ಟ್ರಕ್‌ಗಳ ಹಿಂದೆ ಕಾಣುವ 'ಹಾರ್ನ್ ಓಕೆ ಪ್ಲೀಸ್' ಅರ್ಥವೇನು? ಇದಕ್ಕಿದೆ ದಶಕಗಳ ಇತಿಹಾಸ!

ಟ್ರಕ್‌ಗಳ ಹಿಂಭಾಗದಲ್ಲಿ ಕಾಣುವ 'ಹಾರ್ನ್ ಓಕೆ ಪ್ಲೀಸ್' ಎಂಬ ಸಾಲನ್ನು ಭಾರತದಲ್ಲಿನ ಪ್ರತಿಯೊಬ್ಬರು ನೋಡಿರುತ್ತಾರೆ. ಇದನ್ನು ಕಂಡಾಗಲೆಲ್ಲಾ ನಮ್ಮದೇ ಏನೋ ಯೋಚನೆ, ಇದರ ಅರ್ಥವೇನು? ಓ ಹೀಗಿರಬಹುದಾ ಎಂಬೆಲ್ಲಾ ಗೊಂದಲಗಳು ನಮ್ಮನ್ನು ಕಾಡಿರುತ್ತವೆ.

Recommended Video

New Maruti Alto K10 KANNADA Review | What’s New On The Affordable Hatchback? Mileage & Comfort

ಆದರೆ ಇದರ ಬಗ್ಗೆ ತಿಳಿದುಕೊಳ್ಳಲು ನಿಮಗೆ ಸರಿಯಾದ ಮಾಹಿತಿ ಸಿಗುವುದಿಲ್ಲ. ಏಕೆಂದರೆ ಈ ಬಗ್ಗೆ ತಿಳಿದಿರುವವರು ಬಹಳ ವಿರಳವಾಗಿ ಸಿಗುತ್ತಾರೆ. ವಿಷಯಕ್ಕೆ ಬಂದರೆ ಈ 'ಹಾರ್ನ್ ಓಕೆ ಪ್ಲೀಸ್' ಎಂಬ ಸಾಲಿಗೆ ಕೆಲವು ದಶಕಗಳ ಇತಿಹಾಸವೇ ಇದೆ.

ಟ್ರಕ್‌ಗಳ ಹಿಂದೆ ಕಾಣುವ 'ಹಾರ್ನ್ ಓಕೆ ಪ್ಲೀಸ್' ಎಂದರೇನು? ಇದಕ್ಕಿದೆ ದಶಕಗಳ ಇತಿಹಾಸ!

ಈ 'ಹಾರ್ನ್ ಓಕೆ ಪ್ಲೀಸ್' ಎಂಬುದು ವ್ಯಾಕರಣಾತ್ಮಕವಾಗಿ ತಪ್ಪಾಗಿದ್ದರೂ ಸಹ, ಇದನ್ನು ಕಸ್ಟಮೈಸ್ ಮಾಡಿದ ಟ್ರಕ್‌ಗಳ ಮೇಲೆ ಹೆಚ್ಚಾಗಿ ಬಳಸಲಾಗುತ್ತದೆ. ವಾಹನ ತಯಾರಕರು ಟ್ರಕ್‌ಗಳನ್ನು ನಿರ್ಮಿಸಿ ಮಾಲೀಕರಿಗೆ ಹಸ್ತಾಂತರಿಸುತ್ತಿದ್ದಂತೆ, ಮಾಲೀಕರು ತಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗೆ ಅನುಗುಣವಾಗಿ ವಾಹನವನ್ನು ವಿನ್ಯಾಸಗೊಳಿಸಿ ಮರು-ನಿರ್ಮಿಸುತ್ತಾರೆ.

ಟ್ರಕ್‌ಗಳ ಹಿಂದೆ ಕಾಣುವ 'ಹಾರ್ನ್ ಓಕೆ ಪ್ಲೀಸ್' ಎಂದರೇನು? ಇದಕ್ಕಿದೆ ದಶಕಗಳ ಇತಿಹಾಸ!

