ಪೆಟ್ರೋಲ್ ಎಂಜಿನ್‍ ಕಾರಿಗೆ ಡೀಸೆಲ್ ಹಾಕಿದರೆ ಏನಾಗುತ್ತದೆ ಗೊತ್ತಾ?

ಮಾರುಕಟ್ಟೆಯಲ್ಲಿ ಪೆಟ್ರೋಲ್ ಎಂಜಿನ್, ಡೀಸೆಲ್ ಎಂಜಿನ್, ಸಿಎನ್‌ಜಿ, ಎಲ್‌ಪಿಜಿ ಹಾಗೂ ಎಲೆಕ್ಟ್ರಿಕ್ ಸೇರಿದಂತೆ ಅನೇಕ ವಾಹನಗಳಿರುತ್ತವೆ. ಸಾಮಾನ್ಯವಾಗಿ ಜನರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ವಾಹನಗಳನ್ನು ಮಾತ್ರ ಖರೀದಿಸುತ್ತಾರೆ.

ಪೆಟ್ರೋಲ್ ಎಂಜಿನ್‍ ಕಾರಿಗೆ ಡೀಸೆಲ್ ಹಾಕಿದರೆ ಏನಾಗುತ್ತದೆ ಗೊತ್ತಾ?

ಇತ್ತೀಚಿಗೆ ಎಲೆಕ್ಟ್ರಿಕ್ ವಾಹನಗಳ ಖರೀದಿಯು ಹೆಚ್ಚಾಗಿದೆ. ಪೆಟ್ರೋಲ್ ಎಂಜಿನ್ ಹೊಂದಿರುವ ವಾಹನಗಳ ಬೆಲೆ ಸ್ವಲ್ಪ ಕಡಿಮೆಯಿದ್ದರೆ, ಡೀಸೆಲ್ ಎಂಜಿನ್ ಹೊಂದಿರುವ ವಾಹನಗಳ ಬೆಲೆಯು ಹೆಚ್ಚಾಗಿರುತ್ತದೆ. ಈ ಎರಡೂ ಎಂಜಿನ್‍‍ಗಳನ್ನು ಚಲಾಯಿಸಲು ವಿಭಿನ್ನವಾದ ತಂತ್ರಜ್ಞಾನವನ್ನು ಬಳಸಲಾಗುತ್ತದೆ.

ಪೆಟ್ರೋಲ್ ಎಂಜಿನ್‍ ಕಾರಿಗೆ ಡೀಸೆಲ್ ಹಾಕಿದರೆ ಏನಾಗುತ್ತದೆ ಗೊತ್ತಾ?

ಪೆಟ್ರೋಲ್ ಎಂಜಿನ್ ಕಾರಿನಲ್ಲಿ ಡೀಸೆಲ್ ಬಳಸಿದರೆ ಏನಾಗುತ್ತದೆ? ಪೆಟ್ರೋಲ್ ಎಂಜಿನ್ ಹೊಂದಿರುವ ಕಾರು ಡೀಸೆಲ್‍‍ನೊಂದಿಗೆ ಚಲಿಸುತ್ತದೆಯೇ ಮುಂತಾದ ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದಲ್ಲಿ ನೋಡೋಣ.

ಪೆಟ್ರೋಲ್ ಎಂಜಿನ್‍ ಕಾರಿಗೆ ಡೀಸೆಲ್ ಹಾಕಿದರೆ ಏನಾಗುತ್ತದೆ ಗೊತ್ತಾ?

ಡೀಸೆಲ್‍‍ಗಿಂತ ಪೆಟ್ರೋಲ್ ಹೆಚ್ಚು ವೇಗವಾಗಿ ಸುಡುತ್ತದೆ. ಆದರೆ ಡೀಸೆಲ್ ಅಷ್ಟು ಬೇಗ ಬೆಂಕಿಯನ್ನು ಹಿಡಿಯುವುದಿಲ್ಲ. ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಎಂಜಿನ್‍‍ಗಳ ನಡುವೆ ಹಲವಾರು ವ್ಯತ್ಯಾಸಗಳಿವೆ.

ಪೆಟ್ರೋಲ್ ಎಂಜಿನ್‍ ಕಾರಿಗೆ ಡೀಸೆಲ್ ಹಾಕಿದರೆ ಏನಾಗುತ್ತದೆ ಗೊತ್ತಾ?

ಪೆಟ್ರೋಲ್ ಎಂಜಿನ್‍‍ಗಳು ಸ್ಪಾರ್ಕ್ ಪ್ಲಗ್ ಅನ್ನು ಹೊಂದಿರುತ್ತವೆ. ಆದರೆ ಡೀಸೆಲ್ ಎಂಜಿನ್‍‍ಗಳು ಸ್ಪಾರ್ಕ್ ಪ್ಲಗ್‍‍ಗಳನ್ನು ಹೊಂದಿರುವುದಿಲ್ಲ. ಪೆಟ್ರೋಲ್ ಎಂಜಿನ್‍‍ಗಳಲ್ಲಿ ಕಾರ್ಬ್ಯುರೇಟರ್‍‍ಗಳಿದ್ದರೆ, ಡೀಸೆಲ್ ಎಂಜಿನ್‍‍ಗಳಲ್ಲಿ ಕಾರ್ಬ್ಯುರೇಟರ್‍‍‍ಗಳಿರುವುದಿಲ್ಲ.

