ವಾಹನ ಚಾಲನೆ ವೇಳೆ ಮಾಸ್ಕ್ ಬಳಕೆ ವಿಚಾರದಲ್ಲಿ ಬಿಬಿಎಂಪಿಯಿಂದ ಹೊಸ ರೂಲ್ಸ್ ಜಾರಿ

ಕಾರಿನಲ್ಲಿ ಒಬ್ಬರೇ ಸಂಚಾರ ಮಾಡುವಾಗ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಎಂಬ ನಿಯಮವಿತ್ತು, ಆದರೆ ಬಿಬಿಎಂಪಿ ಮಾಸ್ಕ್ ಧರಿಸುವ ನಿಯಮದಲ್ಲಿ ಬದಲಾವಣೆಗಳನ್ನು ನಡೆಸಿ ಕಾರು ಅಥವಾ ಬೈಕುಗಳಲ್ಲಿ ಒಬ್ಬರೇ ಸಂಚಾರ ಮಾಡಿದರು ಮಾಸ್ಕ್ ಧರಿಸುವುದು ಕಡ್ಡಾಯ ಎಂಬ ಹೊಸ ನಿಯಮ ಜಾರಿಗೊಳಿಸಿದೆ.

ವಾಹನ ಚಾಲನೆ ವೇಳೆ ಮಾಸ್ಕ್ ಬಳಕೆ ವಿಚಾರದಲ್ಲಿ ಬಿಬಿಎಂಪಿಯಿಂದ ಹೊಸ ರೂಲ್ಸ್ ಜಾರಿ

ಇನ್ನು ಮುಂದೆ ಕಾರಿನಲ್ಲಿ ಅಥವಾ ಬೈಕ್‍ನಲ್ಲಿ ಒಬ್ಬರೇ ಇದ್ದೇವೆ ಎಂದು ಮಾಸ್ಕ್ ಧರಿಸದೆ ಸಂಚರಿಸುವಂತಿಲ್ಲ. ಒಬ್ಬರೇ ಇದ್ದರೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಲೇಬೇಕೆಂದು ಬಿಬಿಎಂಪಿ ಆದೇಶ ಹೊರಡಿಸಿದೆ ಎಂದು ವರದಿಗಳಾಗಿದೆ. ಕಾರಿನಲ್ಲಿ ಒಬ್ಬರೇ ಇದ್ದೇವೆಂದು ಮೈಮರೆತು ಸಂಚಾರ ಮಾಡಿದರೆ ದಂಡ ಗ್ಯಾರಂಟಿ. ಬೈಕಿನಲ್ಲಿ ಸಹ ಒಬ್ಬರೇ ಇದ್ದೇವೆ ಎಂದು ಮಾಸ್ಕ್ ಧರಿಸದಿದ್ದರೆ ದಂಡ ಬೀಳುತ್ತದೆ.

ವಾಹನ ಚಾಲನೆ ವೇಳೆ ಮಾಸ್ಕ್ ಬಳಕೆ ವಿಚಾರದಲ್ಲಿ ಬಿಬಿಎಂಪಿಯಿಂದ ಹೊಸ ರೂಲ್ಸ್ ಜಾರಿ

5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಆದರೆ 5 ವರ್ಷಕ್ಕಿಂತ ಮೇಲ್ಪಟ್ಟವರು ಮಾಸ್ಕ್ ಹಾಕಲಿಲ್ಲ ಅಂದರೆ ರೂ.250 ದಂಡ ಕಟ್ಟಲೇಬೇಕು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಅವರು ಸ್ಪಷ್ಟ ಆದೇಶ ಹೊರಡಿಸಿದ್ದಾರೆ.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ವಾಹನ ಚಾಲನೆ ವೇಳೆ ಮಾಸ್ಕ್ ಬಳಕೆ ವಿಚಾರದಲ್ಲಿ ಬಿಬಿಎಂಪಿಯಿಂದ ಹೊಸ ರೂಲ್ಸ್ ಜಾರಿ

ಇನ್ನು 5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಧರಿಸುವುದು ಕಷ್ಟವಾಗುತ್ತದೆ ಮತ್ತು ಇದರ ಬಗ್ಗೆ ಹೆಚ್ಚಿನ ತಿಳುವಳಿಕೆ ಇರುವುದಿಲ್ಲ ಈ ಎಲ್ಲಾ ಕಾರಣದಿಂದ ವಿನಾಯಿತಿ ನೀಡಲಾಗಿದೆ. ಆದರೆ ವರ್ಷಕ್ಕಿಂತ ಮೇಲ್ಪಟ್ಟವರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

ವಾಹನ ಚಾಲನೆ ವೇಳೆ ಮಾಸ್ಕ್ ಬಳಕೆ ವಿಚಾರದಲ್ಲಿ ಬಿಬಿಎಂಪಿಯಿಂದ ಹೊಸ ರೂಲ್ಸ್ ಜಾರಿ

ಎಲ್ಲೆಲ್ಲಿ ವಿನಾಯಿತಿ..!

