ಹುಚ್ಚುಕುದುರೆಯಂತೆ ಕೆಟಿಎಂ ಬೈಕ್ ಓಡಿಸಿ ಯಮನ ಬಾಗಿಲು ತಟ್ಟಿದ ಸವಾರ: ಮೈ ಜುಂ ಎನ್ನುವ ವಿಡಿಯೋ ನೋಡಿ!
ಇಂದಿನ ಯುವಜನತೆಯ ಕೈಯಲ್ಲಿ ಬೈಕ್ ಸಿಕ್ಕರೆ ಸಾಕು. ಎಗ್ಗಿಲ್ಲದೇ ಹುಚ್ಚು ಕುದುರೆಯಂತೆ ಬೈಕನ್ನು ಅಪಾಯಕಾರಿ ರೀತಿಯಲ್ಲಿ ಓಡಿಸುತ್ತಾರೆ. ಈ ರೀತಿಯ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಾದಂತಹ ಯ್ಯೂಟ್ಯೂಬ್, ಫೇಸ್‌ಬುಕ್ ನಲ್ಲಿ ಲಭ್ಯವಿದೆ. ಅದೇ ರೀತಿಯ ಮತ್ತೊಂದು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಬೈಕ್ ಸವಾರನೊಬ್ಬ ಕೆಟಿಎಂ ಆರ್‌ಸಿ 390 (KTM RC 390) ಬೈಕ್‌ನಲ್ಲಿ ವಿಪರೀತ ವೇಗದಲ್ಲಿ ರೈಡ್ ಮಾಡಿ ಕೊನೆಗೆ ಕಾರಿಗೆ ಗುದ್ದಿ ಬಿದ್ದ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ಹಿಂಬದಿ ಬರುತ್ತಿದ್ದ ಬೈಕ್ ಸವಾರನ ಹೆಲ್ಮೆಟ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು ಒಂದು ರಸ್ತೆಯ ತಿರುವಿನಲ್ಲಿ ಯಾವ ರೀತಿ ಬೈಕ್ ಓಡಿಸಬಾರದು ಎಂದುದನ್ನು ಈ ವಿಡಿಯೋ ತಿಳಿಸಿ ಕೊಡುತ್ತದೆ.

ಇನ್ನು ಘಟನೆಯು ನಿರ್ದಿಷ್ಟವಾಗಿ ಎಲ್ಲಿ ನಡೆದಿದೆ ಎಂದು ತಿಳಿದು ಬಂದಿಲ್ಲ. ಹಿಮಾಚಲದಲ್ಲಿ ಘಟನೆ ನಡೆದಿರಬಹುದೆಂಬ ಶಂಕೆಯಿದ್ದು ವಿಡಿಯೋದಲ್ಲಿ ಕಾಣುವಂತೆ, ಕ್ಯಾಮೆರಾದಲ್ಲಿ ಮೂರು ಬೈಕ್‌ಗಳು ಅಪಾಯಕಾರಿ ವೇಗದಲ್ಲಿ ಚಲಿಸುತ್ತಿದ್ದು ರಸ್ತೆ ತಿರುವಿನಲ್ಲಿ ಯಾವುದೇ ಬ್ರೇಕ್ ಹಾಕದೇ ಹೋಗುತ್ತಿರುವುದನ್ನು ನಾವು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ.
ರಸ್ತೆ ತಿರುವಿನಲ್ಲಿ ಎರಡು ಬೈಕ್ ಪಾಸಾಗುವ ಸಂಧರ್ಭದಲ್ಲಿ ಕಾರೊಂದು ಆಚೆ ಬದಿಯಿಂದ ಬಂದಿದೆ. ಈ ವೇಳೆ ಮೂರನೇ ಬೈಕ್ ಸವಾರ ಅದನ್ನು ತಪ್ಪಿಸಲು ರಾಂಗ್ ಸೈಡ್ ಹೋಗುವ ವೇಳೆ ಎದುರಿನಿಂದ ಬರುತ್ತಿದ್ದ ಆಲ್ಟೋ ಕಾರಿನ ಎಡಭಾಗದ ಹೆಡ್‌ಲೈಟ್ ತಾಗಿ ರಸ್ತೆಯ ಆಚೆ ಬದಿ ಆಯ ತಪ್ಪಿ ಬಿದ್ದಿರುವುದು ವಿಡಿಯೋದಲ್ಲಿ ಕಂಡು ಬರುತ್ತದೆ.
ಬೈಕ್‌ನಲ್ಲಿ ಎಷ್ಟೇ ವೇಗವಾಗಿ ಹೋಗುತ್ತಿದ್ದರೂ, ರಸ್ತೆಯ ತಿರುವಿನಲ್ಲಿ ಬೈಕ್ ನ ವೇಗವನ್ನಿ ನಿಧಾನ ಮಾಡಲೇಬೆಕು. ಇಲ್ಲದಿದ್ದರೆ ಈ ರೀತಿಯಾದ ಅಪಘಾತಗಳು ಸಂಭವಿಸುವುದು ಖಚಿತ. ವಿಡಿಯೋದಲ್ಲಿ ಆರ್‌ಸಿ ಬೈಕ್ ರೈಡರ್‌ಗಳು, ಕುರುಡು ತಿರುವಿದೆ ಎಂದು ತಿಳಿದ ಮೇಲೂ, ತಮ್ಮ ಬೈಕ್‌ನ ವೇಗವನ್ನು ಕಮ್ಮಿ ಮಾಡಿಲ್ಲ.
ಈ ಕಾರಣದಿಂದಾಗಿ ಮೂರೂ ಬೈಕ್ಗಳು ಆ ತಿರುವಿನಲ್ಲಿ ನಿಯಂತ್ರಣಕ್ಕೆ ಸಿಗದೇ ರಾಂಗ್ ವೇಯಲ್ಲಿ ಚಲಿಸಿದೆ. ಅದೇ ಸಂಧರ್ಭದಲ್ಲಿ ಆ ತಿರುವಿನಲ್ಲಿ ಮುಂಭಾಗದಿಂದ ಬಂದ ಕಾರನ್ನು ತಪ್ಪಿಸುವಲ್ಲಿ ಮೊದಲೆರಡು ಬೈಕ್ ಸವಾರರು ಸಫಲರಾದರೂ ಮೂರನೇ ಬೈಕ್ ಸವಾರ ಅಪಘಾತಕ್ಕೀಡಾಗಿದ್ದರೂ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಯುವಕರು ಸಾರ್ವಜನಿಕ ರಸ್ತೆಯಲ್ಲಿ ಬೈಕ್ ಸವಾರಿ ಮಾಡುವಾಗ ತಮ್ಮ ಸುರಕ್ಷತೆಯ ಜೊತೆಗೆ ಇತರರ ಸುರಕ್ಷತೆಯನ್ನೂ ಗಮನಿಸಬೇಕು. ಬೈಕ್ ಸಿಕ್ಕಿದ ಕೂಡಲೇ ಅಪರಿಮಿತ ವೇಗದಲ್ಲಿ ಚಲಿಸುವುದು, ಸಾರ್ವಜನಿಕ ಸ್ಥಳದಲ್ಲಿ ಅಪಾಯಕಾರಿ ರೀತಿಯಲ್ಲಿ ಬೈಕ್ ಓಡಿಸುವುದು ಭಾರತದಲ್ಲಿ ಶಿಕ್ಷಾರ್ಹ ಅಪರಾಧ ಎಂಬುದನ್ನು ಅರಿತು ಜವಾಬ್ದಾರಿಯುತವಾಗಿ ಬೈಕ್ ಚಲಾಯಿಸಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications