ನಿಮ್ಮ ವಿವೇಚನೆಗೆ ಬಿಟ್ಟ ವಿಚಾರ; 17 ವಿಚಿತ್ರ ಚಾಲನಾ ನಿಯಮಗಳು
ಆಯಾ ದೇಶದ ಸರಕಾರಗಳು ಸುಗಮ ಸಂಚಾರಕ್ಕಾಗಿ ಅನೇಕ ರಸ್ತೆ ಸಂಚಾರ ನಿಯಮಗಳನ್ನು ರೂಪಿಸಿವೆ. ಇವುಗಳಲ್ಲಿ ಕೆಲವು ಅಪ್ರಸ್ತುತ ಎನಿಸಿಕೊಂಡರೂ ನಿರ್ದಿಷ್ಟ ಜಾಗ ಮತ್ತು ಚಾಲನಾ ಪರಿಸ್ಥಿತಿಗಳನ್ನು ಹೋಲಿಸಿ ನೋಡಿದಾಗ ಸರಿಯೆನಿಸುತ್ತದೆ.
ಹೀಗೆ ಭಾರತದಂತೆ ವಿದೇಶದಲ್ಲೂ ಅನೇಕ ರಸ್ತೆ ಸಂಚಾರ ಕಾನೂನುಗಳು ಜಾರಿಯಲ್ಲಿವೆ. ಹೀಗೆ ನಿಮ್ಮ ವಿವೇಚನೆಗೆ ಪ್ರಶ್ನೆ ಚಿಹ್ನೆಯಾಗಿರುವ ಇದುವರೆಗೆ ಕೇಳಿರದ ಜಗತ್ತಿನ ವಿವಿಧ ರಾಷ್ಟ್ರಗಳ 17 ವಿಚಿತ್ರವಾದ ಚಾಲನಾ ನಿಯಮಗಳನ್ನು ಓದುಗರ ಮುಂದಿಡಲಿದ್ದೇವೆ.

ಒಳಉಡುಪು
ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಒಳಉಡುಪುಗಳಿಂದ ಕಾರನ್ನು ಸ್ವಚ್ಛಗೊಳಿಸುವಂತಿಲ್ಲ. ಅಷ್ಟಕ್ಕೂ ಒಳಉಡುಪುಗಳಿಂದ ಯಾರಾದರೂ ಕಾರನ್ನು ಸ್ವಚ್ಛಗೊಳಿಸುತ್ತಾರೆಯೋ?

ಇಲ್ಲಿ ಪಾನಮತ್ತ ಚಾಲನೆ ಓಕೆ
ಕೋಸ್ಟಾರಿಕಾದಲ್ಲಿ ಪಾನಮತ್ತ ಚಾಲನೆ ಅಪರಾಧವಲ್ಲ. ಹ್ಹಾಂ! ಅದೇಗೆ ಅಂತೀರಾ? ಹೌದು ರಕ್ತದಲ್ಲಿ ಅಲ್ಕೋಹಾಲ್ ಅಂಶ ಶೇಕಡಾ 0.75 ದಾಟದಂತೆ ನೋಡಿಕೊಂಡರಾಯಿತು.

ಚುಂಬನಕ್ಕೆ ಬ್ರೇಕ್
ನೇರವಾಗಿ ವಿಷಯಕ್ಕೆ ಬಂದು ಬೀಡುತ್ತೇನೆ. ಇಟಲಿಯ ಎಬೊಲಿಯಲ್ಲಿ ಸಂಚರಿಸುತ್ತಿರುವ ಕಾರಿನಲ್ಲಿ ಚುಂಬಿಸುವುದು ಕಾನೂನು ಬಾಹಿರವಾಗಿದೆ. ಏಕೆಂದರೆ ಇದರಿಂದ ಚಾಲಕರ ಏಕಾಗ್ರತೆಗೆ ಭಂಗವುಂಟಾಗುವ ಸಾಧ್ಯತೆಯಿದೆ. ಹಾಗೇನಾದರೂ ಅತಿರೇಕಕ್ಕೆ ಮುಂದಾದ್ದಲ್ಲಿ 415 ಪೌಂಡುಗಳಷ್ಟು ದಂಡ ಕಟ್ಟಲು ಸಿದ್ಧರಾಗಿರಿ!

ಭಾನುವಾರ ಕಪ್ಪು ಕಾರಿಗೆ ನಿಷೇಧ
ಶಿವನೇ, ಎಂತಹ ಅಸಂಬದ್ಧ ನೋಡಿ? ಡೆನ್ವಾರ್ ನಲ್ಲಿ ಭಾನುವಾರದಂದು ಕಪ್ಪು ವರ್ಣದ ಕಾರು ಓಡಿಸುವಂತಿಲ್ಲ.

