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋವನ್ನು FOX 2 St. Louis ಅವರು ತಮ್ಮ YouTube ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ.

ಬರೋಬ್ಬರಿ 16 ಲಕ್ಷ ಕಿ.ಮೀ ಕ್ರಮಿಸಿದ ವ್ಯಕ್ತಿಗೆ ಐಷಾರಾಮಿ ಕಾರನ್ನು ಗಿಫ್ಟ್ ನೀಡಿದ ವೋಲ್ವೋ ಕಂಪನಿ

ವೀಡಿಯೊದಲ್ಲಿ ಕಂಡುಬರುವ ವೋಲ್ವೋ ಕಾರಿನ ಮಾಲೀಕರ ಬಗ್ಗೆ ವಿಡಿಯೋದಲ್ಲಿ ವರದಿ ಮಾಡುತ್ತಾ, 1991 ರಲ್ಲಿ ಜಿಮ್ ಓ'ಶಿಯಾ ಎಂಬುವವರು Vovlo 740 GLE ಅನ್ನು ಖರೀದಿಸಿದ್ದರು. ಅವರು ಅದನ್ನು ಖರೀದಿಸಿದಾಗಿನಿಂದ ಯಾವೆಲ್ಲಾ ಅನುಭವಗಳಾಗಿವೆ ಎಂಬುದನ್ನು ಹಂಚಿಕೊಂಡಿದ್ದಾರೆ.

ಬರೋಬ್ಬರಿ 16 ಲಕ್ಷ ಕಿ.ಮೀ ಕ್ರಮಿಸಿದ ವ್ಯಕ್ತಿಗೆ ಐಷಾರಾಮಿ ಕಾರನ್ನು ಗಿಫ್ಟ್ ನೀಡಿದ ವೋಲ್ವೋ ಕಂಪನಿ

ಕಾರನ್ನು ಖರೀದಿಸಿದಾಗಿನಿಂದ ತಮ್ಮ ಸುತ್ತಲಿನ ಬಹಳಷ್ಟು ವಸ್ತುಗಳು ಬದಲಾಗಿವೆ, ಆದರೆ ಆತ ಓಡಿಸುತ್ತಿದ್ದ ಕಾರು ಮಾತ್ರ ಹಾಗೇ ಇದೆ. ಈ ವೀಡಿಯೊದಲ್ಲಿ ಜಿಮ್ ಅವರು ಆರಂಭದಲ್ಲಿ ಕಾರನ್ನು ಖರೀದಿಸಿದಾಗ, ಫೋರ್ಡ್ ಖರೀದಿಸಲು ಬಯಸಿದ ತಂದೆಯೊಂದಿಗೆ ಜಗಳವಾಡಿದ್ದರು ಎಂದು ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು.

ಬರೋಬ್ಬರಿ 16 ಲಕ್ಷ ಕಿ.ಮೀ ಕ್ರಮಿಸಿದ ವ್ಯಕ್ತಿಗೆ ಐಷಾರಾಮಿ ಕಾರನ್ನು ಗಿಫ್ಟ್ ನೀಡಿದ ವೋಲ್ವೋ ಕಂಪನಿ

ಜಿಮ್ ತನ್ನ ವೋಲ್ವೋ ಬಗ್ಗೆ ವಿಶ್ವಾಸ ಹೊಂದಿದ್ದರು, ತಾನು ಈ ಕಾರಿನಲ್ಲಿ ಮಿಲಿಯನ್ ಮೈಲುಗಳಷ್ಟು ದೂರ ಓಡಿಸುತ್ತೇನೆ ಎಂದು ತನ್ನ ತಂದೆಗೆ ಹೇಳಿದ್ದರು. ವೋಲ್ವೋ 740 ಜಿಎಲ್‌ಇ ಸಾಮಾನ್ಯ ಜನರಿಗಾಗಿ ನಿರ್ಮಿಸಲಾದ ಸರಳವಾದ ಕಾರು ಮತ್ತು ನಿರ್ವಹಿಸಲು ತುಂಬಾ ಸುಲಭ ಎಂದು ಜಿಮ್ ಹೇಳಿದ್ದಾರೆ.

