ಹೃದಯ ಬಡಿತ ಹೆಚ್ಚಿಸುವ ವೋಲ್ವೋ ಸಾಹಸ ವೀಡಿಯೋ

By Nagaraja

ಕೆಲವರಂತೂ ಸಾಹಸ ಕ್ರೀಡೆಗಳನ್ನು ಬಹಳ ಹೆಚ್ಚಾಗಿ ಇಷ್ಟಪಡುತ್ತಾರೆ. ಇನ್ನು ಕೆಲವರು ಚಲಿಸುವ ಗಾಡಿಗಳಲ್ಲೇ ತಮ್ಮ ಚಾಣಕ್ಷತನ ತೋರುತ್ತಾರೆ. ವಾಹನ ಜನಗತ್ತಿನಲ್ಲಂತೂ ಇಂತಹ ಪ್ರದರ್ಶನಗಳಿಗೆ ಬಹಳ ಹೆಚ್ಚಿನ ಮಹತ್ವವಿದೆ. ಇದು ಕಂಪನಿಯ ಪ್ರತಿಷ್ಠೆಯನ್ನು ಉತ್ತುಂಗಕ್ಕೇರಿಸುವುದರಲ್ಲಿ ನೆರವಾಗುತ್ತದೆ.

ಆದರೆ ಸ್ವಲ್ಪನೂ ಎಡವಟ್ಟಾದಲ್ಲಿ ಅಪಘಾತ ಕಟ್ಟಿಟ್ಟ ಬುತ್ತಿ. ವಾಹನಗಳಲ್ಲಿ ಸಾಹಸ ಕ್ರೀಡೆಗೆ ಸದಾ ಪ್ರೋತ್ಸಾಹ ನೀಡುತ್ತಿರುವ ಸ್ವೀಡನ್‌ನ ವೋಲ್ವೋ ಸಂಸ್ಥೆಯಿಂದ ನಿರ್ಮಾಣಗೊಂಡಿರುವ ಐದು ಟಾಪ್ ಕ್ಲಾಸ್ ಸಾಹಸ ವೀಡಿಯೋವನ್ನು ನಾವಿಂದು ನಿಮ್ಮ ಮುಂದಿಡಲಿದ್ದೇವೆ.

ಹೃದಯ ಬಡಿತ ಹೆಚ್ಚಿಸುವ ವೋಲ್ವೋ ಸಾಹಸ ವೀಡಿಯೋ

ರಿವರ್ಸ್ (ಹಿಂಭಾಗಕ್ಕೆ) ಚಲಿಸುತ್ತಿರುವ ಎರಡು ಟ್ರಕ್‌ಗಳ ನಡುವೆ ಕಾಲನ್ನಿಟ್ಟಿರುವ ಜೀನ್ ಕ್ಲೌಡ್ ವ್ಯಾನ್ ಡ್ಯಾಮ್ ಸಮತೋಲನ ಕಂಡುಕೊಳ್ಳುವ ರೀತಿ ಎಂಥವರನ್ನು ಮೈ ಜುಮ್ ಅನ್ನಿಸುವಂತಿದೆ. ಒಟ್ಟಿನಲ್ಲಿ ಇದು ವೋಲ್ವೋ ಡೈನಾಮಿಕ್ ಸ್ಟೀರಿಂಗ್ ಸ್ಥಿರತೆಯನ್ನು ಪ್ರದರ್ಶಿಸುತ್ತದೆ ಹಾಗೆಯೇ ವೋಲ್ವೋ ಎಫ್‌ಎಂ ಸುಲಭವಾಗಿ ಚಾಲನೆ ಮಾಡಬಹುದೆಂಬ ಸಂದೇಶ ಸಾರುತ್ತದೆ.(ವೀಡಿಯೋ ವೀಕ್ಷಣೆಗಾಗಿ ಮುಂದಿನ ಪುಟ ಕ್ಲಿಕ್ಕಿಸಿ)

ಮತ್ತಷ್ಟು ರೋಚಕ ವೋಲ್ವೋ ಸ್ಟಂಟ್ ವೀಡಿಯೋಗಳಿಗಾಗಿ ಮುಂದಿನ ಸ್ಲೈಡರ್‌ ಕ್ಲಿಕ್ಕಿಸಿ...

