ರೈಲಿನಲ್ಲಿ ಇಬ್ಬರು ಲೋಕೋ ಪೈಲಟ್‌ಗಳ ಕೆಲಸವೇನು? ಅವರ ಸವಾಲುಗಳು ತಿಳಿದ್ರೆ ಗೌರವ ಹೆಚ್ಚಾಗುತ್ತೆ!

ಭಾರತವು ಏಷ್ಯಾದಲ್ಲೇ ಅತಿದೊಡ್ಡ ರೈಲ್ವೆ ಜಾಲವನ್ನು ಹೊಂದಿದೆ. ಪ್ರತಿದಿನ ಕಡಿಮೆ ಟಿಕೆಟ್ ದರದಲ್ಲಿ ಲಕ್ಷಾಂತರ ಮಂದಿಯನ್ನು ತಮ್ಮ ಗಮ್ಯಸ್ಥಳಗಳನ್ನು ತಲುಪಿಸುತ್ತಿದೆ. ರೈಲ್ವೆ ಇಲಾಖೆಯಲ್ಲಿ ಎಲ್ಲವು ಸವ್ಯವಾಗಿ ಜರುಗಲು ಲಕ್ಷಾಂತರ ಮಂದಿ ವ್ಯವಸ್ಥಿತವಾಗಿ ಕೆಲಸಮಾಡಬೇಕಾಗುತ್ತದೆ. ಇಂತಹ ನಮ್ಮ ರೈಲ್ವೆಯ ಲೋಕೋ ಪೈಲೆಟ್‌ಗಳ ಬಗ್ಗೆಯು ಆಸಕ್ತಿಕರ ಮಾಹಿತಿಯನ್ನು ಇಲ್ಲಿ ನೋಡೋಣ.

ಭಾರತೀಯ ರೈಲ್ವೆಯ ದೂರದ ಪ್ರದೇಶಗಳಿಗೆ ಪ್ರಯಾಣಿಸುವ ರೈಲುಗಳಲ್ಲಿ ಎಂಜಿನ್ ಕ್ಯಾಬಿನ್ ಒಳಗೆ ಇಬ್ಬರು ಲೊಕೊ ಪೈಲೆಟ್‌ಗಳು ಇರುತ್ತಾರೆ. ಇದು ಎಲ್ಲರಿಗೂ ಗೊತ್ತೇ ಇದೆ, ಆದರೆ ಏಕೆ ಇಬ್ಬರನ್ನು ನೇಮಿಸಲಾಗುತ್ತದೆ ಎಂಬುದು ನಿಮಗೆ ಗೊತ್ತಾ? ಭಾರತೀಯ ರೈಲ್ವೆಯಲ್ಲಿ ಲೊಕೊಮೊಟಿವ್ ರೈಲುಗಳನ್ನು ಇಬ್ಬರು ನಿರ್ವಹಿಸಬೇಕು ಎಂಬ ನಿಯಮವಿದೆ.

what-is-loco-pilots-work-indian-train

ಅತಿ ದೊಡ್ಡ ಜಾಲವಿರುವ ಭಾರತೀಯ ರೈಲ್ವೆಯಲ್ಲಿ ದೂರದ ಪ್ರಯಾಣ ಬೆಳಸುವ ರೈಲುಗಳು ವಾರಗಟ್ಟಲೇ ಪ್ರಯಾಣ ಮಾಡುತ್ತವೆ. ಈ ವೇಳೆ ಹಗಲು-ರಾತ್ರಿ ರೈಲು ಪ್ರಯಾಣದಲ್ಲೇ ಇರುತ್ತದೆ. ಹಾಗಾಗಿ ದಿನ ಪೂರ್ತಿ ಒಬ್ಬರೇ ಚಾಲನೆ ಮಾಡುವುದು ಕಷ್ಟವಾದ್ದರಿಂದ ಸಹಾಯಕ ಪೈಲಟ್‌ ಅವಶ್ಯಕತೆ ಇರುತ್ತದೆ ಎಂಬುದು ಪ್ರಮುಖ ಕಾರಣವಾಗಿದ್ದು, ಇನ್ನೂ ಹತ್ತು ಹಲವು ಪ್ರಮುಖ ಕಾರಣಗಳಿವೆ.

ಮೊದಲ ವ್ಯಕ್ತಿಯನ್ನು ಲೋಕೋ ಪೈಲಟ್ ಎಂದು ಕರೆಯಲಾಗುತ್ತದೆ. ಎರಡನೇ ವ್ಯಕ್ತಿಯನ್ನು ಸಹಾಯಕ ಲೋಕೋ ಪೈಲಟ್ ಎಂದು ಕರೆಯಲಾಗುತ್ತದೆ. ಇಬ್ಬರು ಕೂಡ ಎಂಜಿನ್ ಅನ್ನು ನಿಯಂತ್ರಿಸುತ್ತಾರೆ. ಭಾರತೀಯ ರೈಲ್ವೆಯು ಲೋಕೋ ಪೈಲಟ್ ಅನ್ನು ನೇರವಾಗಿ ಆಯ್ಕೆ ಮಾಡುವುದಿಲ್ಲ. ಅನುಭವದ ನಂತರ ಅವರಿಗೆ ಲೋಕೋ ಪೈಲಟ್ ಆಗಿ ಬಡ್ತಿ ನೀಡಲಾಗುತ್ತದೆ. ಅಂದರೆ ಅವರು ಈ ಮೊದಲು ಸಹಾಯಕ ಲೋಕೋ ಪೈಲಟ್ ಆಗಿ ಕೆಲಸ ಮಾಡಬೇಕಾಗಿರುತ್ತದೆ.

what-is-loco-pilots-work-indian-train

ಈಗ ಲೊಕೊ ಪೈಲೆಟ್ ಪ್ರಮುಖ ಕೆಲಸಗಳ ಬಗ್ಗೆ ತಿಳಿಯೋಣ, ಮುಖ್ಯ ಪೈಲಟ್ ಎಂಜಿನ್‌ನ ಎಡಭಾಗದಲ್ಲಿದ್ದರೇ, ಸಹಾಯಕ ಲೋಕೋ ಪೈಲಟ್ ಎಂಜಿನ್‌ನ ಬಲಭಾಗದಲ್ಲಿರುತ್ತಾರೆ. ಪ್ರಸ್ತುತ ಬಳಕೆಯಲ್ಲಿರುವ ಲೋಕೋಮೋಟಿವ್ ರೈಲುಗಳು ಎಲೆಕ್ಟ್ರಿಕ್ ಲೋಕೋಮೋಟಿವ್ ಮತ್ತು ಡೀಸೆಲ್ ಲೋಕೋಮೋಟಿವ್ ಎಂಬ ಎರಡು ವಿಧದ ಎಂಜಿನ್‌ಗಳನ್ನು ಒಳಗೊಂಡಿವೆ.

ಸಹಾಯಕ ಲೋಕೋ ಪೈಲಟ್‌ ರೈಲು ಹೊರಡುವ ಮೊದಲು ಎಲ್ಲಾ ವಿಷಯಗಳನ್ನು ಪರಿಶೀಲಿಸುವುದು ಇವರ ಮೊದಲ ಕಾರ್ಯವಾಗಿದೆ. ಅದಕ್ಕಾಗಿ ಪ್ರತ್ಯೇಕ ಪರಿಶೀಲನಾಪಟ್ಟಿ ಇದ್ದು, ಅದನ್ನು ಪರಿಶೀಲಿಸಿದ ನಂತರವೇ ರೈಲು ಹತ್ತಬೇಕು. ಹಾಗೆಯೇ ರೈಲು ಹೋಗುವ ಹಳಿಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು. ದೂರದಲ್ಲಿ ಹಳಿಗಳಲ್ಲಿ ಸಮಸ್ಯೆ ಇದೆಯೇ ಎಂದು ಮೇಲ್ವಿಚಾರಣೆ ಮಾಡಬೇಕು. ನಂತರ ಸಿಗ್ನಲ್‌ಗಳನ್ನು ಮೇಲ್ವಿಚಾರಣೆ ಮಾಡಿ ಲೋಕೋ ಪೈಲಟ್‌ಗೆ ತಿಳಿಸಬೇಕು.