ಕಣ್ಣಿಗೆ ಬಟ್ಟೆ ಕಟ್ಟಿ ಚಾಲನೆ
ಅಮೆರಿಕದ ಅಲಬಾಮಾದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಚಾಲನೆ ಮಾಡುವುದು ಅಪರಾಧವಾಗಿದೆ. ಹ್ಹ..ಹ್ಹ..ಹ್ಹ.. ಯಾರದರೂ ಕಣ್ಣಿಗೆ ಬಟ್ಟೆ ಕಟ್ಟಿ ವಾಹನ ಚಾಲನೆ ಮಾಡುತ್ತಾರೆಯೇ?

ಸ್ಟೀರಿಂಗ್ ವೀಲ್
ಸೈಪ್ರಸ್ ನಲ್ಲಿ ಚಾಲಕ ಅನಗತ್ಯವಾಗಿ ಸ್ಟೀರಿಂಗ್ ವೀಲ್ ನಿಂದ ಕೈ ಹೊರ ತೆಗೆಯುವಂತಿಲ್ಲ. ಎಲ್ಲಾದರೂ ಎಡವಟ್ಟು ಸಂಭವಿಸಿದ್ದಲ್ಲಿ ದಂಡ ಗ್ಯಾರಂಟಿ!

ವೇಗಕ್ಕೆ ಮಿತಿಯಿಲ್ಲ
ಜರ್ಮನಿಯ ಹೆಸರಾಂತ ಆಟೋಬಾನ್ ಹೆದ್ದಾರಿಯಲ್ಲಿ ನೀವು ಸೂಪರ್ ಸೋನಿಕ್ ವೇಗದಲ್ಲಿ ಸಂಚರಿಸಬಹುದಾಗಿದೆ. ಅಂದರೆ ಅನಗತ್ಯವಾಗಿ ವಾಹನ ನಿಲುಗಡೆಗೊಳಿಸುವುದನ್ನು ಸಹಿಸಲಾಗದು. ಹಾಗಾಗಿ ಚಾಲನೆಗೂ ಮೊದಲು ನಿಮ್ಮ ಕಾರಿನ ಫುಲ್ ಟ್ಯಾಂಕ್ ಭರ್ತಿಯಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿರಿ.

ಭಾನುವಾರ ಕಾರು ಶುಚಿಗೊಳಿಸುವಾಗಿಲ್ಲ
ಭಾನುವಾರ ಕಪ್ಪು ವರ್ಣದ ಕಾರನ್ನು ಓಡಿಸಬಾರದು. ಓಕೆ ಏನಾದರೂ ಅನಾಹುತ ಸಂಭವಿಸಬಹುದೇನೋ ಎಂಬುದನ್ನು ಒಪ್ಪಿಕೊಳ್ಳಕೊಳ್ಳೋಣ. ಆದರೆ ಸ್ವಿಜರ್ಲೆಂಡ್ ನಲ್ಲಿ ಭಾನುವಾರದಂದು ಕಾರನ್ನು ಶುಚಿಗೊಳಿಸುವಂತಿಲ್ಲ ಅಂದರೆ ಹೇಗೆ ಮಾರಾಯ್ರೆ?

ಹೀಗೊಂದು ನಿಮಯ
ಇಂಗ್ಲೆಂಡ್ ನಲ್ಲಿ ನೀವು ಕಾರಿನ ಫ್ರಂಟ್ ಸೀಟಿನಲ್ಲಿ ಕೂರದ ಹೊರತು ಕಾರು ಚಾಲನೆ ಮಾಡುವಂತಿಲ್ಲ. ಅಷ್ಟಕ್ಕೂ ಕಾರಿನ ಫ್ರಂಟ್ ಸೀಟಿನಲ್ಲಿರದ ಹೊರತು ಬ್ಯಾಕ್ ಸೀಟಿನಲ್ಲಿದ್ದುಕೊಂಡು ಚಾಲನೆ ಮಾಡಲು ಸಾಧ್ಯವೇ?

ಉಗುಳುವುದು
ಜಾರ್ಜಿಯಾದಲ್ಲಿ ಕಾರು ಅಥವಾ ಬಸ್ಸಿನಲ್ಲಿ ಚಾಲನೆ ಮಾಡುವಾಗ ಉಗುಳಬಾರದಂತೆ. ಅದು ಓಕೆ, ಆದರೆ ಟ್ರಕ್ ನಲ್ಲಿ ಚಾಲನೆ ಮಾಡುವಾಗ ಉಗುಳಲು ಮುಕ್ತ ಅವಕಾಶವಿದೆ. ಇದೆಂಥ ನಿಯಮವೋ ದೇವರೇ ಬಲ್ಲ!