ಪೆಟ್ರೋಲ್ ಎಂಜಿನ್‍ ಕಾರಿಗೆ ಡೀಸೆಲ್ ಹಾಕಿದರೆ ಏನಾಗುತ್ತದೆ ಗೊತ್ತಾ?

ಪೆಟ್ರೋಲ್ ಎಂಜಿನ್, ಪೆಟ್ರೋಲ್ ಹಾಗೂ ಗಾಳಿಯನ್ನು ಎಂಜಿನ್‌ನಲ್ಲಿ ಒಟ್ಟಿಗೆ ಪ್ರೆಸ್ ಮಾಡಿ ಕಿಡಿಯನ್ನುಂಟು ಮಾಡುತ್ತದೆ. ಆದರೆ ಡೀಸೆಲ್ ಎಂಜಿನ್‍‍ಗಳಲ್ಲಿ ಗಾಳಿಯ ಮೇಲೆ ಮಾತ್ರ ಒತ್ತಡ ಉಂಟಾಗುತ್ತದೆ. ಅಂತಿಮವಾಗಿ ಡೀಸೆಲ್ ಅನ್ನು ಸುರಿಯಲಾಗುತ್ತದೆ.

ಪೆಟ್ರೋಲ್ ಎಂಜಿನ್‍ ಕಾರಿಗೆ ಡೀಸೆಲ್ ಹಾಕಿದರೆ ಏನಾಗುತ್ತದೆ ಗೊತ್ತಾ?

ಆದ್ದರಿಂದ, ಪೆಟ್ರೋಲ್ ಎಂಜಿನ್ ಹೊಂದಿರುವ ಯಾವುದೇ ವಾಹನಗಳಲ್ಲಿ ಡೀಸೆಲ್ ಹಾಕಿದರೆ ಹೆಚ್ಚು ನಷ್ಟವಾಗುವುದಿಲ್ಲ. ಪೆಟ್ರೋಲ್ ಎಂಜಿನ್ ಚಲಾಯಿಸಲು ಸ್ಪಾರ್ಕ್‍‍ನ ಅಗತ್ಯವಿರುವುದರಿಂದ, ಅದು ಕಡಿಮೆ ಒತ್ತಡದಲ್ಲಿ ಗಾಳಿ ಮತ್ತು ಪೆಟ್ರೋಲ್ ಅನ್ನು ಬೆರೆಸುತ್ತದೆ.

ಪೆಟ್ರೋಲ್ ಎಂಜಿನ್‍ ಕಾರಿಗೆ ಡೀಸೆಲ್ ಹಾಕಿದರೆ ಏನಾಗುತ್ತದೆ ಗೊತ್ತಾ?

ಡೀಸೆಲ್ ಹಾಕಿ ಪೆಟ್ರೋಲ್ ಎಂಜಿನ್ ಕಾರ್ ಅನ್ನು ಸ್ಟಾರ್ಟ್ ಮಾಡಿದರೆ ಡೀಸೆಲ್, ಕಾರಿನ ಕಾರ್ಬ್ಯುರೇಟರ್ ಮೂಲಕ ಸಾಗುತ್ತದೆ. ಈ ಕಾರ್ಬ್ಯುರೇಟರ್‍‍ಗಳನ್ನು ಪೆಟ್ರೋಲ್‌ಗಾಗಿ ತಯಾರಿಸಲಾಗಿರುತ್ತದೆ. ಇದರಲ್ಲಿ ಡೀಸೆಲ್‌ ಸೇರಿದರೆ ಜ್ಯಾಮ್ ಆಗುತ್ತದೆ.

ಪೆಟ್ರೋಲ್ ಎಂಜಿನ್‍ ಕಾರಿಗೆ ಡೀಸೆಲ್ ಹಾಕಿದರೆ ಏನಾಗುತ್ತದೆ ಗೊತ್ತಾ?

ಪೆಟ್ರೋಲ್ ಎಂಜಿನ್‌ನಲ್ಲಿ ಡೀಸೆಲ್ ಅನ್ನು ಸುಡಲು ಅರ್ಧದಷ್ಟು ಒತ್ತಡ ಮಾತ್ರ ಉಂಟಾಗುತ್ತದೆ. ಈ ಕಾರಣಕ್ಕೆ ಡೀಸೆಲ್ ಸುಡುವುದಿಲ್ಲ. ಪೆಟ್ರೋಲ್ ಎಂಜಿನ್‍‍ನಲ್ಲಿ ಡೀಸೆಲ್ ಬಳಸಿದರೆ, ವಾಹನವು ಸ್ಟಾರ್ಟ್ ಆಗುವುದಿಲ್ಲ, ಬದಲಿಗೆ ಹೊಗೆ ಮಾತ್ರ ಹೊರಬರುತ್ತದೆ.

Most Read Articles

Kannada
English summary
What happens if you put diesel in Petrol Engine. Read in Kannada.
Story first published: Friday, February 14, 2020, 13:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X