ರೆಸ್ಟೋರೆಂಟ್ ಹಾಗೂ ಹೋಟೆಲ್‌ಗಳಲ್ಲಿ ತಿನ್ನುವಾಗ ಮತ್ತು ಕುಡಿಯುವಾಗ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಅದೇ ರೀತಿ ಈಜುಕೊಳದಲ್ಲಿಯು ಈಜುವಾಗ ವಿನಾಯಿತಿ ನೀಡಲಾಗಿದೆ. ಇನ್ನು ಸೆಲೂನ್, ರೆಸ್ಟೋರೆಂಟ್, ಬಾರ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಅಲ್ಲಿಯ ಸಿಬ್ಬಂದಿಗಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

MOST READ: ಐಷಾರಾಮಿ ಫೋಕ್ಸ್‌ವ್ಯಾಗನ್ ಎಸ್‍ಯುವಿಯನ್ನು ಖರೀದಿಸಿದ ಜನಪ್ರಿಯ ಬಾಲಿವುಡ್ ನಟ

ವಾಹನ ಚಾಲನೆ ವೇಳೆ ಮಾಸ್ಕ್ ಬಳಕೆ ವಿಚಾರದಲ್ಲಿ ಬಿಬಿಎಂಪಿಯಿಂದ ಹೊಸ ರೂಲ್ಸ್ ಜಾರಿ

ಆದರೆ ಉದ್ಯಾನವನಗಳಲ್ಲಿ ಜಾಗಿಂಗ್ ಮಾಡುವಾಗ ಅಥವಾ ಚುರುಕಾಗಿ ನಡೆಯುವಾಗ ಮಾಸ್ಕ್ ಧರಿಸುವುದರ ಬಗ್ಗೆ ಸ್ಪಷ್ಟವಾಗಿ ಮಾಹಿತಿಗಳಲ್ಲಿ. ಆದರೆ ಒಬ್ಬರಿಗಿಂತ ಹೆಚ್ಚು ಜನ ನಿಂತು ಮಾತನಾಡುವಾಗ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.

ವಾಹನ ಚಾಲನೆ ವೇಳೆ ಮಾಸ್ಕ್ ಬಳಕೆ ವಿಚಾರದಲ್ಲಿ ಬಿಬಿಎಂಪಿಯಿಂದ ಹೊಸ ರೂಲ್ಸ್ ಜಾರಿ

ಆದರೆ ವೈದ್ಯಕೀಯ ತಜ್ಞರ ಪ್ರಕಾರ, ಜಾಗಿಂಗ್ ವೇಳೆ ಮಾಡುವಾಗ ಮಾಸ್ಕ್ ಧರಿಸಬಾರದು. ಇಷ್ಟು ದಿನ ಕಾರಿನಲ್ಲಿ ಒಬ್ಬರೇ ಇದ್ದಾಗ ಬಹುತೇಕರು ಮಾಸ್ಕ್ ಧರಿಸದೇ ಸಂಚಾರವನ್ನು ಮಾಡುವುದ್ದಿದ್ದರು. ಆದರೆ ಇನ್ನು ಮುಂದೆ ಕಾರಿನಲ್ಲಿ ಒಬ್ಬರೇ ಇದ್ದರೂ ಇನ್ನು ಮುಂದೆ ಮಾಸ್ಕ್ ಧರಿಸಬೇಕು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ವಾಹನ ಚಾಲನೆ ವೇಳೆ ಮಾಸ್ಕ್ ಬಳಕೆ ವಿಚಾರದಲ್ಲಿ ಬಿಬಿಎಂಪಿಯಿಂದ ಹೊಸ ರೂಲ್ಸ್ ಜಾರಿ

ದಂಡ ವಸೂಲಿಯ ಬಗ್ಗೆ ಸಾರ್ವಜನಿಕ ಮತ್ತು ಬಿಬಿಎಂಪಿ ಮಾರ್ಷಲ್ ಗಳ ನಡುವೆ ಪ್ರತಿದಿನ ಮಾತಿನ ಚಕಮಕಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬಿಬಿಎಂ ಹೊಸ ರೂಲ್ಸ್ ಜಾರಿಗೊಳಿಸಿದ್ದಾರೆ.

ವಾಹನ ಚಾಲನೆ ವೇಳೆ ಮಾಸ್ಕ್ ಬಳಕೆ ವಿಚಾರದಲ್ಲಿ ಬಿಬಿಎಂಪಿಯಿಂದ ಹೊಸ ರೂಲ್ಸ್ ಜಾರಿ

ಇನ್ನು ಬಿಬಿಎಂಪಿ ಕರೋನಾ ಸೋಂಕಿನ ನಿಯಂತ್ರಣಕ್ಕಾಗಿ ಮಾಸ್ಕ್ ಧರಿಸುವುದರ ಬಗ್ಗೆ ಜಾಗೃತಿ ಮೂಡಿಸಲು ಸಮಿತಿ ರಚಿಸಲು ಆದೇಶಿಸಲಾಗಿದೆ. ಅದೇ ರೀತಿ ಹಲವು ಸಂಘ ಸಂಸ್ಥೆಗಳು ಕೂಡ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗ್ತಿದೆ.

Most Read Articles

Kannada
English summary
Wear A mask Even If You’re Alone In Car, On Bike, Says BBMP In New Rules. Read In Kannada.
Story first published: Wednesday, October 28, 2020, 15:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X