ಬಳಿಕ 'ಬ್ಲೋ ಹಾರ್ನ್', 'ಹಾರ್ನ್ ಪ್ಲೀಸ್' ಅಥವಾ 'ಓ ಹಾರ್ನ್ ಪ್ಲೀಸ್ ಓಕೆ' ನಂತಹ ಹಲವಾರು ರೂಪಾಂತರಗಳಲ್ಲಿ ಈ 'ಹಾರ್ನ್ ಓಕೆ ಪ್ಲೀಸ್' ಅನ್ನು ತಮ್ಮ ಟ್ರಕ್ ಹಿಂಭಾಗದಲ್ಲಿ ಬರೆಸಿಕೊಳ್ಳುತ್ತಾರೆ. ಇದನ್ನು ಕಾಣುವ ಸಾಮಾನ್ಯ ಜನರು ಸಾರಿಗೆ ಇಲಾಖೆಯ ವಿಶಿಷ್ಟ ಕೋಡ್ ಎಂಬಂತೆ ಕುತೂಹಲಕಾರಿಯಾಗಿ ಯೋಚನೆಗೆ ಒಳಗಾಗುತ್ತಾರೆ.

ಟ್ರಕ್‌ಗಳ ಹಿಂದೆ ಕಾಣುವ 'ಹಾರ್ನ್ ಓಕೆ ಪ್ಲೀಸ್' ಎಂದರೇನು? ಇದಕ್ಕಿದೆ ದಶಕಗಳ ಇತಿಹಾಸ!

ಇದು ಇಂದಿನದಲ್ಲ, ಬದಲಾಗಿ ನಮ್ಮ ತಾತ, ಮುಗತ್ತಾಂದಿರ ಕಾಲದಿಂದಲೂ ರೂಢಿಯಲ್ಲಿದೆ. ಇದರ ಮೂಲದ ಹಿಂದೆ ಯಾವುದೇ ಕಾಂಕ್ರೀಟ್ ಸಿದ್ಧಾಂತವೇನಿಲ್ಲ. ಹಾಗಾದ್ರೆ 'ಹಾರ್ನ್ ಓಕೆ ಪ್ಲೀಸ್' ಲೋಗೋವನ್ನು ಜನಪ್ರಿಯಗೊಳಿಸಿದ ಕೆಲವು ಪ್ರಚಲಿತ ವಿಚಾರಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಟ್ರಕ್‌ಗಳ ಹಿಂದೆ ಕಾಣುವ 'ಹಾರ್ನ್ ಓಕೆ ಪ್ಲೀಸ್' ಎಂದರೇನು? ಇದಕ್ಕಿದೆ ದಶಕಗಳ ಇತಿಹಾಸ!

ಸುರಕ್ಷತಾ ಕ್ರಮಗಳು

ಈ ಹಿಂದೆ ಭಾರತದಲ್ಲಿ ಹೆಚ್ಚಿನ ಹೆದ್ದಾರಿಗಳು ಏಕ ಪಥಗಳನ್ನು (ಸಿಂಗಲ್ ಲೇನ್) ಹೊಂದಿದ್ದವು, ಈ ರಸ್ತೆಗಳಲ್ಲಿ ಇತರ ವಾಹನಗಳು ದೊಡ್ಡ ಸರಕು ವಾಹಕಗಳನ್ನು ಹಿಂದಿಕ್ಕುವುದು ಕಷ್ಟಕರವಾಗಿತ್ತು. ಈ ವೇಳೆ 'ಹಾರ್ನ್ ಓಕೆ ಪ್ಲೀಸ್' ಸಾಲಿನ ಉಪಸ್ಥಿತಿಯು ರಸ್ತೆಯಲ್ಲಿರುವ ಇತರ ವಾಹನಗಳ ಬಗ್ಗೆ ಹಿಂಬದಿಯ ವಾಹನಗಳನ್ನು ಎಚ್ಚರಿಸುವಂತೆ ಮಾಡುತ್ತಿದ್ದವು.

ಟ್ರಕ್‌ಗಳ ಹಿಂದೆ ಕಾಣುವ 'ಹಾರ್ನ್ ಓಕೆ ಪ್ಲೀಸ್' ಎಂದರೇನು? ಇದಕ್ಕಿದೆ ದಶಕಗಳ ಇತಿಹಾಸ!

ಓವರ್‌ಟೇಕ್ ಮಾಡುವ ಮೊದಲು ಹಾರ್ನ್ ಮಾಡುವುದು ಒಳ್ಳೆಯದು ಎಂಬ ಅರಿವೂ ಅವರಿಗಿತ್ತು. ಕೆಲವು ಸಂದರ್ಭಗಳಲ್ಲಿ, ಈ 'ಹಾರ್ನ್ ಓಕೆ ಪ್ಲೀಸ್' ಮೇಲೆ ಒಂದು ಬಲ್ಬ್ ಕೂಡ ಇರುತ್ತಿತ್ತು. ಹಿಂಬದಿ ಚಾಲಕ ಹಾರ್ನ್ ಮಾಡಿದಾಗ, ಟ್ರಕ್ ಚಾಲಕ ಎದುರಿನಿಂದ ಟ್ರಾಫಿಕ್ ಇದೆಯೇ ಎಂದು ಪರಿಶೀಲಿಸುತ್ತಿದ್ದ. ನಂತರ ಆತ ಓವರ್‌ಟೇಕ್ ಮಾಡಲು ಸಂಕೇತವಾಗಿ ಬಲ್ಬ್‌ ಅನ್ನು ಆನ್ ಮಾಡುತ್ತಿದ್ದ.

ಟ್ರಕ್‌ಗಳ ಹಿಂದೆ ಕಾಣುವ 'ಹಾರ್ನ್ ಓಕೆ ಪ್ಲೀಸ್' ಎಂದರೇನು? ಇದಕ್ಕಿದೆ ದಶಕಗಳ ಇತಿಹಾಸ!

ಈಗ ಇವೆಲ್ಲವೂ ಬದಲಾಗಿವೆ. ಭಾರತದ ನಗರ ರಸ್ತೆಗಳು ಮತ್ತು ಹೆದ್ದಾರಿಗಳು ಈಗ ನಾಲ್ಕರಿಂದ ಆರು ಲೇನ್‌ಗಳನ್ನು ಹೊಂದಿದ್ದು, ‘ಹಾರ್ನ್ ಓಕೆ ಪ್ಲೀಸ್' ಘೋಷಣೆಯನ್ನು ಬಳಸುವುದು ಅನಗತ್ಯವಾಗಿದೆ. ಆದರೂ ಹಿಂದಿನ ಕಾಲದಿಂದ ಬಂದಂತಹ ಈ ರೂಢಿಯನ್ನು ಇಂದಿಗೂ ಕೆಲವರು ಪಾಲಿಸುತ್ತಾ ಬಂದಿದ್ದಾರೆ.

ಟ್ರಕ್‌ಗಳ ಹಿಂದೆ ಕಾಣುವ 'ಹಾರ್ನ್ ಓಕೆ ಪ್ಲೀಸ್' ಎಂದರೇನು? ಇದಕ್ಕಿದೆ ದಶಕಗಳ ಇತಿಹಾಸ!

ಏಪ್ರಿಲ್ 30, 2015 ರಂದು ದೇಶದ ಹಲವು ರಾಜ್ಯ ಸರ್ಕಾರಗಳು ಶಬ್ದ ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡಲು ವಾಹನಗಳ ಹಿಂಭಾಗದಲ್ಲಿ ಈ ಚಿಹ್ನೆಯನ್ನು ಬಳಸುವುದನ್ನು ನಿಷೇಧಿಸಿದವು. ಅಂದಿನ ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಬಾಲ್ ಮಲ್ಕಿತ್ ಸಿಂಗ್, ಆಧುನಿಕ ಭಾರತದ ವಿಶಾಲ ಮತ್ತು ಬಹು-ಪಥದ ಹೆದ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮವನ್ನು ಸ್ವಾಗತಿಸಿದರು.

ಟ್ರಕ್‌ಗಳ ಹಿಂದೆ ಕಾಣುವ 'ಹಾರ್ನ್ ಓಕೆ ಪ್ಲೀಸ್' ಎಂದರೇನು? ಇದಕ್ಕಿದೆ ದಶಕಗಳ ಇತಿಹಾಸ!

ಒಕೆ ಎಂದರೆ 'ಸೀಮೆ ಎಣ್ಣೆ ಟ್ರಕ್'

ಎರಡನೇ ವಿಶ್ವಯುದ್ಧದ ಸಮಯದಲ್ಲಿ ಟ್ರಕ್‌ಗಳುಸೈನ್ಯದ ಪ್ರಾಥಮಿಕ ಸಾರಿಗೆಯಾಗಿತ್ತು. ಅನೇಕ ಸಂದರ್ಭಗಳಲ್ಲಿ ಕಾರ್ಗೋ ಕ್ಯಾರಿಯರ್‌ಗಳ ಮೂಲಕ ಸೀಮೆಎಣ್ಣೆಯಂತಹ ಸುಡುವ ದ್ರವಗಳನ್ನು ಸಾಗಿಸುತ್ತಿದ್ದರು. ಈ ವಾಹನಗಳಲ್ಲಿ ‘ಓಕೆ' ಎಂಬ ಚಿಹ್ನೆ ಇರುತ್ತಿತ್ತು. ಇದರ ಒಳಗೆ ‘ಸೀಮೆಎಣ್ಣೆ' ಇದೆ ಎಂಬ ಅರ್ಥವನ್ನು ನೀಡುತ್ತಿತ್ತು.

