ರೈಲಿನ ಮೈಲೇಜ್ ಎಷ್ಟು? ಫುಲ್‌ಟ್ಯಾಂಕ್ ಸಾಮರ್ಥ್ಯವೆಷ್ಟು? ಆಸಕ್ತಿಕರ ಮಾಹಿತಿ!
ಭಾರತದಲ್ಲಿ ಸದ್ಯ ಅಸ್ತಿತ್ವದಲ್ಲಿರುವ ರೈಲುಗಳನ್ನು ಎಲೆಕ್ಟ್ರಿಕ್, ಡೀಸೆಲ್ ಮತ್ತು ಸ್ಟೀಮ್ ಎಂಜಿನ್‌ಗಳಿಂದ ನಿರ್ವಹಿಸಲಾಗುತ್ತಿದೆ. ಜೊತೆಗೆ ಅಭಿವೃದ್ಧಿಯತ್ತ ಸಾಗಲು ವಂದೇ ಭಾರತ್ ರೈಲುಗಳು ಕೂಡ ಎಂಟ್ರಿಕೊಟ್ಟಿವೆ. ಸದ್ಯ ಭಾರತದಲ್ಲಿ ಹೆಚ್ಚು ಡೀಸೆಲ್ ಚಾಲಿತ ರೈಲುಗಳಿವೆ. ಇವು ಎಷ್ಟು ಮೈಲೇಜ್ ನೀಡುತ್ತವೆ? ಇದರ ಟ್ಯಾಂಕ್ ಕೆಪಾಸಿಟಿ ಎಷ್ಟು ಎಂಬುದನ್ನು ಇಲ್ಲಿ ನೋಡೋಣ.
ಮಾಧ್ಯಮ ವರದಿಗಳ ಪ್ರಕಾರ, ಡೀಸೆಲ್ ಎಂಜಿನ್ ಸಾಮರ್ಥ್ಯದ ಆಧಾರದ ಮೇಲೆ ಟ್ಯಾಂಕ್ ಅನ್ನು 5,000 ಲೀಟರ್, 5,500 ಲೀಟರ್ ಮತ್ತು 6,000 ಲೀಟರ್ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ರೈಲಿನ ಹೊರೆಗೆ ಅನುಗುಣವಾಗಿ, ಪ್ರತಿ ಕಿ.ಮೀಗೆ ಸರಾಸರಿ ಡೀಸೆಲ್ ಎಂಜಿನ್ ಅನ್ನು ನಿರ್ಧರಿಸಲಾಗುತ್ತದೆ. ಜೊತೆಗೆ ಡೀಸೆಲ್ ಎಂಜಿನ್‌ಗಳ ಮೈಲೇಜ್ ಅನೇಕ ವಿಷಯಗಳನ್ನು ಅವಲಂಭಿಸಿರುತ್ತದೆ.

12 ಬೋಗಿಗಳ ಪ್ಯಾಸೆಂಜರ್ ರೈಲು 6 ಲೀಟರ್‌ಗೆ ಒಂದು ಕಿ.ಮೀ ಮೈಲೇಜ್ ನೀಡುತ್ತದೆ. 24 ಬೋಗಿಗಳ ಎಕ್ಸ್‌ಪ್ರೆಸ್ ರೈಲು 6 ಲೀ.ಗೆ ಒಂದು ಕಿ.ಮೀ ಮತ್ತು 12 ಬೋಗಿಗಳ ಎಕ್ಸ್‌ಪ್ರೆಸ್ ರೈಲು 4.50 ಲೀ.ಗೆ ಒಂದು ಕಿಮೀ. ಮೈಲೇಜ್ ನೀಡುತ್ತದೆ. ಜೊತೆಗೆ WAG, WAP, WAM, WDG, WDP ಎಂಬ ವರ್ಗಗಳನ್ನು ಅವಲಂಭಿಸಿ ರೈಲುಗಳು ಮೈಲೇಜ್ ನೀಡುತ್ತವೆ.
ನೀವು ಸೂಕ್ಷಮವಾಗಿ ಗಮನಿಸಿದರೆ ರೈಲಿನ ಎಂಜಿನ್‌ಗಳ ಮೇಲೆ WAG, WAP, WAM, WDG, WDP ಪದಗಳನ್ನು ಕಾಣುತ್ತವೆ. ಇವುಗಳನ್ನು ವಿಸ್ತರಿಸಿ ಅರ್ಥ ನೋಡುವುದಾದ್ರೆ ಇವುಗಳಲ್ಲಿನ ಮೊದಲ ಅಕ್ಷರವು ರೈಲ್ವೆ ಹಳಿಗಳ ಗೇಜ್ ಅನ್ನು ಸೂಚಿಸುತ್ತದೆ. 'ಡಬ್ಲ್ಯೂ' ಎಂದರೆ ವೈಡ್ ಗೇಜ್ (ಐದು ಅಡಿ). ಎರಡನೇ ಅಕ್ಷರಗಳಾದ 'A' ಮತ್ತು 'D' ಎಂಜಿನ್‌ನ ಪ್ರೇರಕ ಶಕ್ತಿಯನ್ನು ಸೂಚಿಸುತ್ತದೆ.