ಬರೋಬ್ಬರಿ 16 ಲಕ್ಷ ಕಿ.ಮೀ ಕ್ರಮಿಸಿದ ವ್ಯಕ್ತಿಗೆ ಐಷಾರಾಮಿ ಕಾರನ್ನು ಗಿಫ್ಟ್ ನೀಡಿದ ವೋಲ್ವೋ ಕಂಪನಿ

ಕಾರಿನಲ್ಲಿ ಲೈಟ್‌ಗಳನ್ನು ಬದಲಾಯಿಸುವುದು ಮತ್ತು ಇತರ ಕೆಲಸಗಳಂತಹ ಸಣ್ಣ ರಿಪೇರಿಗಳನ್ನು ಯಾರಾದರೂ ಮಾಡಬಹುದು. ಆದರೆ 10 ಲಕ್ಷ ಮೈಲುಗಳು ಕಾರು ಓಡಿಸುವುದೇ ದೊಡ್ಡ ಸಾಧನೆ. ಅವರ ಕಾರಿನ ಎಂಜಿನ್ ಅನ್ನು 5 ಲಕ್ಷ ಮೈಲುಗಳಷ್ಟು ಓಡಿಸಿದ ಬಳಿಕ ಬದಲಾಯಿಸಲಾಗಿದೆ. ಎಂಜಿನ್ ಜೊತೆಗೆ ಟ್ರಾನ್ಸ್ಮಿಷನ್ ಅನ್ನು ಸಹ ಬದಲಾಯಿಸಲಾಗಿದೆ ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.

ಬರೋಬ್ಬರಿ 16 ಲಕ್ಷ ಕಿ.ಮೀ ಕ್ರಮಿಸಿದ ವ್ಯಕ್ತಿಗೆ ಐಷಾರಾಮಿ ಕಾರನ್ನು ಗಿಫ್ಟ್ ನೀಡಿದ ವೋಲ್ವೋ ಕಂಪನಿ

ಜಿಮ್ ಈ ಕಾರಿನಲ್ಲಿ ಪ್ರಯಾಣಿಸುವ ವೇಳೆ ಎಂದೂ ಅಪಘಾತವಾಗಿಲ್ಲ. ಆದರೆ ಆತನ ಹೆಂಡತಿ ಕಾರನ್ನು ಓಡಿಸಬೇಕಾದರೆ ಒಂದೆರಡು ಬಾರಿ ಅಪಘಾತವಾಗುತ್ತಿದ್ದಾರೂ ಹೇಗೋ ಬಚಾವ್ ಆಗಿರುವುದಾಗಿ ಹೇಳಿದ್ದಾರೆ. ಕಾರು ಇದೀಗ ತುಂಬಾ ಹಳೆಯದಾಗಿದೆ, ಜೊತೆಗೆ ತನ್ನ ವಯಸ್ಸನ್ನು ತೋರಿಸಲು ಪ್ರಾರಂಭಿಸಿದೆ.

ಬರೋಬ್ಬರಿ 16 ಲಕ್ಷ ಕಿ.ಮೀ ಕ್ರಮಿಸಿದ ವ್ಯಕ್ತಿಗೆ ಐಷಾರಾಮಿ ಕಾರನ್ನು ಗಿಫ್ಟ್ ನೀಡಿದ ವೋಲ್ವೋ ಕಂಪನಿ

ಕಾರಿನ ಕೆಲವು ಪ್ಯಾನೆಲ್‌ಗಳು ಇತರ ಕಾರುಗಳಿಗೆ ಹೋಲಿಸಿಕೊಂಡರೆ ಬಹಳಾ ಹಳೆಯದಾಗಿ ಕಾಣುತ್ತಿವೆ. ನನ್ನ ವೋಲ್ವೋ 740 GLE ಅತ್ಯಂತ ಶಕ್ತಿಶಾಲಿ ಸೆಡಾನ್ ಅಲ್ಲದಿರಬಹುದು ಆದರೆ, ಇದು ಇಂದಿಗೂ 120 kmph ವೇಗವನ್ನು ಮುಟ್ಟಬಲ್ಲದು, ಈ ಮಟ್ಟದ ವೇಗವು ಹಳೆಯ ಕಾರಿಗೆ ಸಾಕಾಗುತ್ತದೆ ಎಂಬುದು ನನ್ನ ಭಾವನೆ ಎಂದು ತಮ್ಮ ಕಾರನ್ನು ಸಮರ್ಥಿಸಿದ್ದಾರೆ.