ಟ್ರಕ್‌ಗಳ ಹಿಂದೆ ಕಾಣುವ 'ಹಾರ್ನ್ ಓಕೆ ಪ್ಲೀಸ್' ಎಂದರೇನು? ಇದಕ್ಕಿದೆ ದಶಕಗಳ ಇತಿಹಾಸ!

ಸಣ್ಣ ಘರ್ಷಣೆ ಕೂಡ ವಾಹನಗಳ ಬೃಹತ್ ಸ್ಫೋಟಕ್ಕೆ ಕಾರಣವಾಗುವುದರಿಂದ, ಸಾಕಷ್ಟು ಬ್ರೇಕಿಂಗ್ ಅಂತರವನ್ನು ಕಾಯ್ದುಕೊಳ್ಳುವಂತೆ ಹಿಂದಿನ ವಾಹನಗಳಿಗೆ ಎಚ್ಚರಿಕೆ ನೀಡಲು ಹೀಗೆ ಮಾಡಲಾಗುತ್ತಿತ್ತು.

ಟ್ರಕ್‌ಗಳ ಹಿಂದೆ ಕಾಣುವ 'ಹಾರ್ನ್ ಓಕೆ ಪ್ಲೀಸ್' ಎಂದರೇನು? ಇದಕ್ಕಿದೆ ದಶಕಗಳ ಇತಿಹಾಸ!

ಜನಪ್ರಿಯ ಡಿಟರ್ಜೆಂಟ್‌ನ ಜಾಹೀರಾತು

20 ನೇ ಶತಮಾನದ ಮೊದಲಾರ್ಧದಲ್ಲಿ, ಟಾಟಾ ಆಯಿಲ್ ಮಿಲ್ಸ್ ಲಿಮಿಟೆಡ್ TOMCO 'OK' ಎಂಬ ಹೆಸರಿನ ಡಿಟರ್ಜೆಂಟ್ ಸೋಪ್ ಅನ್ನು ಬಿಡುಗಡೆ ಮಾಡಿತು. ಇದು ಗ್ರಾಹಕರಲ್ಲಿ ಹೆಚ್ಚು ಜನಪ್ರಿಯವಾಯಿತು, ಇದು ಕಮಲದ ಲೋಗೋವನ್ನು ಹೊಂದಿತ್ತು. ತಯಾರಕರು ತಮ್ಮ ಉತ್ಪನ್ನವನ್ನು ಟ್ರಕ್‌ಗಳ ಹಿಂಭಾಗದಲ್ಲಿ ಗರಿಷ್ಠ ಗೋಚರತೆಗಾಗಿ ಕಮಲದ ಚಿಹ್ನೆಯೊಂದಿಗೆ ಜಾಹೀರಾತು ಮಾಡಲು ಯೋಚಿಸಿದ್ದರು.

ಟ್ರಕ್‌ಗಳ ಹಿಂದೆ ಕಾಣುವ 'ಹಾರ್ನ್ ಓಕೆ ಪ್ಲೀಸ್' ಎಂದರೇನು? ಇದಕ್ಕಿದೆ ದಶಕಗಳ ಇತಿಹಾಸ!

ಆ ಸಮಯದಲ್ಲಿ, ಟಾಟಾ ವಾಣಿಜ್ಯ ವಾಹನ ಉದ್ಯಮವು ನಿರ್ವಿವಾದ ಕಂಪನಿಯಾಗಿದ್ದರಿಂದ ಈ ಪ್ರವೃತ್ತಿಯು ದೀರ್ಘಕಾಲದವರೆಗೆ ಮುಂದುವರೆಯಿತು. ಕಮಲದ ಹೂವನ್ನು 'ಓಕೆ' ಚಿಹ್ನೆಯೊಂದಿಗೆ ರಚಿಸಿದ್ದ ಪೇಂಟ್, ಕಲಾವಿದರಿಗೆ ತ್ವರಿತವಾಗಿ ಯಶಸ್ವಿಗೆ ಕಾರಣವಾಯಿತು. ಇವು ಭಾರತದ ಟ್ರಕ್‌ಗಳಲ್ಲಿ 'ಹಾರ್ನ್ ಓಕೆ ಪ್ಲೀಸ್' ಬಳಕೆಯನ್ನು ಉತ್ತೇಜಿಸುವ ಕೆಲವು ಮೂಲ ಕಾರಣಗಳಾಗಿವೆ.

Most Read Articles

Kannada
English summary
What is the horn ok please seen on the back of trucks It has decades of history
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X