what-is-loco-pilots-work-indian-train

ಮುಂದಿನ ಪ್ರಮುಖ ಕೆಲಸವೆಂದರೆ ಪ್ರತಿ ನಿಲ್ದಾಣದಲ್ಲಿ ರೈಲಿನ ಹಾದುಹೋಗುವಿಕೆಯನ್ನು ತಿಳಿಸಿದುವುದು, ರೈಲು ಮುಂದಿನ ನಿಲ್ದಾಣದಲ್ಲಿ ಎಷ್ಟು ಸಮಯ ನಿಲ್ಲಬೇಕು ಹಾಗೂ ರೈಲಿನ ಬಲಭಾಗದಲ್ಲಿ ಸ್ಟೇಷನ್ ಮಾಸ್ಟರ್ ಇದ್ದರೆ ರೈಲು ನಿಲ್ದಾಣವನ್ನು ಹಾದುಹೋಗುವಾಗ ಹಸಿರು ಬಾವುಟವನ್ನು ತೋರಿಸುವುದರ ಜೊತೆಗೆ ಮುಂಬರುವ ರೈಲುಗಳೊಂದಿಗೆ ಸಂಪರ್ಕದಲ್ಲಿರುವುದಾಗಿದೆ.

ಇನ್ನು ಮುಖ್ಯ ಪೈಲೆಟ್ ಕೆಲಸವೆಂದರೆ ಯಾವುದೇ ಅಡಚಣೆಗಳ ಬಗ್ಗೆ ಯೊಚಿಸದೇ ರೈಲನ್ನು ಓಡಿಸುವುದೊಂದೆ ಆತನ ಕೆಲಸವಾಗಿರುತ್ತದೆ. ಪ್ರಯಾಣಿಕರು ರೈಲಿನಲ್ಲಿ ಚೈನ್ ಎಳೆದರೆ, ಸಹಾಯಕ ಲೊಕೊ ಪೈಲೆಟ್ ಪ್ರಯಾಣಿಕರನ್ನು ರೈಲಿನಿಂದ ಕೆಳಗಿಳಿಸಬೇಕು. ಹೋಗಿ ಸಮಸ್ಯೆ ಏನು ಎಂದು ನೋಡಬೇಕಾಗಿರುತ್ತದೆ. ಒಂದು ವೇಳೆ ಮುಖ್ಯ ಲೋಕೋಪೈಲೆಟ್ ರೈಲನ್ನು ಚಲಾಯಿಸಲು ಸಾಧ್ಯವಾಗದೇ ಇದ್ದಲ್ಲಿ ಅವರೇ ರೈಲನ್ನು ಮುಂದಿನ ನಿಲ್ದಾಣಕ್ಕೆ ಓಡಿಸಬೇಕಾಗುತ್ತದೆ.

what-is-loco-pilots-work-indian-train

ಈ ಸಂದರ್ಭದಲ್ಲೂ ರೈಲಿನ ಒಟ್ಟಾರೆ ಕಾರ್ಯಾಚರಣೆಯ ಜವಾಬ್ದಾರಿ ಲೋಕೋ ಪೈಲಟ್ ಮೇಲಿರುತ್ತದೆ. ಅಲ್ಲದೇ ಸಹಾಯಕ ಲೋಕೋಪೈಲಟ್‌ಗೆ ಸೂಚನೆಗಳನ್ನು ನೀಡುತ್ತಾ ಮುಂದಿನ ಸ್ಟೇಷನ್‌ವರೆಗೆ ಜವಾಬ್ದಾರಿ ವಹಿಸಬೇಕಾಗಿರುತ್ತದೆ. ಭಾರತೀಯ ರೈಲ್ವೆಯಲ್ಲಿ ರೈಲನ್ನು ಓಡಿಸುವಾಗ ಯಾವುದೇ ಸಮಸ್ಯೆ ಉಂಟಾದಾಗ ತಕ್ಷಣವೇ ಸಹಾಯಕ ಪೈಲಟ್ ರೈಲನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

More from DriveSpark

Article Published On: Saturday, July 29, 2023, 10:43 [IST]
English summary
What is loco pilots work indian train
Read more on ರೈಲು train
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+