ಬರೋಬ್ಬರಿ 16 ಲಕ್ಷ ಕಿ.ಮೀ ಕ್ರಮಿಸಿದ ವ್ಯಕ್ತಿಗೆ ಐಷಾರಾಮಿ ಕಾರನ್ನು ಗಿಫ್ಟ್ ನೀಡಿದ ವೋಲ್ವೋ ಕಂಪನಿ

1991 ರಲ್ಲಿ ಜಿಮ್ ವೋಲ್ವೋವನ್ನು ಖರೀದಿಸುವಾಗ ಮತ್ತೊಂದು ವೋಲ್ವೋದಲ್ಲಿ ಮಿಲಿಯನ್ ಮೈಲುಗಳನ್ನು ಪೂರ್ಣಗೊಳಿಸಿದ ಒಬ್ಬ ವ್ಯಕ್ತಿಯನ್ನು ನೋಡಿದ್ದರು. ಆ ವ್ಯಕ್ತಿಯ ಸಾಧನೆಯೇ ಜಿಮ್‌ಗೆ ಆತ್ಮವಿಶ್ವಾಸವನ್ನು ನೀಡುವಂತೆ ಮಾಡಿತ್ತು. ಜಿಮ್ ಕೂಡ ಅದನ್ನು ಸಾಧಿಸಬಹುದು ಎಂದು ಯೋಚಿಸುವಂತೆ ಮಾಡಿತು.

ಬರೋಬ್ಬರಿ 16 ಲಕ್ಷ ಕಿ.ಮೀ ಕ್ರಮಿಸಿದ ವ್ಯಕ್ತಿಗೆ ಐಷಾರಾಮಿ ಕಾರನ್ನು ಗಿಫ್ಟ್ ನೀಡಿದ ವೋಲ್ವೋ ಕಂಪನಿ

30 ವರ್ಷಗಳ ಕಾಲ ವೋಲ್ವೋ ಸೆಡಾನ್ ಅನ್ನು ಚಾಲನೆ ಮಾಡಿದ ನಂತರ, ಜಿಮ್ ಅವರು ಕಾರನ್ನು ಖರೀದಿಸಿದ ಅದೇ ಡೀಲರ್‌ಶಿಪ್‌ಗೆ ಹಿಂತಿರುಗಿಸಿದ್ದಾರೆ. ವೋಲ್ವೋ USA ಕಂಪನಿಯು ಅವರ ಸಾಧನೆಗಾಗಿ ಮಾಲೀಕರನ್ನು ಗೌರವಿಸಲು ನಿರ್ಧರಿದ್ದು, ಉಡುಗೊರೆಯಾಗಿ ಡೀಲರ್‌ಶಿಪ್ ಅವರಿಗೆ 2022 ಮಾದರಿಯ Volvo S60 ಐಷಾರಾಮಿ ಸೆಡಾನ್ ಅನ್ನು ಉಡುಗೊರೆಯಾಗಿ ನೀಡಿದೆ.

ಬರೋಬ್ಬರಿ 16 ಲಕ್ಷ ಕಿ.ಮೀ ಕ್ರಮಿಸಿದ ವ್ಯಕ್ತಿಗೆ ಐಷಾರಾಮಿ ಕಾರನ್ನು ಗಿಫ್ಟ್ ನೀಡಿದ ವೋಲ್ವೋ ಕಂಪನಿ