ಹಿಟ್ ಆ್ಯಂಡ್ ರನ್
ಡೆನ್ಮಾರ್ಕ್ ನಲ್ಲಿ ಕಾರಿನಡಿಯಲ್ಲಿ ಯಾರಾದರೂ ಇದ್ದಲ್ಲಿ ಚಾಲನೆ ಮಾಡುವುದು ಅಪರಾಧವಾಗಿದೆ. ಓಹೋ, ಕಾರಿನಡಿಯಲ್ಲಿ ಇನ್ಯಾರು ಬಂದು ಮಲಗುತ್ತಾರೋ ?

ಕೆಸರು ಸಿಂಪಡನೆ
ನಿಜವಾಗ್ಲು, ಇಂತಹದೊಂದು ನಿಯಮ ಭಾರತಕ್ಕೂ ಬಂದ್ದಲ್ಲಿ ನಾವು ಅತ್ಯಂತ ಹೆಚ್ಚು ಖುಷಿಪಡಲಿದ್ದೇವೆ. ಯಾಕೆಂದರೆ ಜಪಾನ್ ನಲ್ಲಿ ರಸ್ತೆಯಲ್ಲಿ ಚಲಿಸುವಾಗ ಪಾದಚಾರಿಗಳಿಗೆ ಕೆಸರು ಸಿಂಪಡಿಸುವುದು ಶಿಕ್ಷಾರ್ಹವಾಗಿದೆ.

ಶುಚಿತ್ವ ಮುಖ್ಯ
ನಮ್ಮ ಬೆಂಗಳೂರಿನಲ್ಲಿರುವ ಹಾಗೆ ನೀವು ರಷ್ಯಾದಲ್ಲಿ ಕೊಳಕು ಕಾರಿನಲ್ಲಿ ರಸ್ತೆಗಿಳಿದಿದ್ದಲ್ಲಿ 3,400 ರುಪಾಯಿ (2,000 roubles) ದಂಡ ಕಟ್ಟಲು ರೆಡಿಯಾಗಿರಿ.

ಮಹಿಳೆಯರಿಗೆ ನಿಷೇಧ
ಮಹಿಳೆಯರ ಮೇಲೆ ಅತಿ ಹೆಚ್ಚು ಕಾನೂನುಗಳನ್ನು ಹೊಂದಿರುವ ಸೌದಿ ಅರೇಬಿಯಾದಲ್ಲಿ ಮಹಿಳೆಯರ ಚಾಲನೆಯನ್ನು ನಿಷೇಧಿಸಲಾಗಿದೆ.

ಪಾದಚಾರಿಗಳಿಗೆ ಶರಣು
ಬೀಜಿಂಗ್ ನಲ್ಲಿ ರಸ್ತೆ ದಾಟುತ್ತಿರುವಾಗ ಪಾದಚಾರಿಗಳನ್ನು ನಿಲುಗಡೆಗೊಳಿಸುವುದು ಅಪರಾಧವಾಗಿದೆ.

ಹೆಡ್ ಲೈಟ್ ಆನ್
ಸುಡು ಬಿಸಿಲು ಅಥವಾ ಕಡು ಕಗ್ಗತ್ತಲೇ ಆಗಿರಲಿ ಸ್ವಿಡನ್ ನಲ್ಲಿ ದಿನದ 24 ತಾಸಿನಲ್ಲೂ ಹೆಡ್ ಲೈಟ್ ಆನ್ ಆಗಿರಬೇಕು.

ಟಾಪ್ ಲೆಸ್
ಥಾಯ್ಲೆಂಡ್ ನಲ್ಲಿ ಟಾಪ್ ಲೆಸ್ ಆಗಿ ವಾಹನ ಚಾಲನೆ ಮಾಡುವಂತಿಲ್ಲ. ಕಾರು ಅಥವಾ ಬೈಕ್ ನಲ್ಲಿ ಪುರುಷ ಯಾ ಮಹಿಳೆಯರು ಶರೀರದ ಮೇಲ್ಬಾಗದಲ್ಲಿ ಬಟ್ಟೆ ಧರಿಸದಿದ್ದಲ್ಲಿ ದಂಡ ಕಟ್ಟಬೇಕಾಗುತ್ತದೆ.


Click it and Unblock the Notifications