ಹೃದಯ ಬಡಿತ ಹೆಚ್ಚಿಸುವ ವೋಲ್ವೋ ಸಾಹಸ ವೀಡಿಯೋ

ನಾವು ಹಲವು ವಿವಿಧ ಗೂಳಿ ಓಟಗಳನ್ನು ನೋಡಿರುತ್ತೇವೆ. ಆದರೆ ಇಲ್ಲಿ ವೋಲ್ವೋ ಟ್ರಕ್‌ಗೆ ಕೆಂಪು ಬಣ್ಣ ಬಳಿಯಲಾಗಿದ್ದು ಆ ಬಳಿಕ ಗೂಳಿ ಮುಂದೆ ನಿಂತು ತನ್ನನ್ನು ಆಕ್ರಮಿಸುವಂತೆ ಉದ್ರೇಕಗೊಳಿಸಲಾಗುತ್ತದೆ. ಇಲ್ಲೂ ವೋಲ್ವೋ ಎಫ್‌ಎಲ್ ಟ್ರಕ್ ನಿರ್ವಹಣೆಯನ್ನು ನಿರೂಪಿಸಲಾಗಿದೆ. ಪ್ರಸ್ತುತ ಕಾರ್ಯಕ್ರಮ ಸೆರೆ ಹಿಡಿಯಲು 28 ಕ್ಯಾಮೆರಾಗಳು ಹಾಗೂ 50 ಓಟಗಾರರನ್ನು ನೇಮಕಗೊಳಿಸಲಾಗಿತ್ತು.(ವೀಡಿಯೋಗಾಗಿ ಮುಂದಿನ ಸ್ಲೈಡರ್ ಕ್ಲಿಕ್ಕಿಸಿ)

ಮತ್ತಷ್ಟು ವೀಡಿಯೋಗಾಗಿ ಮುಂದುವರಿಯಿರಿ...

ಹೃದಯ ಬಡಿತ ಹೆಚ್ಚಿಸುವ ವೋಲ್ವೋ ಸಾಹಸ ವೀಡಿಯೋ

ನಾವು ಈ ಹಿಂದೆ ತಿಳಿಸಿರುವಂತೆಯೇ ಹ್ಯಾಮ್‌ಸ್ಟರ್ ಜಾತಿಗೆ ಸೇರಿದ ಇಳಿಮರಿಯೊಂದು ವೋಲ್ವೋ ಎಫ್‌ಎಂಎಕ್ಸ್ ಸ್ಟೀರಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ. 15 ಟನ್ ತೂಕದ ಈ ಘನ ವಾಹನವನ್ನು ಕೇವಲ ಇಲಿಮರಿಯೊಂದು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವುದು ವಿಪರ್ಯಾಸವೇ ಸರಿ.(ವೀಡಿಯೋಗಾಗಿ ಮುಂದುವರಿಯಿರಿ)

ಮತ್ತಷ್ಟು ಆಕರ್ಷಕ ವೀಡಿಯೋಗಾಗಿ ಮುಂದಿನ ಸ್ಲೈಡರ್ ಒತ್ತಿರಿ...

ಹೃದಯ ಬಡಿತ ಹೆಚ್ಚಿಸುವ ವೋಲ್ವೋ ಸಾಹಸ ವೀಡಿಯೋ

ಇನ್ನು ತಾವೇನು ಕಮ್ಮಿಯೇನಲ್ಲ ಎಂಬ ರೀತಿಯಲ್ಲಿ ಮಹಿಳೆಯೊಬ್ಬಾಕೆ ವೋಲ್ವೋ ಟ್ರಕ್‌ನಲ್ಲಿ ಸ್ಟಂಟ್ ವೀಡಿಯೋ ಚಿತ್ರಿಕರಿಸಿದ್ದಾರೆ. ಕ್ರೋವೇಶಿಯಾದ ಹೈವೇಯಲ್ಲಿ ಇದನ್ನು ಸೆರೆಹಿಡಿಯಲಾಗಿದ್ದು ವೋಲ್ವೋ ಎಚ್‌ಎಫ್ ಟ್ರಿಕ್‌ನ ಹ್ಯಾಂಡ್ಲಿಂಗ್ ಸಮತೋಲನವನ್ನು ಪ್ರದರ್ಶಿಸಲಾಗಿದೆ.

ಇನ್ನಷ್ಟು ವೀಡಿಯೋಗಾಗಿ ಮುಂದುವರಿಯಿರಿ...

ಹೃದಯ ಬಡಿತ ಹೆಚ್ಚಿಸುವ ವೋಲ್ವೋ ಸಾಹಸ ವೀಡಿಯೋ

ಅಂತಿಮವಾಗಿ ಸ್ವತ: ವೋಲ್ವೋ ಅಧ್ಯಕ್ಷರೇ ನೂತನವಾಗಿ ತಯಾರಿಗೊಂಡಿರುವ ಎಫ್‌ಎಂಎಕ್ಸ್ ಟ್ರಕ್‌ನಲ್ಲಿ ನಿಂತುಕೊಳ್ಳುವ ಮೂಲಕ ಇತರ ಸಾಹಸಿಗಳನ್ನು ಹುರಿದುಂಬಿಸುವ ಪ್ರಯತ್ನ ಮಾಡಿದ್ದಾರೆ.

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

More from DriveSpark

Article Published On: Saturday, November 16, 2013, 11:36 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+