ಜಿಮ್‌ಗೆ ನೀಡಲಾಗುವ ವೋಲ್ವೋ S60 ಕಾರು ಮುಂದಿನ ಎರಡು ವರ್ಷಗಳವರೆಗೆ ಕಂಪನಿಯಿಂದ ಉಚಿತ ಸೇವೆ ಪಡಿಯಬಹುದು. ವೋಲ್ವೋ ಎಲ್ಲವನ್ನೂ ಒಳಗೊಂಡ ಚಂದಾದಾರಿಕೆ ಯೋಜನೆಯಿಂದ ಕಾರನ್ನು ಅವರಿಗೆ ನೀಡಲಾಗಿದೆ. ಈ ಯೋಜನೆಯು ಟೈರ್‌ಗಳು, ವೀಲ್‌ಗಳು, ನಿರ್ವಹಣೆ, ಅತಿಯಾದ ಉಡುಗೆ ರಕ್ಷಣೆ ಮತ್ತು ವಿಮೆ ಎಲ್ಲವನ್ನೂ ಒಳಗೊಂಡಿದೆ.

ಬರೋಬ್ಬರಿ 16 ಲಕ್ಷ ಕಿ.ಮೀ ಕ್ರಮಿಸಿದ ವ್ಯಕ್ತಿಗೆ ಐಷಾರಾಮಿ ಕಾರನ್ನು ಗಿಫ್ಟ್ ನೀಡಿದ ವೋಲ್ವೋ ಕಂಪನಿ

ವೋಲ್ವೋ ಕಾರುಗಳ ಒಟ್ಟಾರೆ ವಿಶ್ವಾಸಾರ್ಹತೆಯ ಬಗ್ಗೆ ಜಿಮ್ ತುಂಬಾ ಪ್ರಭಾವಿತರಾಗಿದ್ದರು. ಇದೀಗ ಅವರು S60 ನಲ್ಲಿ ಮತ್ತೊಮ್ಮೆ 10 ಲಕ್ಷ ಮೈಲುಗಳನ್ನು ಪೂರ್ಣಗೊಳಿಸಲು ಎದುರು ನೋಡುತ್ತಿದ್ದಾರೆ ಎಂದು ವೀಡಿಯೊದಲ್ಲಿ ಹೇಳಿದ್ದಾರೆ.

ಬರೋಬ್ಬರಿ 16 ಲಕ್ಷ ಕಿ.ಮೀ ಕ್ರಮಿಸಿದ ವ್ಯಕ್ತಿಗೆ ಐಷಾರಾಮಿ ಕಾರನ್ನು ಗಿಫ್ಟ್ ನೀಡಿದ ವೋಲ್ವೋ ಕಂಪನಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸಾಮಾನ್ಯವಾಗಿ ಇತ್ತೀಚಿನ ವರ್ಷಗಳಲ್ಲಿ ಕಾರುಗಳನ್ನು ಖರೀದಿಸುವ ಗ್ರಾಹಕರು, ಹೊಸ ಮಾದರಿಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದಂತೆ ಹಳೆಯ ಕಾರುಗಳನ್ನು ಮಾರಾಟ ಮಾಡುತ್ತಾರೆ. ಆದರೆ ಹಳೆಯ ಕಾರುಗಳನ್ನು ಉಳಿಸಿಕೊಳ್ಳುವವರು ಬಹಳ ಕಡಿಮೆ. ಇನ್ನು ಉಳಿಸಿಕೊಂಡರೂ ಅದನ್ನು ಉತ್ತಮ ನಿರ್ವಹಣೆಯಲ್ಲಿಟ್ಟುಕೊಳ್ಳುವವರು ಸಿಗುವುದು ಇನ್ನೂ ಕಷ್ಟ. ಆದರೆ ಬರೋಬ್ಬರಿ 10 ಲಕ್ಷ ಮೈಲುಗಳನ್ನು ಕ್ರಮಿಸಿರುವ ಈತನ ಸಾಧನೆ ಶ್ಲಾಘನೀಯ. ಇದೇ ಕಾರಣಕ್ಕೆ ವೋಲ್ವೋ ಕೂಡ ಈತನನ್ನು ಸತ್ಕರಿಸಿ ಹೊಸ ಕಾರನ್ನು ಉಡುಗೊರೆಯಾಗಿ ನೀಡಿದೆ.

Most Read Articles

Kannada
English summary
Volvo gifted a luxury car to a person who bought a car in 1991 and covered 16 lakh km
Story first published: Saturday, August 27, 2022, 19:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X