'ಎ' ಎಂದರೆ ಎಂಜಿನ್ ಎಲೆಕ್ಟ್ರಿಕ್ ಮೋಟಿವ್ ಪವರ್‌ನಲ್ಲಿ ಚಲಿಸುತ್ತದೆ ಮತ್ತು 'ಡಿ' ಎಂದರೆ ಎಂಜಿನ್ ಡೀಸೆಲ್-ಎಲೆಕ್ಟ್ರಿಕ್ ಮೋಟಿವ್ ಪವರ್‌ನಲ್ಲಿ ಚಲಿಸುತ್ತದೆ. ಮೂರನೇ ಅಕ್ಷರಗಳಾದ 'P', 'G', 'M' ಮತ್ತು 'S' ಎಂಜಿನ್‌ಗಳ ಉದ್ದೇಶಗಳನ್ನು ಸೂಚಿಸುತ್ತದೆ. 'ಪಿ' ಎಂದರೆ ಪ್ರಯಾಣಿಕರು. 'ಜಿ' ಎಂದರೆ ಸರಕು, 'ಎಂ' ಎಂದರೆ ಮಿಶ್ರಿತ ಮತ್ತು 'ಎಸ್' ಎಂದರೆ ಶಂಟಿಂಗ್.
ಶಂಟಿಂಗ್ ಎಂದರೆ ನಿರ್ವಹಣೆಗಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೋಚ್‌ಗಳು ಅಥವಾ ವ್ಯಾಗನ್‌ಗಳ ಚಲನೆ, ಇದು ಜೋಡಣೆ ಅಥವಾ ಡಿಕೌಪ್ಲಿಂಗ್‌ಗಾಗಿ ಲೈನ್ ಅನ್ನು ಮುಕ್ತಗೊಳಿಸುತ್ತದೆ. ಶಂಟಿಂಗ್ ಉದ್ದೇಶಗಳಿಗಾಗಿ ಬಳಸುವ ಎಂಜಿನ್‌ಗಳು ಸಾಮಾನ್ಯವಾಗಿ ಇತರ ಎಂಜಿನ್‌ಗಳಿಗಿಂತ ಕಡಿಮೆ ಶಕ್ತಿ ಹೊಂದಿರುತ್ತವೆ. ಮೇನ್‌ಲೈನ್ ಟ್ರ್ಯಾಕ್‌ಗಳನ್ನು ಶಂಟಿಂಗ್‌ಗಾಗಿ ವಿರಳವಾಗಿ ಬಳಸಲಾಗುತ್ತದೆ.

ಈಗ ಕೋಡ್‌ಗಳನ್ನು ಅರ್ಥಮಾಡಿಕೊಳ್ಳುವುದಾದ್ರೆ, ಎಂಜಿನ್ ಮೇಲೆ 'WAP' ಎಂದು ಬರೆದಿದ್ದರೆ, ಇದರರ್ಥ ಎಂಜಿನ್ ವಿಶಾಲ-ಗೇಜ್ ಟ್ರ್ಯಾಕ್‌ಗಳಲ್ಲಿ AC ಎಲೆಕ್ಟ್ರಿಕ್ ಮೋಟಿವ್ ಪವರ್‌ನಲ್ಲಿ ಚಲಿಸುತ್ತದೆ. ಈ ಎಂಜಿನ್ ಪ್ಯಾಸೆಂಜರ್ ರೈಲನ್ನು ಎಳೆಯುತ್ತದೆ. ಅಂತೆಯೇ, 'WAG' ಎಂದರೆ ಮೇಲೆ ತಿಳಿಸಿದ ಅದೇ ಎಂಜಿನ್ ಆದರೆ ಅದು ಗೂಡ್ಸ್ ಭೋಗಿಗಳನ್ನು ಎಳೆಯುತ್ತದೆ.
ನೀವು ಎಂಜಿನ್‌ನಲ್ಲಿ 'WDM' ಚಿಹ್ನೆಯನ್ನು ಕಂಡರೆ, ಅದು ಡೀಸೆಲ್ ಪ್ರೇರಕ ಶಕ್ತಿಯಿಂದ ಚಲಿಸುತ್ತದೆ. ಸರಕು ಮತ್ತು ಪ್ರಯಾಣಿಕ ಭೋಗಿಗಳನ್ನು ಎಳೆಯುತ್ತದೆ ಎಂದರ್ಥ. 'M', 'P' ಅಥವಾ 'G' ಬದಲಿಗೆ 'S' ಇದ್ದರೆ, ಎಂಜಿನ್ ಅನ್ನು ಶಂಟಿಂಗ್ ಉದ್ದೇಶಗಳಿಗಾಗಿ ಬಳಸಲಾಗುತ್ತದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








